ಕರ್ನಾಟಕ ಬಂದ್​​​ಗೆ ಯಾದಗಿರಿಯಲ್ಲಿ ಭಾರೀ ಬೆಂಬಲ; ಸರಕಾರದ ವಿರುದ್ಧ ಹೋರಾಟಗಾರರ ಆಕ್ರೋಶ

ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿದವು. ನಗರದ ಸುಭಾಷ್ ವೃತ್ತದಿಂದ ಮೈಲಾಪುರ ಬೇಸ್,ಗಾಂಧಿ ವೃತ್ತದಿಂದ ಮತ್ತೆ ಸುಭಾಷ್ ವೃತ್ತದವರಗೆ ಪ್ರತಿಭಟನೆ ಮೆರವಣಿಗೆ  ನಡೆಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

news18-kannada
Updated:September 28, 2020, 3:26 PM IST
ಕರ್ನಾಟಕ ಬಂದ್​​​ಗೆ ಯಾದಗಿರಿಯಲ್ಲಿ ಭಾರೀ ಬೆಂಬಲ; ಸರಕಾರದ ವಿರುದ್ಧ ಹೋರಾಟಗಾರರ ಆಕ್ರೋಶ
ಯಾದಗಿರಿಯಲ್ಲಿ ಪ್ರತಿಭಟನೆ
  • Share this:
ಯಾದಗಿರಿ(ಸೆ.28): ಎಪಿಎಂಸಿ ಹಾಗೂ ಭೂಸುಧಾರಣಾ ಕಾಯ್ದೆ ವಿರೋಧಿಸಿ ರೈತ ಸಂಘ ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಯಾದಗಿರಿಯಲ್ಲಿ ಉತ್ತಮ ಬೆಂಬಲ ಸಿಕ್ಕಿದೆ.ಬೆಳಿಗ್ಗೆಯಿಂದಲೇ ಹೋರಾಟಗಾರರು ಪ್ರತಿಭಟನೆ ನಡೆಸಿ ಸರಕಾರದ  ವಿರುದ್ಧ ಘೋಷಣೆ ಕೂಗಿದರು. ಯಾದಗಿರಿಯಲ್ಲಿ ಸರ್ವ ಸಂಘಟನೆಗಳ ಒಕ್ಕೂಟದ ಮುಖಂಡರು ಹಾಗೂ ಸದಸ್ಯರು ನಸುಕಿನ ಜಾವದಿಂದಲೇ ನಗರದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿದವು. ನಗರದ ಸುಭಾಷ್ ವೃತ್ತದಿಂದ ಮೈಲಾಪುರ ಬೇಸ್,ಗಾಂಧಿ ವೃತ್ತದಿಂದ ಮತ್ತೆ ಸುಭಾಷ್ ವೃತ್ತದವರಗೆ ಪ್ರತಿಭಟನೆ ಮೆರವಣಿಗೆ  ನಡೆಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾಗಳು ಎಪಿಎಂಸಿ ಹಾಗೂ ಭೂಸುಧಾರಣಾ ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಮರೆಪ್ಪ ಚಟ್ಟರಕರ್ ದೇಶಕ್ಕೆ ಅನ್ನ ನೀಡುವ ರೈತರ ಮೇಲೆ ಕಾಯ್ದೆಯು ಮರಣ ಶಾಸನವಾಗಿದ್ದು ಸರಕಾರ ‌ಕೂಡಲೇ ಕಾಯ್ದೆ ವಾಪಸ್​ ಪಡೆಯಬೇಕೆಂದು ಒತ್ತಾಯ ಮಾಡಿದರು.

Unlock 5.0 Guidelines: ಅಕ್ಟೋಬರ್​ 1ರಿಂದ ಅನ್​ಲಾಕ್​ 5.0: ಯಾವೆಲ್ಲ ವಲಯಕ್ಕೆ ರಿಲೀಫ್​?

ಅಂಗಡಿ ಮುಂಗಟ್ಟುಗಳು ಬಂದ್

ಬೆಳಿಗ್ಗೆಯಿಂದಲೇ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿರುವ  ನಗರವು ಸ್ತಬ್ಧವಾಗಿತ್ತು. ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿತ್ತು. ಅಟೋ,ಖಾಸಗಿ ವಾಹನ ಹಾಗೂ ಬಸ್ ಸಂಚಾರ ಎಂದಿನಂತೆ ಸಾಗುತಿತ್ತು. ಬಂದ್ ಬಿಸಿ ಜನಸಾಮಾನ್ಯರಿಗೆ ತಟ್ಟಿತ್ತು.

ಪೊಲೀಸರ ಜೊತೆ ವಾಗ್ವಾದ

ಪ್ರತಿಭಟನಾನಿರತರು ಹಾಗೂ ಎಸ್ಪಿ ಋಷಿಕೇಶ್ ಭಗವಾನ್ ಸೋನವಣೆ ನಡುವೆ ವಾಗ್ವಾದ ನಡೆದಿದೆ. ನಗರದ ಸುಭಾಷ್ ವೃತ್ತದಲ್ಲಿ ಮೈಕ್ ವಿಚಾರವಾಗಿ ಎಸ್ಪಿ ಹಾಗೂ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆದಿದೆ.
ಅದೆ ರೀತಿ ವಡಗೇರಾದಿಂದ ಆಗಮಿಸುತ್ತಿರುವ ಬಸ್ ನಗರದಲ್ಲಿ ಪ್ರವೇಶ ಮಾಡುತ್ತಿದ್ದಂತೆ ರೈತರು ಬಸ್ ತಡೆದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
Published by: Latha CG
First published: September 28, 2020, 3:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading