ರಾಜ್ಯದಲ್ಲಿ ಸಿಎಂ ಯಡಿಯೂರಪ್ಪಗಿಲ್ಲ ಕಿಮ್ಮತ್ತು; ಹೈಕಮಾಂಡ್ ಮೇಲೆ ಸಚಿವಾಕಾಂಕ್ಷಿಗಳ ಕಣ್ಣು

ನೂತನ ಸರ್ಕಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬೆಲೆಯೇ ಇಲ್ಲದಂತಾಗಿದೆ.  ಲಕ್ಷ್ಮಣ್ ಸವದಿ ಪ್ರಕರಣದಿಂದ ಸಿಎಂ ಮೇಲೆ ವಿಶ್ವಾಸ ಕಳೆದುಕೊಂಡ ಶಾಸಕರು ದೆಹಲಿಯ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಲು ಮುಂದಾಗಿದ್ದಾರೆ.

Sushma Chakre | news18-kannada
Updated:August 29, 2019, 8:30 AM IST
ರಾಜ್ಯದಲ್ಲಿ ಸಿಎಂ ಯಡಿಯೂರಪ್ಪಗಿಲ್ಲ ಕಿಮ್ಮತ್ತು; ಹೈಕಮಾಂಡ್ ಮೇಲೆ ಸಚಿವಾಕಾಂಕ್ಷಿಗಳ ಕಣ್ಣು
ಬಿ.ಎಸ್​. ಯಡಿಯೂರಪ್ಪ.
  • Share this:
ನವದೆಹಲಿ (ಆ. 29): ರಾಜ್ಯದಲ್ಲಿ ಹೊಸ ಸರ್ಕಾರವೇನೋ ಅಸ್ತಿತ್ವಕ್ಕೆ ಬಂದಿತು, ಸಂಪುಟ ರಚನೆಯಾಗಿ ಖಾತೆ ಹಂಚಿಕೆಯೂ ಆಯಿತು. ಆದರೆ, ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪನವರಿಗೆ ಸರ್ಕಾರದಲ್ಲಿ ಬೆಲೆಯಿಲ್ಲವೇ ಎಂಬ ಪ್ರಶ್ನೆ ಉದ್ಭವವಾಗಿದೆ. 

ಈಗಾಗಲೇ ಸಚಿವ ಸಂಪುಟದಲ್ಲಿ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿದ್ದಷ್ಟೇ ಅಲ್ಲದೆ ಡಿಸಿಎಂ ಮಾಡಿರುವುದಕ್ಕೆ ಬಿಜೆಪಿ ನಾಯಕರಿಗೆ ಅಸಮಾಧಾನ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪನವರ ಬಳಿ ಮಾತುಕತೆ ನಡೆಸಿದರೆ ಏನೂ ಪ್ರಯೋಜನವಿಲ್ಲ ಎಂದು ಅರಿತಿರುವ ಬಿಜೆಪಿ ನಾಯಕರು ನೇರವಾಗಿ ಹೈಕಮಾಂಡ್​ ಜೊತೆ ಮಾತನಾಡಲು ಮುಂದಾಗಿದ್ದಾರೆ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ತಮಗೆ ಸಚಿವ ಸ್ಥಾನ ನೀಡಬೇಕೆಂದು ರಾಜ್ಯ ಬಿಜೆಪಿ ಶಾಸಕರು ಹೈಕಮಾಂಡ್​ ಬಳಿ ಲಾಬಿ ಮಾಡುತ್ತಿದ್ದಾರೆ.

ಇದರಿಂದಾಗಿ ನೂತನ ಸರ್ಕಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬೆಲೆಯೇ ಇಲ್ಲದಂತಾಗಿದೆ.  ಲಕ್ಷ್ಮಣ್ ಸವದಿ ಪ್ರಕರಣದಿಂದ ಸಿಎಂ ಮೇಲೆ ವಿಶ್ವಾಸ ಕಳೆದುಕೊಂಡ ಶಾಸಕರು ದೆಹಲಿಯ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಕಳೆದ ವಾರ ದೆಹಲಿಗೆ ಬಂದು ಅರವಿಂದ ಲಿಂಬಾವಳಿ  ಲಾಬಿ ನಡೆಸಿದ್ದರು. ಈಗ ಮಂತ್ರಿ ಸ್ಥಾನಕ್ಕಾಗಿ ಮೈಸೂರು ಶಾಸಕ ಎಸ್.ಎ. ರಾಮದಾಸ್ ದೆಹಲಿಗೆ ದೌಡಾಯಿಸಿದ್ದಾರೆ. ರಾಮದಾಸ್ ಪರವಾಗಿ ಪೇಜಾವರ ಶ್ರೀಗಳು ಬಿಜೆಪಿ ರಾಷ್ಟ್ರಾಧ್ಯಕ್ಷ  ಅಮಿತ್ ಶಾಗೆ ಕರೆ ಮಾಡಿ ಒತ್ತಡ ಹೇರಿದ್ದರು. ಅದಾದ ಬಳಿಕ ದೆಹಲಿಗೆ ಬಂದು ಹೈಕಮಾಂಡ್ ನಾಯಕರ ಭೇಟಿ ಮಾಡಿದ್ದ ರಾಮದಾಸ್​ ತಮಗೆ ಮಂತ್ರಿಸ್ಥಾನ ಬೇಕೆಂದು ಲಾಬಿ ನಡೆಸಿದ್ದಾರೆ.

ಬೇರೆಯವರಿಂದ ಉಪದೇಶ ಮಾಡಿಸಿಕೊಳ್ಳುವ ಅವಶ್ಯಕತೆ ನನಗಿಲ್ಲ; ಡಿಸಿಎಂ ಲಕ್ಷ್ಮಣ ಸವದಿ ತಿರುಗೇಟು

ಕರುಣಾಕರ ರೆಡ್ಡಿ ಕೂಡ ದೆಹಲಿ ನಾಯಕರ ಮೂಲಕ ಮಂತ್ರಿ ಸ್ಥಾನ ಗಿಟ್ಟಿಸಲು ಯತ್ನಿಸುತ್ತಿದ್ದಾರೆ. ಸಿಎಂ ಯಡಿಯೂರಪ್ಪನವರ ಬಳಿ ಮಂತ್ರಿ ಸ್ಥಾನ ಕೇಳುವ ಬದಲು  ಶಾಸಕರು ದೆಹಲಿ ಕಡೆ ನೋಡುತ್ತಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪನವರ ಆಟವೇನೂ  ನಡೆಯುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ಶಾಸಕರು ದೆಹಲಿ ನಾಯಕರ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಇನ್ನೂ ಒಂದಿಬ್ಬರು ಶಾಸಕರಿಂದ ಹೈಕಮಾಂಡ್ ನಾಯಕರ ಭೇಟಿ ಯತ್ನ ಮಾಡಲಾಗಿದೆ.

ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆ ಮೇಲೆ ಡಿಕೆಶಿ ಕಣ್ಣು; ಗುಲಾಂ ನಭಿ ಆಜಾದ್ ಮೂಲಕ ಹೊಸ ಸ್ಟ್ರಾಟಜಿ ಹೆಣೆದ ಟ್ರಬಲ್ ಶೂಟರ್!

ರಾಜ್ಯ ಸರ್ಕಾರದ ಖಾತೆ ಹಂಚಿಕೆ ಬಗ್ಗೆ ಸಚಿವರಾದ ಶ್ರೀರಾಮುಲು, ಆರ್. ಅಶೋಕ್, ಸಿ.ಟಿ. ರವಿ ಸೇರಿದಂತೆ ಕೆಲವು ನಾಯಕರು ಬಹಿರಂಗವಾಗಿಯೇ ಬೇಸರ ಹೊರ ಹಾಕಿದ್ದಾರೆ. ಸಂಪುಟ ರಚನೆಯಲ್ಲಾದಂತೆ ಖಾತೆ ಹಂಚಿಕೆ ವಿಷಯದಲ್ಲೂ ಸಚಿವರ ಮಧ್ಯೆ ಅಸಮಾಧಾನ ಏರ್ಪಟ್ಟಿತ್ತು. ಗೋವಿಂದ ಕಾರಜೋಳ, ಡಾ. ಅಶ್ವತ್ಥ ನಾರಾಯಣ ಮತ್ತು ಕಳೆದ ಚುನಾವಣೆಯಲ್ಲಿ ಸೋಲನ್ನಪ್ಪಿರುವ ಲಕ್ಷ್ಮಣ ಸವದಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದ್ದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಹಿರಿಯ ಸಚಿವರನ್ನು ಕಡೆಗಣಿಸಿ ಬೇಕಾಬಿಟ್ಟಿ ಖಾತೆ ಹಂಚಿಕೆ ಮಾಡಲಾಗಿದೆ. ಪ್ರಮುಖ ಖಾತೆಗಳನ್ನು ಸಿಎಂ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ ಎಂಬೆಲ್ಲ ಆರೋಪಗಳು ಕೇಳಿಬಂದಿದ್ದವು. ತಮಗೆ ಡಿಸಿಎಂ ಪಟ್ಟ ಸಿಗದ ಕಾರಣ ಆರ್. ಅಶೋಕ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಸಿ.ಟಿ. ರವಿ ಕೂಡ ಪ್ರಮುಖ ಖಾತೆ ಸಿಗದ್ದಕ್ಕೆ ಬೇಸರ ಹೊರಹಾಕಿದ್ದರು.(ವರದಿ: ಧರಣೀಶ್ ಬೂಕನಕೆರೆ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:August 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ