Karnataka Bjp: ಸಿಎಂ ಬದಲಾಯ್ತು; ಸಚಿವರೂ ಬದಲಾಗುವರೇ? ಇಲ್ಲಿದೆ ಕುರ್ಚಿ ಕಳೆದುಕೊಳ್ಳುವವರ ಪಟ್ಟಿ

ಸಿಎಂ ಯಡಿಯೂರಪ್ಪ ಅವರು ರಾಜಿನಾಮೆ ಕೊಡುತ್ತಾರೆ ಎಂದಾಗ ಮೊದಲು ಆತಂಕಕ್ಕೆ ಒಳಗಾಗಿದ್ದು ವಲಸಿಗ ಸಚಿವರುಗಳು. ಕಾಂಗ್ರೆಸ್​- ಜೆಡಿಎಸ್​ ಸರ್ಕಾರ ಕೆಡವಿ ಬಿಜೆಪಿ ಅಧಿಕಾರಕ್ಕೆ ಬರಲು ಕಾಣರಾಗಿದ್ದ ಇವರುಗಳು ಕಳೆದ ವಾರ ಸಿಎಂ ಬಿಎಸ್​ವೈ ಭೇಟಿಯಾಗಿ ’’ನಿಮ್ಮ ರಾಜಿನಾಮೆ ನಂತರ ನಮ್ಮಗಳ ಗತಿಯೇನು’’ ಎಂದು ಆತಂಕ ವ್ಯಕ್ತಪಡಿಸಿದ್ದರು. ಆಗ ಯಡಿಯೂರಪ್ಪ ಅವರು ನಿಮ್ಮ ಸ್ಥಾನಗಳಿಗೆ ಏನೂ ಆಗಲ್ಲ ಎಂದು ಭರವಸೆ ನೀಡಿದ್ದರು.

ಬಿ.ಎಸ್.​ ಯಡಿಯೂರಪ್ಪ.

ಬಿ.ಎಸ್.​ ಯಡಿಯೂರಪ್ಪ.

 • Share this:
  ಬೆಂಗಳೂರು: ಕಳೆದ ಅನೇಕ ತಿಂಗಳುಗಳಿಂದ ನಡೆಯುತ್ತಿದ್ದ ನಾಯಕತ್ವ ಬದಲಾವಣೆ ಕೂಗಿಗೆ ಒಂದು ರೀತಿಯಲ್ಲಿ ಅಂತ್ಯ ದೊರಕಿದ್ದು, ಊಹೆಯಂತೆ ಕರ್ನಾಟಕ ಬಿಜೆಪಿಯ ಪ್ರಬಲ ನಾಯಕ ಬಿಎಸ್​ ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. 

  ಕರ್ನಾಟಕಕ್ಕೆ ನೂತನ ಸಿಎಂ ಆಗಿ ಬ್ರಾಹ್ಮಣ ಸಮುದಾಯದ ಅಥವಾ ಎರಡನೇ ಪ್ರಬಲ ಜಾತಿಯಾದ ಒಕ್ಕಲಿಗ ಸಮುದಾಯದ ಅಭ್ಯರ್ಥಿಯ ಹೆಸರನ್ನು ಬಿಜೆಪಿ ಹೈಕಮಾಂಡ್​ ಘೋಷಿಸಬಹುದು ಎನ್ನುವ ಗಾಳಿಸುದ್ದಿಯೂ ಹರಿದಾಡುತ್ತಿದೆ. ಕೇಂದ್ರ ನಾಯಕರಿಗೆ ಹತ್ತಿರವಿರುವ ಪ್ರಹ್ಲಾದ್​ ಜೋಶಿ ಅಥವಾ ಸಿ.ಟಿ.ರವಿ, ಯಡಿಯೂರಪ್ಪ ಅವರ ನಂತರದ ಸ್ಥಾನ ಪಡೆದುಕೊಳ್ಳಬಹುದು ಎಂದು ವರದಿಗಳು ಬಂದಿವೆ. ಇದರ ಬೆನ್ನಲ್ಲೇ ಒಂದಷ್ಟು ಮಂದಿ ಸಚಿವರನ್ನು ಸಹ ಸಂಪುಟದಿಂದ ಕೈ ಬಿಟ್ಟು ಹೊಸಬರಿಗೆ ಅವಕಾಶ ಕೊಡಬಹುದು ಎನ್ನುವ ಮಾತು ಕೂಡ ಚಾಲ್ತಿಯಲ್ಲಿದೆ.

  ಪಕ್ಷದ ಹಿರಿಯರಿಗೆ ಕೋಕ್​ ಸಾದ್ಯತೆ?
  ಪಕ್ಷದ ಹಿರಿಯ ತಲೆಗಳಿಗೆ ಕೋಕ್​ ಕೊಟ್ಟು, ಹೊಸಬರನ್ನು ಆ ಸ್ಥಾನದಲ್ಲಿ ಕೂರಿಸುವ ಸಾಧ್ಯತೆ ಇದೆ. ಸಚಿವ ಸ್ಥಾನ ಕಳೆದುಕೊಳ್ಳುವ ಹಿರಿಯರಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ನೀಡಬಹುದು ಎಂದು ಹೇಳಲಾಗುತ್ತಿದೆ. 2023ರಲ್ಲಿ ಎದುರಾಗುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ವೇದಿಕೆ ಸಜ್ಜು ಮಾಡಲು ಬಿಜೆಪಿ ಹೊರಟಂತಿದೆ. ಪಕ್ಷ ಸಂಘಟನೆಗೆ ಯಡಿಯೂರಪ್ಪ ಅವರನ್ನೇ ಇಷ್ಟು ದಿನ ನೆಚ್ಚಿಕೊಂಡಿದ್ದ ಬಿಜೆಪಿಗೆ  ಮುಂದಿನ ಹಾದಿ ಅಷ್ಟೊಂದು ಸುಗಮವಾಗಿಲ್ಲ. ಆದ ಕಾರಣ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕೆ ಎಸ್ ಈಶ್ವರಪ್ಪ, ಕೋಟಾ ಶ್ರೀನಿವಾಸ ಪೂಜಾರಿ, ವಿ ಸೋಮಣ್ಣ, ಶಶಿಕಲಾ ಜೊಲ್ಲೆ, ಪ್ರಭು ಚೌಹಾಣ್, ಉಪ ಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ, ಸಿ ಸಿ ಪಾಟೀಲ್ ಹಾಗೂ ಡಿಸಿಎಂ ಹುದ್ದೆಯಿಂದ ಲಕ್ಷ್ಮಣ ಸವದಿ ಕೈ ಬಿಡೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

  ಸಿಎಂ ಸ್ಥಾನವಾದರೂ ಸಿಗುವುದಿಲ್ಲ ಕಡೆ ಪಕ್ಷ ಸಚಿವ ಸ್ಥಾನವನ್ನಾದರೂ ಉಳಿಸಿಕೊಳ್ಳೊಣ ಎಂದು ಕೆ.ಎಸ್​.ಈಶ್ವರಪ್ಪ ತೆರೆಮರೆಯಲ್ಲಿ ಯತ್ನಿಸುತ್ತಿದ್ದರು. ಆದರೆ ಅವರ ನಸೀಬು ಬದಲಾದಂತೆ ಕಾಣುತ್ತಿಲ್ಲ. ಸ್ಥಾನ ಕಳೆದುಕೊಳ್ಳುತ್ತಿರುವ ಸಚಿವರುಗಳ ಕೆಲಸದ ಬಗ್ಗೆಯೂ ಅಸಮಾಧಾನವಿದ್ದು ಈ ಕಾರಣದಿಂದಲೂ ಕೆಳಗೆ ಇಳಿಸಬಹುದು ಎನ್ನಲಾಗುತ್ತಿದೆ.

  ವಲಸಿಗರು ಬಹುತೇಕ ಸೇಫ್

  ಸಿಎಂ ಯಡಿಯೂರಪ್ಪ ಅವರು ರಾಜಿನಾಮೆ ಕೊಡುತ್ತಾರೆ ಎಂದಾಗ ಮೊದಲು ಆತಂಕಕ್ಕೆ ಒಳಗಾಗಿದ್ದು ವಲಸಿಗ ಸಚಿವರುಗಳು. ಕಾಂಗ್ರೆಸ್​- ಜೆಡಿಎಸ್​ ಸರ್ಕಾರ ಕೆಡವಿ ಬಿಜೆಪಿ ಅಧಿಕಾರಕ್ಕೆ ಬರಲು ಕಾಣರಾಗಿದ್ದ ಇವರುಗಳು ಕಳೆದ ವಾರ ಸಿಎಂ ಬಿಎಸ್​ವೈ ಭೇಟಿಯಾಗಿ ’’ನಿಮ್ಮ ರಾಜಿನಾಮೆ ನಂತರ ನಮ್ಮಗಳ ಗತಿಯೇನು’’ ಎಂದು ಆತಂಕ ವ್ಯಕ್ತಪಡಿಸಿದ್ದರು. ಆಗ ಯಡಿಯೂರಪ್ಪ ಅವರು ನಿಮ್ಮ ಸ್ಥಾನಗಳಿಗೆ ಏನೂ ಆಗಲ್ಲ ಎಂದು ಭರವಸೆ ನೀಡಿದ್ದರು. ಈಗ ವಲಸಿಗ ಸಚಿವರಿಗೆ ’’ಬಿಜೆಪಿ ನಂಬಿ ಬಂದವರನ್ನು ಕೈ ಬಿಡುವುದಿಲ್ಲ’’ ಎನ್ನುವ ಸಂದೇಶವೊಂದು ಬಂದಿದೆ ಎಂದು ಹೇಳಲಾಗುತ್ತಿದೆ,

  ವಲಸಿಗರ ಕೈ ಬಿಟ್ಟರೆ ಭಿನ್ನಮತಕ್ಕೆ ದಾರಿಯಾಗಬಹುದು ಎನ್ನುವ ಆತಂಕದ ಜೊತೆಗೆ, ವಲಸಿಗರು ಒಗ್ಗಟ್ಟಾಗಿ ರಾಜೀನಾಮೆಗೆ ಮುಂದಾದರೆ ಎನ್ನುವ ಎಚ್ಚರಿಕೆ ಕೂಡ ಹೈಕಮಾಂಡಿಗೆ ಇದೆ. ಹಾಗೂ ವಲಸಿಗರನ್ನು ಕೈ ಬಿಟ್ಟರೆ ಬಿಎಸ್​ವೈ ಕೆಂಗಣ್ಣಿಗೆ ಗುರಿಯಾಗಬಹುದು, ವಿಪಕ್ಷಗಳಿಗೆ ಅಸ್ತ್ರ ಕೊಟ್ಟಂತೆ ಆಗುವುದು, ಅಲ್ಲದೇ ಮುಂದೆ ಬಿಜೆಪಿಗೆ ಯಾರಾದರೂ ಸೇರುತ್ತೇವೆ ಎನ್ನುವವರು ಈ ಘಟನೆಯಿಂದ ಹಿಂದೇಟು ಹಾಕುವ ಸಾಧ್ಯತೆ ಬರಬಹುದು. ಜೊತೆಗೆ  ಸರ್ಕಾರದ ವಿರುದ್ಧ ಪರ್ಯಾಯ ಶಕ್ತಿ ರಚನೆ ಆಗಬಾರದು ಎನ್ನುವ ಎಚ್ಚರಿಕೆಯಿಂದಲಾದರೂ ಹೈಕಮಾಂಡ್​ ವಲಸಿಗರನ್ನು ಬದಲಾವಣೆ ಮಾಡುವ ಗೋಜಿಗೆ ಹೋಗುವುದಿಲ್ಲ ಎನ್ನಬಹುದು.

  ಲಿಂಗಾಯತ ಸಿಎಂಅನ್ನು ಕೆಳಗಿಳಿಸಿದಕ್ಕೆ ಲಿಂಗಾಯತರೇ ಸಿಎಂ ಆಗೋದು ಖಚಿತವೇ?

  ಪ್ರಬಲ ಲಿಂಗಾಯತ ಸಮುದಾಯದ ನಾಯಕ ಯಡಿಯೂರಪ್ಪ ಅವರನ್ನು ಇಳಿಸಬಾರದು ಎಂದು ರಾಜ್ಯದ ಪ್ರಮುಖ ಸ್ವಾಮೀಜಿಗಳು ಒತ್ತಡ ಹೇರಿದ್ದರು. ಅಲ್ಲದೇ 500 ಸ್ವಾಮೀಜಿಗಳು ಸೇರಿ ಬೃಹತ್​ ಸಮಾವೇಶ ನಡೆಸಿದ್ದರು. ಮುಂದಿನ ಮುಖ್ಯಮಂತ್ರಿಯಾಗಿ ಲಿಂಗಾಯಿತರನ್ನೇ ಆಯ್ಕೆ ಮಾಡಬೇಕು ಎಂದು ವೀರಶೈವ-ಲಿಂಗಾಯತ ಸ್ವಾಮೀಜಿಗಳಿಂದಲೂ ಬಿಜೆಪಿಗೆ ಒತ್ತಡ ಎದುರಾಗಿದೆ. ಲಿಂಗಾಯತ ಮತಬ್ಯಾಂಕ್ ಬಿಜೆಪಿಯ ಬಳಿ  ಉಳಿಸಿಕೊಳ್ಳಬೇಕೆಂದರೆ ಲಿಂಗಾಯತರನ್ನೆ ಸಿಎಂ ಮಾಡಬೇಕಾಗಿದೆ ಹಾಗೂ ವಿಪಕ್ಷಗಳ ಬಾಯಿ ಮುಚ್ಚಿಸಬೇಕಾಗಿದೆ. ಲಿಂಗಾಯತ ವಿರೋಧಿ ಕಳಂಕದಿಂದ ತಕ್ಷಣಕ್ಕೆ ತಪ್ಪಿಸಿಕೊಳ್ಳುವುದು ಬಿಜೆಪಿ ಹೈಕಮಾಂಡಿಗೆ ತಲೆನೋವಾಗಿ ಪರಿಣಮಿಸಿದೆ.
  ಇದೇ ಕಾರಣಕ್ಕೆ ಲಿಂಗಾಯತರೊಬ್ಬರು ಸಿಎಂ ಆಗೋದು ನಿಶ್ಚಿತ ಎಂದು ಬಿಜೆಪಿಯ ಮೂಲ ಹೇಳಿವೆ.

  ಇದನ್ನೂ ಓದಿ: BS Yediyurappa Resigns: ಬಿ.ಎಸ್.ಯಡಿಯೂರಪ್ಪರ ರಾಜೀನಾಮೆ ನೀಡಿದ್ದರ ಹಿಂದಿನ 5 ಕಾರಣಗಳು ಇಲ್ಲಿವೆ..!

  ಸಿಎಂ ರೇಸ್​ನಲ್ಲಿ ಇರುವ ಲಿಂಗಾಯತ ನಾಯಕರುಗಳು ಯಾರು?

  ವೀರಣ್ಣ ಚರಂತಿಮಠ, ಮುರುಗೇಶ್ ನಿರಾಣಿ, ಅರವಿಂದ ಬೆಲ್ಲದ್, ಬಸವರಾಜ್ ಬೊಮ್ಮಾಯಿ ಮತ್ತು ಬಸನಗೌಡ ಪಾಟೀಲ ಯತ್ನಾಳ್. ಇವರಲ್ಲಿ ವೀರಣ್ಣ ಚರಂತಿಮಠ ಅವರ ಹೆಸರು ಹೊಸದಾಗಿ ಕೇಳಿಬರುತ್ತಿದೆ. ಅಲ್ಲದೇ ಮೊದಲಿನಿಂದಲು ಮುರುಗೇಶ್​ ನಿರಾಣಿ ಹಾಗೂ ಬಸವರಾಜ್​ ಬೊಮ್ಮಾಯಿ ಅವರ ಹೆಸರು ಮುಂಚೂಣಿಯಲ್ಲಿದೆ. ಯಡಿಯೂರಪ್ಪ ಅವರ ಒಲವು ಕೂಡ ಗೃಹ ಸಚಿವ ಬೊಮ್ಮಾಯಿ ಅವರ ಮೇಲೆ ಇದೆ ಎಂದೇ ಹೇಳಬಹುದು. ಪಂಚಮಸಾಲಿಗಳ ಪ್ರಬಲ ನಾಯಕ ನಿರಾಣಿ ಅವರು ಇತ್ತೀಚೆಗೆ ನಡೆದ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಜೊತೆಗೆ ಬಿಎಸ್​ವೈ ವಿರುದ್ದ ಬಹಿರಂಗವಾಗಿ ಯುದ್ದ ಸಾರಿದ್ದ ಬಸನಗೌಡ ಪಾಟೀಲ ಯತ್ನಾಳ್​, ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿ ನಾಯಕ ಅಲ್ಲದೇ ಒಮ್ಮೆ ಕೇಂದ್ರ ಸಚಿವರಾಗಿದ್ದವರು. ಆದ ಕಾರಣ ಇಷ್ಟು ಜನ ಲಿಂಗಾಯತ ನಾಯಕರು ಸಿಎಂ ರೇಸ್​ನಲ್ಲಿ ಕಾಣಿಸಿಕೊಂಡಿದ್ದು ಹೈಕಮಾಂಡ್​ ಕೃಪೆ ಯಾರಿಗೆ ಒಲಿಯಲಿದೆ ಎನ್ನುವುದು ಮಾತ್ರ ನಿಗೂಡ!?

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: