HOME » NEWS » State » KARNATAKA BOARD AND CORPORATION PRESIDENT LIST ANNOUNCED BY CM BS YEDIYURAPPA RMD

ಬಂಡಾಯ ಶಮನಕ್ಕೆ ಮುಂದಾದ ರಾಜ್ಯ ಸರ್ಕಾರ; ಸಚಿವ ಸ್ಥಾನ ಆಕಾಂಕ್ಷಿಗಳಿಗೆ ನಿಗಮ-ಮಂಡಳಿ ಸ್ಥಾನ

ಕೆಲ ಶಾಸಕರು ಪ್ರಬಲ ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದರು. ಆ ಪೈಕಿ ರಾಜುಗೌಡ, ದತ್ತಾತ್ರೇಯ ಪಾಟೀಲ ರೇವೂರು, ಹಾಲಪ್ಪ, ತಿಪ್ಪಾರೆಡ್ಡಿ, ನೆಹರು ಓಲೆಕಾರ, ಚಂದ್ರಪ್ಪ, ಎಂಪಿ ಕುಮಾರಸ್ವಾಮಿ ಸೇರಿ ಇತರಿಗೆ ಮಂತ್ರಿ ಸ್ಥಾನದ ಬದಲು ನಿಗಮ ಮಂಡಳಿ ನೀಡಲಾಗಿದೆ.

news18-kannada
Updated:July 27, 2020, 2:17 PM IST
ಬಂಡಾಯ ಶಮನಕ್ಕೆ ಮುಂದಾದ ರಾಜ್ಯ ಸರ್ಕಾರ; ಸಚಿವ ಸ್ಥಾನ ಆಕಾಂಕ್ಷಿಗಳಿಗೆ ನಿಗಮ-ಮಂಡಳಿ ಸ್ಥಾನ
ಸಿಎಂ ಬಿ.ಎಸ್‌. ಯಡಿಯೂರಪ್ಪ.
 • Share this:
ಬೆಂಗಳೂರು: ಕೊರೋನಾ ವೈರಸ್​ ಹೆಚ್ಚುತ್ತಿರುವ ಮಧ್ಯೆಯೇ ಕೆಲ ಶಾಸಕರು ಸಚಿವ ಸ್ಥಾನ ಪಡೆಯಲು ಕಸರತ್ತು ನಡೆಸಿದ್ದರು. ಹೀಗಾಗಿ, ಬಂಡಾಯದ ಹೊಗೆ ಸಣ್ಣದಾಗಿ ಕಾಣಿಸಿಕೊಂಡಿತ್ತು. ಇದನ್ನು ಶಮನ ಮಾಡಲು ಮುಂದಾದ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ, ಸಚಿವ ಸ್ಥಾನ ಆಕಾಂಕ್ಷಿಗಳಿಗೆ ನಿಗಮ-ಮಂಡಳಿ ಸ್ಥಾನ  ನೀಡಿದೆ. 

ಕೆಲ ಶಾಸಕರು ಪ್ರಬಲ ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದರು. ಆ ಪೈಕಿ ರಾಜುಗೌಡ, ದತ್ತಾತ್ರೇಯ ಪಾಟೀಲ ರೇವೂರು, ಹಾಲಪ್ಪ, ತಿಪ್ಪಾರೆಡ್ಡಿ, ನೆಹರು ಓಲೆಕಾರ, ಚಂದ್ರಪ್ಪ, ಎಂಪಿ ಕುಮಾರಸ್ವಾಮಿ ಸೇರಿ ಇತರಿಗೆ ಮಂತ್ರಿ ಸ್ಥಾನದ ಬದಲು ನಿಗಮ ಮಂಡಳಿ ನೀಡಲಾಗಿದೆ. ಹೀಗಾಗಿ ಇವರುಗಳು ಈಗ ಇದಕ್ಕೆ  ತೃಪ್ತಿ‌ಪಡಬೇಕಾಗಿದೆ.

ಕರ್ನಾಟಕದಲ್ಲಿ ಕೋರೋನಾ ವೈರಸ್​ ನಿಯಂತ್ರಣ ಮಾಡುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಂಥ ಸಂದರ್ಭದಲ್ಲಿ ಶಾಸಕರು ಸಚಿವ ಸ್ಥಾನಕ್ಕೆ ಬಂಡಾಯ ಎದ್ದರೆ ಎರಡನ್ನೂ ನಿಭಾಯಿಸಿಕೊಂಡು ಹೋಗುವುದು ಅಸಾಧ್ಯವಾಗಿ ಬಿಡುತ್ತದೆ. ಈ ಹಿನ್ನೆಲೆಯಲ್ಲಿ ಬಿಎಸ್​ವೈ ಈ ನಿರ್ಧಾರಕ್ಕೆ ಬಂದಿದ್ದಾರೆ.

ಯಾರ್ಯಾರಿಗೆ ಯಾವ ಸ್ಥಾನ?

 • ಆರಗ ಜ್ಞಾನೆಂದ್ರ: ಕರ್ನಾಟಕ ಗೃಹ ಮಂಡಳಿ, ಬೆಂಗಳೂರು

 • ಎಂ ಚಂದ್ರಪ್ಪ: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ, ಬೆಂಗಳೂರು
 • ನರಸಿಂಹ ನಾಯಕ್:​ ಕರ್ನಾಟಕ ನಗರ ನೀರು ಸರಬಾರಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು

 • ಎಂ. ಪು. ಕುಮಾರಸ್ವಾಮಿ: ಕರ್ನಾಟಕ ಮಾರುಕಟ್ಟೆ, ಬೆಂಗಳೂರು

 • ಎ.ಎಸ್​. ಪಾಟೀಲ್:​ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ, ಬೆಂಗಳೂರು

 • ಹೆಚ್ಚ್ ಹಾಲಪ್ಪ: ಮೈಸೂರು ಸೇಲ್ಸ್​ ಇಂಟರ್​ ನ್ಯಾಷನಲ್ ಲಿಮಿಟೆಡ್​, ಬೆಂಗಳೂರು

 • ಮಾಡಳ್​ ವಿರೂಪಾಕ್ಷ: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ, ಬೆಂಗಳೂರು

 • ಹೆಚ್​ ತಿಪ್ಪಾರೆಡ್ಡಿ: ದೇವರಾಜ ಅರಸ್​ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು

 • ಶಿವನ್​ಗೌಡ ನಾಯಕ್​: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು

 • ಕಳಕಪ್ಪ ಗುರುಶಾಂತಪ್ಪ ಬಂಡಿ: ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು

 • ಪರಣ್ಣ ಈಶ್ವರಪ್ಪ ಮುನವಳ್ಳಿ ಕರ್ನಾಟಕ ರಾಜ್ಯ ಹಣಕಾಸು ನಿಗಮ ನಿಯಮಿತ, ಬೆಂಗಳೂರು

 • ಸಿದ್ದು ಸವದಿ: ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗ ನಿಯಮಿತ, ಬೆಂಗಳೂರು

 • ಪ್ರೀತಮ್​ ಜಿ ಗೌಡ: ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ, ಬೆಂಗಳೂರು

 • ರಾಜ್​ಕುಮಾರ್ ಪಾಟೀಲ್​ ತೇಲ್ಕೂರ್​: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕೇಂದ್ರ ಕಚೇರಿ ಸಾರಿಗೆ ಸದನ, ಕಲಬುರಗಿ

 • ದತ್ತಾತ್ರೇಯಯ ಚಂದ್ರಶೇಖರ್​ ಪಾಟೀಲ್​: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಕಲಬುರಗಿ

 • ಶಂಕರ್ ಪಾಟೀಲ್​: ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ

 • ಹೆಚ್​ ನಾಗೇಶ್: ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ಬೆಂಗಳೂರು

 • ಎಸ್​​ವಿ ರಾಮಚಂದ್ರ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ಬೆಂಗಳೂರು

 • ಓಲೆಕಾರ ನೆಹರು ಚನ್ನಬಸಪ್ಪ: ಡಾ ಬಾಬು ಜಗಜೀವನ ರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು

 • ಐಹೊಳೆ ದುರ್ಯೋಧನ ಮಹಾಲಿಂಗಪ್ಪ: ಕರ್ನಾಕಟ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಬೆಂಗಳೂರು

 • ಲಾಲಾಜಿ ಆರ್​ ಮೆಂಡನ್​: ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ, ಬೆಂಗಳೂರು

 • ಬಸವರಾಜ್​ ದಡೇಸೂರ್​ : ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ, ಬೆಂಗಳೂರು

 • ಡಾ|| ಎಸ್​ ಶಿವರಾಜ್​ ಪಾಟೀಲ್​ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಬೆಂಗಳೂರು

 • ಸಿಎಸ್​ ನಿರಂಜನ್​ ಕುಮಾರ್​: ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ ನಿಯಮಿತ ಬೆಂಗಳೂರು

Published by: Rajesh Duggumane
First published: July 27, 2020, 1:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories