BS Yediyurappa: ಮನೆಯಲ್ಲಿ ಕುಳಿತು, ಯಯಾತಿ ಪುಸ್ತಕ ಓದುತ್ತಿದ್ದಾರೆ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ

ಬಿಎಸ್​ವೈ ಮನೆಯಿಂದಲೇ ಎಲ್ಲವನ್ನೂ ನಿರ್ವಹಣೆ ಮಾಡುತ್ತಿದ್ದಾರೆ. ವಿಡಿಯೋ ಕಾನ್ಫರೆನ್ಸ್ ‌ಮುಖಾಂತರ ಅಗತ್ಯ ಸಲಹೆ ಸೂಚನೆಗಳನ್ನು ಬಿಎಸ್​ವೈ ನೀಡುತ್ತಿದ್ದಾರೆ.

news18-kannada
Updated:July 12, 2020, 1:43 PM IST
BS Yediyurappa: ಮನೆಯಲ್ಲಿ ಕುಳಿತು, ಯಯಾತಿ ಪುಸ್ತಕ ಓದುತ್ತಿದ್ದಾರೆ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ
ಪುಸ್ತಕ ಓದುತ್ತಿರುವ ಬಿಎಸ್​ವೈ
  • Share this:
ಬೆಂಗಳೂರು (ಜು.12): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಕೆಲ ಸಿಬ್ಬಂದಿಗೆ ಕೊರೋನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೆಲವು ದಿನಗಳ ಕಾಲ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೋಂ ಕ್ವಾರಂಟೈನ್ ಆಗಿದ್ದಾರೆ. ಈ ವೇಳೆ ಪುಸ್ತಕ ಓದುವಲ್ಲಿ ಬಿಎಸ್​ವೈ ಮಗ್ನರಾಗಿದ್ದಾರೆ.

ಕೃಷ್ಣಾ ಕಚೇರಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು. ಮುಖ್ಯಮಂತ್ರಿಗಳ ಗೃಹ ಕಚೇರಿಯ ಟೆಲಿಫೋನ್ ಆಪರೇಟರ್, ಇಬ್ಬರು ಎಸ್ಕಾರ್ಟ್​, ಧವಳಗಿರಿ ನಿವಾಸದಲ್ಲಿ ಅಡುಗೆ ಮಾಡುವವನಿಗೆ, ಒಬ್ಬ ಕಾರು ಚಾಲಕನಿಗೆ ಸೇರಿ ಸಿಎಂ ಯಡಿಯೂರಪ್ಪ ಸುತ್ತಮುತ್ತಲಿರುವ ಒಟ್ಟು 10 ಜನರಿಗೆ ಕೊರೋನಾ ಸೋಂಕು ಹರಡಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸ್ಯಾನಿಟೈಸ್ ಮಾಡಲಾಗಿತ್ತು. ಹೀಗಾಗಿ  ಶುಕ್ರವಾರದಿಂದ ಕೆಲ ದಿನಗಳ ಕಾಲ ಯಡಿಯೂರಪ್ಪ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ ಅವರು ಪುಸ್ತಕ ಓದುವ ಕಾಯಕದಲ್ಲಿ ತೊಡಗಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಬಿಎಸ್​ವೈ, "ಬಿಡುವಿನ ವೇಳೆಯಲ್ಲಿ ನನಗೆ ಅತ್ಯಂತ ಪ್ರಿಯವಾದ ಕಾಲಕ್ಷೇಪವೆಂದರೆ ಓದುವುದು. ನೂರಾರು ಸಂಗತಿಗಳ ಬಗ್ಗೆ ತಿಳಿದಷ್ಟೂ ತಿಳಿಯಬಹುದಾದ ವಿಷಯಗಳಿವೆ, ಜ್ಞಾನಾರ್ಜನೆ ಎಂದೂ ಮುಗಿಯದ ಕಾಯಕ. ಇಂದಿನ ಭಾನುವಾರದ ಲಾಕ್ ಡೌನ್ ಮತ್ತು ಸ್ವ-ಕ್ವಾರಂಟೈನ್ ನಲ್ಲಿರುವ ವೇಳೆ ಸಿಕ್ಕ ಸ್ವಲ್ಪ ಬಿಡುವಿನ ಸಮಯವನ್ನು ಖಾಂಡೇಕರ್ ಅವರ ಯಯಾತಿಯ ಜೊತೆಗೆ ಕಳೆಯುತ್ತಿದ್ದೇನೆ," ಎಂದಿದ್ದಾರೆ.

ಸದ್ಯ ಬಿಎಸ್​ವೈ ಮನೆಯಿಂದಲೇ ಎಲ್ಲವನ್ನೂ ನಿರ್ವಹಣೆ ಮಾಡುತ್ತಿದ್ದಾರೆ. ವಿಡಿಯೋ ಕಾನ್ಫರೆನ್ಸ್ ‌ಮುಖಾಂತರ ಅಗತ್ಯ ಸಲಹೆ ಸೂಚನೆಗಳನ್ನು ಬಿಎಸ್​ವೈ ನೀಡುತ್ತಿದ್ದಾರೆ. ಕೊರೋನಾ ವೈರಸ್​ ರಾಜ್ಯಕ್ಕೆ ಕಾಲಿಟ್ಟಾಗಿನಿಂದಲೂ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ನಿರಂತರವಾಗಿ ಮೀಟಿಂಗ್​ ನಡೆಸುತ್ತಲೇ ಇದ್ದರು. ಈಗ ಕ್ವಾರಂಟೈನ್​ನಿಂದಾಗಿ ಅವರಿಗೆ ಕೊಂಚ ಬಿಡುವು ಸಿಕ್ಕಂತಾಗಿದೆ.
Published by: Rajesh Duggumane
First published: July 12, 2020, 1:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading