Jan Swaraj Yatra; ಬಿಜೆಪಿಯ ಜನ್ ಸ್ವರಾಜ್ ಯಾತ್ರೆಗೆ ನಾಲ್ಕು ತಂಡಗಳು: ಯಾರಿಗೆ ಸ್ಥಾನ? ಯಾರಿಗೆ ಕೊಕ್?

ಮಾಜಿ ಸಿಎಂ ಯಡಿಯೂರಪ್ಪ (BS Yediyurappa), ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel), ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಮತ್ತು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ನೇತೃತ್ವದಲ್ಲಿ  ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ.

ಬಿಜೆಪಿ

ಬಿಜೆಪಿ

  • Share this:
ಬೆಂಗಳೂರು: ಬಿಜೆಪಿ ಜ್ನ್ ಸ್ವರಾಜ್ ಯಾತ್ರೆ (Jan Swarjha Yatre) ಹೆಸರಿನಲ್ಲಿ ರಾಜ್ಯ ಪ್ರವಾಸ ಮಾಡಲಿದೆ. ಈ ಸಂಬಂಧ ನಾಲ್ಕು ತಂಡಗಳನ್ನು ರಚಿಸಲಾಗಿದೆ. ನಾಲ್ಕು ತಂಡಗಳಾಗಿ ನಾಲ್ಕು ವಿಭಾಗಗಳಲ್ಲಿ ಬಿಜೆಪಿ ತನ್ನ ಯಾತ್ರೆ ಆರಂಭಿಸಲಿದೆ. ಮಾಜಿ ಸಿಎಂ ಯಡಿಯೂರಪ್ಪ (BS Yediyurappa), ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel), ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಮತ್ತು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ನೇತೃತ್ವದಲ್ಲಿ  ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ. ನವೆಂಬರ್ 19ರಿಂದ ಈ ಜನ್ ಸ್ವರಾಜ್ ಯಾತ್ರೆ ಆರಂಭವಾಗಲಿದೆ ಎಂದು ಬಿಜೆಪಿ (Karnataka BJP) ಹೇಳಿದೆ. ನಾಲ್ಕು ತಂಡಗಳ ಸದಸ್ಯರ ಹೆಸರನ್ನು ಸಹ ಅಂತಿಮಗೊಳಿಸಲಾಗಿದೆ,

ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರಿಗೆ (DV Sadanandagowda) ಕೊಕ್ ನೀಡಲಾಗಿದೆ. ಅವರ ಬದಲಾಗಿ ಕೆ.ಎಸ್.ಈಶ್ವರಪ್ಪನವರಿಗೆ ಒಂದು ತಂಡದ ನಾಯಕತ್ವ ನೀಡಲಾಗಿದೆ ಎನ್ನಲಾಗಿದೆ. ಇನ್ನು ತಂಡದ ಸದಸ್ಯರಲ್ಲಿ ಬಿ.ವೈ.ವಿಜಯೇಂದ್ರರಿಗೂ (BY Vijayendra) ಸ್ಥಾನ ನೀಡಲಾಗಿದೆ

1.ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದ ತಂಡ

ನವೆಂಬರ್ 19 - 21 ರವರೆಗೆ ಮೊದಲ ಹಂತದ ಯಾತ್ರೆ

ಜಿಲ್ಲೆಗಳು - ಉತ್ತರ ಕನ್ನಡ, ಹಾವೇರಿ, ಧಾರವಾಡ, ಗದಗ,  ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ, ಬೆಳಗಾವಿ

ತಂಡದ ಸದಸ್ಯರು - ಯಡಿಯೂರಪ್ಪ, ಪ್ರಹ್ಲಾದ್ ಜೋಷಿ, ತೇಜಸ್ವಿನಿ ಅನಂತ್ ಕುಮಾರ್, ಶ್ರೀರಾಮುಲು, ಗೋವಿಂದ ಕಾರಜೋಳ, ಎಂ.ಬಿ.ನಂದೀಶ್

ಇದನ್ನೂ ಓದಿ:  GT Devegowda; ಜೆಡಿಎಸ್ ವರಿಷ್ಠರಿಗೆ ಶಾಸಕ ಜಿ.ಟಿ. ದೇವೇಗೌಡ ಶಾಕ್!

2.   ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದ ತಂಡ

ನವೆಂಬರ್ 19 - 21 ರವರೆಗೆ ಮೊದಲ‌ ಹಂತದ ಯಾತ್ರೆ

ಜಿಲ್ಲೆಗಳು - ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್

ತಂಡ - ಕಟೀಲ್,  ಭಗವಂತ್ ಖೂಬಾ, ಆರಗ ಜ್ಞಾನೇಂದ್ರ, ವಿ ಸೋಮಣ್ಣ, ನಿರಾಣಿ, ರಾಜುಗೌಡ, ಎನ್ ಮಹೇಶ್, ಮಾಲೀಕಯ್ಯ ಗುತ್ತೇದಾರ್, ಪ್ರತಾಪ್ ಸಿಂಹ

3. ಸಚಿವ ಕೆ ಎಸ್ ಈಶ್ವರಪ್ಪ ನೇತೃತ್ವದ ತಂಡ

ನವೆಂಬರ್ 19 - 23 ರವರೆಗೆ ಮೊದಲ‌ ಹಂತದ ಯಾತ್ರೆ

ಜಿಲ್ಲೆಗಳು - ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಕೊಡಗು, ಮಂಡ್ಯ, ಚಾಮರಾಜನಗರ, ಹಾಸನ

ತಂಡ - ಕೆ‌ಎಸ್ ಈಶ್ವರಪ್ಪ, ಆರ್ ಅಶೋಕ್, ಶೋಭಾ ಕರಂದ್ಲಾಜೆ, ಎಸ್ ಟಿ ಸೋಮಶೇಖರ್, ಹಾಲಪ್ಪ ಆಚಾರ್, ಎಸ್ ಅಂಗಾರ, ಅರವಿಂದ ಲಿಂಬಾವಳಿ, ಎಂ.ಶಂಕರಪ್ಪ

4. ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದ ತಂಡ

ನವೆಂಬರ್ 19 - 22 ರವರೆಗೆ ಮೊದಲ‌ ಹಂತದ ಯಾತ್ರೆ

ಜಿಲ್ಲೆಗಳು - ದಾವಣಗೆರೆ, ತುಮಕೂರು, ಚಿತ್ರದುರ್ಗ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ

ತಂಡ - ಶೆಟ್ಟರ್, ಸಚಿವ ಅಶ್ವಥ ನಾರಾಯಣ್, ಕೇಂದ್ರ ಸಚಿವ ಎ ನಾರಾಯಣ ಸ್ವಾಮಿ, ಬೈರತಿ ಬಸವರಾಜ್, ಗೋಪಾಲಯ್ಯ, ಬಿ ವೈ ವಿಜಯೇಂದ್ರ, ಎಂ ರಾಜೇಂದ್ರ

ಇದನ್ನೂ ಓದಿ: Belagavi Politics: ಸತೀಶ್ ಜಾರಕಿಹೊಳಿ Vs ಫಿರೋಜ್ ಸೇಠ್; ಬೆಳಗಾವಿ 'ಕೈ' ಅಂಗಳದಲ್ಲಿ ವಿಡಿಯೋ ಸಂಚಲನ

ಮುಂದಿನ ವಿಧಾನಸಭಾ ಚುನಾವಣೆ (Assembly Election) ಹಿನ್ನೆಲೆ ಬಿಜೆಪಿ ಈಗನಿಂದಲೇ ತಯಾರಿ ನಡೆಸುತ್ತಿದೆ. ಪಕ್ಷ ಸಂಘಟನೆ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಬಿಜೆಪಿ ಈ ಯಾತ್ರೆ ಆರಂಭಿಸುತ್ತಿದೆ ಎನ್ನಲಾಗಿದೆ. ಕಳೆದ ಬಾರಿ ಜನಾಶೀರ್ವಾದ ಯಾತ್ರೆ ಮೂಲಕ ಬಿಜೆಪಿ ಬೃಹತ್ ಸಮಾವೇಶಗಳನ್ನು ಆಯೋಜಿಸಿತ್ತು.

ಸಿಂದಗಿಯಲ್ಲಿ (Sindagi By Election) ಬಿಜೆಪಿ ಗೆದ್ದಿದ್ದರೂ ಸಿಎಂ ಬಸವರಾಜ್ ಬೊಮ್ಮಾಯಿ ತವರು ಜಿಲ್ಲೆಯ ಹಾನಗಲ್ (Hangal By Election) ಕ್ಷೇತ್ರ ಕಳೆದುಕೊಂಡಿದ್ದರಿಂದ ಕಮಲ ಪಾಳಯ ಮುಜಗರಕ್ಕೀಡಾಗಿದೆ. ಹಾನಗಲ್ ಸೋಲಿನ ಪರಾಮರ್ಶೆ ಸಭೆ ಇದೇ ನವೆಂಬರ್ 9ರಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ನೇತೃತ್ವದಲ್ಲಿ ನಡೆಯಲಿದೆ.
Published by:Mahmadrafik K
First published: