HD Kumaraswamy ಒಂದೇ ಮಾತಿಗೆ ಸಿಡಿದೆದ್ದ ಬಿಜೆಪಿ ನಾಯಕರು; RSS ವಿರುದ್ಧ HDK ನಿರಂತರ ವಾಗ್ದಾಳಿ ಮರ್ಮವೇನು?

hd kumaraswamy v/s bjp leaders: ದಾವಣಗೆರೆಯಲ್ಲಿ ಮಾತನಾಡಿದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ನೀವು RSS ಮತ್ತು ಸಂಘ ಪರಿವಾರದ ಬಗ್ಗೆ ಮಾತನಾಡಿದ್ರೆ ಸರ್ವನಾಶಾವಾಗುತ್ತೀರಿ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದರು.

ಎಚ್​ಡಿಕೆ ವಿರುದ್ಧ ಬಿಜೆಪಿ ಮುಖಂಡರ ಆಕ್ರೋಶ

ಎಚ್​ಡಿಕೆ ವಿರುದ್ಧ ಬಿಜೆಪಿ ಮುಖಂಡರ ಆಕ್ರೋಶ

  • Share this:
ರಾಮಮಂದಿರ ದೇಣಿಗೆ ಸಂಗ್ರಹದ ಲೆಕ್ಕ ಕೇಳಿ, RSS ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (HD Kumaraswamy ) ವಿರುದ್ಧ ರಾಜ್ಯ ಬಿಜೆಪಿ ನಾಯಕರು ಕೆರಳಿ ಕೆಂಡವಾಗಿದ್ದಾರೆ. RSS ಬಗ್ಗೆ ಮಾತನಾಡಿರುವುದರ ವಿರುದ್ಧ ಬಿಜೆಪಿ ನಾಯಕರಾದ ನಳೀನ್​ ಕುಮಾರ್​​ ಕಟೀಲ್ (nalinkumar katil)​, ರೇಣುಕಾಚಾರ್ಯ (M. P. Renukacharya) , ಸಿಟಿ ರವಿ (CT Ravi) ಹಾಗೂ ಆರ್​.ಅಶೋಕ್​ (R.Ashok) ತಿರುಗೇಟು ನೀಡಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ನೀವು RSS ಮತ್ತು ಸಂಘ ಪರಿವಾರದ ಬಗ್ಗೆ ಮಾತನಾಡಿದ್ರೆ ಸರ್ವನಾಶಾವಾಗುತ್ತೀರಿ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದರು. RSSನವರು ದೇಶ ವಿರೋಧಿಗಳಾ, ಅವರು ದೇಶಕ್ಕಾಗಿ ಸಮರ್ಪಿಸಿಕೊಂಡವರು. ಅವರಿಗೆ ಭಯೋತ್ಪಾದಕರ ಸ್ಥಾನ ಕೊಡಬೇಕಾ? ನೀವು ಮಾನಸಿಕ ಅಸ್ವಸ್ಥರಾಗಿದ್ದೀರೀ, ಅದಕ್ಕೆ ಹುಚ್ಚುಚ್ಚಾಗಿ ಮಾತನಾಡುತ್ತೀರಿ. ಇನ್ನು ಮುಂದೆಯಾದರೂ ಮಾತನಾಡವುದನ್ನ ಬಿಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ನಮಗೆ RSS ಸಂಸ್ಕಾರ ಕಲಿಸಿದೆ ಹೀಗಾಗಿ, ನಮಗೆ ಅದೇ ಸರ್ವಸ್ವ ಎಂದರು.

ಎಲ್ಲಾ ಕಡೆ ನಿಮ್ಮ ಕುಟುಂಬದವರೇ ಇದ್ದರು.. ನೆನಪಿದೆಯಾ?

ಪುತ್ತೂರಿನಲ್ಲಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತೆ ಕಿಡಿಕಾರಿದರು. ಕುಮಾರಸ್ಚಾಮಿಯವರು ಕುರುಡರು ಆನೆಯನ್ನು ನೋಡಿದಂತೆ ನೋಡುತ್ತಾರೆ. RSS ಏನು ಎಂದು ತಿಳಿಯಬೇಕಾದರೆ ನಾಲ್ಕು ದಿನ RSS ಶಾಖೆಗೆ ಬರಲಿ. RSS ನವರು ಯೂನಿವರ್ಸಿಟಿಯಲ್ಲಿ ಇದ್ದರೆ ಆ ಸಂಸ್ಥೆಗಳು ಅಭಿವೃದ್ಧಿಯಾಗಲಿದೆ. ಕುಮಾರಸ್ವಾಮಿಯವರು ಅಧಿಕಾರದಲ್ಲಿದ್ದಾಗ ಆಡಳಿತ ಅವರ ಮನೆಯ ಆಸ್ತಿಯಂತಿತ್ತು. ಪೋಲಿಸ್, ಗೃಹ ಇಲಾಖೆ ಸೇರಿದಂತೆ ಎಲ್ಲಾ ಕಡೆ ಅವರ ಕುಟುಂಬ ವರ್ಗದವರಿದ್ದರು. ಇಡೀ ರಾಜ್ಯವನ್ನು ಲೂಟಿ ಮಾಡಿದವರು RSS ಬಗ್ಗೆ ಮಾತನಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಜ್ಞಾನದಿಂದ ಮಾತಾಡಿ ನಗೆಪಾಟಲಿಗೀಡಾಗಬೇಡಿ

ಚಿಕ್ಕಮಗಳೂರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಅವರು ಎಚ್​ಡಿಕೆ ಹೇಳಿಕೆಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು. ಎಲ್ಲಾ ವಿವಿಗಳಲ್ಲಿ RSSನವರೇ ಸಿಂಡಿಕೇಟ್ ಸದಸ್ಯರಾಗಿದ್ದಾರೆ. RSS ಏನು ಅಂತ ಕುಮಾರಸ್ವಾಮಿ ತಿಳ್ಕೊಳ್ಳೋ ಪ್ರಯತ್ನ ಮಾಡಿಲ್ಲ. ಸ್ವಯಂ ಸೇವಕ ಆದಾಗ ಮಾತ್ರ RSS ಏನು ಅಂತ ಅರ್ಥವಾಗುತ್ತೆ. RSS ನಲ್ಲಿ ಇರುವವರು ಸ್ವಯಂ ಸೇವಕರು, ಸದಸ್ಯತ್ವ ಕೊಡೋದಿಲ್ಲ. ಸದಸ್ಯತ್ವ ಇಲ್ಲ ಅಂದ್ಮೇಲೆ RSS ಸದಸ್ಯರು ವಿವಿಯ ಸಿಂಡಿಕೇಟ್ ಸದಸ್ಯರಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಈ ಹೇಳಿಕೆಯಲ್ಲೇ ಕುಮಾರಸ್ವಾಮಿಯವರ ಅಜ್ಞಾನ ತಿಳಿಯುತ್ತೆ, ಅಜ್ಞಾನದಿಂದ ಮಾತಾಡಿ ನಗೆಪಾಟಲಿಗೀಡಾಗಬೇಡಿ ಎಂದು ಚಾಟಿ ಬೀಸಿದರು.

ಇದನ್ನೂ ಓದಿ: ರಾಮಮಂದಿರ ಲೆಕ್ಕ ಕೇಳಿದ HDK: ಫ್ಯಾಮಿಲಿ ಖಾನ್ ದಾನ್ ನಮ್ಮಲ್ಲಿ ಇಲ್ಲ ಎಂದು C.T.Ravi ತಿರುಗೇಟು

RSS ಇಲ್ಲದಿದ್ದರೆ ಭಾರತ್ ಮಾತಾ ಕೀ ಜೈ ಅನ್ನೋಕೆ ಯಾರು ಇರ್ತಾ ಇದ್ರು. ಜೆಡಿಎಸ್ ನಲ್ಲಿ ದೇವೇಗೌಡ್ರಿಗೆ ಜೈ, ಕುಮಾರಣ್ಣನಿಗೆ ಜೈ, ನಿಖಿಲ್ ಅಣ್ಣನಿಗೆ ಜೈ. ಕಾಂಗ್ರೆಸ್ನಲ್ಲಿ ಸೋನಿಯಾಗಾಂಧಿಗೆ ಜೈ, ರಾಹುಲ್ ಗಾಂಧಿಗೆ ಜೈ, ಪ್ರಿಯಾಂಕ ಗಾಂಧಿಗೆ ಜೈ ಆಗುತ್ತಿತ್ತು. ಭಾರತ ಮಾತಾ ಕಿ ಜೈ ಅನ್ನೋದು ಅವರ ದೃಷ್ಟಿಯಲ್ಲಿ ಅಪರಾಧ ಎಂದು ಆರೋಪಿಸಿದರು.

RSSನ ಗಂಧ ಗಾಳಿಯು ಕುಮಾರಸ್ವಾಮಿಗೆ ಗೊತ್ತಿಲ್ಲ

ದಾವಣಗೆರೆಯಲ್ಲಿ ಮಾತನಾಡಿದ ಸಚಿವ ಆರ್​.ಅಶೋಕ್​ ಕೂಡ ಎಚ್​ಡಿಕೆ ಹೇಳಿಕೆಯನ್ನು ಕಟುವಾಗಿ ಟೀಕಿಸಿದರು. ಕುಮಾರಸ್ವಾಮಿ RSS ವಿರುದ್ಧ ಮಾತನಾಡುವುದು ಶೋಭೆ ತರುವಂತಹದಲ್ಲ. RSSನ ಗಂಧ ಗಾಳಿಯು ಕುಮಾರಸ್ವಾಮಿಗೆ ಗೊತ್ತಿಲ್ಲ. ಸಿಎಂ ಆದಾಗ ಅವರು ಯಾರು ಸಿಂಡಿಕೇಟ್ ಮೆಂಬರ್ ಮಾಡಿದ್ರು. ಯಾವುದೇ ಒಂದು ಪುಸ್ತಕ ಓದಿಬಿಟ್ಟು ಆ ರೀತಿ ಮಾತನಾಡುವುದು ಸರಿಯಲ್ಲ. ಆ ಪುಸ್ತಕ ಬರೆದವರು ಯಾರು..? ಪುಸ್ತಕ ಓದಿದ್ರೆ ಆರ್ ಎಸ್ ಎಸ್  ಗೊತ್ತಾಗಲ್ಲ. ಪ್ರ್ಯಾಕ್ಟಿಕಲ್ ಆಗಿಯೇ ನೋಡಿದ್ರೆ RSS ಏನು ಅಂತ ಗೊತ್ತಾಗೋದು. ನಮ್ಮ ದೇಶದ ರಾಷ್ಟ್ರಪತಿ, ಪ್ರಧಾನಿ ಬಂದಿದ್ದು ಆರ್ ಎಸ್ ಎಸ್ ನಿಂದಲೇ, ಆರ್ ಎಸ್ ಎಸ್ ಬಗ್ಗೆ ಇರೋ ನಿಮ್ಮ ಕಲ್ಪನೆಯನ್ನ ಬಿಟ್ಟು ಬಿಡಿ ಅಂತ ಕುಮಾರಸ್ವಾಮಿ ಗೆ ಸಚಿವ ಆರ್ ಅಶೋಕ್​​ ಟಾಂಗ್ ನೀಡಿದರು.
Published by:Kavya V
First published: