Lockdown: ಪೋಲೀಸರು ಜಪ್ತಿ ಮಾಡಿದ ವಾಹನ ವಾಪಸ್ ಪಡೆಯೋದು ಹೇಗೆ! ಇಲ್ಲಿದೆ ಫುಲ್ ಡೀಟೆಲ್ಸ್

Bangalore: ಕರ್ನಾಟಕ ಹೈಕೋರ್ಟ್​ ಈ ಬಗ್ಗೆ ಸೂಚನೆ ಹೊರಡಿಸಿದ್ದು, ಲಾಕ್​​ಡೌನ್​​ ಸಮಯದಲ್ಲಿ ವಶಪಡಿಸಿದ ವಾಹನವನ್ನು ಠಾಣೆ ಹಂತದಲ್ಲಿಯೇ ದಂಡ ಕಟ್ಟಿಕೊಂಡು ತೆಗೆದುಕೊಂಡು ಹೋಗಬಹುದಾಗಿದೆ. ಅವುಗಳನ್ನು ನ್ಯಾಯಾಲಯದ ತನಕ ತೆಗೆದುಕೊಂಡು ಬರುವ ಅಗತ್ಯವಿಲ್ಲ ಎಂದು ತಿಳಿಸಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಬೆಂಗಳೂರು, ಜೂನ್​ 09: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್​ಡೌನ್​ ಜಾರಿಯಲ್ಲಿದೆ. ನಿಯಮವನ್ನ ಗಾಳಿಗೆ ತೂರಿ ವಾಹನ ಮೂಲಕ ಅನಗತ್ಯ ಓಡಾಡುವ ಜನರನ್ನು ತಡೆಯಲು ಪೊಲೀಸರು ರಸ್ತೆಗಿಳಿದು ದಂಡ ವಿಧಿಸುವುದಲ್ಲದೆ, ವಾಹನವನ್ನು ವಶ ಪಡಿಸಿದ್ದಾರೆ. 1 ಲಕ್ಷಕ್ಕಿಂತ ಅಧಿಕ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೀಗ ಅವುಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಆದರೆ ಅದಕ್ಕಾಗಿ ನಿಯಮವೊಂದನ್ನು ಜಾರಿಗೆ ತಂದಿದ್ದು, ಆ ಮೂಲಕ ವಾಹನವನ್ನು ತೆಗೆದುಕೊಂಡು ಹೋಗಬಹುದಾಗಿದೆ.

    ಕರ್ನಾಟಕ ಹೈಕೋರ್ಟ್​ ಈ ಬಗ್ಗೆ ಸೂಚನೆ ಹೊರಡಿಸಿದ್ದು, ಲಾಕ್​​ಡೌನ್​​ ಸಮಯದಲ್ಲಿ ವಶಪಡಿಸಿದ ವಾಹನವನ್ನು ಠಾಣೆ ಹಂತದಲ್ಲಿಯೇ ದಂಡ ಕಟ್ಟಿಕೊಂಡು ತೆಗೆದುಕೊಂಡು ಹೋಗಬಹುದಾಗಿದೆ. ಅವುಗಳನ್ನು ನ್ಯಾಯಾಲಯದ ತನಕ ತೆಗೆದುಕೊಂಡು ಬರುವ ಅಗತ್ಯವಿಲ್ಲ ಎಂದು ತಿಳಿಸಿದೆ.

    ವಕೀಲರೊಬ್ಬರು ಈ ಬಗ್ಗೆ ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದು, ಎಲ್ಲಾ ವಾಹನದ ಮಾಲೀಕರು ಅದನ್ನು ಬಿಡಿಸಿಕೊಂಡು ಹೋಗಲು ಕೋರ್ಟ್​ಗೆ ಆಗಮಿಸಿದರೆ ಜನಜಂಗುಳಿಯಾಗುತ್ತದೆ. ವಾಹನ ನಿಲ್ಲಿಸಲು ಸ್ಥಳಾವಕಾಶ ಕೊರತೆ ಎದುರಿಸಲಿದೆ. ಠಾಣೆಯಲ್ಲಿಯೇ ವಾಹನವನ್ನು ದಂಡಕಟ್ಟಿ ತೆಗೆದುಕೊಂಡು ಹೋಗುವಂತೆ ಅವಕಾಶ ನೀಡಿ ಎಂದು ಅರ್ಜಿಯಲ್ಲಿ ಹೇಳಿದ್ದರು.

    ಮುಖ್ಯ ನ್ಯಾಯಮೂರ್ತಿ ಎ.ಎಸ್​ ಓಕಾ ನೇತೃತ್ವದ ವಿಭಾಗೀಯ ಪೀಠ ಈ ಬಗ್ಗೆ ವಿಚಾರಣೆ ನಡೆಸಿ, ನಿಗದಿತ ದಂಡವನ್ನು ಠಾಣೆ ಹಂತದಲ್ಲಿಯೇ ನೀಡಿ ವಾಹನವನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ.

    ಕೊರೊನಾ ಕೇಸ್​ ಹೆಚ್ಚಾಗಿದ್ದ ಸಮಯದಲ್ಲಿ ಸರ್ಕಾರ ಲಾಕ್​ಡೌನ್​​ ಘೋಷಿಸಿದೆ. ಜೂನ್ 14ರವರೆಗೆ ಲಾಕ್​ಡೌನ್​ ನಿಯಮ ಜಾರಿಯಲ್ಲಿದೆ. ಆದರೂ ಇದರ ನಡುವೆ ಜನರು ವಾಹನ ಮೂಲಕ ಓಡಾಟ ನಡೆಸುತ್ತಿದ್ದಾರೆ. ಹೀಗೆ ಅನಗತ್ಯ ಓಡಾಟ ಬಳಸಿಕೊಂಡಿದ್ದ  ಲಾರಿ, ಕಾರು, ಬೈಕ್​, ಸ್ಕೂಟರ್​ ಸೇರಿದಂತೆ 1.50 ಲಕ್ಷಕ್ಕೂ ಅಧಿಕ ವಾಹನವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
    Published by:Harshith AS
    First published: