Bitcoin: ಕರ್ನಾಟಕದಲ್ಲಿ ಬಿಟ್‌ಕಾಯಿನ್ ಹಗರಣದ ತನಿಖೆಯ ಕುರಿತು PMO ಪರಿಶೀಲನೆ..

Karnataka Bitcoin Scam: ಕರ್ನಾಟಕದ ರಾಜಕೀಯ ಪ್ರಮುಖರು ಈ ಹಗರಣದಲ್ಲಿ ಭಾಗಿಯಾಗಿದ್ದು ಈ ಕುರಿತು ವಿವರವಾದ ತನಿಖೆ ಕೈಗೊಳ್ಳಬೇಕೆಂದು ವಿನಂತಿಸಿ ಅಜ್ಞಾತ ಪತ್ರವೊಂದನ್ನು ಪ್ರಧಾನ ಮಂತ್ರಿ ಕಚೇರಿ ಸ್ವೀಕರಿಸಿದೆ ಎನ್ನಲಾಗಿದೆ.

Bitcoin / ಬಿಟ್‌ಕಾಯಿನ್

Bitcoin / ಬಿಟ್‌ಕಾಯಿನ್

 • Share this:
  Karnataka bitcoin scam: ಇತ್ತೀಚಿನ ದಿನಗಳಲ್ಲಿ ಕರ್ನಾಟಕ (Karnataka) ರಾಜಕೀಯದ ನಿಯಂತ್ರಣದಲ್ಲಿರುವ ಆಪಾದಿತ ಬಿಟ್‌ಕಾಯಿನ್ (Bitcoin) ಹಗರಣದ ಕುರಿತು ಸಾಮಾಜಿಕ ಕಾರ್ಯಕರ್ತರಿಂದ ಹಾಗೂ ಅನಾಮಧೇಯ ವ್ಯಕ್ತಿಗಳಿಂದ ಪ್ರಕರಣದ ಸಮಗ್ರ ತನಿಖೆಯಾಗಬೇಕೆಂದು ಕೋರಿ ಪ್ರಧಾನ ಮಂತ್ರಿಗಳ ಕಚೇರಿಯು ಹಲವಾರು ಪತ್ರಗಳನ್ನು ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವ ಕೇಂದ್ರ ಏಜೆನ್ಸಿಗಳು ಪ್ರಧಾನಿಗಳ ಕಚೇರಿಗೆ ತನಿಖೆಯ ವರದಿಗಳನ್ನು ತಲುಪಿಸುತ್ತಿದೆ ಎಂಬುದಾಗಿ ಮಾಹಿತಿ ದೊರಕಿದೆ. ಅಕ್ಟೋಬರ್ 19ರಂದು ಸಾಮಾಜಿಕ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ಕ್ರಿಪ್ಟೋ ಕರೆನ್ಸಿಯ (cryptocurrency) ಬೆದರಿಕೆ ಹಾಗೂ ಅದನ್ನು ನಿರ್ಬಂಧಿಸುವ ಕುರಿತು ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರಿಗೆ (Prime Minister Narendra Modi) ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲೇ ನಾಗರಿಕ ಹಕ್ಕುಗಳ ಸಾಮಾಜಿಕ ಸಂಸ್ಥೆಯು ಅಕ್ಟೋಬರ್ 25ರಂದು ಪ್ರಕರಣವನ್ನು ಸಿಬಿಐ, ಕಂದಾಯ ಗುಪ್ತಚರ ನಿರ್ದೇಶನಾಲಯ, ಜಾರಿ ನಿರ್ದೇಶನಾಲಯ ಮತ್ತು NIAಗೆ ಶಿಫಾರಸು ಮಾಡುವಂತೆ ಮೋದಿಯವರನ್ನು ವಿನಂತಿಸಿದೆ ಎಂದು ತಿಳಿದು ಬಂದಿದೆ.

  ಕರ್ನಾಟಕದ ರಾಜಕೀಯ ಪ್ರಮುಖರು ಈ ಹಗರಣದಲ್ಲಿ ಭಾಗಿಯಾಗಿದ್ದು ಈ ಕುರಿತು ವಿವರವಾದ ತನಿಖೆ ಕೈಗೊಳ್ಳಬೇಕೆಂದು ವಿನಂತಿಸಿ ಅಜ್ಞಾತ ಪತ್ರವೊಂದನ್ನು ಪ್ರಧಾನ ಮಂತ್ರಿ ಕಚೇರಿ ಸ್ವೀಕರಿಸಿದೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಭಾರದ್ವಾಜ್ ,ನನ್ನ ಪತ್ರದ ನಂತರ ಪ್ರಧಾನ ಮಂತ್ರಿ ಕಚೇರಿಯು ಏಜೆನ್ಸಿಗಳು ಹಾಗೂ ವಿಭಾಗಗಳನ್ನು ಎಚ್ಚರಿಸಿದ್ದು ಸಮಗ್ರ ತನಿಖೆಗೆ ಆದೇಶ ನೀಡಿದೆ ಎಂದು ತಿಳಿಸಿದ್ದಾರೆ. ಈ ಕುರಿತಂತೆ ಆರ್ಥಿಕ ವ್ಯವಹಾರಗಳ ಸಚಿವಾಲಯ ಮತ್ತು ಗೃಹ ವ್ಯವಹಾರಗಳ ಸಚಿವಾಲಯದಿಂದ ಸ್ವೀಕೃತಿ ಸ್ವೀಕರಿಸಿದ್ದೇನೆ ಎಂದು ತಿಳಿಸಿದ್ದಾರೆ.

  ಪ್ರಧಾನ ಮಂತ್ರಿ ಕಚೇರಿಯು ತನಿಖೆಯ ಸುಧಾರಣೆಗಳ ಕುರಿತು ಕೂಲಂಕುಷವಾಗಿ ವೀಕ್ಷಣೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿದೆ. ಪ್ರಕರಣದ ಕುರಿತಂತೆ ರಾಜಕೀಯ ಅಂಶಗಳನ್ನು ಹಾಗೂ ರಾಜಕಾರಣಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಕುರಿತು ಸಮೀಕ್ಷೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿದೆ.

  Read also: Puneeth Rajkumar: ಮತ್ತೊಂದು ಹಂತ ತಲುಪಿದ ಅಪ್ಪು ಸಾವಿನ ನಿಗೂಢತೆ!

  ಬಿಟ್‌ಕಾಯಿನ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಶ್ರೀಕೃಷ್ಣ ರಮೇಶ್ ಆಲಿಯಾಸ್ ಶ್ರೀಕಿ ಕಳೆದ 5 - 6 ವರ್ಷಗಳಿಂದ ಸಾವಿರಾರು ಬಿಟ್‌ಕಾಯಿನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. 25ರ ಹರೆಯದ ಶ್ರೀಕೃಷ್ಣ ಸಾಫ್ಟ್‌ವೇರ್ ಪ್ರೊಗ್ರಾಮರ್ ಆಗಿದ್ದು ಜಯನಗರ ನಿವಾಸಿಯಾಗಿದ್ದಾರೆ ಎಂಬುದು ತಿಳಿದು ಬಂದಿದೆ.  Read also: Petrol, Diesel Price Today: ಇವತ್ತಿನ ಪೆಟ್ರೋಲ್‌, ಡೀಸೆಲ್‌ ದರ: ಹಲವು ಜಿಲ್ಲೆಗಳಲ್ಲಿ ಏರಿಳಿತ

  ಈ ಹಗರಣದಲ್ಲಿ ಶ್ರೀಕೃಷ್ಣನಿಗೆ ಆತನ ಸ್ನೇಹಿತರು ಇನ್ನು ಕೆಲವು ಸಹಚರರು ಸಹಾಯ ಮಾಡಿದ್ದಾರೆ ಎಂಬ ಆರೋಪ ಕೂಡ ಇದೆ. ಶ್ರೀಕೃಷ್ಣ ಬಿಟ್‌ಕಾಯಿನ್‌ಗಳನ್ನು ಬಳಸಿಕೊಂಡು ಡಾರ್ಕ್ ವೆಬ್‌ನಿಂದ ಡ್ರಗ್ಸ್ ಖರೀದಿಸಿ ನಂತರ ಚಾಮರಾಜಪೇಟೆಯ ವಿದೇಶಿ ಅಂಚೆ ಕಚೇರಿಗೆ ತಲುಪಿಸುತ್ತಿದ್ದರು. ತದನಂತರ ಆತ ಇಲ್ಲದಿದ್ದರೆ ಆತನ ಸಹಚರರು ಅಂಚೆ ಕಚೇರಿಯಿಂದ ಸರಕುಗಳನ್ನು ಸಂಗ್ರಹಿಸಿ ಕೆಲವೊಮ್ಮೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಇಲ್ಲದಿದ್ದರೆ ಸೇವಿಸುತ್ತಿದ್ದರು ಎಂಬುದಾಗಿ ಮೂಲಗಳು ತಿಳಿಸಿವೆ.

  ಬಿಟ್‌ಕಾಯಿನ್ ಹಗರಣವು ಪ್ರಸ್ತುತ ರಾಜಕೀಯ ಹಾಗೂ ಪೊಲೀಸ್ ವಿಭಾಗದಲ್ಲಿ ಸಂಚಲನ ಮೂಡಿಸಿದ್ದು ಈ ಕುರಿತಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಹತ್ವದ ಷಡ್ಯಂತ್ರ ನಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ.
  First published: