• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bangalore: ರಾತ್ರಿ ಇದ್ದ ಬಸ್‌ ನಿಲ್ದಾಣ ಬೆಳಗ್ಗೆ ಆಗುವಷ್ಟರಲ್ಲಿ ಮಾಯ! ಈ ಘಟನೆ ನಡೆದಿದ್ದು ಎಲ್ಲಿ?

Bangalore: ರಾತ್ರಿ ಇದ್ದ ಬಸ್‌ ನಿಲ್ದಾಣ ಬೆಳಗ್ಗೆ ಆಗುವಷ್ಟರಲ್ಲಿ ಮಾಯ! ಈ ಘಟನೆ ನಡೆದಿದ್ದು ಎಲ್ಲಿ?

ಬಸ್ಸು

ಬಸ್ಸು

ಕಳ್ಳತನಗಳ ಪಟ್ಟಿಗೆ ಬೆಂಗಳೂರಿನ ಬಸ್‌‌ ಸ್ಟ್ಯಾಂಡ್‌ಗಳು ಸಹ ಸೇರ್ಪಡೆಯಾದಂತೆ ಕಾಣುತ್ತಿದೆ. ಏಕೆಂದರೆ ರಾತ್ರಿ ಇದ್ದ ಬಸ್‌ ಸ್ಟ್ಯಾಂಡ್‌ಗಳು ಬೆಳಗ್ಗೆ ಸೂರ್ಯ ಹುಟ್ಟೋ ಮುನ್ನ ನಾಪತ್ತೆಯಾಗುತ್ತಿವೆ!

  • Trending Desk
  • 4-MIN READ
  • Last Updated :
  • Bangalore, India
  • Share this:
  • published by :

ಸಿಲಿಕಾನ್‌ ಸಿಟಿ ( Silicon City) ಬೆಂಗಳೂರಲ್ಲಿ ಮನೆಗಳ್ಳತನ, ಬೈಕ್‌, ವಸ್ತುಗಳ ಕಳ್ಳತನ, ಪಿಕ್‌ಪಾಕೆಟ್‌ ಸಾಮಾನ್ಯವಾಗಿವೆ. ಆದರೆ ಈ ಕಳ್ಳತನಗಳ ಪಟ್ಟಿಗೆ ಬೆಂಗಳೂರಿನ ಬಸ್‌‌ ಸ್ಟ್ಯಾಂಡ್‌ಗಳು ಸಹ ಸೇರ್ಪಡೆಯಾದಂತೆ ಕಾಣುತ್ತಿದೆ. ಏಕೆಂದರೆ ರಾತ್ರಿ ಇದ್ದ ಬಸ್‌ ಸ್ಟ್ಯಾಂಡ್‌ಗಳು ಬೆಳಗ್ಗೆ ಸೂರ್ಯ ಹುಟ್ಟೋ ಮುನ್ನ ನಾಪತ್ತೆಯಾಗುತ್ತಿವೆ. ಬೆಂಗಳೂರಿನ (Bengaluru) ಕಲ್ಯಾಣ ನಗರದ ಬಸ್‌ ನಿಲ್ದಾಣ ನಾಪತ್ತೆಯಾಗಿದ್ಯಂತೆ. ಹೌದು, ಹೀಗೆ ಬಸ್‌ಸ್ಟ್ಯಾಂಡ್‌ಗಳು ನಾಪತ್ತೆ ಆಗುವ ಪ್ರಕರಣಗಳು ಇತ್ತೀಚೆಗೆ ತೀರನೇ ಹೆಚ್ಚುತ್ತಿವೆ. ಹೀಗೆ ನಾಪತ್ತೆಯಾಗುತ್ತಿರುವ ಬಸ್‌ ನಿಲ್ದಾಣಗಳ ಸಾಲಿಗೆ ಬೆಂಗಳೂರಿನ ಕಲ್ಯಾಣನಗರದ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ (HRBR Layout) ಇದ್ದ ಬಸ್ ನಿಲ್ದಾಣ ಸೇರ್ಪಡೆಯಾಗಿದೆ.


ಮೂರು ದಶಕಗಳಿಂದ ಇದ್ದ ಶೆಲ್ಟರ್‌ ಕಣ್ಮರೆ
ಹೌದು, ಕಲ್ಯಾಣ ನಗರದ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ 1990 ರಿಂದ ಬಳಕೆಯಲ್ಲಿದ್ದ ಇಲ್ಲಿನ ಬಸ್ ನಿಲ್ದಾಣ ಮಾರ್ಚ್ 10 ರಂದು ನಾಪತ್ತೆಯಾಗಿದೆ.  ಪ್ರಯಾಣಿಕರಿಗೆ ಅನುಕೂಲವಾಗುವಂತೆ ನಿರ್ಮಿಸುವ ಬಸ್‌ ನಿಲ್ದಾಣಗಳು ಕೂಡ ಸಾಕಷ್ಟಿವೆ. ಆದರೆ ಈ ನಿಲ್ದಾಣಗಳು ಕೆಲವರ ಅನೂಲಕಕ್ಕೆ ತಕ್ಕಂತೆ ಆಗಾಗ ನಾಪತ್ತೆಯಾಗುತ್ತಿವೆ.


ಬರೋಬ್ಬರಿ ಮೂರು ದಶಕಗಳಿಂದ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುತ್ತಿದ್ದ ಎಚ್‌ಆರ್‌ಬಿಆರ್ ಲೇಔಟ್‌ ನಿಲ್ದಾಣ ಕಾಣೆಯಾಗಿರುವುದು ಇಲ್ಲಿನ ನಾಗರಿಕರಿಗೆ ಆತಂಕ ಉಂಟು ಮಾಡಿದೆ. ವಾಣಿಜ್ಯ ಕಟ್ಟಡದ ಎದುರಿಗೆ ಇದ್ದ ಕಾರಣ ಬಸ್ ನಿಲ್ದಾಣ ಎತ್ತಂಗಡಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ಕೋಲಾರದಿಂದಲೂ ಟಿಕೆಟ್ ಕೇಳಿದ ಸಿದ್ದರಾಮಯ್ಯ


1990ರಲ್ಲಿ ಲಯನ್ಸ್ ಕ್ಲಬ್ ಈ ಏರಿಯಾಗೆ ಬಸ್‌ ನಿಲ್ದಾಣವನ್ನು ನಿರ್ಮಿಸಿ ಕೊಟ್ಟಿತ್ತು. ಇದು ನಮಗೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಟ್ಟಿತ್ತು, ಬಿಸಿಲು, ಮಳೆಯಲ್ಲಿ ಬಸ್‌ಗೆ ಕಾಯುವಾಗ ಈ ನಿಲ್ದಾಣ ಸಹಕಾರಿಯಾಗಿತ್ತು. ಆದರೆ ಈಗ ವಾಣಿಜ್ಯ ಸ್ಥಾಪನೆಗೆ ದಾರಿ ಮಾಡಿಕೊಡಲು ರಾತ್ರೋರಾತ್ರಿ ಅದನ್ನು ತೆಗೆಯಲಾಗಿದೆ ಎಂದು ಅಲ್ಲಿನ ನಿವಾಸಿಗಳು ಮಾಧ್ಯಮಗಳಿಗೆ ಹೇಳಿದ್ದಾರೆ.


ಪೊಲೀಸರಿಗೆ ಮತ್ತು ಸ್ಥಳೀಯ ಶಾಸಕರಿಗೆ ದೂರು
ಸದ್ಯ ಬಸ್ ಶೆಲ್ಟರ್ ಕಣ್ಮರೆ ಆದ ಹಿನ್ನೆಲೆ ಕಲ್ಯಾಣನಗರದ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಬಾಣಸವಾಡಿ ಪೊಲೀಸ್ ಠಾಣೆ, ಬಿಬಿಎಂಪಿ ಮುಖ್ಯ ಆಯುಕ್ತ ಹಾಗೂ ಕ್ಷೇತ್ರದ ಸ್ಥಳೀಯ ಶಾಸಕರಿಗೆ ದೂರು ನೀಡಲಾಗಿದೆ. ರಾತ್ರೋರಾತ್ರಿ ಯಾರೋ ಬಸ್ ನಿಲ್ದಾಣವನ್ನು ನೆಲಸಮ ಮಾಡಿದ್ದಾರೆ, ಈ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಎಂದು ಲಯನ್ಸ್ ಕ್ಲಬ್ ಆಫ್ ಏರಿಯಾದ ಮಾಜಿ ಅಧ್ಯಕ್ಷ ಮಹೇಶ್ವರಪ್ಪ ತಿಳಿಸಿದ್ದಾರೆ.


ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಅಧಿಕಾರಿಗಳು, ಬಸ್ ತಂಗುದಾಣವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತೆಗೆದುಹಾಕಿದೆ ಎಂದು ತಿಳಿಸಿದೆ. ಆದರೆ ಬಿಬಿಎಂಪಿ ಈವರೆಗೆ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


ಇದನ್ನೂ ಓದಿ:   ಅಳೆದು ತೂಗಿ ಬಿಡುಗಡೆಯಾಗಿರೋ 'ಕೈ' ಮೊದಲ ಪಟ್ಟಿಯ ವಿಶೇಷತೆಗಳೇನು?


ಬೆಂಗಳೂರಿನ ಈ ಬಸ್‌ ನಿಲ್ದಾಣಗಳು ನಾಪತ್ತೆಯಾಗುವುದು, ಕಳ್ಳತನವಾಗುವುದು ಇದೇ ಮೊದಲಲ್ಲ. ಕೆಲವರು ಅಲ್ಲಿನ ಸ್ಟೀಲ್‌, ಖುರ್ಚಿ ಮಾರಿ ಹಣ ಗಳಿಸಲು ಕಳ್ಳತನ ಮಾಡಿದರೆ, ಇನ್ನು ಕೆಲವು ಬಿಬಿಎಂಪಿ ಹಸ್ತಕ್ಷೇಪದಿಂದ ಕಣ್ಮರೆಯಾಗುತ್ತಿವೆ.


ಮೇ 2015 ರಲ್ಲಿ, ದೂಪನಹಳ್ಳಿ ಬಸ್ ನಿಲ್ದಾಣದ ಹೊರೈಜನ್ ಶಾಲೆಯ ಬಳಿಯ ಒಂದು ನಿಲ್ದಾಣದಲ್ಲಿ ಕಂಬಗಳು, ಕುರ್ಚಿಗಳು, ಮೇಲ್ಕಟ್ಟು, ಚಾವಣಿ ಸೇರಿದಂತೆ ಎಲ್ಲವನ್ನು ಕಳ್ಳತನ ಮಾಡಲಾಗಿತ್ತು. ಈ ಭಾಗದ ಆಗಿನ ಶಾಸಕರು ಮತ್ತೆ 2 ಲಕ್ಷ ರೂಪಾಯಿ ವೆಚ್ಚದಿಂದ ಮರುನಿರ್ಮಾಣ ಮಾಡಿದರು.




ಹಾಗೆಯೇ 2014ರಲ್ಲಿ ರಾಜರಾಜೇಶ್ವರಿನಗರದ ಬಿಇಎಂಎಲ್ ಲೇಔಟ್ 3ನೇ ಹಂತದಲ್ಲಿ 20 ವರ್ಷಗಳಷ್ಟು ಹಳೆಯದಾದ ಬಸ್ ನಿಲ್ದಾಣ ನಾಪತ್ತೆಯಾಗಿತ್ತು. ಬಿಬಿಎಂಪಿ ಬಸ್ ನಿಲ್ದಾಣವನ್ನು ಸ್ಟೀಲ್‌ ವಸ್ತುಗಳಿಗಾಗಿ ಯಾರೋ ಕಿಡಿಗೇಡಿಗಳು ಕದ್ದಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದರು.

top videos
    First published: