ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬೆನ್ನಿಗೆ ವಿವಾದ ಸೃಷ್ಟಿಸಿದ ಕಟೀಲ್; ಇವರು ಸುದ್ದಿಗೋಷ್ಠಿ ಮಾಡಲ್ಲ ಅಂದಿದ್ದಾದರೂ ಏಕೆ?

ಸಂಪುಟ ರಚನೆ ಆದಂದಿನಿಂದ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿದೆ. ಇದಲ್ಲದೆ, ಖಾತೆ ಹಂಚಿಕೆಯ ವಿಚಾರವಾಗಿಯೂ ಸಹ ಸಿ.ಟಿ. ರವಿ ಸೇರಿದಂತೆ ಹತ್ತಾರು ಹಿರಿಯ ನಾಯಕರು ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಈ ಎಲ್ಲಾ ಪ್ರಶ್ನೆಗಳನ್ನು ಪತ್ರಕರ್ತರು ಇಂದಿನ ಸುದ್ದಿಗೋಷ್ಠಿಯಲ್ಲಿ ನಳಿನ್ ಕುಮಾರ್ ಕಟೀಲ್ ಅವರ ಎದುರಿಡುವ ಸಾಧ್ಯತೆ ಇತ್ತು.

MAshok Kumar | news18-kannada
Updated:August 27, 2019, 1:44 PM IST
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬೆನ್ನಿಗೆ ವಿವಾದ ಸೃಷ್ಟಿಸಿದ ಕಟೀಲ್; ಇವರು ಸುದ್ದಿಗೋಷ್ಠಿ ಮಾಡಲ್ಲ ಅಂದಿದ್ದಾದರೂ ಏಕೆ?
ನಳಿನ್ ಕುಮಾರ್​ ಕಟೀಲ್​
  • Share this:
ಬೆಂಗಳೂರು (ಆಗಸ್ಟ್.27); ಯಾವಾಗಲೂ ವಿವಾದಗಳಿಂದಲೇ ಹೆಚ್ಚು ಚಾಲ್ತಿಯಲ್ಲಿರುವ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ನಗರದ ಮಲ್ಲೇಶ್ವರದಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಅಧಿಕೃತವಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ, ಈ ಕಾರ್ಯಕ್ರಮದ ಬೆನ್ನಿಗೆ ಅವರು ಮತ್ತೊಂದು ವಿವಾದವನ್ನು ಸೃಷ್ಟಿಸಿರುವುದು ಮಾತ್ರ ವಿಪರ್ಯಾಸ.

ಯಾವುದೇ ರಾಷ್ಟ್ರೀಯ ಪಕ್ಷವೊಂದರ ರಾಜ್ಯಾಧ್ಯಕ್ಷ ಸ್ಥಾನ ಎಂಬುದು ಸಿಎಂ ಸ್ಥಾನಕ್ಕೆ ಸರಿಸಮಾನವಾದ ಸ್ಥಾನ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಈ ಹುದ್ದೆಗೆ ಏರುವ ಯಾವುದೇ ವ್ಯಕ್ತಿ ಅಧಿಕಾರ ಸ್ವೀಕರಿಸಿದ ತಕ್ಷಣ ಸುದ್ದಿಗೋಷ್ಠಿ ನಡೆಸುವುದು ಈವರೆಗೆ ನಡೆದುಕೊಂಡು ಬಂದಿರುವ ಸಂಪ್ರದಾಯ. ಇದೇ ಕಾರಣಕ್ಕೆ ಬಿಜೆಪಿ ಪದಾಧಿಕಾರಿಗಳು ಅಧಿಕಾರ ಸಮಾರಂಭದ ನಂತರ ಸುದ್ದಿಗೋಷ್ಠಿಗೆ ವ್ಯವಸ್ಥೆ ಮಾಡಿದ್ದರು.

ಹೀಗಾಗಿ ರಾಜ್ಯದ ಎಲ್ಲಾ ಮಾಧ್ಯಮದವರು ಸುಮಾರು ಒಂದು ಗಂಟೆಗಳಿಗೂ ಅಧಿಕ ಕಾಲ ಸುದ್ದಿಗೋಷ್ಠಿಗಾಗಿ ಬಿಜೆಪಿ ಕಚೇರಿಯಲ್ಲಿ ಕಾದು ಕುಳಿತಿದ್ದಾರೆ. ಆದರೆ, ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತ್ರ ಏಕಾಏಕಿ ತಾವು ಸುದ್ದಿಗೋಷ್ಠಿ ನಡೆಸಲ್ಲ ಎಂದು ಹೇಳುವ ಮೂಲಕ ಇದೀಗ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

ಇದನ್ನೂ ಓದಿ : ಮಾತೆತ್ತಿದರೆ ರೈತರ ಹೆಸರೇಳ್ತಾರೆ ಆದರೆ, ಈ ಸರ್ಕಾರ ರೈತರ ಪರ ಇರುವಂತೆ ಕಾಣುತ್ತಿಲ್ಲ; ಬಿಜೆಪಿ ಸರ್ಕಾರದ ವಿರುದ್ಧ ಖರ್ಗೆ ಕಿಡಿ

ಕಟೀಲ್ ಸುದ್ದಿಗೋಷ್ಠಿ ನಡೆಸದೆ ಇರಲು ಕಾರಣವಾದರೂ ಏನು?

ಕಾಂಗ್ರೆಸ್-ಜೆಡಿಎಸ್ ಮೈತ್ರಿಯೊಳಗಿನ ಅಸಮಾಧಾನವನ್ನು ತಮ್ಮ ಪರವಾಗಿ ಬಳಸಿಕೊಂಡಿದ್ದ ಬಿಜೆಪಿ ಕಳೆದ ತಿಂಗಳು ಮೈತ್ರಿ ಸರ್ಕಾರವನ್ನು ಉರುಳಿಸಿ ರಾಜ್ಯದಲ್ಲಿ ಹೊಸ ಸರ್ಕಾರವನ್ನು ರಚಿಸಿತ್ತು. ಆದರೆ, ಪ್ರಸ್ತುತ ಬಿಜೆಪಿ ಪಕ್ಷದೊಳಗೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನು ಇಲ್ಲ.

ಸರ್ಕಾರ ರಚನೆಯಾದರೂ ಸಚಿವ ಸಂಪುಟ ವಿಸ್ತರಣೆಗೆ 25 ದಿನ ತೆಗೆದುಕೊಳ್ಳಲಾಗಿತ್ತು. ಆದರೆ, ಸಂಪುಟ ರಚನೆ ಆದಂದಿನಿಂದ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿದೆ. ಇದಲ್ಲದೆ, ಖಾತೆ ಹಂಚಿಕೆಯ ವಿಚಾರವಾಗಿಯೂ ಸಹ ಸಿ.ಟಿ. ರವಿ ಸೇರಿದಂತೆ ಹತ್ತಾರು ಹಿರಿಯ ನಾಯಕರು ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಈ ಎಲ್ಲಾ ಪ್ರಶ್ನೆಗಳನ್ನು ಪತ್ರಕರ್ತರು ಇಂದಿನ ಸುದ್ದಿಗೋಷ್ಠಿಯಲ್ಲಿ ನಳಿನ್ ಕುಮಾರ್ ಕಟೀಲ್ ಅವರ ಎದುರಿಡುವ ಸಾಧ್ಯತೆ ಇತ್ತು.ಇಂತಹ ಪ್ರಶ್ನೆಗಳು ಎದುರಾಗುವ ಸಾಧ್ಯತೆಯನ್ನು ಮೊದಲೇ ಮನಗಂಡಿದ್ದ ನೂತನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸುದ್ದಿಗೋಷ್ಠಿಯನ್ನೇ ರದ್ದುಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ನಳಿನ್ ಕುಮಾರ್ ಕಟೀಲ್ ಬಿಜೆಪಿ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಹೀಗೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿರುವುದು ಮಾತ್ರ ಉತ್ತಮ ಬೆಳವಣಿಗೆಯಲ್ಲ ಎನ್ನುತ್ತಿವೆ ರಾಜಕೀಯ ವಠಾರಗಳು.

ಇದನ್ನೂ ಓದಿ : ಅಂದು ಬಿಎಸ್​ವೈ ಅವರನ್ನು ಜೈಲಿಗೆ ಕಳಿಸಿದ ಸ್ವಪಕ್ಷದವರೇ ಇಂದು ರಾಜಕೀಯವಾಗಿ ಮುಗಿಸಲು ಮುಂದಾಗಿದ್ದಾರೆ; ತಿಮ್ಮಾಪುರ ವ್ಯಂಗ್ಯ!

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:August 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading