HOME » NEWS » State » KARNATAKA BANDH FARMERS PROTEST AND HIGHWAY BLOCKED BY VARIOUS ACTIVISTS IN BANGALORE LG

Karnataka Bandh: ರೈತ ವಿರೋಧಿ ಕಾಯ್ದೆ ಖಂಡಿಸಿ ಇಂದು ರಸ್ತೆ ತಡೆ; ಎಲ್ಲೆಲ್ಲಿ ಪ್ರತಿಭಟನೆ ಬಿಸಿ?

ರೈತ‌ ಸಂಘಟನೆಗಳ ಜೊತೆಗೆ ಇತರೆ ಸಂಘಟನೆಗಳೂ ಸಹ ಬೀದಿಗೆ ಇಳಿಯಲಿವೆ. ರೈತರ ಹೋರಾಟಕ್ಕೆ ಕನ್ನಡಪರ ಸಂಘಟನೆಗಳು ಸಹ ಬೆಂಬಲ ಸೂಚಿಸಿವೆ. ಇಷ್ಟೇ ಅಲ್ಲದೇ, ವಿವಿಧ ಕಾರ್ಮಿಕ ಸಂಘಟನೆಗಳು, ಆಶಾ ಕಾರ್ಯಕರ್ತೆ ಸಂಘಟನೆಗಳು,ಕಟ್ಟಡ ಕಾರ್ಮಿಕರ ಸಂಘಟನೆಗಳು, CITU ಸಂಘಟನೆಗಳು ಬೆಂಬಲ ನೀಡುವುದರ ಜೊತೆಗೆ  ರಸ್ತೆ ತಡೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. 

news18-kannada
Updated:September 25, 2020, 11:03 AM IST
Karnataka Bandh: ರೈತ ವಿರೋಧಿ ಕಾಯ್ದೆ ಖಂಡಿಸಿ ಇಂದು ರಸ್ತೆ ತಡೆ; ಎಲ್ಲೆಲ್ಲಿ ಪ್ರತಿಭಟನೆ ಬಿಸಿ?
ಪ್ರತಿಭಟನೆ ನಡೆಸುತ್ತಿರುವ ರೈತರು
  • Share this:
ಬೆಂಗಳೂರು(ಸೆ.25): ರೈತ ವಿರೋಧಿ ಕಾಯ್ದೆ ವಿರೋಧಿಸಿ ಅನ್ನದಾತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಐದನೇ ದಿನಕ್ಕೆ ಕಾಲಿಟ್ಟಿದೆ. ರೈತರ ಪ್ರತಿಭಟನೆಗೆ ಸ್ಪಂದಿಸದ ಸರ್ಕಾರದ ನಡೆಯನ್ನು ವಿರೋಧಿಸಿ ಇಂದು ಅನೇಕ ರೈತ ಸಂಘಟನೆಗಳು ರಸ್ತೆ ತಡೆ ಮಾಡಲಿದ್ದಾರೆ. ಇಂದು ಐಕ್ಯ ಹೋರಾಟ ಸಮಿತಿ ವತಿಯಿಂದ ಬೃಹತ್​ ಪ್ರತಿಭಟನೆ ನಡೆಸಿ ರಸ್ತೆ ತಡೆ ಮಾಡಲಿದ್ದಾರೆ. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್​​ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ತಡೆಯಲು ಕರೆ ನೀಡಲಾಗಿದೆ. ಐಕ್ಯ ಹೋರಾಟ ಸಮಿತಿಯು ಜೈಲ್​ ಭರೋ ಚಳುವಳಿಯನ್ನು ನಡೆಸಲಿದೆ.  ಅನ್ನದಾತರು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಿದ್ದಾರೆ.  ರೈತರ ಹೋರಾಟಕ್ಕೆ 34ಕ್ಕೂ ಹೆಚ್ಚು ಸಂಘಟನೆಗಳಿಂದ ಬೆಂಬಲ ದೊರೆತಿದೆ. ಬೆಂಗಳೂರು ಸಂಪರ್ಕಿಸುವ ಹೆದ್ದಾರಿಗಳಲ್ಲಿ ರಸ್ತೆ ತಡೆ ಹೋರಾಟ ಇರಲಿದೆ. 

ಇಂದು ಎಲ್ಲೆಲ್ಲಿ ಇರಲಿದೆ ಪ್ರತಿಭಟನೆ ಬಿಸಿ?

ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಬಿಸಿ ಇರಲಿದೆ.  ಮೈಸೂರು ಬ್ಯಾಂಕ್ ವೃತ್ತದ ಬಳಿಯ ಎಲ್ಲ ರಸ್ತೆಗಳೂ ಬಂದ್ ಆಗಲಿವೆ.  ಕಾರ್ಪೊರೇಷನ್, ಕೆ ಆರ್ ವೃತ್ತ, ಆನಂದ್ ರಾವ್ ಸರ್ಕಲ್, ಮೆಜೆಸ್ಟಿಕ್, ಮೌರ್ಯ ವೃತ್ತ, ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳು ಮುಚ್ಚಲಿವೆ.

ಯಾವ ಸಂಘಟನೆಗಳು ಭಾಗಿ?

ರೈತ‌ ಸಂಘಟನೆಗಳ ಜೊತೆಗೆ ಇತರೆ ಸಂಘಟನೆಗಳೂ ಸಹ ಬೀದಿಗೆ ಇಳಿಯಲಿವೆ. ರೈತರ ಹೋರಾಟಕ್ಕೆ ಕನ್ನಡಪರ ಸಂಘಟನೆಗಳು ಸಹ ಬೆಂಬಲ ಸೂಚಿಸಿವೆ. ಇಷ್ಟೇ ಅಲ್ಲದೇ, ವಿವಿಧ ಕಾರ್ಮಿಕ ಸಂಘಟನೆಗಳು, ಆಶಾ ಕಾರ್ಯಕರ್ತೆ ಸಂಘಟನೆಗಳು,ಕಟ್ಟಡ ಕಾರ್ಮಿಕರ ಸಂಘಟನೆಗಳು, CITU ಸಂಘಟನೆಗಳು ಬೆಂಬಲ ನೀಡುವುದರ ಜೊತೆಗೆ  ರಸ್ತೆ ತಡೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

ಕುಖ್ಯಾತ ಕಳ್ಳನ ಕಾಲಿಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಂದ ಗುಂಡೇಟು ಬಂಧನ!

ಯಾರ್ಯಾರು ಎಲ್ಲೆಲ್ಲಿ ರಸ್ತೆ ತಡೆ ಮಾಡ್ತಾರೆ?ಅತ್ತಿ ಬೆಲೆ - ವಾಟಾಳ್ ನಾಗರಾಜ್,  ನಾಯಂಡಹಳ್ಳಿ ಜಂಕ್ಷನ್ - ರೈತ ಸಂಘ, ಗೊರಗುಂಟೆ ಪಾಳ್ಯ - ಹಸಿರು ಸೇನೆ ರಾಜ್ಯ ರೈತ ಸಂಘ, ರಾಜನಗುಂಟೆ, ಯಲಹಂಕ - ರಾಷ್ಟ್ರೀಯ ಕಿಸಾನ್ ಸಂಘಟನೆ, ದೇವನಹಳ್ಳಿ ಬಳಿ - ರೈತ‌ಸಂಘ, ಇದಲ್ಲದೆ ರಾಷ್ಟ್ರೀಯ ಹೆದ್ದಾರಿಗಳ ಬಳಿ ವಿವಿಧ ರೈತ ಸಂಘಟನೆಗಳು ರಸ್ತೆ ತಡೆ ಮಾಡಲಿವೆ.

ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿರುವ ಪ್ರಮುಖ ರೈತ ಸಂಘಟನೆಗಳು

ರಾಜ್ಯ ರೈತ ಸಂಘಗಳು

ಕರ್ನಾಟಕ ಪ್ರಾಂತ ರೈತ ಸಂಘ

ರಾಜ್ಯ ಹಸಿರು ಸೇನೆ

ಅಖಿಲ ಭಾರತ ಕಿಸಾನ್ ಸಭಾ

ರೈತ ಕೃಷಿ ಕಾರ್ಮಿಕರ ಸಂಘ

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ

ಆಶಾ ಜನಶಕ್ತಿ ಸಂಘ

11.30ಕ್ಕೆ ಮೈಸೂರು ‌ಬ್ಯಾಂಕ್ ಸರ್ಕಲ್ ನಲ್ಲಿ ಪ್ರತಿಭಟನೆ, ಜೈಲ್ ಭರೋ ನಂತರ ಫ್ರೀಡಂ ಪಾರ್ಕ್‌ ನಲ್ಲಿ ಧರಣಿ ನಡೆಸಲಿದ್ದಾರೆ.

ಇನ್ನು, ರೈತ ಸಂಘಟನೆಗಳಿಂದ ಇಂದು ಹೆದ್ದಾರಿ ತಡೆ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನ 8ನೇ ಮೈಲಿ ನವಯುಗ ಟೋಲ್ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ಬಾಗಲಗುಂಟೆ, ಪೀಣ್ಯ ಠಾಣೆ ಪೊಲೀಸರು ಭದ್ರತೆಗೆ ಸಜ್ಜಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ-4 ತುಮಕೂರು-ಬೆಂಗಳೂರು ರಸ್ತೆಯಲ್ಲಿಯೂ ಪೊಲೀಸರ ನಿಯೋಜನೆ ಮಾಡಲಾಗಿದೆ.  ಗುರುಗುಂಟೆ ಪಾಳ್ಯ ಜಂಕ್ಷನ್ ನಲ್ಲಿಯೂ ಸಹ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. 150ಕ್ಕೂ ಹೆಚ್ಚು ಸಂಚಾರಿ ಹಾಗೂ ಪೊಲೀಸರ ನಿಯೋಜನೆ ಮಾಡಲಾಗಿದೆ. ನಗರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಬೆಳಗ್ಗೆ 8 ಗಂಟೆಗೆ ರೈತರು ರಸ್ತೆ ತಡೆ ಮಾಡಲಿದ್ದಾರೆ.
Published by: Latha CG
First published: September 25, 2020, 7:51 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading