• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • BJP vs Congress: ನಿಮ್ಮನ್ನು ಖೆಡ್ಡಾಕ್ಕೆ ಬೀಳಿಸಲು ತುದಿಗಾಲಲ್ಲಿ ನಿಂತಿದ್ದಾರೆ ಡಿಕೆಶಿ, ಖರ್ಗೆ, ಪರಮೇಶ್ವರ್‌: ಬಿಜೆಪಿ ಟ್ವೀಟ್

BJP vs Congress: ನಿಮ್ಮನ್ನು ಖೆಡ್ಡಾಕ್ಕೆ ಬೀಳಿಸಲು ತುದಿಗಾಲಲ್ಲಿ ನಿಂತಿದ್ದಾರೆ ಡಿಕೆಶಿ, ಖರ್ಗೆ, ಪರಮೇಶ್ವರ್‌: ಬಿಜೆಪಿ ಟ್ವೀಟ್

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

ಜನ ಸ್ಪಂದನ ಕಾರ್ಯಕ್ರಮದ ಯಶಸ್ಸಿಗೆ ಕಾಂಗ್ರೆಸ್‌ ದಿಕ್ಕೆಟ್ಟಿದೆ. ಬಿಜೆಪಿಯ ಜನಸ್ಪಂದನ ಕಾರ್ಯಕ್ರಮ, ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿದ್ದ ಕಾಂಗ್ರೆಸ್‌ ನಾಯಕರ ನಿದ್ದೆಗೆಡಿಸಿದೆ.

  • Share this:

ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ (Farmer CM Siddaramaiah) ಅವರ ನಡುವೆ ಧಮ್ ವಾರ್ ನಡೆಯುತ್ತಿದೆ. ಜನಸ್ಪಂದನ (Jana Spandana) ಕಾರ್ಯಕ್ರಮದಲ್ಲಿ ಮಾತನಾಡಿದ್ದ  ಸಿಎಂ ಬೊಮ್ಮಾಯಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಸಾಲು ಸಾಲು ಟ್ವೀಟ್ (Tweet) ಮಾಡಿ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದರು. ಇನ್ನು ಸಿದ್ದರಾಮಯ್ಯರ ಈ ಹೇಳಿಕೆಗೆ ಮುಖ್ಯಮಂತ್ರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದ್ರೆ ಕರ್ನಾಟಕ ಬಿಜೆಪಿ ಟ್ವಟ್ಟರ್ (Karnataka BJP Twitter) ಖಾತೆಯಿಂದ ಪ್ರತಿಕ್ರಿಯೆ ಬಂದಿವೆ. ಬಿಜೆಪಿ ಪಕ್ಷದ ಒಂದು‌ ಜನಸ್ಪಂದನೆ ಕಾರ್ಯಕ್ರಮಕ್ಕೆ ಬೆದರಿರುವ ಸಿದ್ದರಾಮಯ್ಯ ಅವರೇ, ಮುಂದೆ ಹೇಗೆ? ಇನ್ನೂ ಹಲವಾರು ಸಮಾವೇಶದ ರೂಪುರೇಶೆ ನಡೆಯುತ್ತಿದೆ, ಭ್ರಷ್ಟರಾಮಯ್ಯ ಅವರು ಈಗಲೇ ತಮ್ಮ ಬುಡಕ್ಕೆ ಬೆಂಕಿ ಬಿದ್ದವರಂತೆ ವಿಲವಿಲ ಒದ್ದಾಡುತ್ತಿದ್ದಾರೆ ಎಂದು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.


ಭಾರತ್ ಜೋಡೋ ಯಾತ್ರೆಯ (Bharat Jodo Yatra) ಮೂಲಕ‌ ನಕಲಿ ಗಾಂಧಿ ಕುಟುಂಬದ ಪಾದಪೂಜೆ ಸಿದ್ದರಾಮೋತ್ಸವದ ಮೂಲಕ ಸಿಎಂ‌ ಕುರ್ಚಿಗಾಗಿ ವ್ಯಕ್ತಿಪೂಜೆ. ಜನ ಸಂವೇದನೆಗೆ, ಜನಸ್ಪಂದನೆಯ ಮೂಲಕ ನಾವು ಬೆಲೆ ನೀಡುತ್ತಿದ್ದೇವೆ. ಮಾನ್ಯ ಸಿದ್ದರಾಮಯ್ಯ ಅವರೇ, ನಿಮ್ಮದು ಬರೇ ಅಧಿಕಾರ ಕೇಂದ್ರೀಕೃತ ಸಮಾವೇಶಗಳಲ್ಲವೇ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.


ರಾಜ್ಯ ಕಂಡ ಅತಿ ಭ್ರಷ್ಟಾತಿ ಭ್ರಷ್ಟ ಮುಖ್ಯಮಂತ್ರಿ ಎಂದರೆ ಅದು ಸಿದ್ದರಾಮಯ್ಯ. ತಾನು ಮಾಡಿದ ಭ್ರಷ್ಟಾಚಾರಗಳು ತನ್ನನ್ನು ಸುತ್ತಿಕೊಳ್ಳುತ್ತದೆ ಎಂಬ ಭಯ ಕಾಡಿದಾಗ ಭ್ರಷ್ಟಾಚಾರ ತನಿಖಾ ಸಂಸ್ಥೆಗೆ ಬಾಗಿಲು ಹಾಕಿದ ಕೀರ್ತಿ ಇಟಲಿ ಪರಿವಾರದ ಈ ಭ್ರಷ್ಟರಾಮಯ್ಯ ಅವರಿಗೆ ಸಲ್ಲುತ್ತದೆ.  ನಿಜವಲ್ವೇ 'ರೀಡು'ರಾಮಯ್ಯ ಎಂದು ವ್ಯಂಗ್ಯ ಮಾಡಿದೆ.


ಅದು ದಲಿತ‌ ನಾಯಕನಿಂದ ಕಿತ್ತುಕೊಂಡ ಪದಭಿಕ್ಷೆ


ಜನ್ಮ ದಿನಾಂಕವೇ ಗೊತ್ತಿಲ್ಲ ಎನ್ನುತ್ತಲೇ ಜನನ ದಿನ ದಿನಾಂಕದಲ್ಲೂ ಹಗರಣ ನಡೆಸಿ ಸಿದ್ರಾಮೋತ್ಸವ ಮಾಡಿದ್ದು, ಡಿಕೆಶಿಯನ್ನು ಬೆದರಿಸಲೋ, ನಕಲಿ ಗಾಂಧಿ ಪರಿವಾರವನ್ನು ಬೆದರಿಸಲೋ ಅಥವಾ ಜನಸೇರಿಸಿ‌ ಸಿಎಂ ಆಗುತ್ತೇನೆ ಎಂಬ ಭ್ರಮೆಯಿಂದ ಮಾಡಿದ್ದೋ? 2013 ರಲ್ಲಿ ಭ್ರಷ್ಟರಾಮಯ್ಯ ಸಿಎಂ ಆಗಿದ್ದಲ್ಲ, ಅದು ದಲಿತ‌ ನಾಯಕನಿಂದ ಕಿತ್ತುಕೊಂಡ ಪದಭಿಕ್ಷೆ ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಅವರ ವಿಷಯವನ್ನು ಕೆದಕಿದೆ.


ಪಕ್ಷದೊಳಗಿರುವ ಭೀತಿಯನ್ನು ನಿವಾರಿಸಿಕೊಳ್ಳಿ


ಜನ ಸ್ಪಂದನ ಕಾರ್ಯಕ್ರಮದ ಯಶಸ್ಸಿಗೆ ಕಾಂಗ್ರೆಸ್‌ ದಿಕ್ಕೆಟ್ಟಿದೆ. ಬಿಜೆಪಿಯ ಜನಸ್ಪಂದನ ಕಾರ್ಯಕ್ರಮ, ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿದ್ದ ಕಾಂಗ್ರೆಸ್‌ ನಾಯಕರ ನಿದ್ದೆಗೆಡಿಸಿದೆ. ಜನರು ಬಿಜೆಪಿ ಪಕ್ಷದ ಜೊತೆಗೆ ಇದ್ದಾರೆ ಎನ್ನುವುದು ರಾಜ್ಯದಲ್ಲಿ ನಡೆದ ಮೋದಿ ಕಾರ್ಯಕ್ರಮ ಮತ್ತು ಜನಸ್ಪಂದನ ಸಮಾವೇಶವೇ ಸಾಕ್ಷಿಯಾಗಿದೆ


ಮಾನ್ಯ ಸಿದ್ದರಾಮಯ್ಯ ಅವರೇ ಮೊದಲು ಕಾಂಗ್ರೆಸ್‌ ಪಕ್ಷದೊಳಗಿರುವ ಭೀತಿಯನ್ನು ನಿವಾರಿಸಿಕೊಳ್ಳಿ. ಡಿಕೆಶಿ, ಖರ್ಗೆ, ಪರಮೇಶ್ವರ್‌ ನಿಮ್ಮನ್ನು ಖೆಡ್ಡಾಕ್ಕೆ ಬೀಳಿಸಲು ತುದಿಗಾಲಲ್ಲಿ ನಿಂತಿದ್ದಾರೆ. 2013 ರಲ್ಲಿ ನೀವು ಮಾಡಿದ ಪಾಪಕ್ಕೆ 2023 ರಲ್ಲಿ ನಿಮ್ಮದೇ ಪಕ್ಷದ ನಾಯಕರು ಪ್ರಾಯಶ್ಚಿತ್ತದ ಭಾಗ್ಯ ಕಲ್ಪಿಸಲಿದ್ದಾರೆ ಎಂದು ಹೇಳಿದೆ.


ಇದನ್ನೂ ಓದಿ:  Siddaramaiah: ಸವಾಲು ಹಾಕುವ ಧಮ್ ನಿಮಗಿಲ್ಲ; ಅದು ಹೇಳಿದ್ದು, ನನಗೋ ಯಡಿಯೂರಪ್ಪನವರಿಗೋ? ಸಿಎಂಗೆ ಸಿದ್ದರಾಮಯ್ಯ ಪ್ರಶ್ನೆ


ದಿನೇಶ್ ಗುಂಡೂರಾವ್ ಟ್ವೀಟ್


ಇನ್ನು ವಿಧಾನಮಂಡಲ ಅಧಿವೇಶನ ಹಿನ್ನೆಲೆ ಮಾಜಿ ಸಚಿವ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.  ಇಂದಿನಿಂದ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗುತ್ತಿದೆ. ಮೊನ್ನೆಯಷ್ಟೇ ದೊಡ್ಡಬಳ್ಳಾಪುರದಲ್ಲಿ‌ ಖಾಲಿ‌ ಕುರ್ಚಿಗಳ ಎದುರು 'ಜನ ಸ್ಪಂದನ'ಯಾತ್ರೆ ಎಂಬ ಪ್ಲಾಫ್ ಶೋ ನಡೆಸಿರುವ BJPಯವರು ಇಂದು ಸದನದಲ್ಲಿ ಉತ್ತರಿಸಲೇಬೇಕಾದ ಅನೇಕ ಪ್ರಶ್ನೆಗಳಿವೆ. 40% ಕಮೀಷನ್, PSI ಹಗರಣ, ನೆರೆ‌ ನಿರ್ವಹಣೆ ವೈಫಲ್ಯದ ಬಗ್ಗೆ ಸದನದಲ್ಲಿ‌ ಉತ್ತರಿಸಲೇಬೇಕು ಎಂದು ಆಗ್ರಹಿಸಿದ್ದಾರೆ.


ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆ ಮಳೆಯಿಂದಾಗಿ ಜೀವಹಾನಿ ಆಸ್ತಿ ಹಾನಿ ಸಂಭವಿಸಿದೆ. ಸಂಕಷ್ಟಕ್ಕೊಳಗಾದ ಜನರ ಜೀವದ ಬಗ್ಗೆ ಯೋಚಿಸದ ಸರ್ಕಾರ ಮಾನ ಮರ್ಯಾದೆ ಇಲ್ಲದೆ ಜನಸ್ಪಂದನಾ ಯಾತ್ರೆ ಮಾಡಿದೆ. ಜನರಿಗೆ ಈ ಸರ್ಕಾರ ಯಾವ ಬಗ್ಗೆ ಸ್ಪಂದಿಸಿದೆ ಎಂದು ಸದನದಲ್ಲಿ ಹೇಳಲಿ ಎಂದು ಕೇಳಿದ್ದಾರೆ.


ಇದನ್ನೂ ಓದಿ:  Birthday Celebration: ನೀವು ರಸ್ತೆಯಲ್ಲಿ ಬರ್ತ್ ಡೇ ಆಚರಿಸಿಕೊಳ್ತಿರಾ? ಹುಷಾರ್, ಹಾಗಾದ್ರೆ ಈ ಸುದ್ದಿ ಓದಿ


ಬ್ಲಾಕ್‌ಮೇಲ್ ಮಾಡಿದರೆ ಹೆದರುವವರು ಯಾರು?


ಸದನದಲ್ಲಿ ಈ ಸರ್ಕಾರದ ಹಗರಣಗಳ ಬಗ್ಗೆ ನಾವು ಪ್ರಶ್ನೆ ಮಾಡುವ ವಿಚಾರ BJPಯವರಿಗೆ ಮೈ ಚಳಿ ಹುಟ್ಟಿಸಿದೆ. ಹಾಗಾಗಿ ಅರ್ಕಾವತಿ ರಿ-ಡೂ ಪ್ರಕರಣದ ತನಿಖೆಯ ಬಗ್ಗೆ ಮಾತಾಡುತ್ತಿದ್ದಾರೆ.  ಬುಟ್ಟಿಯೊಳಗಿನ ಹಾವು ಬಿಡ್ತೀವಿ ಎಂದು ಹೆದರಿಸುವ ಬದಲು ತನಿಖೆ ನಡೆಸಲಿ. ಸರ್ಕಾರ ಅವರದ್ದೇ ಅಲ್ಲವೇ? ಬ್ಲಾಕ್‌ಮೇಲ್ ಮಾಡಿದರೆ ಹೆದರುವವರು ಯಾರು? ಸದನದಲ್ಲಿ ಈ ಸರ್ಕಾರದ ಹಗರಣಗಳ ಬಗ್ಗೆ ನಾವು ಪ್ರಶ್ನೆ ಮಾಡುವ ವಿಚಾರ BJPಯವರಿಗೆ ಮೈ ಚಳಿ ಹುಟ್ಟಿಸಿದೆ. ಹಾಗಾಗಿ ಅರ್ಕಾವತಿ ರಿ-ಡೂ ಪ್ರಕರಣದ ತನಿಖೆಯ ಬಗ್ಗೆ ಮಾತಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

First published: