ಬಿಎಸ್​ವೈ- ರಮೇಶ್​ ಜಾರಕಿಹೊಳಿ ದೆಹಲಿಗೆ ದೌಡು: ಆಪರೇಷನ್ ಕಮಲಕ್ಕೆ‌ ಅಣಿಯಾಗುತ್ತಿದೆಯಾ ಬಿಜೆಪಿ?

ನಿನ್ನೆ ಯಡಿಯೂರಪ್ಪ ಕೂಡ ಬೆಳಗಾವಿಗೆ ತೆರಳಿದ್ದರು. ಆದರೆ, ನಾನು ಲೋಕಸಭಾ ಚುನಾವಣೆ ಚರ್ಚೆಗೆ ಬಂದಿದ್ದೇನೆ. ನಾನು ಸತ್ಯವಾಗಿ ರಮೇಶ್​ ಅವರನ್ನು ಭೇಟಿಯಾಗುವುದಿಲ್ಲ ಎಂದು ಮಾಧ್ಯಮಗಳ ಮುಂದೆ ತಿಳಿಸಿದ್ದರು. 

zahir | news18
Updated:December 28, 2018, 10:06 AM IST
ಬಿಎಸ್​ವೈ- ರಮೇಶ್​ ಜಾರಕಿಹೊಳಿ ದೆಹಲಿಗೆ ದೌಡು: ಆಪರೇಷನ್ ಕಮಲಕ್ಕೆ‌ ಅಣಿಯಾಗುತ್ತಿದೆಯಾ ಬಿಜೆಪಿ?
ಅಮಿತ್​ ಶಾ-ಬಿಎಸ್​ವೈ
  • News18
  • Last Updated: December 28, 2018, 10:06 AM IST
  • Share this:
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಪಕ್ಷವು ಮತ್ತೊಮ್ಮೆ ಆಪರೇಷನ್​ ಕಮಲಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೆಯೇ? ಇತ್ತೀಚಿನ ಕೆಲ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಹೌದು ಎನ್ನಬಹುದು. ಕಾಂಗ್ರೆಸ್- ಜೆಡಿಎಸ್​ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಭಿನ್ನಮತೀಯ ಶಾಸಕರನ್ನು ಈಗಾಗಲೇ ಬಿಜೆಪಿ ಸಂಪರ್ಕ ಮಾಡಿದೆ ಎನ್ನಲಾಗಿದೆ.

ಅತೃಪ್ತ ಶಾಸಕರಿಗೆ ಭರಪೂರ ಆಶ್ವಾಸನೆಗಳನ್ನು ನೀಡಿದ್ದು, ಸರ್ಕಾರ ರಚನೆಗೆ ಕೈ ಜೋಡಿಸುವಂತೆ ಕೋರಲಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ ಗುರುವಾರ ದಿಢೀರಣೆ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಹಾಗೆಯೇ ಬಂಡಾಯ ಶಾಸಕರ ನೇತೃತ್ವವಹಿಸಿಕೊಂಡಿರುವ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಸಹ ದೆಹಲಿಯತ್ತ ತೆರಳಿದ್ದಾರೆ ಎನ್ನಲಾಗಿದೆ. ಶುಕ್ರವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ ಮಾಡಲಿರುವ ಉಭಯ ನಾಯಕರು, ರಾಜ್ಯದ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಲಿದ್ದಾರೆ.

ಇನ್ನು ಮಾಜಿ ಸಿಎಂ ಯಡಿಯೂರಪ್ಪ ಮತ್ತು ರಮೇಶ್​ ಜಾರಕಿಹೊಳಿ ಅವರೊಂದಿಗೆ ಕೆಲ ಶಾಸಕರು ಕೂಡ ದೆಹಲಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಲೋಕಸಭಾ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಲು ತೆರೆ ಮರೆ ಪಯತ್ನದಲ್ಲಿರುವ ಬಿಜೆಪಿಗೆ  ಹೈಕಮಾಂಡ್​ ಗ್ರೀನ್​ ಸಿಗ್ನಲ್ ನೀಡಿದರೆ ಆಪರೇಷನ್​ ಕಮಲ ನಡೆಯಲಿದೆ ಎನ್ನಲಾಗುತ್ತಿದೆ.

ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ದಕ್ಷಿಣ ಭಾರತದ ಬಿಜೆಪಿ ಸಂಸದರ ಸಭೆ ಕರೆದಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿದ್ದು, ಕೇಂದ್ರದ ಸಾಧನೆಗೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಅಲ್ಲದೆ ಕೇಂದ್ರ ಜಾರಿಗೆ ತಂದಿರುವ ಯೋಜನೆಗಳನ್ನು ಜನರಿಗೆ ತಿಳಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಪಕ್ಷದ ಸಂಘಟನೆಗೆ ಒತ್ತು ನೀಡುವಂತೆ ಇದೇ ವೇಳೆ ಸಂಸದರಿಗೆ ಪ್ರಧಾನಿ ಮೋದಿ ಕಿವಿಮಾತು ಹೇಳಲಿದ್ದಾರೆ ಎಂದು ತಿಳಿಸಲಾಗಿದೆ.

ದಕ್ಷಿಣ ಭಾರತದ ಸಂಸದರ ಸಭೆ ಮತ್ತು ರಾಜ್ಯದ ಪ್ರಭಾವಿ ನಾಯಕ ಬಿ.ಎಸ್ ಯಡಿಯೂರಪ್ಪ ಮತ್ತು ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ದೆಹಲಿಗೆ ತೆರಳಿರುವುದು ಆಪರೇಷನ್​ ಕಮಲದ ಮನ್ಸೂಚನೆ ಎಂದು ಹೇಳಲಾಗುತ್ತಿದೆ.

ರಮೇಶ್ ಜಾರಕಿಹೊಳಿ ಇಂದು ರಾಜೀನಾಮೆ?ಬಿಜೆಪಿ ರಾಷ್ಟ್ರಾಧ್ಯಕ್ಷರೊಂದಿಗಿನ ಚರ್ಚೆಯ ಬಳಿಕ ಕಾಂಗ್ರೆಸ್ ನಾಯಕ ರಮೇಶ್ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.  ರಮೇಶ್​ ನಡುವಳಿಕೆಗಳನ್ನು ಗಮನಿಸಿದರೆ ಪಕ್ಷಕ್ಕೆ ಭಾರೀ ಶಾಕ್​ ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ರಮೇಶ್​ ಭಾರೀ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಕಾಂಗ್ರೆಸ್​ ನಾಯಕರಲ್ಲೇ ಅನುಮಾನ ಮೂಡಿದೆ.

15 ಶಾಸಕರು ಸಹಿ?

ರಮೇಶ್​ ಜಾರಕಿಹೊಳಿ ಅತೃಪ್ತ 15 ಶಾಸಕರಿಂದ ಸಹಿ ಹಾಕಿಸಿಕೊಂಡು ದೆಹಲಿ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ. ನಾಲ್ಕು ದಿನ ಕಾದು ನೋಡಿ ಎಂದಿದ್ದ ರಮೇಶ್ ಜಾರಕಿಹೊಳಿ ಅವರ ನಡೆ ಈಗ ತೀವ್ರ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆ  ಆಪರೇಷನ್‌ನ ಎಲ್ಲ ಮಾಹಿತಿಗಳನ್ನ ಮಾದ್ಯಮಗಳಿಗೆ ಬಿಚ್ಚಿಟ್ಟು ಅತೃಪ್ತ ಶಾಸಕರು ಫೇಲ್ ಆಗಿದ್ದರು. ಹೀಗಾಗಿಯೇ ಈ ಬಾರಿ ನಿಗೂಢ ನಡೆಯ ಮೂಲಕ ಕಾರ್ಯಾಚರಣೆಗೆ ಇಳಿದಿದೆ ಎನ್ನಲಾಗಿದೆ.

ಗುರುವಾರ ಮಾಜಿ ಸಿಎಂ ಸಿದ್ದರಾಮಯ್ಯ ರಮೇಶ್​ ಜಾರಕಿಹೊಳಿ ಅವರನ್ನು ಮಾತುಕತೆಗೆ ಆಹ್ವಾನಿಸಿದ್ದರು. ಆದರೆ ಅದನ್ನು ಧಿಕ್ಕಾರಿಸಿ ಬೆಳಗಾವಿಗೆ ಪ್ರಯಾಣಿಸಿದ್ದರು. ಇದರ ಬೆನ್ನಲ್ಲೇ ನಿನ್ನೆ ಯಡಿಯೂರಪ್ಪ ಕೂಡ ಬೆಳಗಾವಿಗೆ ತೆರಳಿದ್ದರು. ಆದರೆ, ನಾನು ಲೋಕಸಭಾ ಚುನಾವಣೆ ಚರ್ಚೆಗೆ ಬಂದಿದ್ದೇನೆ. ನಾನು ಸತ್ಯವಾಗಿ ರಮೇಶ್​ ಅವರನ್ನು ಭೇಟಿಯಾಗುವುದಿಲ್ಲ ಎಂದು ಮಾಧ್ಯಮಗಳ ಮುಂದೆ ತಿಳಿಸಿದ್ದರು.  ಈ ನಡುವೆ ಇಂದು ರಮೇಶ್​ ಹಾಗೂ ಯಡಿಯೂರಪ್ಪ ನಡುವಳಿಕೆಗಳು ಅಪರೇಷನ್​ ಕಮಲ ನಡೆಸುವ ಎಲ್ಲಾ ಸಾಧ್ಯತೆಗಳು ಇವೆ ಎಂಬ ಸುಳಿವು ನೀಡುತ್ತಿದೆ.

ಕಾಂಗ್ರೆಸ್ ಪಕ್ಷದ 15​ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. 24 ಗಂಟೆಯಲ್ಲಿ ಸರ್ಕಾರ ಪತನವಾಗಲಿದೆ. ಸರ್ಕಾರ ಬಿದ್ದ ಒಂದು ವಾರದಲ್ಲಿ ಬಿಜೆಪಿ ಸರ್ಕಾರ ರಚಿಸುತ್ತದೆ. ನಮ್ಮ ಜೊತೆ ಯಾರು ಸಂಪರ್ಕದಲ್ಲಿದ್ದಾರೆ ಎಂಬುದನ್ನು ಈಗಲೇ ಬಹಿರಂಗ ಪಡಿಸುವುದಿಲ್ಲ ಎಂದು ಬುಧವಾರ ಬಿಜೆಪಿ ನಾಯಕ ಉಮೇಶ್​ ಕತ್ತಿ ಹೇಳಿಕೆ ನೀಡಿದ್ದರು. ಇದೆಲ್ಲವನ್ನು ಗಮನಿಸಿದರೆ ಈ ಬಾರಿ ಸಕಲ ತಯಾರಿ ಬಳಿಕವಷ್ಟೇ ಬಿಜೆಪಿ ಆಪರೇಷನ್​ ಕಮಲಕ್ಕೆ ಕೈ ಹಾಕಲಿದೆ ಎನ್ನಲಾಗಿದೆ.

First published: December 28, 2018, 8:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading