• Home
  • »
  • News
  • »
  • state
  • »
  • Karnataka - Bharath Gaurav Kashi Darshan: 8 ದಿನಗಳ ಕಾಶಿ ದರ್ಶನ ಪ್ಯಾಕೇಜ್‌; ಟಿಕೆಟ್​ ಬುಕ್ಕಿಂಗ್ ಆರಂಭ

Karnataka - Bharath Gaurav Kashi Darshan: 8 ದಿನಗಳ ಕಾಶಿ ದರ್ಶನ ಪ್ಯಾಕೇಜ್‌; ಟಿಕೆಟ್​ ಬುಕ್ಕಿಂಗ್ ಆರಂಭ

ಕಾಶಿ ಯಾತ್ರೆ

ಕಾಶಿ ಯಾತ್ರೆ

ಟ್ರೈನ್‌ ದರ, ಪ್ರವಾಸಿ ಸ್ಥಳಗಳಲ್ಲಿ ಅಗತ್ಯವಿರುವ ಬಸ್‌ ವ್ಯವಸ್ಥೆ, ಉಳಿದುಕೊಳ್ಳಲು ಹೋಟೇಲ್‌, ಮತ್ತು 8 ದಿನಗಳಲ್ಲಿ ಊಟ ಮತ್ತು ತಿಂಡಿ ವ್ಯವಸ್ಥೆ ಹಾಗೂ ವಿಮೆಯನ್ನು ಸಹ ಈ ಪ್ಯಾಕೇಜ್‌ ಒಳಗೊಂಡಿರಲಿದೆ.

  • Share this:

ಕರ್ನಾಟಕ ಸರ್ಕಾರದ (Karnataka Government) ಮುಜರಾಯಿ ಇಲಾಖೆಯ (Muzrai Department) ಮಹತ್ವಾಕಾಂಕ್ಷಿ ಯೋಜನೆ ಕರ್ನಾಟಕ- ಭಾರತ್‌ ಗೌರವ್‌ ಕಾಶಿ ದರ್ಶನ (Karnataka - Bharath Gaurav Kashi Darshan) ಪ್ಯಾಕೇಜ್‌ ಟೂರ್‌ ಗೆ ಬುಕ್ಕಿಂಗ್‌  (Ticket Booking) ಪ್ರಾರಂಭವಾಗಿದೆ. ಈ ಯೋಜನೆಯ ಮೊದಲ ರೈಲು ನವೆಂಬರ್‌ 11 ರಂದು ಬೆಂಗಳೂರಿನಿಂದ ಹೊರಡಲಿದ್ದು, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಚಾಲನೆ ನೀಡುವ ನಿಟ್ಟಿನಲ್ಲಿ ಯೋಜಿಸಲಾಗುತ್ತಿದೆ ಎಂದು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ (Minister Shashikala Jolle) ಮಾಹಿತಿ ನೀಡಿದ್ದಾರೆ.


ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಸಚಿವ ಶಶಿಕಲಾ ಜೊಲ್ಲೆ, ಮಹತ್ವಾಕಾಂಕ್ಷಿ ಯೋಜನೆಯ ಬುಕ್ಕಿಂಗ್‌ ಪ್ರಾರಂಭವಾಗಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮುತುವರ್ಜಿಯಿಂದ ಮರು ನಿರ್ಮಾಣವಾಗಿರುವ ʼದಿವ್ಯ ಕಾಶಿ - ಭವ್ಯಕಾಶಿʼ ಯನ್ನ ರಾಜ್ಯದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಕಾಶಿ ವಿ‍ಶ್ವನಾಥನ ದರ್ಶನ  ಪಡೆಯಲಿ ಎನ್ನುವ ಉದ್ದೇಶದಿಂದ ಈ ವಿಶೇಷ ಪ್ಯಾಕೇಜ್‌ ಟೂರನ್ನು ಆಯೋಜಿಸಲಾಗಿದೆ ಎಂದರು.


ನವೆಂಬರ್ 11ರಿಂದ ಹೊರಡಲಿದೆ ರೈಲು


ಕೇಂದ್ರ ಸರಕಾರದ ಭಾರತ್‌ ಗೌರವ್‌ ಯೋಜನೆಯ (Bharath Gaurav) ಅಡಿಯಲ್ಲಿ ರೈಲನ್ನು ಮುಜರಾಯಿ ಇಲಾಖೆ ಗುತ್ತಿಗೆಗೆ ಪಡೆದು ಈ ಯೋಜನೆ ಕಾರ್ಯತಗೊಳಿಸುತ್ತಿದ್ದಾರೆ. ಕೇಂದ್ರ ರೈಲ್ವೇ ಸಚಿವರ ಸಂಪೂರ್ಣ ಸಹಕಾರದೊಂದಿಗೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು ಮೊದಲ ರೈಲು ನವೆಂಬರ್‌ 11 ರಂದು ಬೆಂಗಳೂರಿನಿಂದ ಹೊರಡಲಿದೆ ಎಂದು ಶಶಿಕಲಾ ಜೊಲ್ಲೆ ಮಾಹಿತಿ ನೀಡಿದರು.


Karnataka Bharath Gaurav Kashi Darshana tickets booking open mrq
ರೈಲು ಪರಿಶೀಲನೆ ನಡೆಸಿದ ಸಚಿವ ಶಶಿಕಲಾ ಜೊಲ್ಲೆ


ಉತ್ತರ ಕರ್ನಾಟಕದಲ್ಲೂ ರೈಲು ನಿಲುಗಡೆ


ಬೆಂಗಳೂರಿನಿಂದ ಹೊರಡುವ ಈ ರೈಲನ್ನು ಹತ್ತಲು ಉತ್ತರ ಕರ್ನಾಟಕದ ಪ್ರಮುಖ ನಿಲ್ದಾಣಗಳಲ್ಲೂ ಅವಕಾಶ ಕಲ್ಪಿಸಲಾಗಿದೆ. ಈ ರೈಲು ಬೆಂಗಳೂರು, ಬಿರೂರ್‌, ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ರಾಯಭಾಗ ಮಾರ್ಗವಾಗಿ ಕಾಶಿ, ಅಯೋಧ್ಯ ಮತ್ತು ಪ್ರಯಾಗರಾಜ್‌ ಗೆ ಸಂಚರಿಸಲಿದೆ.


ಐಆರ್‌ಸಿಟಿಸಿ ಸಹಭಾಗಿತ್ವದಲ್ಲಿ ಎಲ್ಲ ವಿಶೇಷ ಪ್ಯಾಕೇಜ್‌


ಅತ್ಯಂತ ಕಡಿಮೆ ವೆಚ್ಚದಲ್ಲಿ ಕಾಶಿ ವಿಶ್ವನಾಥ ಹಾಗೂ ಅಯೋಧ್ಯ ರಾಮಲಲ್ಲಾ ದೈವ ಭೂಮಿಯ ವೈಭವ ಸವಿಯುವ ಅವಕಾಶ ಇದಾಗಿದೆ. 8 ದಿನಗಳ ಕಾಲದ ಈ ಟೂರ್‌ ಪ್ಯಾಕೇಜ್‌ನಲ್ಲಿ ಎಲ್ಲಾ ಸವಲತ್ತುಗಳನ್ನು ಒಳಗೊಂಡಿರಲಿದೆ.


ಇದನ್ನೂ ಓದಿ:  CM Ibrahim: ಶಿವಮೊಗ್ಗದಲ್ಲಿ ನಡೆಯೋ ಕೊಲೆ, ಗಲಭೆಗಳಿಗೆ ಈಶ್ವರಪ್ಪ ಕಾರಣ; ಸಿ ಎಂ ಇಬ್ರಾಹಿಂ ಆರೋಪ


ವಿಮೆ ಒಳಗೊಂಡಿದೆ ಪ್ಯಾಕೇಜ್


ಟ್ರೈನ್‌ ದರ, ಪ್ರವಾಸಿ ಸ್ಥಳಗಳಲ್ಲಿ ಅಗತ್ಯವಿರುವ ಬಸ್‌ ವ್ಯವಸ್ಥೆ, ಉಳಿದುಕೊಳ್ಳಲು ಹೋಟೇಲ್‌, ಮತ್ತು 8 ದಿನಗಳಲ್ಲಿ ಊಟ ಮತ್ತು ತಿಂಡಿ ವ್ಯವಸ್ಥೆ ಹಾಗೂ ವಿಮೆಯನ್ನು ಸಹ ಈ ಪ್ಯಾಕೇಜ್‌ ಒಳಗೊಂಡಿರಲಿದೆ.


Karnataka Bharath Gaurav Kashi Darshana tickets booking open mrq
ರೈಲು ಪರಿಶೀಲನೆ ನಡೆಸಿದ ಸಚಿವ ಶಶಿಕಲಾ ಜೊಲ್ಲೆ


ಕರ್ನಾಟಕ ಸರಕಾರದಿಂದ 5 ಸಾವಿರ ರೂಪಾಯಿಗಳ ಸಹಾಯಧನ


ಐಆರ್‌ಸಿಟಿಸಿ ಸಹಭಾಗಿತ್ವದ ಈ ಟೂರ್‌ ಪ್ಯಾಕೇಜ್‌ ತಗೆದುಕೊಳ್ಳುವ ಪ್ರತಿ ವ್ಯಕ್ತಿಗೂ 5 ಸಾವಿರ ರೂಪಾಯಿಗಳ ಸಹಾಯಧನವನ್ನ ಕರ್ನಾಟಕ ಸರಕಾರ ನೀಡಲಿದೆ. ಈ ಪ್ಯಾಕೇಜ್‌ ನ ದರ ಮೂಲತಃ 20 ಸಾವಿರ ರೂಪಾಯಿಗಳಾಗಿದ್ದು, ಪ್ರಯಾಣಿಕರು ಕೇವಲ 15,000 ರೂಪಾಯಿಗಳನ್ನು ನೀಡಿದರೆ ಸಾಕು. ಉಳಿದ 5000 ರೂಗಳನ್ನು ಕರ್ನಾಟಕ ಸರಕಾರ ಸಹಾಯಧನದ ರೂಪದಲ್ಲಿ ನೀಡಲಿದೆ.


ಇದನ್ನೂ ಓದಿ:  Ballari To Bengaluru: ಬಳ್ಳಾರಿಯಿಂದ ಬೆಂಗಳೂರು ಇನ್ನಷ್ಟು ಹತ್ತಿರ!


ಮಹತ್ವಾಕಾಂಕ್ಷಿ ಯೋಜನೆಯ ಬುಕ್ಕಿಂಗ್‌ ಈಗಾಗಲೇ ಪ್ರಾರಂಭ


ಕರ್ನಾಟಕ – ಭಾರತ್‌ ಗೌರವ್‌ ಕಾಶಿ ದರ್ಶನ ರೈಲು ಯೋಜನೆಯ ಬುಕ್ಕಿಂಗ್‌ ಈಗಾಗಲೇ ಪ್ರಾರಂಭವಾಗಿದೆ. ಐಆರ್‌ಸಿಟಿಸಿ (IRCTC) ಹಾಗೂ ಐಟಿಎಂಎಸ್‌  (ITMS) ವೆಬ್‌ಸೈಟ್ ಗಳ ಮೂಲಕ ಬುಕ್ಕಿಂಗ್‌ ಗೆ ಅವಕಾಶ ನೀಡಲಾಗಿದ್ದು, ಈಗಾಗಲೇ ಹಲವಾರು ಜನರು ಬುಕ್ಕಿಂಗ್‌ ಮಾಡಿಕೊಳ್ಳುತ್ತಿದ್ದಾರೆ.


ಈ ಲಿಂಕ್‌ ಮೂಲಕ ಬುಕ್ಕಿಂಗ್‌ ಮಾಡಬಹುದು- https://www.irctctourism.com/pacakage_description?packageCode=SZKBG01

Published by:Mahmadrafik K
First published: