ರಾಷ್ಟ್ರಪತಿ ಚುನಾವಣೆ (Presidential Election) ಹಿನ್ನೆಲೆ ಎಲ್ಲಾ ಶಾಸಕರು ಮತದಾನಕ್ಕೆ ವಿಧಾನ ಸೌಧಕ್ಕೆ ಆಗಮಿಸಿ ವೋಟ್ ಮಾಡುತ್ತಿದ್ದಾರೆ. ಮತದಾನ ಮಾಡಿ ಬರುತ್ತಿದ್ದ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ (Congress MLA Byrathi Suresh) ಅವರಿಗೆ ಬಿಜೆಪಿ ಶಾಸಕರಾದ ರಾಜುಗೌಡ (MLA Raju Gowda) ಮತ್ತು ಎಂ.ಪಿ.ರೇಣುಕಾಚಾರ್ಯ (MP Renukacharya) ಬಲವಂತವಾಗಿ ಹಿಡಿದು ಕೊರಳಿಗೆ ಕೇಸರಿ ಶಾಲು (Saffron Shawl) ಹಾಕಿದ ಘಟನೆ ನಡೆಯಿತು. ಬೈರತಿ ಸುರೇಶ್ ಅವರು ಬೇಡ ಬೇಡ ಅಂದ್ರು ಮಾಧ್ಯಮಗಳ ಮುಂದೆ ಇಬ್ಬರೂ ಬಿಜೆಪಿ ಶಾಸಕರು (BJP MLAs) ಒಂದರ ನಂತರ ಒಂದು ಎಂಬಂತೆ ಎರಡು ಶಾಲು ಹಾಕಿದರು. ಮಾಧ್ಯಮ ಸಿಬ್ಬಂದಿ ಫೋಟೋ, ವಿಡಿಯೋ ಚಿತ್ರೀಕರಿಸಲು ಮುಂದಾಗುತ್ತಿದ್ದಂತೆ ಬೈರತಿ ಸುರೇಶ್ ಶಾಲು ತೆಗೆದರು.
ಬೆಲೆ ಏರಿಕೆ ಬಗ್ಗೆ ಸಿ.ಟಿ.ರವಿ ಪ್ರತಿಕ್ರಿಯೆ
GST ಏರಿಕೆಯಿಂದಾಗಿ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಳದ ಕುರಿತು ಬಿಜೆಪಿ ಶಾಸಕ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ. ಜನರಿಗೆ ಹೊರೆ ಆಗುತ್ತೆ ಅನಿಸಿದರೆ ಕಡಿಮೆ ಮಾಡುವ ಅವಕಾಶ ಇದೆ. GST ಕೌನ್ಸಿಲ್ ನಲ್ಲಿ ಚರ್ಚೆ ಮಾಡಿ ಹಿಂಪಡೆಯುವ ಅವಕಾಶ ಇದೆ. ಸಮಾಲೋಚನೆ ಮಾಡಿ ತಿದ್ದುಪಡಿ ಮಾಡ್ತಾರೆ ಅನ್ನೋ ವಿಶ್ವಾಸವಿದೆ ಎಂದರು.
ಇದನ್ನೂ ಓದಿ: Bomb Threat Message: ಡಿಕೆಶಿ ಮಾಲೀಕತ್ವದ ಶಾಲೆಗೆ ಬಾಂಬ್ ಬೆದರಿಕೆ! ಮಕ್ಕಳು, ಪೋಷಕರಲ್ಲಿ ಆತಂಕ
GST ಕೌನ್ಸಿಲ್ ನಲ್ಲಿ ಎಲ್ಲ ರಾಜ್ಯದ ಪ್ರತಿನಿಧಿಗಳು ಇರುತ್ತಾರೆ. ಇದನ್ನು ನಾನು GST ಕೌನ್ಸಿಲ್ ನಿರ್ಣಯಕ್ಕೆ ಬಿಡುತ್ತೇನೆ ಎಂದು ಸಿ ಟಿ ರವಿ ಹೇಳಿದರು.
ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ ಮಹಿಳೆ ದ್ರೌಪದಿ ಮುರ್ಮು. ಆದರೂ ಅವರನ್ನು ರಬ್ಬರ್ ಸ್ಟಾಂಪ್ ಅಂತ ಅಪಮಾನಿಸಲಾಗುತ್ತಿದ್ದರೆ ಅದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷದ ಅಸಡ್ಡೆಯನ್ನು ತೋರಿಸುತ್ತಿದೆ ಎಂದು ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ನಿಮ್ಮ ಅಹಿಂದ ಟ್ರಂಪ್ ಕಾರ್ಡ್ ಎಲ್ಲಿ ಹೋಯ್ತು?
ಈ ರೀತಿ ರಬ್ಬರ್ ಸ್ಟಾಂಪ್ ಅಂತ ಅಸಡ್ಡೆ ಅಪಮಾನ ಮಾಡಿದ್ದಕ್ಕೆ ರಾಷ್ಟ್ರದ ಕ್ಷಮೆ ಕೇಳಬೇಕು. ಆದಿವಾಸಿ ಮಹಿಳೆಯನ್ನು ವಿರೋಧಿಸುವ ಮೂಲಕ ವಿಪಕ್ಷ ಗಳ ಮುಖವಾಡ ಕಳಚಿದೆ. ಸಿದ್ದರಾಮಯ್ಯನವರೇ ನಿಮ್ಮ ಅಹಿಂದ ಟ್ರಂಪ್ ಕಾರ್ಡ್ ಎಲ್ಲಿ ಹೋಯ್ತು ಎಂದು ಪ್ರಶ್ನೆ ಮಾಡಿದರು.
ಅಲ್ಪಸಂಖ್ಯಾತ ಪರ ಆದಿವಾಸಿ ಪರ ದಲಿತರ ಪರ ಅಂತ ಟ್ರಂಪ್ ಕಾರ್ಡ್ ಹಾಕಿದ್ರಲ್ಲ ಸಿದ್ದರಾಮಯ್ಯನವರೇ, ಈಗ ನಿಮ್ಮ ಬದ್ದತೆ ಎಲ್ಲಿ ಹೋಯ್ತು? ನಿಮ್ಮ ಮುಖವಾಡ ಇವತ್ತು ಕಳಚಿದೆ ಎಂದು ಕಿಡಿಕಾರಿದರು.
ಸಿದ್ದರಾಮೋತ್ಸವಕ್ಕೆ ಈಶ್ವರಪ್ಪ ಟಾಂಗ್
ಸಿದ್ದರಾಮೋತ್ಸವಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದಾರೆ. ಇದನ್ನು ನೋಡಿದ್ರೆ ಯಾರಿಗೆ ಹೊಟ್ಟೆಕಿಚ್ಚು ಅಂತಾ ಗೊತ್ತಾಗೋದಿಲ್ವೇ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯ ಮಾಡಿದರು.
ಕಾಂಗ್ರೆಸ್ ನಾಯಕರಿಗೆ ಮೋದಿ ಕಂಡರೆ ಭಯ ಇರೋದು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ ಬರಲಿ, ನಾವು ಕಾಯುತ್ತಿದ್ದೇವೆ. ಅವರು ರಾಜ್ಯಕ್ಕೆ ಬಂದ ಕೂಡಲೇ ಕಾಂಗ್ರೆಸ್ ಧೂಳಿಪಟ ಆಗಲಿದೆ ಎಂದು ಭವಿಷ್ಯ ನುಡಿದರು.
ಇದನ್ನೂ ಓದಿ: Azadi ka Amrit Mahotsav: ಎಲ್ಲಾ ಮದರಸಾಗಳ ಮೇಲೆ ತ್ರಿವರ್ಣ ಧ್ವಜ ಹಾರಲೇಬೇಕು; ಸರ್ಕಾರದಿಂದ ಖಡಕ್ ಆದೇಶ
ಸಿದ್ದರಾಮೋತ್ಸವಕ್ಕೆ ಆಹ್ವಾನ ಬಂದ್ರೆ ಹೋಗ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ನನಗೇನು ಗ್ರಹಚಾರನಾ ಹೋಗೋಕೆ ಎಂದರು.
ರಾಷ್ಟ್ರಪತಿ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ದ್ರೌಪದಿ ಮುರ್ಮರವರು ರಾಷ್ಟ್ರಪತಿಯಾಗಿ ಅಯ್ಕೆ ಅಗ್ತಾರೆ. ಕಾಂಗ್ರೆಸ್ ಅವರ ಕೆಲಸ ಅವರು ಮಾಡ್ತಿದ್ದಾರೆ. ಆದ್ರೆ ನಮ್ಮ ಅಭ್ಯರ್ಥಿಯ ಗೆಲುವು ಫಿಕ್ಸ್ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆಯ ಫಲಿತಾಂಶದ ನಂತರ ದೆಹಲಿಗೆ ತೆರಳಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕೆ ಆರ್ ಪೇಟೆಯಲ್ಲಿ 21ಕ್ಕೆ ಬಹಳ ದೊಡ್ಡ ಸಮಾವೇಶ ನಡೆಯುತ್ತಿದೆ. ಆದಾದ ನಂತರ ರಾಜ್ಯದ ಎಲ್ಲ ಕಡೆ ಪ್ರವಾಸ ಆರಂಭ ಮಾಡುತ್ತೇನೆ. 140ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಸಂಕಲ್ಪ ಹೊಂದಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ