Tipu Sultan: ಮತಾಂತರವಾಗು, ಶರಣಾಗು, ಇಲ್ಲವೇ ಪ್ರಾಣತ್ಯಾಗ ಮಾಡು ಎಂಬುದು ಟಿಪ್ಪು ರಾಜನೀತಿ: ಬಿಜೆಪಿ

ಮತಬ್ಯಾಂಕ್ ಗಟ್ಟಿಮಾಡಿಕೊಳ್ಳುವ ಉದ್ದೇಶದಿಂದ ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿ ಟಿಪ್ಪು ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಆದೇಶ ನೀಡಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜ್ಯದಲ್ಲಿ ಹಿಜಾಬ್  (Hijab Row), ಮುಸ್ಲಿಂ ವರ್ತಕರ (Muslim Traders) ಮೇಲೆ ನಿಷೇಧ‘ ಮತ್ತು ಹಲಾಲ್ ಉತ್ಪನ್ನ(Halal Products)ಗಳ ಮೇಲೆ ನಿರ್ಬಂಧ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಎಲ್ಲ ಬೆಳವಣಿಗೆಗಳ ನಡುವೆ ಟಿಪ್ಪು ಸುಲ್ತಾನ್ (Tipu Sultan) ಕುರಿತ ಪಠ್ಯವನ್ನು ಕೈ ಬಿಡುವ ಕುರಿತ ಶಿಪಾರಸ್ಸುಗಳು ಬಂದಿವೆ. ಇತ್ತ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (Minister BC Nagesh) ಸಹ ಟಿಪ್ಪು ವೈಭವೀಕರಣವನ್ನು ತೆಗೆದುಹಾಕುವ ಕುರಿತು ಮಾತನಾಡಿದ್ದಾರೆ. ಸದ್ಯ ಈ ವಿಷಯ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಬಿಜೆಪಿ (BJP) ಮತ್ತು  ಕಾಂಗ್ರೆಸ್ (Congress) ನಡುವಿನ ಕೆಸರರಾಚಟಕ್ಕೆ ಕಾರಣವಾಗಿದೆ. ಇಂದು ಕರ್ನಾಟಕ ಬಿಜೆಪಿ (Karnataka BJP) ತನ್ನ ಟ್ವಿಟರ್ ಖಾತೆಯಲ್ಲಿ ಸಾಲು ಸಾಲು ಟ್ವೀಟ್​ ಗಳನ್ನು ಮಾಡಿದೆ. ಟ್ವೀಟ್ ನಲ್ಲಿ ಟಿಪ್ಪು ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.

ಟಿಪ್ಪು ಸುಲ್ತಾನ್ ಈ ದೇಶದ ಸ್ವಾತಂತ್ರ್ಯ ಯೋಧ ಎನ್ನುವುದೇ ಒಂದು ಉತ್ರ್ಪೇಕ್ಷೆ ಹಾಗೂ ತಿರುಚಿದ ಸತ್ಯ. ಶಾಲಾ- ಪಠ್ಯ ಕ್ರಮದಲ್ಲಿ ಇಂಥ ಸುಳ್ಳುಗಳೇಕೆ ಇರಬೇಕು? ವಿದ್ಯಾರ್ಥಿಗಳಿಗೆ ಮತಾಂಧರ ತಿರುಚಿದ ಇತಿಹಾಸ ಕಲಿಸುವುದು ಎಷ್ಟು ಸರಿ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

ಟಿಪ್ಪು ನಡೆಸಿದ ನರಮೇಧ ಮರೆಯಲು ಸಾಧ್ಯವೇ?

ಉತ್ತರ ಭಾರತದಲ್ಲಿ ಔರಂಗಜೇಬ್, ದಕ್ಷಿಣದಲ್ಲಿ ಟಿಪ್ಪು ಸುಲ್ತಾನ್ ಮತಾಂಧ "ರಾಜಸತ್ತೆ"ಯ ಸೃಷ್ಟಿಕರ್ತರು. ಕತ್ತಿಯ ಮೊನೆಯಿಂದ ಅಮಾಯಕರ ಬದುಕು ಕಸಿದುಕೊಂಡ ಮತಾಂಧರಿವರು. ಇಂಥ ಮತೀಯ ಸುಳ್ಳು ಇತಿಹಾಸವನ್ನು ನಮ್ಮ ಮಕ್ಕಳು ಓದಬೇಕೇ? ನೆತ್ತರಕೆರೆ, ಮಡಿಕೇರಿಯಲ್ಲಿ ಟಿಪ್ಪು ನಡೆಸಿದ ನರಮೇಧ ಮರೆಯಲು ಸಾಧ್ಯವೇ? ಮತಾಂತರವಾಗು, ಶರಣಾಗು, ಇಲ್ಲವೇ ಪ್ರಾಣತ್ಯಾಗ ಮಾಡು ಎಂಬುದು ಟಿಪ್ಪು ರಾಜನೀತಿ.

ಟಿಪ್ಪು ಇತಿಹಾಸ ಎಂದರೆ ಅದು ತಾಲಿಬಾನ್

ಒಂದೇ ಒಂದು ಯುದ್ಧವನ್ನು ನೇರಮಾರ್ಗದಲ್ಲಿ ಗೆಲ್ಲದ‌ ಮತಾಂಧನಿಗೆ "ಮೈಸೂರು ಹುಲಿ" ಎಂಬ ಬಿರುದು ಪ್ರಾಪ್ತವಾಗಿದ್ದೇ ಒಂದು ಚೋದ್ಯ. ನೈಜತೆ ಬಯಲಾಗಲೇಬೇಕಲ್ಲವೇ? ಟಿಪ್ಪು ಇತಿಹಾಸ ಎಂದರೆ ಅದು ತಾಲಿಬಾನ್, ಐಸಿಸ್ ಮತಾಂಧರಷ್ಟೇ ಘೋರ. ಕಾಶ್ಮೀರದಲ್ಲಿ ಮತಾಂಧರು ನಡೆಸಿದ ನರಮೇಧವನ್ನೂ ಮೀರಿದ ಕೃತ್ಯವನ್ನು ಟಿಪ್ಪು ನಡೆಸಿದ್ದಾನೆ ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ.

ಇದನ್ನೂ ಓದಿ:  Kodagu: ಕೊಡವರಿಗೆ ಟಿಪ್ಪು ಮೇಲೆ ಏಕೆ ಸಿಟ್ಟು; ದೇವಟುಪರಂಬುವಿನ ಘಟನೆ ಏನು?

ಸತ್ಯವನ್ನು‌ ಮುಚ್ಚಿಟ್ಟು ಉದಾತ್ತ, ಸ್ವಾತಂತ್ರ್ಯ ವೀರ ಎಂದು ಬಣ್ಣಿಸುವುದು ದೇಶದ ಇತಿಹಾಸಕ್ಕೆ‌ ಮಾಡುವ ಅಪಮಾನ. ಮತಬ್ಯಾಂಕ್ ಗಟ್ಟಿಮಾಡಿಕೊಳ್ಳುವ ಉದ್ದೇಶದಿಂದ ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿ ಟಿಪ್ಪು ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಆದೇಶ ನೀಡಿದರು.

ಶಾಲಾ ಪಠ್ಯದಲ್ಲಿರುವ ಸುಳ್ಳುಗಳ ಪರಿಷ್ಕರಣೆ

ಟಿಪ್ಪು ನಡೆಸಿದ ಹತ್ಯಾಕಾಂಡಕ್ಕೆ‌ #ಟಿಪ್ಪುರಾಮಯ್ಯ ಒಪ್ಪಿಗೆಯ ಮುದ್ರೆ ನೀಡಿದ್ದರು. ಈಗ ಅದೇ ಭಜಕರ ಗುಂಪು #ಟಿಪ್ಪುಸುಳ್ಳುಇತಿಹಾಸ ಬಯಲಾಗುವುದಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಟಿಪ್ಪು ಮಾತ್ರವಲ್ಲ ಶಾಲಾ ಪಠ್ಯಕ್ರಮದಲ್ಲಿ ಸೇರಿದ ಎಲ್ಲಾ ಸುಳ್ಳು ಇತಿಹಾಸಗಳ ಪರಿಷ್ಕರಣೆಯಾಗಬೇಕು. ಇತಿಹಾಸ ಎಂದರೆ "ಹೀಗೆ ಇತ್ತು" ಎಂಬ ರೀತಿಯ ವಾಸ್ತವ ಸತ್ಯದಲ್ಲಿರಬೇಕೇ ಹೊರತು ಸುಳ್ಳಿನಿಂದ ಕೂಡಿರಬಾರದು. ಆದರೆ ಈಗ ನಾವು ಓದುತ್ತಿರುವ ಇತಿಹಾಸ, "ಕಾಂಗ್ರೆಸ್ ಕೈಪಿಡಿ"!

ಟಿಪ್ಪು ಭಾರತಕ್ಕಾಗಿ ಬೆವರು ಸುರಿಸಿಲ್ಲ

ಟಿಪ್ಪು ಕಾಲವೆಂದರೆ ಅದು ಹಿಂದೂ ಮತ್ತು ಕ್ರೈಸ್ತರ ದೌರ್ಭಾಗ್ಯದ ಕಾಲ.  ಜನಾನುರಾಗಿಯಾಗಿದ್ದ ಮೈಸೂರು ಒಡೆಯರನ್ನು ಕಪಟ ಮಾರ್ಗದ ಮೂಲಕ ಅಧಿಕಾರದಿಂದ ಕೆಳಕ್ಕೆ ಇಳಿಸಿದರು. ಹಿಂದೂಗಳು ಮೂರನೇ ದರ್ಜೆಯ ಪ್ರಜೆಗಳಾಗಿದ್ದರು. ನೆತ್ತರಕೆರೆಯಲ್ಲಿ ಸಾವಿರಾರು ಕ್ರೈಸ್ತರ ಹತ್ಯೆ.

ಇದನ್ನೂ ಓದಿ:  School Text Book: ಟಿಪ್ಪು ಸುಲ್ತಾನ್ ವೈಭವೀಕರಿಸಿರೋ ಅಂಶಗಳನ್ನ ತೆಗೆದುಹಾಕಬಹುದು, ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಶಿಫಾರಸು

ಮತಾಂಧ ಟಿಪ್ಪು ಸುಲ್ತಾನ್‌ ಬ್ರಿಟಿಷರ ವಿರುದ್ಧ ಹೋರಾಡಿದ್ದು ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿಯೇ ವಿನಃ ಭಾರತವನ್ನು ದಾಸ್ಯದಿಂದ ಮುಕ್ತಿಗೊಳಿಸುವುದಕ್ಕಲ್ಲ. ಟಿಪ್ಪು ಇಸ್ಲಾಂ ಸಾಮ್ರಾಜ್ಯದ ವಿಸ್ತಾರಕನಾಗಿದ್ದನೇ ಹೊರತು ಭಾರತಕ್ಕಾಗಿ ಬೆವರು ಸುರಿಸಿಲ್ಲ.
Published by:Mahmadrafik K
First published: