HOME » NEWS » State » KARNATAKA BANDH LATEST NEWS LIVE VIDEOS PROTEST NEWS PRO KANNADA ASSOCIATION TODAY CALLED KARNATAKA BANDH RH

Karnataka Bandh: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಇಂದು ಕರ್ನಾಟಕ ಬಂದ್​ಗೆ ಕರೆ; ಯಾವೆಲ್ಲ ಸೇವೆಗಳು ಅಬಾಧಿತ?

ಬಂದ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಎಂದಿನಂತೆ ಶಾಲಾ- ಕಾಲೇಜುಗಳು ತೆರೆದಿರಲಿವೆ. ಉಳಿದಂತೆ ಆಯಾ ಜಿಲ್ಲೆಯ ಪರಿಸ್ಥಿತಿಗೆ ಅನುಗುಣವಾಗಿ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ಬಸ್ಸುಗಳು ಎಂದಿನಂತೆ ಸಂಚರಿಸಲಿವೆ ಎಂದು ಸಾರಿಗೆ ಸಚಿವ ಲಕ್ಷ್ಣಣ್ ಸವದಿ ಹೇಳಿದ್ದಾರೆ.

news18-kannada
Updated:February 13, 2020, 8:09 AM IST
Karnataka Bandh: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಇಂದು ಕರ್ನಾಟಕ ಬಂದ್​ಗೆ ಕರೆ; ಯಾವೆಲ್ಲ ಸೇವೆಗಳು ಅಬಾಧಿತ?
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಎಂದು ಶಿಫಾರಸು ಮಾಡಿರುವ ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಇಂದು ವಿವಿಧ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್​ಗೆ ಕರೆ ನೀಡಿವೆ. ಆದರೆ, ಬೆಂಗಳೂರು ಹೊರತುಪಡಿಸಿ, ಬಂದ್​ನಿಂದಾಗಿ ಜನಸಾಮಾನ್ಯರ ನಿತ್ಯ ಚಟುವಟಿಕೆ ಮೇಲೆ ಯಾವುದೇ ಪರಿಣಾಮ ಬೀರುವ ಸಾಧ್ಯತೆ ತೀರಾ ಕಡಿಮೆ ಇದೆ.

ಕರ್ನಾಟಕ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಕರ್ನಾಟಕ ಬಂದ್‍ಗೆ 600ಕ್ಕೂ ಅಧಿಕ ಸಂಘಟನೆಗಳು ಬೆಂಬಲ ಘೋಷಿಸಿವೆ. ಕೆಲವು ಸಂಘಟನೆಗಳು ನೈತಿಕ ಬೆಂಬಲವನ್ನು ನೀಡಿವೆ. ನಾಳೆ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯ ತನಕ ಬಂದ್ ನಡೆಯಲಿದೆ. ವಿವಿಧ ಸಂಘಟನೆಗಳ ಸದಸ್ಯರು ಬೆಂಗಳೂರಿನ ಟೌನ್‍ಹಾಲ್‍ನಿಂದ ಫ್ರೀಡಂ ಪಾರ್ಕ್ ವೆರಗೂ ಬೃಹತ್ ಪ್ರತಿಭಟನಾ ಜಾಥಾ ನಡೆಸಲು ತೀರ್ಮಾನಿಸಿವೆ. ಆದರೆ ಟೌನ್‍ಹಾಲ್‍ನಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ ಎಂದಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಪ್ರತಿಭಟನಾಕಾರರು ಕೇಂದ್ರ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನೆ ಜಾಥಾ ನಡೆಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

ಬಂದ್​ಗೆ ಯಾರೆಲ್ಲಾ ಬೆಂಬಲ, ಏನೆಲ್ಲಾ ಇರಲ್ಲ?

  • ಎರಡು ಲಕ್ಷ ಆಟೋಗಳು ರಸ್ತೆಗೆ ಇಳಿಯುವುದಿಲ್ಲ

  • 25 ಸಾವಿರ ಕ್ಯಾಬ್​, 10 ಸಾವಿರ ಏರ್​ಪೋರ್ಟ್​ ಟ್ಯಾಕ್ಸಿ

  • ಕೆಎಸ್​ಟಿಡಿಸಿ, ಮೇರು, ಮೆಗಾ ಕ್ಯಾಬ್​ಗಳಿಂದಲೂ ಬಂದ್​ಗೆ ಬೆಂಬಲ
  • ಸರ್ಕಾರಿ ಕಾರು ಓಡಿಸುವ ಚಾಲಕರಿಂದಲೂ ಬಂದ್​ಗೆ ಬೆಂಬಲ

  • ಖಾಸಗಿ ಬಸ್ಸುಗಳು

  • ಬೀದಿ ಬದಿಯ ವ್ಯಾಪಾರಿಗಳ ಸಂಘದಿಂದಲೂ ಬೆಂಬಲ

  • ಬಟ್ಟೆಯಂಗಡಿ, ಚಾಟ್ಸ್, ತರಕಾರಿ, ಹೂವು-ಹಣ್ಣು ವ್ಯಾಪಾರ

  • ಬೀದಿ ಬದಿಯ ಹೋಟೆಲ್, ಚಾಟ್ಸ್​


 ಯಾವೆಲ್ಲಾ ಸೇವೆ ಅಬಾಧಿತ?

  • ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ ಸೇವೆ (ನೈತಿಕ ಬೆಂಬಲ ನೀಡಿದರೂ ಪರಿಸ್ಥಿತಿ ನೋಡಿಕೊಂಡು ತೀರ್ಮಾನ)

  • ನಮ್ಮ ಮೆಟ್ರೋ ರೈಲು ಸೇವೆ

  • ಸರ್ಕಾರಿ ಶಾಲಾ- ಕಾಲೇಜು

  • ಖಾಸಗಿ ಶಾಲಾ- ಕಾಲೇಜು  (ನೈತಿಕ ಬೆಂಬಲ ನೀಡಿದರೂ ಪರಿಸ್ಥಿತಿ ನೋಡಿಕೊಂಡು ತೀರ್ಮಾನ)

  • ಆಸ್ಪತ್ರೆ ಹೊರರೋಗಿ ಸೇವೆ

  • ಸಿನಿಮಾ ಥಿಯೇಟರ್, ಸಿನಿಮಾ ಶೂಟಿಂಗ್

  • ಲಾರಿ ಸಂಚಾರ ಯಥಾಸ್ಥಿತಿ

  • ಬ್ಯಾಂಕ್ ಹೋಟೆಲ್, ಶಾಪಿಂಗ್ ಮಾಲ್ (ನೈತಿಕ ಬೆಂಬಲ)

  • ಮೆಡಿಕಲ್ ಸ್ಟೋರ್, ಹಾಲು, ಪೇಪರ್ ಎಂದಿನಂತೆ


ಇದನ್ನು ಓದಿ: ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯ; ಪ್ರತಿಭಟನಾಕಾರರು ಬಂದ್ ಕೈಬಿಡುವ ವಿಶ್ವಾಸವಿದೆ; ಗೋವಿಂದ ಕಾರಜೋಳ

ಹಲವು ಕನ್ನಡ ಪರ ಸಂಘಟನೆಗಳು ಬಂದ್​ಗೆ ಕರೆ ನೀಡಿವೆಯಾದರೂ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ವಾಟಾಳ್ ನಾಗರಾಜ್ ಸೇರಿ ಪ್ರಮುಖ ಸಂಘಟನೆಗಳು ಬೆಂಬಲ ನೀಡಿಲ್ಲ. ಹೀಗಾಗಿ ಭಾಗಶಃ ಬಂದ್​ ಆಗುವುದು ಅನುಮಾನವಾಗಿದೆ. ಅಲ್ಲದೇ, ಬಂದ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಎಂದಿನಂತೆ ಶಾಲಾ- ಕಾಲೇಜುಗಳು ತೆರೆದಿರಲಿವೆ. ಉಳಿದಂತೆ ಆಯಾ ಜಿಲ್ಲೆಯ ಪರಿಸ್ಥಿತಿಗೆ ಅನುಗುಣವಾಗಿ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ಬಸ್ಸುಗಳು ಎಂದಿನಂತೆ ಸಂಚರಿಸಲಿವೆ ಎಂದು ಸಾರಿಗೆ ಸಚಿವ ಲಕ್ಷ್ಣಣ್ ಸವದಿ ಹೇಳಿದ್ದಾರೆ. ಅಷ್ಟೇ ಅಲ್ಲದೇ, ಬಂದ್​ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿಎಂ ಯಡಿಯೂರಪ್ಪ ಅವರು, ಸರೋಜಿನಿ ಮಹಿಷಿ ವರದಿ ಜಾರಿಗೆ ಸರ್ಕಾರ ಈಗಾಗಲೇ ಕ್ರಮ ತೆಗೆದುಕೊಂಡಿದೆ. ಯಾರೆಲ್ಲಾ ಬಂದ್​ಗೆ ಕರೆ ನೀಡಿದ್ದಾರೋ ಅವರೆಲ್ಲಾ ಬಂದು ನನ್ನನ್ನು ಭೇಟಿಯಾಗಿ ಖುದ್ದು ಮಾತನಾಡುಂತೆ ಮನವಿ ಮಾಡಿದ್ದಾರೆ.
Youtube Video

 
First published: February 13, 2020, 7:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories