liveLIVE NOW

Karnataka Bandh LIVE: ಕರ್ನಾಟಕ ಬಂದ್- ಬೆಂಗಳೂರಿನಲ್ಲಿ ಕರವೇ ಬಣದ ಉಪವಾಸ ಸತ್ಯಾಗ್ರಹ ಅಂತ್ಯ

Karnataka Badh: ಬೆಂಗಳೂರಿನ ಟೌನ್​ಹಾಲ್​ ಬಳಿ ಪ್ರತಿಭಟನೆಗೆ ಇಳಿದಿದ್ದ ವಿವಿಧ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದೇ ರೀತಿ ರಾಮನಗರದಲ್ಲೂ ಸಹ ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಸರ್ಕಾರದ ಎಚ್ಚರಿಕೆಗೂ ಮಣಿಯದ ಕನ್ನಡ ಪರ ಸಂಘಟನೆಗಳು ತಮ್ಮ ಹೋರಾಟ ಮುಂದುವರೆಸಿವೆ.

 • News18 Kannada
 • | December 05, 2020, 15:58 IST
  facebookTwitterLinkedin
  LAST UPDATED 3 YEARS AGO

  AUTO-REFRESH

  ಹೈಲೈಟ್ಸ್

  15:55 (IST)

  ಕರವೇ ಪ್ರವೀಣಶೆಟ್ಟಿ ಬಣದ ಧರಣಿ ಅಂತ್ಯ
  ಸಿಎಂ ಬೆಂಗಳೂರಿನಲ್ಲಿ ಇಲ್ಲದ ಕಾರಣ ಸೋಮವಾರ ಮನವಿ ಮಾಡಲು ನಿರ್ಧಾರ
  ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಧರಣಿ ಮಾಡುತ್ತಿದ್ದ ಕರವೇ ಶೆಟ್ಟಿ ಬಣ

  ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿಕೆ
  ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ
  ಇಂದು ಸಾಂಕೇತಿಕವಾಗಿ ಧರಣಿ ಮಾಡಲಾಗಿದೆ
  ಬೆಂಗಳೂರಿನಲ್ಲಿ ಮುಖ್ಯಂಮತ್ರಿಗಳಿಲ್ಲ
  ಸೋಮವಾರ ಸಿಎಂಗೆ ಮನವಿ ಮಾಡಲಾಗುವುದು
  ಸಾಂಕೇತಿಕ ಧರಣಿ ಇಂದು ಅಂತ್ಯ ಮಾಡಲಾಗುವುದು
  ಈ ಮೊದಲು ಡಿಸಿಎಂ ಭೇಟಿ ಮಾಡುತ್ತೇನೆ ಎಂದೇಳಿದ್ದರು
  ಇದುವರೆಗೆ ಇಲ್ಲಿಗೆ ಭೇಟಿ ಮಾಡಿಲ್ಲ

  ಸೋಮವಾರ ಕರೆದಿರುವ ಸಭೆಯಲ್ಲಿ ಮುಂದಿನ ಹೋರಾಟ ಚರ್ಚೆ ಮಾಡಲಾಗುವುದು
  ಬಂಧಿಸಿರುವ ಹೋರಾಟಗಾರರನ್ನು ತಕ್ಷಣವೇ ಬಿಡುಗಡೆ ಮಾಡಿ
  ರಾತ್ರೋ ರಾತ್ರೀ ಕನ್ನಡಪರ ಸಂಘಟನೆಗಳ ಮುಖಂಡರ ವಶಕ್ಕೆ‌ ಪಡೆಯೋದು ಸರಿಯಲ್ಲ

  15:54 (IST)

  ಮುಂದುವರೆದ ಕರವೇ ಪ್ರವೀಣ್ ಶೆಟ್ಟಿ ಬಣದ ಧರಣಿ
  ಮೌರ್ಯ ಸರ್ಕಲ್ ನಲ್ಲಿ ಧರಣಿ
  ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹಕ್ಕೆ ಮುಂದುವರಿಕೆ
  ಧರಣಿಯಲ್ಲಿ ಕರವೇ ಕಾರ್ಯಕರ್ತರು ಭಾಗಿ

  13:50 (IST)

  ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ಕರ್ನಾಟಕ ಬಂದ್

  ಬಂದ್ ಇದ್ದರೂ ಎಂದಿನಂತಿರೋ ಬೆಂಗಳೂರು ಟ್ರಾಫಿಕ್

  ಮಧ್ಯಾಹ್ನ ನಂತರ ರಸ್ತೆಗಿಳಿದ ವಾಹನಗಳು

  ಬಂದ್ ಬಿಸಿ ಕಮ್ಮಿಯಾದ ನಂತರ ಹೆಚ್ಚೆಚ್ಚು ರಸ್ತೆಗಳಿದ ವಾಹನ ಸವಾರರು

  ಕೆ.ಆರ್ ಸರ್ಕಲ್ ನಲ್ಲಿ ಎಂದಿಂತೆಯೇ ಇದೆ ವಾಹನ ದಟ್ಟಣೆ

  12:40 (IST)

  ಬಾಗಲಕೋಟೆ 

  ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ರಾಜ್ಯ ಬಂದ್ ಕರೆ ಹಿನ್ನೆಲೆ...

  ಬಾಗಲಕೋಟೆಯಲ್ಲಿ ಕರ್ನಾಟಕ‌ ರಕ್ಷಣಾ ವೇದಿಕೆ ಎಚ್.ಶಿವರಾಮೇಗೌಡರ ಬಣದಿಂದ ಪ್ರತಿಭಟನೆ...

  ಬಾಗಲಕೋಟೆ ನಗರದ ಬಸವೇಶ್ವರ ವೃತ್ತದಲ್ಲಿ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಅರೆಬೆತ್ತಲೆ ಮೆರವಣಿಗೆ...

  ಕೈಯಲ್ಲಿ ಖಾಲಿ ಡಬ್ಬಾ ಹಿಡಿದು ವಿನೂತನ ಪ್ರತಿಭಟನೆ....

  ರಾಜ್ಯ ಸರ್ಕಾರ ಹಾಗೂ ಸಿಎಂ ಯಡಿಯೂರಪ್ಪ ವಿರುದ್ಧ ಘೋಷಣೆ...

  ಕನ್ನಡಿಗರ ಕೈಯಲ್ಲಿ ಚೆಂಬು ಕೊಟ್ಟ ಸಿಎಂ....

  ಮರಾಠಿಗರಿಗೆ ಅಕ್ಷಯಪಾತ್ರೆ ಕೊಟ್ಟ ಸಿಎಂ ಎಂದು ಘೋಷಣೆ...

  ನಿಗಮ ರಚನೆಯ ಮೂಲಕ‌ ಕನ್ನಡಿಗರು ಕರ್ನಾಟಕದ ಮರಾಠಿಗರ ನಡುವೆ ಒಡಕು‌ ಮೂಡಿಸುವ ಯತ್ನ ಎಂದು ಹರಿಹಾಯ್ದ ಪ್ರತಿಭಟನಾಕಾರರು...

  ಬಸವೇಶ್ವರ ವೃತ್ತದಿಂದ ಹಳೆ ಬಾಗಲಕೋಟೆಯ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ....

  ಕರವೇ ಎಚ್.ಶಿವರಾಮೇ ಗೌಡರ ಬಣದ ಜಿಲ್ಲಾಧ್ಯಕ್ಷ ಬಿ.ಎಮ್.ಪಾಟೀಲ್ ನೇತೃತ್ವದಲ್ಲಿ‌ ಪ್ರತಿಭಟನೆ.

  12:39 (IST)

  ಬೆಂಗಳೂರಿನ ಹಲವೆಡೆ ಭಾರಿ ಮಳೆ

  ಮಳೆಯ ಮಧ್ಯೆ ಮುಂದುವರೆದ ಪ್ರತಿಭಟನೆ

  ಟೌನ್ ಹಾಲ್, ಕಾರ್ಪೋರೇಷನ್, ಕೆಆರ್ ಮಾರುಕಟ್ಟೆ, ಶಾಂತಿನಗರ, ಗಾಂಧಿನಗರ, ಮೆಜೆಸ್ಟಿಕ್, ಲಾಲ್ ಬಾಗ್, ಜಯನಗರ, ವಿಲ್ಸನ್ ಗಾರ್ಡನ್ ಸೇರಿದಂತೆ ಹಲವೆಡೆ ಮಳೆ

  ಮಳೆಯ ನಡುವೆಯೂ ಪ್ರತಿಭಟನೆ ಮಾಡುತ್ತಿರೋ ಕನ್ನಡ ಪರ ಸಂಘಟನೆಗಳು

  12:39 (IST)

  ವಾಟಾಳ್ ನಾಗರಾಜ್ ಬಂಧನವಾದ್ರು ಮುಗಿದಿಲ್ಲ ಪ್ರತಿಭಟನೆ

  ಟೌನ್ ಹಾಲ್ ಮುಂದೆ ಕನ್ನಡ ಒಕ್ಕೂಟ ಸಂಘಟನೆ ಇಂದ ಪ್ರತಿಭಟನೆ

  ಅರೆ ಬೆತ್ತಲೆ ಪ್ರತಿಭಟಿಸುತ್ತಿರುವ ಕನ್ನಡ ಒಕ್ಕೂಟದ ಕಾರ್ಯಕರ್ತರು

  ಪ್ರತಿಭಟನೆಗೆ ಸಂಘದ ಅಧ್ಯಕ್ಷ ಕೆಎನ್ ನಿಂಗೇಗೌಡ ನೇತೃತ್ವ

  ಕರ್ನಾಟಕ ಬಂದ್ ಬೆಂಬಲಿಸಿ ಪ್ರತಿಭಟನೆ

  12:11 (IST)

  ಮಾಗಡಿ ರಸ್ತೆಯ ಸುಮ್ಮನಹಳ್ಳಿ ಜಂಕ್ಷನ್ ನಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯಿಂದ ರಸ್ತೆ ತಡೆ 

  ಲಯನ್ ಜೈರಾಜ್ ನಾಯ್ಡು ನೇತೃತ್ವದಲ್ಲಿ ರಸ್ತೆ ತಡೆ 

  ಮರಾಠಾ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಪ್ರತಿಭಟನೆ

  ಬ್ಯಾಡರಹಳ್ಳಿ ಪೊಲೀಸರಿಂದ ಕಾರ್ಯಕರ್ತರ ಬಂಧನ

  ಒಂದು ದಿನದ ಮಟ್ಟಿಗೆ ಸಾಂಕೇತಿಕವಾಗಿ ಉಪವಾಸ ಸತ್ಯಾಗ್ರಹ

  12:11 (IST)

  ಮಾಗಡಿ ರಸ್ತೆಯ ಸುಮ್ಮನಹಳ್ಳಿ ಜಂಕ್ಷನ್ ನಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯಿಂದ ರಸ್ತೆ ತಡೆ 

  ಲಯನ್ ಜೈರಾಜ್ ನಾಯ್ಡು ನೇತೃತ್ವದಲ್ಲಿ ರಸ್ತೆ ತಡೆ 

  ಮರಾಠಾ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಪ್ರತಿಭಟನೆ

  ಬ್ಯಾಡರಹಳ್ಳಿ ಪೊಲೀಸರಿಂದ ಕಾರ್ಯಕರ್ತರ ಬಂಧನ

  12:09 (IST)

  ಮರಾಠ ಪ್ರಾಧಿಕಾರ ರಚನೆ ವಿಚಾರ 
  ರೈತ ಸಂಘದಿಂದ ಬಿಡದಿಯಲ್ಲಿ ಪ್ರತಿಭಟನೆ
  ರಾಮನಗರ ಜಿಲ್ಲೆ ಬಿಡದಿ ನಗರ
  ರೈತರು ಹಾಗೂ ಪೊಲೀಸರ ನಡುವೆ ಜಗಳ
  ಬಿಡದಿ ಟೌನ್ ಪಿಎಸೈ ಭಾಸ್ಕರ್ ಹಾಗೂ ರೈತಸಂಘದ ಅಧ್ಯಕ್ಷ ಇ.ಎನ್.ಕೃಷ್ಣ ಇಂಗಲಗುಪ್ಪೆ ನಡುವೆ ಜಗಳ
  ಬೆಂಗಳೂರು-ಮೈಸೂರು ರಾ.ಹೆದ್ದಾರಿ ತಡೆಯಲು ಮುಂದಾದ ರೈತರು
  ಈ ವೇಳೆ ರೈತರಿಗೆ ಅವಾಜ್ ಹಾಕಿದ ಪಿಎಸೈ 
  ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ

  12:08 (IST)

  ಚಿಕ್ಕಮಗಳೂರು : ಕರ್ನಾಟಕ ಬಂದ್ ಹಿನ್ನೆಲೆ

  ಮರಾಠ ಅಭಿವೃದ್ಧಿ ಪ್ರಾಧಿಕಾರ  ವಿರೋಧಿಸಿ ಪ್ರತಿಭಟನೆ 

  ನಗರದ ಹನುಮಂತಪ್ಪ ವೃತ್ತದಿಂದ ಅಜಾದ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ

  ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ

  ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

  ಪ್ರತಿಭಟನೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಭಾಗಿ

  ಬೆಂಗಳೂರು(ಡಿ. 05): ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳು ಇಂದು (Karnataka Bandh) ಕರ್ನಾಟಕ ಬಂದ್​ಗೆ ಕರೆ ಕೊಟ್ಟಿವೆ. ಕನ್ನಡಪರ ಹೋರಾಟಗಾರರು ರಾಜ್ಯದ ವಿವಿಧ ಮೂಲೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ಕಾವೇರಿದೆ. ಕನ್ನಡ ಪರ ಸಂಘಟನೆಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿವೆ. ಬೆಂಗಳೂರಿನ ಟೌನ್​ಹಾಲ್​ ಬಳಿ ಪ್ರತಿಭಟನೆಗೆ ಇಳಿದಿದ್ದ ವಿವಿಧ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದೇ ರೀತಿ ರಾಮನಗರದಲ್ಲೂ ಸಹ ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಸರ್ಕಾರದ ಎಚ್ಚರಿಕೆಗೂ ಮಣಿಯದ ಕನ್ನಡ ಪರ ಸಂಘಟನೆಗಳು ತಮ್ಮ ಹೋರಾಟ ಮುಂದುವರೆಸಿವೆ. ಪ್ರತಿಭಟನಾಕಾರರು ಹೆದ್ದಾರಿ ತಡೆ, ಟೈರ್​ಗೆ ಬೆಂಕಿ, ಪ್ರತಿಕೃತಿ ದಹನ ಮಾಡುತ್ತಿದ್ದಾರೆ. ಇನ್ನು, ಹಲವೆಡೆ ಕರ್ನಾಟಕ ಬಂದ್​ಗೆ ಮಿಶ್ರ ಪತ್ರಿಕ್ರಿಯೆ ವ್ಯಕ್ತವಾಗಿದೆ. ಈ ಕುರಿತು ಕ್ಷಣ ಕ್ಷಣದ ಮಾಹಿತಿ ನ್ಯೂಸ್​ 18 ಲೈವ್​ ಬ್ಲಾಗ್​ನಲ್ಲಿ.....