ಬಂದ ದಾರಿಗೆ ಸುಂಕವಿಲ್ಲ; ಕಾಂಗ್ರೆಸ್ ಶಾಸಕರು ರೆಸಾರ್ಟ್ ಸೇರುತ್ತಿದ್ದಂತೆ ಹರಿಯಾಣದಿಂದ ಮನೆಯತ್ತ ಹೊರಟ ರಾಜ್ಯ ಬಿಜೆಪಿ ಶಾಸಕರು!

ಪಕ್ಷದ ಎಲ್ಲ ಶಾಸಕರು ಗುರುಗ್ರಾಮದ ರೆಸಾರ್ಟ್​​ನಿಂದ ವಾಪಾಸು ಬರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ ಎಂದು ಶುಕ್ರವಾರ ಬಿಜೆಪಿ ಸುತ್ತೋಲೆ ಕಳುಹಿಸಿದೆ.  

Rajesh Duggumane | news18
Updated:January 19, 2019, 9:20 AM IST
ಬಂದ ದಾರಿಗೆ ಸುಂಕವಿಲ್ಲ; ಕಾಂಗ್ರೆಸ್ ಶಾಸಕರು ರೆಸಾರ್ಟ್ ಸೇರುತ್ತಿದ್ದಂತೆ ಹರಿಯಾಣದಿಂದ ಮನೆಯತ್ತ ಹೊರಟ ರಾಜ್ಯ ಬಿಜೆಪಿ ಶಾಸಕರು!
ರೆಸಾರ್ಟಿನಲ್ಲಿದ್ದ ಬಿಜೆಪಿ ಶಾಸಕರು
Rajesh Duggumane | news18
Updated: January 19, 2019, 9:20 AM IST
ರಮೇಶ್​ ಹಿರೇಜಂಬೂರು

ಬೆಂಗಳೂರು (ಜ.19): ಕಾಂಗ್ರೆಸ್​ನ ಬಹುತೇಕ ಶಾಸಕರು ಈಗಲ್​ಟನ್​ ರೆಸಾರ್ಟ್​​ ಸೇರುತ್ತಿದ್ದಂತೆ, ಗುರುಗ್ರಾಮದ ಐಷಾರಾಮಿ ಹೋಟೆಲ್​ನಲ್ಲಿದ್ದ ಬಿಜೆಪಿ ಶಾಸಕರಿಗೆ ಮರಳಿ ರಾಜ್ಯಕ್ಕೆ ಬರುವಂತೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಈ ಮೂಲಕ ಆಪರೇಷನ್​ ಕಮಲ ವಿಫಲವಾಗಿರುವುದು ಮೆಲ್ನೋಟಕ್ಕೆ ಸಾಬೀತಾಗಿದೆ.

ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾರು ಪಾಲ್ಗೊಳ್ಳುತ್ತಾರೆ ಯಾರು ಪಾಲ್ಗೊಳ್ಳುವುದಿಲ್ಲ ಎಂಬುದನ್ನು ಆಧರಿಸಿ ಮುಂದಿನ ನಡೆಯ ಬಗ್ಗೆ ಚಿಂತಿಸಲು ಬಿಜೆಪಿ ನಿರ್ಧರಿಸಿತ್ತು. ಅತೃಪ್ತರ ಜೊತೆ ಸಂಪರ್ಕದಲ್ಲಿದ್ದ ಕೆಲ ಕಾಂಗ್ರೆಸ್​ ಶಾಸಕರು, ಸಭೆ ಮುಗಿಸಿ ವಾಪಾಸಾಗುವುದಾಗಿ ತಿಳಿಸಿದ್ದರು. ಆದರೆ, ಅವರನ್ನು ಈಗ ನೇರವಾಗಿ ಈಗಲ್​ಟನ್​ ರೆಸಾರ್ಟ್​ಗೆ ಕರೆದೊಯ್ದಿರುವುದು ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ರಮೇಶ್​ ಜಾರಕಿಹೊಳಿ, ಉಮೇಶ್ ಜಾಧವ್, ಮಹೇಶ್ ಕುಮಟಹಳ್ಳಿ ಹಾಗೂ ಬಿ.ನಾಗೇಂದ್ರ​ ಸಭೆಗೆ ಗೈರಾದವರು. ಇವರು ಈಗ ರಾಜೀನಾಮೆ ನೀಡಿದರೂ ಸರ್ಕಾರ ಬೀಳುವುದಿಲ್ಲ. ಹಾಗಾಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ, ಬಿಜೆಪಿ ಶಾಸಕರು ಐಟಿಸಿ ಭಾರತ್​ ರೆಸಾರ್ಟ್​​ನಿಂದ ರಾಜ್ಯಕ್ಕೆ ವಾಪಾಸಾಗುತ್ತಿದ್ದಾರೆ.

ಇದನ್ನೂ ಓದಿ: ರೆಸಾರ್ಟ್ ರಾಜಕಾರಣ: ಕಾಂಗ್ರೆಸ್ ನಾಯಕರಿಗೆ ನಿದ್ದೆಗೆಡಿಸಿದ ಬಂಡಾಯ ಶಾಸಕರ ರಾಜೀನಾಮೆ ವಿಚಾರ; ಡಿಕೆಶಿ ಹೆಗಲಿಗೆ ಹೊಸ ಜವಾಬ್ದಾರಿ

“ನಮ್ಮ ಪಕ್ಷದ ಎಲ್ಲ ಶಾಸಕರು ದೆಹಲಿಯಿಂದ ವಾಪಾಸು ಬರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ,” ಎಂದು ಶುಕ್ರವಾರ ಬಿಜೆಪಿ ಸುತ್ತೋಲೆ ಕಳುಹಿಸಿದೆ.
ಬಿಜೆಪಿ ಸುತ್ತೋಲೆ


ಇನ್ನು, ದಡದಲ್ಲಿ ನಿಂತು ಲೆಕ್ಕಾಚಾರ ಹಾಕುವ ಬದಲು ನೀರಿಗೇ ಇಳಿದು ಗುದ್ದಾಡುವ ಲೆಕ್ಕಾಚಾರದಿಂದಲೂ ಬಿಜೆಪಿ ಈ ರೀತಿ ಮಾಡಿದೆ ಎನ್ನುವ ಮಾತು ಕೇಳಿಬಂದಿದೆ. ಬಿಜೆಪಿ ಆಪರೇಷನ್​ ಕಮಲ ಆರಂಭಿಸಿದೊಡನೆ ಅತ್ತ, ಕಾಂಗ್ರೆಸ್​ ಆಪರೇಷನ್​ ಹಸ್ತ ಆರಂಭಿಸಿತ್ತು. ಕೆಲ ಬಿಜೆಪಿ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ, ನಾವೇನು ಕೈಕಟ್ಟಿ ಕೂತಿಲ್ಲ ಎಂದು ಹೇಳಿಕೊಂಡಿತ್ತು. ಹೀಗಾಗಿ ಎಲ್ಲ ಬಿಜೆಪಿ ಶಾಸಕರು ರೆಸಾರ್ಟ್​​ ಸೇರಿದ್ದರು.

ಇದನ್ನೂ ಓದಿ: ಕಾಂಗ್ರೆಸ್ ನಡೆಗಳ ಹಿಂದೆ ದೇವೇಗೌಡ ಮಾಸ್ಟರ್​ಮೈಂಡ್; ರಮೇಶ್ ಜಾರಕಿಹೊಳಿ ಸೇರಿ ನಾಲ್ವರ ರಾಜೀನಾಮೆ?

ರಮೇಶ್​ ಜಾರಕಿಹೊಳಿ, ಉಮೇಶ್ ಜಾಧವ್, ಮಹೇಶ್ ಕುಮಟಹಳ್ಳಿ ಹಾಗೂ ಬಿ.ನಾಗೇಂದ್ರ​ ಕಾಂಗ್ರೆಸ್​​ ಶಾಸಕಾಂಗ ಸಭೆಗೆ ಗೈರಾಗುವ ಮೂಲಕ ತಾವು ಬಂಡಾಯವೆದ್ದಿದ್ದೇವೆ ಎಂಬುದನ್ನು ಸಾಬೀತು ಪಡಿಸಿದ್ದರು. ಇನ್ನು, ಉಳಿದ ಶಾಸಕರಿಗೆ ವಿವಿಧ ರೀತಿಯಲ್ಲಿ ಗಾಳ ಹಾಕಲು ಬಿಜೆಪಿ ಸಿದ್ಧತೆ ನಡೆಸಿದೆ. ಎಲ್ಲ ಕಾಂಗ್ರೆಸ್​​ ಶಾಸಕರನ್ನು ಒಂದೆಡೆ ಸೇರಿಸಿದ್ದು ಲಾಭದ ವಿಚಾರ ಎಂದು ವ್ಯಾಖಿನಿಸುತ್ತಿದೆ. ಹಾಗಾಗಿ ನೇರ ಅಖಾಡಕ್ಕೆ ಇಳಿಯಲು ಬಿಜೆಪಿ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ಕಾಂಗ್ರೆಸ್​​ ರೆಸಾರ್ಟ್​​ ರಾಜಕಾರಣದ ಲಾಭ ಪಡೆಯಲೂ ಬಿಜೆಪಿ ಹವಣಿಸುತ್ತಿದೆ. “ಈಗ ರೆಸಾರ್ಟ್ ಬಿಟ್ಟು ಹೋಗೋಣ. ಕ್ಷೇತ್ರದ ಜನತೆಯ ಸಮಸ್ಯೆ ಬಗ್ಗೆ ಗಮನಹರಿಸೋಣ. ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದವರು ರೆಸಾರ್ಟ್ ಸೇರಿದ್ದಾರೆ. ಇದರ ಲಾಭ ಪಡೆಯಲೇಬೇಕು, ಅದಕ್ಕೆ ರಣತಂತ್ರ ಮಾಡುವ ನಿರ್ಧಾರಕ್ಕೆ ಬಿಜೆಪಿ ಬಂದಿದೆ.

ಇದನ್ನೂ ಓದಿ: ಕಾಂಗ್ರೆಸ್ ಸಭೆಗೆ ಗೈರಾದವರಿಗೆ ಶೀಘ್ರದಲ್ಲೇ ನೋಟೀಸ್; ಈಗಲ್ಟನ್ ರೆಸಾರ್ಟ್​ಗೆ ಕೈ ಪಾಳಯದ ಶಾಸಕರು

First published:January 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ