• Home
  • »
  • News
  • »
  • state
  • »
  • Nalin Kumar Kateel: ಚಡ್ಡಿಗೆ ಬೆಂಕಿ ಹಾಕಿ ಅಂತ ಹೇಳ್ತಿರೋ ಸಿದ್ದರಾಮಯ್ಯನೇ ಆ ಬೆಂಕಿಯಲ್ಲಿ ಸುಟ್ಟು ಹೋಗ್ತಾರೆ: ಕಟೀಲ್

Nalin Kumar Kateel: ಚಡ್ಡಿಗೆ ಬೆಂಕಿ ಹಾಕಿ ಅಂತ ಹೇಳ್ತಿರೋ ಸಿದ್ದರಾಮಯ್ಯನೇ ಆ ಬೆಂಕಿಯಲ್ಲಿ ಸುಟ್ಟು ಹೋಗ್ತಾರೆ: ಕಟೀಲ್

ನಳಿನ್​​ ಕುಮಾರ್​ ಕಟೀಲ್​​

ನಳಿನ್​​ ಕುಮಾರ್​ ಕಟೀಲ್​​

ಪದೇ ಪದೇ ಆರ್.ಎಸ್.ಎಸ್. ಚಡ್ಡಿಗೆ ಬೆಂಕಿ ಹಾಕಿ ಎಂದು ಹೇಳಿಕೆ ನೀಡ್ತಿರೋ ಸಿದ್ಧರಾಮಯ್ಯ ಅವರೇ ಆ ಬೆಂಕಿಯಲ್ಲಿ ಸುಟ್ಟು ಹೋಗ್ತಾರೆ ಎಂದು ಕಿಡಿಕಾರಿರೋ ನಳಿನಕುಮಾರ್ ಕಟೀಲ್, ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.

  • Share this:

ಹುಬ್ಬಳ್ಳಿ : ಚಡ್ಡಿಗೆ ಬೆಂಕಿ ಹಾಕುವಂತೆ ಹೇಳ್ತಿರೋ ಸಿದ್ಧರಾಮಯ್ಯ(Siddaramaiah), ಅದೇ ಬೆಂಕೀಲಿ ಸುಟ್ಟು ಹೋಗ್ತಾರೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ (Karnataka BJP President Nalin Kumar Kateel) ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದ ಹತ್ತಾರು ಗಲಭೆಗಳ ಹಿಂದೆ ಕಾಂಗ್ರೆಸ್ (CONGRESS) ಕೈವಾಡ ಇದೆ. ಬೆಂಕಿ ಹಾಕುವ ಕೆಲಸವನ್ನ ಕಾಂಗ್ರೆಸ್ ಮಾಡುತ್ತಿದೆ. ಶಿವಮೊಗ್ಗ ಮತ್ತು ಹುಬ್ಬಳ್ಳಿಯ ಗಲಭೆ ಹಿಂದೆ ಕಾಂಗ್ರೆಸ್ ಇದೆ. ಆರ್‌ಎಸ್‌ಎಸ್ ಒಂದು ಸೇವಾ ಸಂಸ್ಥೆದೇಶಭಕ್ತರನ್ನ ನಿರ್ಮಾಣ ಮಾಡುವ ಸಂಸ್ಥೆ ಆರ್‌ಎಸ್‌ಎಸ್ ಆಗಿದೆ. ಇದಕ್ಕೆ ಕೈ ಹಾಕಿದ ನೆಹರು ಮತ್ತು ಇದಿರಾ ಗಾಂಧಿ ಸುಟ್ಟು ಹೋಗಿದ್ದಾರೆ. ಕಾಂಗ್ರೆಸ್ ಬೆಂಕಿಗೆ ಕೈ ಹಾಕಿ ಸುಟ್ಟು ಹೋಗುತ್ತದೆ. ಚಡ್ಡಿಗೆ ಬೆಂಕಿ ಹಾಕಲು ಹೇಳಿರೋ ಸಿದ್ಧರಾಮಯ್ಯ ಅವರೇ ಸುಟ್ಟು ಹೋಗುತ್ತಾರೆ.


ಕಾಂಗ್ರೆಸ್ ಬೆಂಕಿ ಹಚ್ಚುವ ಕೆಲಸ ಮಾಡ್ತಿದೆ


ರಾಜ್ಯದಲ್ಲಿ ಅತಂತ್ರ ಸ್ಥಿತಿಯನ್ನು ಉಂಟು ಮಾಡಲು ಕಾಂಗ್ರೆಸ್ ಬೆಂಕಿ ಹಚ್ಚುವ ಕೆಲಸಕ್ಕೆ ಮುಂದಾಗಿದೆ. ಮುಂದಿನ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ನಾಯಕರು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಆದ ಗಲಾಟೆಗಳಿಗೆ ಅವರ ವೈಫಲ್ಯವೇ ಕಾರಣ. ರಾಜ್ಯದಲ್ಲಿ ನಡೆಯುವ ಒಳ್ಳೆಯ ಕಾರ್ಯಗಳಿಗೆ ಸಿದ್ಧರಾಮಯ್ಯ ಬೆಂಬಲ ಮಾಡಲ್ಲ. ಅವರು ಎಲ್ಲಾ ವಿಚಾರದಲ್ಲಿಯೂ ಮಾತನಾಡಬೇಕು ಅಂತ ಮಾತನಾಡುತ್ತಾರೆ ಎಂದು ನಳಿನ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.


ಇದನ್ನೂ ಓದಿ: Udupi ಕಾರ್ಕಳದ ರಸ್ತೆಯೊಂದರ ಫಲಕದಲ್ಲಿ ನಾಥೂರಾಮ್ ಗೋಡ್ಸೆ ಹೆಸರು ಪ್ರತ್ಯಕ್ಷ; ಪೊಲೀಸರಿಂದ ತೆರವು


ಧ್ವನಿವರ್ಧಕ ಹೋರಾಟ ಶ್ರೀರಾಮಸೇನೆಗೆ ಬಿಟ್ಟದ್ದು 
ಧ್ವನಿವರ್ಧಕ ವಿಚಾರವಾಗಿ‌ ಶ್ರೀರಾಮಸೇನೆ ಎರಡನೇ ಹಂತದ ಹೋರಾಟ ಮಾಡೋ ವಿಚಾರ ಅವರಿಗೆ ಬಿಟ್ಟದ್ದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ಎಲ್ಲಾ ಸಂಘಟನೆಗಳಿಗೆ ಪ್ರತಿಭಟನೆ ಮಾಡುವ ಅಧಿಕಾರವಿದೆ. ಅವರು ಮಾಡಲಿ ಆದರೆ ಅವರ ಅಜೆಂಡಾಗಳಿಗೆ ನಾವು ಮನ್ನಣೆ ನೀಡಲು ಆಗಲ್ಲ. ಹಿಂದೂಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದೀವಿ. ಅದಕ್ಕೆ ಬದ್ಧವಾಗಿ ದೇಶದಲ್ಲಿ ಹಲವಾರು ಕಾಯ್ದೆ ತಂದಿದ್ದೇವೆ. ಆದರೆ ಸರ್ವೇ ಜನ ಸುಖಿನೋ ಭವಂತು ಎನ್ನುವ ತತ್ವ ನಮ್ಮದು. ಒಂದು ಸರ್ಕಾರದಲ್ಲಿದ್ದಾಗ ಸಂವಿಧಾನದ ಆಧಾರದ ಮೇಲೆ ಕೆಲಸ ಮಾಡಬೇಕು. ಆ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.


ಕಾದು ನೋಡಿ ಬಿಜೆಪಿ ಮೂರು ಸ್ಥಾನಗಳನ್ನ ಗೆಲ್ಲುತ್ತೆ


ಚುನಾವಣೆಯಲ್ಲಿ ಉತ್ತಮ ಫಲಿತಾಂಶ...ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಮುವ್ವರು ಅಭ್ಯರ್ಥಿಗಳ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಟೀಲ್, ಕಾದು ನೋಡಿ ಬಿಜೆಪಿ ಮೂರು ಸ್ಥಾನಗಳನ್ನ ಗೆಲ್ಲುತ್ತೆ. ರಾಜ್ಯ ಸಭೆ ಚುನಾವಣೆಯಲ್ಲಿ ನಮ್ಮ ಮೂರು ಅಭ್ಯರ್ಥಿಗಳು ಗೆದ್ದೇ ಗೆಲ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅತ್ಯಂತ ಹಿರಿಯರಾಗಿರೋ ಬಸವರಾಜ ಹೊರಟ್ಟಿ ಅವರು ಬಿಜೆಪಿ ಸಿದ್ಧಾಂತವನ್ನು ಮೆಚ್ಚಿ ನಮ್ಮಲ್ಲಿಗೆ ಬಂದು ಚುನಾವಣಾ ಅಕಾಡಕ್ಕೆ ಇಳಿದಿದ್ದಾರೆ. ಚುನಾವಣೆಯಲ್ಲಿ ಅವರು ಗೆದ್ದು ದಾಖಲೆ ನಿರ್ಮಿಸ್ತಾರೆ. ಜೊತೆಗೆ ರಾಜ್ಯದಲ್ಲಿ ನಡೆಯುತ್ತಿರೋ ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಉತ್ತಮ ಫಲಿತಾಂಶ ಬರೋ ಜೊತೆಗೆ, ವಿಧಾನ ಪರಿಷತ್ ನಲ್ಲಿ ಬಿಜೆಪಿ ಬಹುಮತ ಪಡೆಯಲಿದೆ ಎಂದಿದ್ದಾರೆ.


ಬಸನಗೌಡ ಪಾಟೀಲ ಯತ್ನಳ ಸೇರಿ ವಿವಿಧ ನಾಯಕರು ಹೇಳಿಕೆ ನೀಡ್ತಿರೋದು ಅಶಿಸ್ತು ಅನ್ನೋಕೆ ಆಗಲ್ಲ. ನಮ್ಮದು ಸರ್ವಾಧಿಕಾರ ಪಕ್ಷವಲ್ಲ. ಪ್ರಜಾಪ್ರಭುತ್ವದಲ್ಲಿ ಒಂದು ಪಕ್ಷದಲ್ಲಿ ಹತ್ತಾರು ನಾಯಕರು ಇರುತ್ತಾರೆ. ಭಿನ್ನ ಭಿನ್ನ ಹೇಳಿಕೆ ಹೇಳಿರಬಹುದು. ಆದರೆ ಹಾಗೆಂದು ಅವರು ಮಾತನಾಡಿದ್ದೆಲ್ಲವನ್ನೂ ಸಹಿಸಿಕೊಳ್ಳುತ್ತೇವೆ ಎಂದಲ್ಲ. ಶಿಸ್ತು ಸಮಿತಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಕಟೀಲ್ ತಿಳಿಸಿದ್ದಾರೆ.

Published by:Kavya V
First published: