• Home
  • »
  • News
  • »
  • state
  • »
  • Halal Ban Bill: ಅಧಿವೇಶನದಲ್ಲಿ ಹಲಾಲ್ ನಿಷೇಧ ಮಸೂದೆ ಮಂಡನೆಗೆ ಬಿಜೆಪಿ ಸಿದ್ಧತೆ

Halal Ban Bill: ಅಧಿವೇಶನದಲ್ಲಿ ಹಲಾಲ್ ನಿಷೇಧ ಮಸೂದೆ ಮಂಡನೆಗೆ ಬಿಜೆಪಿ ಸಿದ್ಧತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

FSSAI (Food Safety And Standards Authority Of India) ಹೊರತುಪಡಿಸಿ ಬೇರೆ ಯಾವುದೇ ಮಂಡಳಿ ಫುಡ್ ಸರ್ಟಿಫಿಕೇಟ್ ನೀಡುವ ಅವಕಾಶ ಕೊಡುವದನ್ನು ನಿಷೇಧಿಸಬೇಕು ಎಂಬ ಅಂಶಗಳನ್ನು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.

  • Share this:

ಈ ವರ್ಷದ ಯುಗಾದಿ (Ugadi 2022) ಸಂದರ್ಭದಲ್ಲಿ ಹಿಂದೂ ಸಂಘಟನೆಗಳು (Hindu Organization) ಹಲಾಲ್ ಉತ್ಪನ್ನಗಳ (Halal Products) ನಿಷೇಧದ ಕುರಿತು ದೊಡ್ಡಮಟ್ಟದಲ್ಲಿಯೇ ಅಭಿಯಾನವನ್ನು (Campaign) ಮಾಡಿದ್ದವು. ಹಿಂದೂಗಳು ಹಿಂದೂಯೇತರರ (Non Hindus) ಬಳಿ ಮಾಂಸ ಖರೀದಿಸಬಾರದು. ಜಟ್ಕಾ ಕಟ್ (Halal Vs Jatka Cut) ಮಾಂಸ ಖರೀದಿ ಮಾಡಬೇಕು ಎಂದು ಕೆಲವು ಅಂಗಡಿಗಳು ಸಹ ತಲೆ ಎತ್ತಿದ್ದವು. ಒಂದಿಷ್ಟು ಹಿಂದೂ ಸಂಘಟನೆಗಳು ಉಚಿತವಾಗಿಯೇ ಮಾಂಸ ಹಚ್ಚಿದ್ದವು. ಮಾಂಸ ಮಾತ್ರವಲ್ಲದೇ ಹಲಾಲ್​ ಲೇಬಲ್ (Halal Lable) ಇರೋ ಎಲ್ಲಾ ಉತ್ಪನ್ನಗಳ ನಿಷೇಧಕ್ಕೆ ಹಿಂದೂ ಸಂಘಟನೆಗಳು ಒತ್ತಾಯಿಸಿದ್ದವು. ಸದ್ಯ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ (Winter Session) ನಡೆಯುತ್ತಿದ್ದು, ಹಲಾಲ್ ನಿಷೇಧ ಖಾಸಗಿ ಮಸೂದೆ ಮಂಡನೆಗೆ ಬಿಜೆಪಿ (BJP) ಸಿದ್ಧತೆ ನಡೆಸಿದೆ. ಹಲಾಲ್ ನಿಷೇಧ ಮಸೂದೆ ಮಂಡಿಸಲು ಬಿಜೆಪಿ ಶಾಸಕ ಎನ್.ರವಿಕುಮಾರ್ (BJP MLA N Ravikumar) ಸಿದ್ಧವಾಗಿದ್ದಾರೆ.


FSSAI (Food Safety And Standards Authority Of India) ಹೊರತುಪಡಿಸಿ ಬೇರೆ ಯಾವುದೇ ಮಂಡಳಿ ಫುಡ್ ಸರ್ಟಿಫಿಕೇಟ್ ನೀಡುವ ಅವಕಾಶ ಕೊಡುವದನ್ನು ನಿಷೇಧಿಸಬೇಕು ಎಂಬ ಅಂಶಗಳನ್ನು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.


ಈ ಸಂಬಂಧ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ನೇತೃತ್ವದ ಗುಂಪು ಅಂದಿನ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವ ದಿ.ಉಮೇಶ್ ಕತ್ತಿ (Former Minister Umesh Katti) ಅವರನ್ನು ಭೇಟಿಯಾಗಿ, ಹಲಾಲ್​ ಆಯ್ಕೆಯನ್ನು ನಿಷೇಧಿಸಬೇಕು ಎಂದು ಮನವಿ ಮಾಡಿಕೊಂಡಿತ್ತು.


ಉಮೇಶ್ ಕತ್ತಿ ಪತ್ರ


ಉಮೇಶ್ ಕತ್ತಿ ಪತ್ರದಲ್ಲಿ ಏನಿತ್ತು?


ಹಿಂದೂ ಸಂಘಟನೆಗಳ ಮನವಿಗೆ ಸ್ಪಂದಿಸಿದ್ದ ಉಮೇಶ್ ಕತ್ತಿ ಅವರು, ಆಹಾರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದರು. ಹಲಾಲ್ ಆಹಾರ ಮತ್ತು ಗ್ರಾಹಕರ ಉತ್ಪನ್ನಗಳನ್ನು ಬಹುಸಂಖ್ಯಾತ ಗ್ರಾಹಕರ ಮೇಲೆ ಬಲವಂತವಾಗಿ ಹೇರಲಾಗುತ್ತಿರುವ ಬಗ್ಗೆ ಹಾಗೂ ಹಲಾಲ್​ ಅಲ್ಲದ ಮಾಂಸ ಆಥವಾ ಉತ್ಪನ್ನಗಳ ಪ್ರತ್ಯೇಕ ಆಯ್ಕೆಯನ್ನು ಹೊಂದಲು ಕಟ್ಟುನಿಟ್ಟಾದ ಆದೇಶಗಳನ್ನು ತೆಗೆದುಕೊಳ್ಳುವಂತೆ ಉಮೇಶ್ ಕತ್ತಿ ಸೂಚನೆ ನೀಡಿದ್ದರು.


ಇದೀಗ ಉಮೇಶ್ ಕತ್ತಿ ಅವರು ಬರೆದ ಪತ್ರದ ಆಧಾರದ ಮೇಲಯೇ ಹಲಾಲ್ ನಿಷೇಧ ಖಾಸಗಿ ಮಸೂದೆ ರಚನೆಯಾಗಿದೆ. ಯಾವುದೇ ಕ್ಷಣದಲ್ಲಿ ಮಸೂದೆ ಮಂಡನೆಯಾದ್ರೆ, ಸರ್ಕಾರ ಒಪ್ಪಿಗೆ ಸೂಚಿಸಿದ್ರೆ ಎರಡೂ ಸದನಗಳಲ್ಲಿ ಮಸೂದೆ ಪಾಸ್ ಆಗಿ ಕಾಯ್ದೆಯಾಗಬಹುದು.


ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006ಕ್ಕೆ ತಿದ್ದುಪಡಿ ಆಗುತ್ತಾ?


ವಿಧಾನ ಪರಿಷತ್ ಸಭಾಪತಿಗಳಿಗೆ ಪತ್ರ ಬರೆದಿರುವ ಎನ್.ರವಿಕುಮಾರ್, ಮುಸ್ಲಿಂ ಸಂಸ್ಥೆಗಳು ನೀಡುವ ಹಲಾಲ್​ ಗುರುತು ಯಾವುದೇ ಮಾನದಂಡವನ್ನು ಹೊಂದಿಲ್ಲ. ಹಲಾಲ್​ ಮಾರ್ಕ್ ನೀಡಲು ಉತ್ಪಾದಕರಿಂದ ಹೆಚ್ಚಿನ ಮೊತ್ತ ಪಡೆಯಲಾಗುತ್ತಿದೆ.


ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006ಕ್ಕೆ ತಿದ್ದುಪಡಿ ತರುವ ವಿಧೇಯಕವನ್ನು ಮಂಡಿಸಲು ಅನುಮತಿ ಕೋರಿದ್ದಾರೆ. ಈ ಮಸೂದೆಯಿಂದ ಸರ್ಕಾರದ ಮೇಲೆ ಯಾವುದೇ ಆರ್ಥಿಕ ಹೊರೆಯಾಗಲ್ಲ. ಬದಲಾಗಿ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ 5 ಸಾವಿರ ಕೋಟಿಗಳಷ್ಟು ಆದಾಯ ಸಿಗಲಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.


ಹಲಾಲ್ ಕಟ್ ಎಂದರೇನು?


ನಾವು ತಿನ್ನುವ ಪ್ರಾಣಿಗಳನ್ನ ಕೊಲ್ಲುವುದಕ್ಕೂ ಇಸ್ಲಾಮ್​ನಲ್ಲಿ ನಿರ್ದಿಷ್ಟ ಕ್ರಮ ಮತ್ತು ನಿಯಮಗಳಿವೆ. ಒಂದೊಂದು ಪ್ರಾಣಿಯ ವಧೆಗೂ ಪ್ರತ್ಯೇಕ ನಿಯಮವಿರುತ್ತದೆ. ಒಂದು ಸಾಮಾನ್ಯ ನಿಯಮವೆಂದರೆ ವಧಿಸಲ್ಪಟ್ಟ ಪ್ರಾಣಿಯ ದೇಹದಿಂದ ರಕ್ತವೆಲ್ಲವೂ ಹೊರಬರಬೇಕು. ಸೌದಿಯಲ್ಲಿರುವ ಮೆಕ್ಕಾ ಮಸೀದಿಯತ್ತ ಮುಖ ಮಾಡಿರಬೇಕು. ವಧಿಸುವ ವ್ಯಕ್ತಿಯು ಅಲ್ಲಾಹುವಿನ ನಾಮೋಚ್ಛಾರ ಮಾಡುತ್ತಾ ವಧಿಸಬೇಕು. ತಲೆಯನ್ನು ಒಡೆಯದೆ ಗಂಟಲು ಸೀಳಿ ಸಾಯಿಸಬೇಕು ಎಂಬಿತ್ಯಾದಿ ನಿಯಮಗಳು ಕುರಾನ್​ನಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ:  Explained: 'ಹಲಾಲ್ ಕಟ್' ಮತ್ತು 'ಜಟ್ಕಾ ಕಟ್' ನಡುವಿನ ವ್ಯತ್ಯಾಸವೇನು ಗೊತ್ತಾ? ಇಲ್ಲಿದೆ ಫುಲ್ ಡಿಟೇಲ್ಸ್


ಒಂದೊಂದು ಪ್ರಾಣಿಯನ್ನು ಸಾಯಿಸುವ ಕ್ರಮದಲ್ಲಿ ವ್ಯತ್ಯಾಸವಿರುತ್ತದೆ. ಆಯಾ ಪ್ರಾಣಿಗೆ ಅನುಗುಣವಾಗಿ ಈ ನಿಯಮವನ್ನ ಮಾಡಲಾಗಿದೆ. ಒಟ್ಟಿನಲ್ಲಿ ಪ್ರಾಣಿಗಳು ಹೆಚ್ಚು ನೋವಿಲ್ಲದೆ ವಧಿಸಲ್ಪಡಬೇಕು ಎಂಬುದು ಕುರಾನ್​ನ ಆಶಯವಾಗಿದೆ.

Published by:Mahmadrafik K
First published: