• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Bandh: ಚಾಮರಾಜನಗರದಲ್ಲಿ ಬಂದ್ ಸಂಪೂರ್ಣ ವಿಫಲ; ಕೇವಲ ಪ್ರತಿಭಟನೆಗೆ ಸೀಮಿತ

Karnataka Bandh: ಚಾಮರಾಜನಗರದಲ್ಲಿ ಬಂದ್ ಸಂಪೂರ್ಣ ವಿಫಲ; ಕೇವಲ ಪ್ರತಿಭಟನೆಗೆ ಸೀಮಿತ

ಪ್ರತಿಭಟನೆ

ಪ್ರತಿಭಟನೆ

ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ. ಕನ್ನಡ ಸಂಘಟನೆಗಳು ಹೊರತಪಡಿಸಿದರೆ ಇತರೆ ಯಾವುದೇ ಸಂಘ ಸಂಸ್ಥೆಗಳು ಬಂದ್ ಗೆ ಬೆಂಬಲ ಸೂಚಿಸಿರಲಿಲ್ಲ. ಅಲ್ಲದೆ ಬೆಳಿಗ್ಗೆಯೇ ಕನ್ನಡ ಕಾರ್ಯಕರ್ತರನ್ನು ಬಂಧಿಸಿದ್ದರಿಂದ ಬಂದ್ ಗೆ ಹಿನ್ನಡೆಯುಂಟಾಯ್ತು.

ಮುಂದೆ ಓದಿ ...
  • Share this:

ಚಾಮರಾಜನಗರ (ಡಿ. 05): ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಇಂದು ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಚಾಮರಾಜನಗರದಲ್ಲಿ ಪ್ರತಿಭಟನೆಗೆ ಸೀಮಿತವಾಗಿದೆ.  ಬಂದ್ ಸಂಪೂರ್ಣ ವಿಫಲವಾಗಿದ್ದು,  ಚಾಮರಾಜನಗರದಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿದೆ. ಬೆಳಿಗ್ಗೆ ಆರು ಗಂಟೆಗೆ ನಗರದ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ  ಕನ್ನಡಪರ  ಸಂಘಟನೆಗಳ ಕಾರ್ಯಕರ್ತರು ಕನ್ನಡ ಬಾವುಟಗಳನ್ನು ಹಿಡಿದು ಪ್ರತಿಭಟನೆ ಆರಂಭಿಸಿದರು.  ರಾಜ್ಯ ಸರ್ಕಾದ ವಿರುದ್ದ ಧಿಕ್ಕಾರದ ಘೋಷಣೆ ಕೂಗುತ್ತಾ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆಯ ಕಾವು ಹೆಚ್ಚಿಸಲು ಪ್ರಯತ್ನಿಸಿದರು. ಸುಮಾರು ಒಂದು ಗಂಟೆ ಕಾಲ ಪ್ರತಿಭಟನೆ ನಡೆಸಿದ ಅವರು ಬಳಿಕ ಉರಿಯುತ್ತಿರುವ ಟೈರ್ ಗಳ ಸುತ್ತ ಮಲಗಿ ರಸ್ತೆ ತಡೆ ನಡೆಸಲು ಯತ್ನಿಸಿದರು.


ಹೀಗೆ ಪ್ರತಿಭಟನೆ ಆರಂಭಿಸಿದ ಕನ್ನಡಪರ ಹೋರಾಟಗಾರರನ್ನು ಬೆಳ್ಳಂಬೆಳಿಗ್ಗೆ ಬಂಧಿಸುವ ಮೂಲಕ ಪೊಲೀಸರು ಬಂದ್ ಗೆ ಬ್ರೇಕ್ ಹಾಕಿದ್ದಾರೆ. ಒಂದು ವೇಳೆ  ಈ ಕನ್ನಡಪರ ಸಂಘಟನೆಗಳ ಕಾರ್ಯಕರ್ತರನ್ನು  ಬಂಧಿಸದೆ ಇದ್ದಲ್ಲಿ ನಗರದ ಎಲ್ಲಾ ಕಡೆ ಸಂಚರಿಸಿ ಅಂಗಡಿಮುಂಗಟ್ಟುಗಳನ್ನು ಮುಚ್ಚಿಸಲಿದ್ದಾರೆ ಎಂದು ಅರಿತ  ಪೊಲೀಸರು, ಪ್ರತಿಭಟನೆ ನಡೆಸುತ್ತಿದ್ದವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ತೆಗೆದುಕೊಂಡರು.
ಇನ್ನೊಂದೆಡೆ ನಗರದ ವಿವಿಧೆಡೆ ಅಂಗಡಿಮುಂಗಟ್ಟುಗಳು, ಹೊಟೇಲ್ ಗಳು, ಪೆಟ್ರೋಲ್ ಬಂಕ್ ಗಳು ಎಂದಿನಂತೆ ತೆರೆದಿವೆ. ಕೆ.ಎಸ್.ಆರ್.ಟಿ.ಸಿ. ಹಾಗೂ ಖಾಸಗಿ ಬಸ್ ಗಳು ಎಂದಿನಂತೆ ಸಂಚರಿಸುತ್ತಿವೆ. ಆಟೋ, ಕ್ಯಾಬ್, ಇನ್ನಿತರ ವಾಹನ ಸಂಚಾರವೂ ಸಹ ಮಾಮೂಲಿನಂತಿದೆ. ಜನಸಂಚಾರಕ್ಕೂ ಯಾವುದೇ ರೀತಿಯ ತೊಂದರೆಯುಂಟಾಗಿಲ್ಲ.


Karnataka Bandh LIVE: ಬಸ್ಸಿನ ಗಾಜು ಪುಡಿ ಮಾಡಿದ ಪ್ರತಿಭಟನಾಕಾರರು; ವಾಟಾಳ್ ನಾಗರಾಜ್ ಬಂಧನ


ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ. ಕನ್ನಡ ಸಂಘಟನೆಗಳು ಹೊರತಪಡಿಸಿದರೆ ಇತರೆ ಯಾವುದೇ ಸಂಘ ಸಂಸ್ಥೆಗಳು ಬಂದ್ ಗೆ ಬೆಂಬಲ ಸೂಚಿಸಿರಲಿಲ್ಲ. ಅಲ್ಲದೆ ಬೆಳಿಗ್ಗೆಯೇ ಕನ್ನಡ ಕಾರ್ಯಕರ್ತರನ್ನು ಬಂಧಿಸಿದ್ದರಿಂದ ಬಂದ್ ಗೆ ಹಿನ್ನಡೆಯುಂಟಾಯ್ತು.


ಇಂದಿನ ಬಂದ್ ಗೆ ಪೂರಕವಾಗಿ  ಡಿಸೆಂಬರ್ 4ರಂದು ತಮಿಳುನಾಡು ಗಡಿ ಬಂದ್ ನಡೆಸುವುದಾಗಿ ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಘೋಷಿಸಿದ್ದರು. ವಾಟಾಳ್ ಗೆ ಕೈಜೋಡಿಸಲು ಇಲ್ಲಿನ ಕನ್ನಡಪರ ಸಂಘಟನೆಗಳು ಮುಂದಾಗಿದ್ದವು.


ಆದರೆ ನಿನ್ನೆ ವಾಟಾಳ್ ಚಾಮರಾಜನಗರದತ್ತ ತಲೆ ಹಾಕಲಿಲ್ಲ. ಒಂದು ವೇಳೆ ಅವರು ನಗರಕ್ಕೆ ಬಂದು ಇತರ ಸಂಘಸಂಸ್ಥೆಗಳ ಜೊತೆ ಮಾತುಕತೆ ನಡೆಸಿದ್ದರೆ ಬಂದ್ ಗೆ ಬೆಂಬಲ ವ್ಯಕ್ತವಾಗುತ್ತಿತ್ತು. ಹೀಗಾಗಿ ನಿನ್ನೆ ವಾಟಾಳ್ ನಾಗರಾಜ್ ಚಾಮರಾಜನಗರಕ್ಕೆ ಬಾರದೆ ಹೋದದ್ದು ಸಹ ಬಂದ್ ವಿಫಲವಾಗಲು ಕಾರಣವಾಗಿದೆ.

top videos
    First published: