HOME » NEWS » State » KARNATAKA BJP IN CHARGE ARUN SINGH COMING TO BANGALORE NEXT WEEK DBDEL SESR

ಸಿಎಂ ಯಡಿಯೂರಪ್ಪ ಬದಲಾವಣೆ ವಿಚಾರ: ಗೊಂದಲ ಬಗೆ‌ಹರಿಸಲು ವರದಿ ಕೇಳಿದ ಹೈಕಮಾಂಡ್

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಂದ ವರದಿ ಕೇಳಿದ್ದು ವರದಿ ತಯಾರಿಸುವ ಹಿನ್ನಲೆಯಲ್ಲಿ ಅವರು ಮುಂದಿನ‌ ವಾರ ರಾಜ್ಯಕ್ಕೆ ಭೇಟಿ ನೀಡಿಲಿದ್ದಾರೆ

news18-kannada
Updated:June 9, 2021, 8:37 PM IST
ಸಿಎಂ ಯಡಿಯೂರಪ್ಪ ಬದಲಾವಣೆ ವಿಚಾರ: ಗೊಂದಲ ಬಗೆ‌ಹರಿಸಲು ವರದಿ ಕೇಳಿದ ಹೈಕಮಾಂಡ್
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್
  • Share this:
ನವದೆಹಲಿ, (ಜೂ. 9): ರಾಜ್ಯ ಬಿಜೆಪಿಯನ್ನು ತಲ್ಲಣಗೊಳಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಆಗುತ್ತದೆ ಎಂಬ ಬಿಕ್ಕಟ್ಟನ್ನು ಬಗೆಹರಿಸಲು  ಪಕ್ಷದ ಹೈಕಮಾಂಡ್ ಮುಂದಾಗಿದೆ. ನಾಯಕತ್ವ ಬದಲಾವಣೆಯ ಸುತ್ತ ಪ್ರತಿ ದಿನ ಯಡಿಯೂರಪ್ಪ ಪರ ವಿರೋಧ ಹೇಳಿಕೆಗಳು ಹೊರ ಬೀಳುತ್ತಿದ್ದು, ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಕೊರೋನಾ ಕಾಲದಲ್ಲಿ ಆಡಳಿತದ ಮೇಲೂ ದುಷ್ಪರಿಣಾಮ ಬೀರಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಹೈಕಮಾಂಡ್ ಅಖಾಡಕ್ಕಿ ಇಳಿದಿದ್ದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಂದ ವರದಿ ಕೇಳಿದೆ ಎನ್ನಲಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಹೈಕಮಾಂಡ್ ನನ್ನ ಮೇಲೆ ವಿಶ್ವಾಸ ಇಟ್ಟು ಅವಕಾಶ ಕೊಟ್ಟಿದೆ. ಈಗ ಹೈಕಮಾಂಡ್ ಬಯಸಿದರೆ ರಾಜೀನಾಮೆ ನೀಡುತ್ತೇನೆ' ಎಂದು ಹೇಳಿರುವುದು ನಾಯಕತ್ವ ಬದಲಾವಣೆ ವಿಷಯದ ಚರ್ಚೆಗೆ ಇನ್ನಷ್ಟು ಪುಷ್ಠಿ ನೀಡಿತು.

ಯಡಿಯೂರಪ್ಪ ಅವರ ಈ ಹೇಳಿಕೆ ಹೊರಬಿದ್ದ ಬಳಿಕ ಪರ-ವಿರೋಧ ಇರುವವರ ಚಟುವಟಿಕೆಗಳು ಗರಿ ಗೆದರಿವೆ. ಈ ನಡುವೆ ಯಡಿಯೂರಪ್ಪ ಪರ ಶಾಸಕ ಎಂ.ಪಿ. ರೇಣುಕಾಚಾರ್ಯ ಸಹಿ ಸಂಗ್ರಹ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಹೈಕಮಾಂಡ್ ಯಾರೂ ಯಾರ ಪರ-ವಿರೋಧ ಸಹಿ ಸಂಗ್ರಹ ಮಾಡಬಾರದು ಎಂದು ತಾಖೀತು ಮಾಡಿತು. ಈಗ ಹೈ ಕಮಾಂಡೇ ವರದಿ ತರಿಸಿಕೊಳ್ಳಲು ಮುಂದಾಗಿದೆ.

ಇದನ್ನು ಓದಿ: 100 ನಾಟ್​ಔಟ್​; ಪೆಟ್ರೋಲ್​ ಬೆಲೆ ಖಂಡಿಸಿ ಕಾಂಗ್ರೆಸ್​ ವಿನೂತನ ಪ್ರತಿಭಟನೆ

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಂದ ವರದಿ ಕೇಳಿದೆ ಎನ್ನಲಾಗಿದ್ದು ವರದಿ ತಯಾರಿಸುವ ಹಿನ್ನಲೆಯಲ್ಲಿ ಅವರು ಮುಂದಿನ‌ ವಾರ ರಾಜ್ಯಕ್ಕೆ ಭೇಟಿ ನೀಡಿಲಿದ್ದಾರೆ ಎಂದು ಬಿಜೆಪಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಅಲ್ಲದೆ ಅವರು ಭೇಟಿ ವೇಳೆ ಸಚಿವರು ಮತ್ತು ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಇದೇ ವೇಳೆ ಅವರು ಆರ್‌ಎಸ್‌ಎಸ್ ನಾಯಕರ ಹಾಗೂ ಚರ್ಚೆಯ ಕೇಂದ್ರ ಬಿಂದುವಾಗಿರುವ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ. ಇದೆಲ್ಲದರ ಬಳಿಕ ಅರುಣ್ ಸಿಂಗ್ ಅವರು ಹೈಕಮಾಂಡಿಗೆ ವರದಿ ನೀಡಲಿದ್ದಾರೆ. ಆ ವರದಿ ಆಧರಿಸಿ ಬಿಜೆಪಿ ಹೈಕಮಾಂಡ್ ಕ್ರಮ ಕೈಗೊಳ್ಳಲಿದೆ ಎನ್ನಲಾಗಿದೆ.

ಇದನ್ನು ಓದಿ: ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಅಂದ್ರೆ ಹಳ್ಳಿಜನ ಆತ್ಮಹತ್ಯೆ ಮಾಡ್ಕೋತೀವಿ ಅಂತಾರೆ

ಈ ನಡುವೆ 'ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮತ್ತು ನಾಯಕತ್ವ ಬದಲಾವಣೆ ಬಗ್ಗೆ ಆದಷ್ಟು ಬೇಗ ನಿಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಿ' ಎಂದು ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ. ಆರ್‌ಎಸ್‌ಎಸ್ ಮುಖಂಡರೊಬ್ಬರ ಮೂಲಕ ಯಡಿಯೂರಪ್ಪ ಅವರಿಗೆ ಇಂಥದೊಂದು ಸಂದೇಶ ರವಾನಿಸಿದೆ. ಈ ಬಗ್ಗೆ ಈಗಾಗಲೇ ಯಡಿಯೂರಪ್ಪ ಜೊತೆ ಮಾತನಾಡಿರುವ ಆರ್‌ಎಸ್‌ಎಸ ನಾಯಕರು, 'ಪಕ್ಷ ನಿಮಗೆ ಎರಡೆರಡು ಬಾರಿ ಅವಕಾಶ ಕೊಟ್ಟಿದೆ, ಪಕ್ಷದ ಹಿತದೃಷ್ಟಿಯಿಂದ ಯೋಚನೆ ಮಾಡಿ ನಿರ್ಧರಿಸಿ' ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
Youtube Video
ಈ ನಡುವೆ ರಾಜ್ಯ ಬಿಜೆಪಿ ಬಿಕ್ಕಟ್ಟು ಪರಿಹರಿಸಲು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಭೂಪೇಂದ್ರ ಯಾದವ್ ಮತ್ತು ಅರುಣ್ ಸಿಂಗ್ ಅವರಿಂದ ಪಕ್ಷದ ಹೈಕಮಾಂಡ್ ಪ್ರತ್ಯೇಕವಾದ ವರದಿ ಕೇಳಿದೆ. ಭೂಪೇಂದ್ರ ಯಾದವ್ ಹಿರಿಯ ನಾಯಕರಿಂದ ಮಾಹಿತಿ ಸಂಗ್ರಹಿಸಲಿದ್ದಾರೆ. ಸಚಿವರು ಮತ್ತು ಶಾಸಕರಿಂದ ಅರುಣ್ ಸಿಂಗ್ ಮಾಹಿತಿ ಸಂಗ್ರಹಿಸಲಿದ್ದಾರೆ.  ಭೂಪೇಂದ್ರ ಯಾದವ್ ಮತ್ತು ಅರುಣ್ ಸಿಂಗ್ ಅವರು ನೀಡುವ ವರದಿ ಆಧರಿಸಿ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಯಲ್ಲಿ ಸದ್ಯ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರ ಭವಿಷ್ಯ ನಿಂತಿದೆ ಎಂದು ಕೂಡ ಹೇಳಲಾಗುತ್ತಿದೆ.
Published by: Seema R
First published: June 9, 2021, 8:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories