ರಾಜೀನಾಮೆ ನೀಡಿದ ಅನರ್ಹ ಶಾಸಕರಿಗೆ ಟಿಕೆಟ್​ ನೀಡುವುದು ಹೈ ಕಮಾಂಡ್​ಗೆ ಬಿಟ್ಟ ವಿಚಾರ; ಶ್ರೀರಾಮುಲು

B. Sriramulu: ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ರಚನೆ ಮಾಡುವಲ್ಲಿ ಕಾಂಗ್ರೆಸ್​ ಶಾಸಕರು ಪ್ರಮುಖ ಪಾತ್ರವಹಿಸಿದ್ದರು. ಇವರೆಲ್ಲಾ ಬಿಜೆಪಿ ಸರ್ಕಾರದಲ್ಲಿ ಈಗ ಟಿಕೆಟ್​ ಆಕಾಂಕ್ಷಿಗಳಾಗಿದ್ದಾರೆ. ಅಲ್ಲದೇ ಮಂತ್ರಿ ಸ್ಥಾನದ ಮೇಲೂ ಕಣ್ಣಿಟ್ಟಿರುವ ಇವರಿಗಾಗಿ ಬಿಜೆಪಿಯ ಹಿರಿಯ ನಾಯಕರು ತ್ಯಾಗಕ್ಕೆ ಮುಂದಾಬೇಕು ಎಂಬ ಸಂದೇಶವನ್ನು ರವಾನಿಸಲಾಗಿದೆ

Seema.R | news18
Updated:August 2, 2019, 12:47 PM IST
ರಾಜೀನಾಮೆ ನೀಡಿದ ಅನರ್ಹ ಶಾಸಕರಿಗೆ ಟಿಕೆಟ್​ ನೀಡುವುದು ಹೈ ಕಮಾಂಡ್​ಗೆ ಬಿಟ್ಟ ವಿಚಾರ; ಶ್ರೀರಾಮುಲು
ಶ್ರೀರಾಮುಲು
  • News18
  • Last Updated: August 2, 2019, 12:47 PM IST
  • Share this:
ಬಳ್ಳಾರಿ (ಆ.02): ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಮಗೆ ಸಹಾಯ ಮಾಡಿದ ನಾಯಕರ ಕಾಂಗ್ರೆಸ್​ ನಾಯಕರಿಗೆ ನಾವು ಮಂತ್ರಿ ಸ್ಥಾನ ನೀಡಬೇಕು. ಅದಕ್ಕೂ ಮೊದಲು ಉಪಚುನಾವಣೆಯಲ್ಲಿ ಅವರಿಗೆ ಟಿಕೆಟ್​ ನೀಡುವ ವಿಚಾರ ಹೈ ಕಮಾಂಡ್​ಗೆ ಬಿಟ್ಟಿದ್ದು ಎಂದು ಬಿಜೆಪಿ ನಾಯಕ ಬಿ ಶ್ರೀರಾಮುಲು ತಿಳಿಸಿದ್ದಾರೆ.

ಸಂಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಲವು ಕಾಂಗ್ರೆಸ್​ ನಾಯಕರು ಸಚಿವಾಕಾಂಕ್ಷಿಗಳಾಗಿರುವ ಬಗ್ಗೆ ಸ್ಪಷ್ಟಪಡಿಸಿದರು.

ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ರಚನೆ ಮಾಡುವಲ್ಲಿ ಕಾಂಗ್ರೆಸ್​ ಶಾಸಕರು ಪ್ರಮುಖ ಪಾತ್ರವಹಿಸಿದ್ದರು. ಇವರೆಲ್ಲಾ ಬಿಜೆಪಿ ಸರ್ಕಾರದಲ್ಲಿ ಈಗ ಟಿಕೆಟ್​ ಆಕಾಂಕ್ಷಿಗಳಾಗಿದ್ದಾರೆ. ಅಲ್ಲದೇ ಮಂತ್ರಿ ಸ್ಥಾನದ ಮೇಲೂ ಕಣ್ಣಿಟ್ಟಿರುವ ಇವರಿಗಾಗಿ ಬಿಜೆಪಿಯ ಹಿರಿಯ ನಾಯಕರು ತ್ಯಾಗಕ್ಕೆ ಮುಂದಾಬೇಕು ಎಂಬ ಸಂದೇಶವನ್ನು ರವಾನಿಸಲಾಗಿದೆ

ಅನರ್ಹ ಶಾಸಕರು ನಮಗೆ ಸಹಾಯ ಮಾಡಿದ್ದಾರೆ. ಅವರು ಒಪ್ಪಿಕೊಂಡು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ. 17 ಕ್ಷೇತ್ರಗಳಲ್ಲಿಯೂ ನಾವು ಚುನಾವಣೆ ಎದುರಿಸುತ್ತೇವೆ. ಅವರಿಗೆ ಟಿಕೆಟ್​ ನೀಡುವ ವಿಚಾರ ಹೈ ಕಮಾಂಡ್​ ನಿರ್ಧರಿಸುತ್ತದೆ ಎಂದರು.

ಇನ್ನು ಶ್ರೀರಾಮುಲುಗೆ ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಪಟ್ಟ ನೀಡಬೇಕು ಎಂದು ಸಮುದಾಯದ ಜನರು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಅಭಿಯಾನ ಆರಂಭಿಸಿರುವ ಕುರಿತು ಮಾತನಾಡಿದ ಅವರು, ಡಿಸಿಎಂ ಪಟ್ಟ ನೀಡುವುದು ಹೈ ಕಮಾಂಡ್​ಗೆ ಬಿಟ್ಟ ವಿಚಾರ. ಹೈ ಕಮಾಂಡ್​ ಏನೇ ತೀರ್ಮಾನ ಕೈ ಗೊಂಡರು ಅದಕ್ಕೆ ನಾನು ಬದ್ಧ ಎಂದರು.

ಇದನ್ನು ಓದಿ: ಮಾಜಿ ಸಿಎಂ ಪಟ್ಟ ಹೋದರ ಪರವಾಗಿಲ್ಲ ಮಂತ್ರಿ ಮಾಡಿ ಎಂದು ಹಠ ಹಿಡಿದಿದ್ದಾರಂತೆ ಜಗದೀಶ್ ಶೆಟ್ಟರ್; ಅದಕ್ಕೆ ಕಾರಣ ಯಾರು ಗೊತ್ತೇ?

ನಾನು ಒಂದು ಜಿಲ್ಲೆ ಅಥವಾ ಸಮುದಾಯಕ್ಕೆ ಸೀಮಿತವಾದ ನಾಯಕ ಅಲ್ಲ. ನಾನು ರಾಜ್ಯಕ್ಕೆ ಸೀಮಿತವಾದ ನಾಯಕ. ನನ್ನಂತಹ ಅನೇಕರ ನಾಯಕರು ಈಗಾಗಲೇ ಆಕಾಂಕ್ಷಿಗಳಿದ್ದಾರೆ ಎಂದರು.ಶೀಘ್ರದಲ್ಲಿಯೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬಗ್ಗೆ ಹೈ ಕಮಾಂಡ್​ ನಿರ್ಧರಿಸಲಿದೆ. ಅವರ  ಆಜ್ಞೆಯನ್ನು ನಾವು ಅನುಸರಿಸುತ್ತೇವೆ ಎಂದರು.

First published:August 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ