• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Bandh: ಕರ್ನಾಟಕ ಬಂದ್ - ಬೆಂಗಳೂರಿನಲ್ಲಿ ಇಂದು ಎಲ್ಲೆಲ್ಲಿ ನಡೆಯುತ್ತಿದೆ ಪ್ರತಿಭಟನೆ?

Karnataka Bandh: ಕರ್ನಾಟಕ ಬಂದ್ - ಬೆಂಗಳೂರಿನಲ್ಲಿ ಇಂದು ಎಲ್ಲೆಲ್ಲಿ ನಡೆಯುತ್ತಿದೆ ಪ್ರತಿಭಟನೆ?

ರಾಮನಗರದಲ್ಲಿ ಪ್ರತಿಭಟನೆ ನಡೆದ ಒಂದು ದೃಶ್ಯ

ರಾಮನಗರದಲ್ಲಿ ಪ್ರತಿಭಟನೆ ನಡೆದ ಒಂದು ದೃಶ್ಯ

ಮೈಸೂರ್ ಬ್ಯಾಂಕ್ ಸರ್ಕಲ್ ಸುತ್ತಮುತ್ತ ಪ್ರದೇಶಗಳಲ್ಲಿ ಇಂದು ಹೆಚ್ಚು ಪ್ರತಿಭಟನಾ ಮೆರವಣಿಗೆಗಳು ನಡೆಯುತ್ತಿವೆ. ಆ ಕಡೆ ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ.

  • Share this:

ಬೆಂಗಳೂರು(ಡಿ. 05): ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಇಂದು ಕರೆ ನೀಡಿರುವ ಕರ್ನಾಟಕ ಬಂದ್ ಬಹುತೇಕ ಶಾಂತಿಯುತವಾಗಿ ನಡೆಯುತ್ತಿದೆ. ಅನೇಕ ಸಂಘಟನೆಗಳು ನೈತಿಕ ಬೆಂಬಲ ನೀಡಿವೆ. ಆದರೆ, ಕರವೇ ಮೊದಲಾದ ಸಂಘಟನೆಗಳಿಂದ ವಿವಿಧ ಕಡೆ ಪ್ರತಿಭಟನೆಗಳನ್ನ ಹಮ್ಮಿಕೊಳ್ಳಲಾಗಿದೆ. ರಾಜಧಾನಿ ನಗರದ ಹೃದಯಭಾಗದಲ್ಲಿ ಕೆಲ ಪ್ರತಿಭಟನಾ ಮೆರವಣಿಗೆಗಳಿವೆ. ಇಲ್ಲಿ ಸುತ್ತಮುತ್ತ ಬಹುತೇಕ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದೆ.


ಎಲ್ಲೆಲ್ಲಿ ಪ್ರತಿಭಟನೆ?:
* ವಿವಿಧ ಕನ್ನಡಪರ ಸಂಘಟನೆಗಳು ಮೈಸೂರು ಬ್ಯಾಂಕ್ ಸರ್ಕಲ್​ನಿಂದ ಫ್ರೀಡಂ ಪಾರ್ಕ್​ವರೆಗೆ ಬೃಹತ್ ರ್ಯಾಲಿ ನಡೆಸಿ ಪ್ರತಿಭಟಿಸಲಿವೆ.
* ಕರ್ನಾಟಕ ರಕ್ಷಣಾ ವೇದಿಕೆಯಿಂದ ವಿವಿಧೆಡೆ ರೈಲ್ವೆ ನಿಲ್ದಾಣ ಮುತ್ತಿಗೆ, ಮೆಟ್ರೋ ನಿಲ್ದಾಣ ಮುತ್ತಿಗೆ, ಸರ್ಕಾರಿ ಕಚೇರಿ ಮುತ್ತಿಗೆ, ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ, ತಹಶೀಲ್ದಾರ್ ಕಚೇರಿ ಮುತ್ತಿಗೆ ನಡೆಯಲಿದೆ.
* ಕರವೇ ಪ್ರವೀಣ್ ಶೆಟ್ಟಿ ಬಣದವರು ಮೌರ್ಯ ಸರ್ಕಲ್​ನಿಂದ ರಾಜಭವನದವರೆಗೆ ಬೃಹತ್ ಮೆರವಣಿಗೆ ನಡೆಸಲಿದ್ದಾರೆ.


ಇದನ್ನೂ ಓದಿ: Karnataka Bandh: ಇಂದು ಕರ್ನಾಟಕ ಬಂದ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ


ಇಂದಿನ ಕರ್ನಾಟಕ ಬಂದ್​ಗೆ ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ಇದೆ. ಕೆಆರ್ ಮಾರುಕಟ್ಟೆ ಸೇರಿದಂತೆ ಹಲವು ಮಾರುಕಟ್ಟೆಗಳು ಎಂದಿನಂತೆ ಕಾರ್ಯನಿರ್ವಹಿಸಿವೆ. ಮಾರುಕಟ್ಟೆ ಬಿಟ್ಟರೆ ಉಳಿದಂತೆ ಅನೇಕ ಕಡೆ ಬಿಕೋ ವಾತಾವರಣ ಕಂಡುಬರುತ್ತಿದೆ. ಬಸ್, ಆಟೋ ಸಂಚಾರ ಇದ್ದರೂ ಜನ ಸಂಚಾರ ವಿರಳವಾಗಿದೆ. ಬಸ್​ಗಿಂತ ಮೆಟ್ರೋದಲ್ಲಿ ಹೆಚ್ಚಿನ ಪ್ರಯಾಣಿಕರಿದ್ಧಾರೆ. ಇನ್ನು, ಕನ್ನಡಪರ ಸಂಘಟನೆಗಳು ಎಲ್ಲಿಯೂ ಬಲವಂತವಾಗಿ ಬಂದ್ ಮಾಡಿಸಿದ ಘಟನೆಗಳೂ ವರದಿಯಾಗಿಲ್ಲ.

First published: