Karnataka Bandh: ಮೈಸೂರಿನಲ್ಲಿ ಮುಂದುವರೆದ ಅನ್ನದಾತರ ಪ್ರತಿಭಟನೆ; 100ಕ್ಕೂ ಹೆಚ್ಚು ರೈತರು ಪೊಲೀಸ್ ವಶಕ್ಕೆ

ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿ ಸುಮಾರು 100ಕ್ಕೂ ಹೆಚ್ಚು ರೈತರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ಕರೆದೊಯ್ದರು.  ಪ್ರತಿಭಟನಾನಿರತ ರೈತರನ್ನು ಕೆ.ಎಸ್.ಆರ್.‌ಟಿ.ಸಿ ಬಸ್‌ನಲ್ಲಿ  ಕರೆದೊಯ್ದರು. 

news18-kannada
Updated:September 25, 2020, 12:24 PM IST
Karnataka Bandh: ಮೈಸೂರಿನಲ್ಲಿ ಮುಂದುವರೆದ ಅನ್ನದಾತರ ಪ್ರತಿಭಟನೆ; 100ಕ್ಕೂ ಹೆಚ್ಚು ರೈತರು ಪೊಲೀಸ್ ವಶಕ್ಕೆ
ಪ್ರತಿಭಟನೆ
  • Share this:
ಮೈಸೂರು(ಸೆ.25): ಮೈಸೂರಿನಲ್ಲಿ ಕೇವಲ ಅರ್ಧ ಗಂಟೆ  ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ವಾಪಸ್​ ಪಡೆದಿದ್ದ ಅನ್ನದಾತರು ಮತ್ತೆ ತಮ್ಮ ಧರಣಿ ಮುಂದುವರೆಸಿದ್ದಾರೆ. ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿ ಮೈಸೂರು-ಬೆಂಗಳೂರು ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ರಸ್ತೆ ಮಧ್ಯೆ ಕುಳಿತು ಜೈ ಜವಾನ್ ಜೈ ಕಿಸಾನ್ ಘೋಷಣೆಗಳನ್ನು ಕೂಗಿ ವಾಹನಗಳನ್ನು ಅಡ್ಡಗಟ್ಟಿದರು. ಪೊಲೀಸರು ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಿದರು. ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನಾನಿರತ  ರೈತರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದರು. ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿ ಸುಮಾರು 100ಕ್ಕೂ ಹೆಚ್ಚು ರೈತರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ಕರೆದೊಯ್ದರು.  ಪ್ರತಿಭಟನಾನಿರತ ರೈತರನ್ನು ಕೆ.ಎಸ್.ಆರ್.‌ಟಿ.ಸಿ ಬಸ್‌ನಲ್ಲಿ  ಕರೆದೊಯ್ದರು.  ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.

ಮೈಸೂರಿನಲ್ಲಿ ರೈತ ಸಂಘಟನೆ ಹಾಗೂ ಕಾರ್ಮಿಕ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಇದನ್ನ ಹೊರತುಪಡಿಸಿ ಯಾವುದೇ ಪ್ರತಿಭಟನೆ ಇರಲಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸುಗ್ರೀವಾಜ್ಞೆ ವಿರುದ್ಧ ಮೈಸೂರಿನಲ್ಲಿ ಅನ್ನದಾತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಮೈಸೂರಿನಲ್ಲಿ ರೈತರ ಹೆದ್ದಾರಿ ತಡೆ ಪ್ರತಿಭಟನೆ ಕೇವಲ ಅರ್ಧ ಗಂಟೆಗೆ ಸೀಮಿತವಾಗಿತ್ತು. ರೈತರು ಸಾಂಕೇತಿಕವಾಗಿ ರಸ್ತೆ ತಡೆದು ಅರ್ಧ ಗಂಟೆಗೆ ಪ್ರತಿಭಟನೆ ಮುಗಿಸಿದರು. ನಂತರ ಪೊಲೀಸರ ಸೂಚನೆಯಂತೆ ಅನ್ನದಾತರು ವಾಪಸ್ಸಾಗಿದ್ದರು. ಬಳಿಕ ರೈತರು ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ.

ಮೈಸೂರ್ ಬ್ಯಾಂಕ್ ಸರ್ಕಲ್ ಸೇರಿ ಬೆಂಗಳೂರಿನ ವಿವಿಧೆಡೆ ಪ್ರತಿಭಟನೆ; 40ಕ್ಕೂ ಹೆಚ್ಚು ಮಂದಿ ರೈತರು ಪೊಲೀಸ್ ವಶಕ್ಕೆ

ಮೈಸೂರಿನಲ್ಲಿ ಪ್ರತಿಭಟನೆಗೆ ಅವಕಾಶ ನೀಡಿಲ್ಲ ಎಂದು ಮೈಸೂರು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಪ್ರಕಾಶ್ ಗೌಡ ಹೇಳಿದ್ದರು. ಈಗಾಗಲೇ ರೈತರನ್ನ ಕರೆದು ತಿಳುವಳಿಕೆ ನೀಡಿ ಕಳುಹಿಸಿದ್ದೇವೆ‌. ವಾಹನ ಸವಾರರಿಗೆ, ಪ್ರಯಾಣಿಕರಿಗೆ ತೊಂದರೆ ಆದರೆ ಅನಿವಾರ್ಯವಾಗಿ ಅರೆಸ್ಟ್ ಮಾಡುತ್ತೇವೆ. ಇದಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಎಸಿಪಿ ಸೇರಿದಂತೆ 14 ಇನ್ಸ್ಪೆಕ್ಟರ್ ಹಾಗೂ 16 ಪಿಎಸ್‌ಐ ಸೇರಿದಂತೆ 200 ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಮಾಡಿದ್ದೇವೆ. ಯಾವುದೇ ರೀತಿ ಅಹಿತಕರ ಘಟನೆಗೆ ಅವಕಾಶ ಇಲ್ಲ. ರೈತರು ಅನುಮತಿ ಕೇಳಿದ್ದರು, ಆದರೆ ನಾವು ಅನುಮತಿ ನೀಡಿಲ್ಲ. ಸ್ವಲ್ಪ ನಿಮಿಷ ಅವರ ಹೋರಾಟ ಮುಗಿಸಿ ವಾಪಾಸ್ ತೆರಳಬೇಕು.ಆದರೆ ಪ್ರತಿಭಟನೆಯ ಸಮಯ ಹೆಚ್ಚಾಗುವಂತಿಲ್ಲ. ಈ ಬಗ್ಗೆಯು ಸಹ ನಾವು ಈಗಾಗಲೇ ತಿಳುವಳಿಕೆ ನೀಡಿದ್ದೇವೆ ಎಂದು ಹೇಳಿದ್ದರು.

ಆದರೆ ಅನ್ನದಾತರು ಹೆದ್ದಾರಿ ತಡೆಯುವ ಮೂಲಕ ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ. ಪ್ರತಿಭಟನಾನಿರತ 100ಕ್ಕೂ ಹೆಚ್ಚು ರೈತರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
Published by: Latha CG
First published: September 25, 2020, 12:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading