Karnataka Bandh: ಬೆಳ್ಳಂಬೆಳಗ್ಗೆ ಬೆಂಗಳೂರು ಏರ್​​ಪೋರ್ಟ್​​​ಗೆ ಮುತ್ತಿಗೆ ಹಾಕಿದ ಕರವೇ ಕಾರ್ಯಕರ್ತರು

ಬೆಳಗಿನ ಜಾವ 4 ಗಂಟೆಗೆ ಏರ್​ಪೋರ್ಟ್​​​ಗೆ ನುಗ್ಗಿದ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ 12 ಜನರನ್ನು ಬಂಧಿಸಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ.

news18-kannada
Updated:September 28, 2020, 9:50 AM IST
Karnataka Bandh: ಬೆಳ್ಳಂಬೆಳಗ್ಗೆ ಬೆಂಗಳೂರು ಏರ್​​ಪೋರ್ಟ್​​​ಗೆ ಮುತ್ತಿಗೆ ಹಾಕಿದ ಕರವೇ ಕಾರ್ಯಕರ್ತರು
ಕರವೇ ಕಾರ್ಯಕರ್ತರು
  • Share this:
ಬೆಂಗಳೂರು ಗ್ರಾಮಾಂತರ(ಸೆ.28): ಎಪಿಎಂಸಿ ಮತ್ತು  ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಕರ್ನಾಟಕ ಬಂದ್ ಮಾಡಲಾಗಿದ್ದು, ರೈತ ಸಂಘಟನೆಗಳು ಮತ್ತು ಕನ್ನಡಪರ ಸಂಘಟನೆಗಳು  ಪ್ರತಿಭಟನೆಗೆ ಬೀದಿಗೆ ಇಳಿದಿವೆ. ಕರ್ನಾಟಕ  ಬಂದ್ ಹಿನ್ನೆಲೆ  ದೊಡ್ಡಬಳ್ಳಾಪುರ  ನಗರ ಸ್ತಬ್ಧವಾಗಿದ್ದು ದೊಡ್ಡಬಳ್ಳಾಪುರ  ಬಸ್  ನಿಲ್ದಾಣದಲ್ಲಿ ಜನರಿಲ್ಲದೆ ಬೀಕೋ ಎನ್ನುತ್ತಿದೆ.  ಅಂಗಡಿ ಮುಂಗಟ್ಟುಗಳ ಬಾಗಿಲು  ಮುಚ್ಚಿ   ವ್ಯಾಪಾರಿಗಳು ಬಂದ್ ಗೆ  ಬೆಂಬಲ ನೀಡಿದ್ದಾರೆ. ಇನ್ನು, ಬಸ್ ಸಂಚಾರಕ್ಕೆ  ಅನುವು ಮಾಡಿಕೊಡಲಾಗಿದ್ದು, ಪ್ರಯಾಣಿಕರ ಸೇವೆಗೆ ಸಜ್ಜಾಗಿ ಕೆಎಸ್ ಆರ್ ಟಿಸಿ ಮತ್ತು  ಬಿಎಂಟಿಸಿ  ಬಸ್ ಗಳು ನಿಂತಿವೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಳ್ಳಂ ಬೆಳಗ್ಗೆ  ಕರ್ನಾಟಕ ರಕ್ಷಣಾ ವೇದಿಕೆಯ 12 ಜನ ಕಾರ್ಯಕರ್ತರು ನುಗ್ಗಿ ಪ್ರತಿಭಟನೆ ಮಾಡಲು ಯತ್ನಿಸಿದ್ದಾರೆ. ಬೆಳಗಿನ ಜಾವ 4 ಗಂಟೆಗೆ ಏರ್​ಪೋರ್ಟ್​​​ಗೆ ನುಗ್ಗಿದ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ 12 ಜನರನ್ನು ಬಂಧಿಸಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ.

ದೇವನಹಳ್ಳಿ, ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 07 ರ ಎರಡೂ ಬದಿಯ ಏರ್ಪೋರ್ಟ್ ಗೇಟ್ ಗಳಿಗೆ ಬ್ಯಾರಿಕೇಡ್ ಗೆ ಅಳವಡಿಸಿ ಒಳ ಬರುವ ಪ್ರತಿಯೊಂದು ವಾಹನಗಳನ್ನ ತಪಾಸಣೆ ಮಾಡಲಾಯಿತು. ಬೋರ್ಡಿಂಗ್ ಪಾಸ್​ ಹೊಂದಿರುವವರನ್ನ ಹೊರತು ಪಡಿಸಿ ಉಳಿದೆಲ್ಲಾ ವಾಹನ ಮತ್ತು ವ್ಯಕ್ತಿಗಳನ್ನ ಏರ್ಪೋರ್ಟ್ ಹೊರಭಾಗದಲ್ಲೆ ತಡೆದು ಹಿಂದಕ್ಕೆ ಕಳಿಸಲಾಯಿತು. 

ಹಾಸನ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ತಡೆಗೆ ಎಸ್ಪಿಯಿಂದ ಖಡಕ್ ಸೂಚನೆ

ಇನ್ನು ಎಂದಿನಂತೆ ಏರ್ಪೋರ್ಟ್ ಒಳ ಭಾಗದಲ್ಲಿ ಕಾರ್ಯಾಚರಣೆ ಮುಂದುವರೆದಿದ್ದು, ಕ್ಯಾಬ್, ಬಿ.ಎಂ.ಟಿ.ಸಿ, ಕೆ.ಎಸ್.ಆರ್.ಟಿ.ಸಿ ಸಂಚಾರ ನಡೆಸಿದವು. ಬೆಳಿಗ್ಗೆ 4 ಗಂಟೆಗೆ ಕರವೇ ಕಾರ್ಯಕರ್ತರು ಏರ್ಪೋರ್ಟ್​​​ಗೆ ಮುತ್ತಿಗೆ ನಡೆಸಿದ್ರಿಂದ ಏರ್ಪೋರ್ಟ್ ಗೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ರೈತರ ಬಂದ್​​ಗೆ ಬೆಂಬಲ ನೀಡುವಂತೆ ರೈತ ಮತ್ತು ಕನ್ನಡಪರ ಹೋರಾಟಗಾರರು  ಚಾಲಕ ಮತ್ತು ಕಂಡಕ್ಟರ್​ಗಳಿಗೆ  ಕೈ ಮುಗಿದು  ಮನವಿ ಮಾಡಿದರು. ನೀವು ಸಹ ರೈತರ ಮಕ್ಕಳು, ನಮ್ಮ ಹೋರಾಟಕ್ಕೆ ಸಹಕಾರ ನೀಡಿ ಎಂದು ಕೇಳಿಕೊಂಡರು. ಅನಂತರ  ಸಿದ್ಧಲಿಂಗಯ್ಯ ವೃತ್ತದಲ್ಲಿ  ಪ್ರತಿಭಟನೆ  ನಡೆಸಿದ  ರೈತರು ಮತ್ತು  ಕನ್ನಡಪರ ಹೋರಾಟಗಾರರುಎಪಿಎಂಸಿ ಮತ್ತು  ಭೂ ಸುಧಾರಣೆ ಕಾಯ್ದೆ ತಿದ್ದುಪಡಿ  ವಿರೋಧಿಸಿ  ಕೇಂದ್ರ  ಮತ್ತು  ರಾಜ್ಯ ಸರ್ಕಾರದ ವಿರುದ್ಧ  ಅಕ್ರೋಶ ವ್ಯಕ್ತಪಡಿಸಿದರು. 

ನಗರದ ಪ್ರಮುಖ  ರಸ್ತೆಗಳಲ್ಲಿ  ಬೈಕ್ ರ್ಯಾಲಿ ನಡಎಸಿದ ಪ್ರತಿಭಟನಾಕಾರರು ಕೇಂದ್ರ  ಮತ್ತು ರಾಜ್ಯ  ಸರ್ಕಾರದ  ವಿರುದ್ಧ  ತಮ್ಮ  ಆಕ್ರೋಶ ವ್ಯಕ್ತಪಡಿಸಿದರು.
Published by: Latha CG
First published: September 28, 2020, 9:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading