Karnataka Bandh: ಮೈಸೂರಿನಲ್ಲಿ ಸಾಂಕೇತಿಕವಾಗಿ ರಸ್ತೆ ತಡೆ; ಅರ್ಧ ಗಂಟೆಗೆ ಮುಕ್ತಾಯವಾದ ರೈತರ ಪ್ರತಿಭಟನೆ

ರೈತರು ಸಾಂಕೇತಿಕವಾಗಿ ರಸ್ತೆ ತಡೆದು ಅರ್ಧ ಗಂಟೆಗೆ ಪ್ರತಿಭಟನೆ ಮುಗಿಸಿದರು. ನಂತರ ಪೊಲೀಸರ ಸೂಚನೆಯಂತೆ ಅನ್ನದಾತರು ವಾಪಸ್ಸಾದರು.

news18-kannada
Updated:September 25, 2020, 10:15 AM IST
Karnataka Bandh: ಮೈಸೂರಿನಲ್ಲಿ ಸಾಂಕೇತಿಕವಾಗಿ ರಸ್ತೆ ತಡೆ; ಅರ್ಧ ಗಂಟೆಗೆ ಮುಕ್ತಾಯವಾದ ರೈತರ ಪ್ರತಿಭಟನೆ
ಪ್ರತಿಭಟನೆ
  • Share this:
ಮೈಸೂರು(ಸೆ.25): ನೂತನ ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ರಾಜ್ಯದೆಲ್ಲೆಡೆ ಅನ್ನದಾತರು ಬೀದಿಗಿಳಿದಿದ್ದಾರೆ. ಬೆಂಗಳೂರು, ಮೈಸೂರು ಸೇರಿದಂತೆ ಹಲವೆಡೆ ಹೆದ್ದಾರಿ ತಡೆದು  ಪ್ರತಿಭಟನೆ ನಡೆಸುತ್ತಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗಾಗಲೇ ಅನೇಕ ಸಂಘಟನೆಗಳು ರೈತರಿಗೆ ಬೆಂಬಲ ನೀಡಿವೆ. ಮೈಸೂರಿನಲ್ಲಿ ರೈತ ಸಂಘಟನೆ ಹಾಗೂ ಕಾರ್ಮಿಕ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಇದನ್ನ ಹೊರತುಪಡಿಸಿ ಯಾವುದೇ ಪ್ರತಿಭಟನೆ ಇರಲಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸುಗ್ರೀವಾಜ್ಞೆ ವಿರುದ್ಧ  ಮೈಸೂರಿನಲ್ಲಿ ಅನ್ನದಾತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಮೈಸೂರಿನಲ್ಲಿ ರೈತರ ಹೆದ್ದಾರಿ ತಡೆ ಪ್ರತಿಭಟನೆ ಕೇವಲ ಅರ್ಧ ಗಂಟೆಗೆ ಸೀಮಿತವಾಗಿತ್ತು. ರೈತರು ಸಾಂಕೇತಿಕವಾಗಿ ರಸ್ತೆ ತಡೆದು ಅರ್ಧ ಗಂಟೆಗೆ ಪ್ರತಿಭಟನೆ ಮುಗಿಸಿದರು. ನಂತರ ಪೊಲೀಸರ ಸೂಚನೆಯಂತೆ ಅನ್ನದಾತರು ವಾಪಸ್ಸಾದರು.

ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ಸರ್ಕಲ್​ ಬಳಿ ರೈತರು ಆಗಮಿಸಿ ಪ್ರತಿಭಟಿಸಿದರು. ಡೋಲು, ನಗಾರಿ, ತಮಟೆ ಜೊತೆ ರೈತರು ಆಗಮಿಸಿದ್ದರು. ರಸ್ತೆ ತಡೆಗೂ ಮುನ್ನ ರೈತ ಸಮೂಹ ಒಂದೆಡೆ ಸೇರಿತ್ತು. ಭಾರೀ ಸಂಖ್ಯೆಯಲ್ಲಿ ರೈತರು ಆಗಮಿಸುವ ಹಿನ್ನೆಲೆ, ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. 200ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿತ್ತು.

ನೂತನ ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಹುಬ್ಬಳ್ಳಿಯಲ್ಲಿ ರೈತರ ಪ್ರತಿಭಟನೆ

ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿ ವಾಹನಗಳನ್ನು ತಡೆದು ನಿಲ್ಲಿಸುವಂತೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರೊಂದಿಗೆ ಮಾತಿನ ಚಕಮಕಿಯೂ ನಡೆಯಿತು.
ರಸ್ತೆ ತಡೆಗೆ ಅವಕಾಶ ಕೊಡಬೇಕು. ಪರ್ಯಾಯ ಮಾರ್ಗದಲ್ಲಿ ವಾಹನ ತೆರಳಲು ಅವಕಾಶ ನೀಡಬಾರದು ಎಂದು ಹೆದ್ದಾರಿ ಸಂಪರ್ಕದ ಎಲ್ಲಾ ರಸ್ತೆಗಳನ್ನು ತಡೆದರು. ಅಷ್ಟೇ ಅಲ್ಲದೇ, ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಾಣ ಮಾಡಿ, ಸರ್ಕಾರದ ವಿರುದ್ದ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಪ್ರತಿಭಟನೆಗೆ ಅವಕಾಶ ನೀಡಿಲ್ಲ ಎಂದು ಮೈಸೂರು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಪ್ರಕಾಶ್ ಗೌಡ ಹೇಳಿದ್ದಾರೆ. ಈಗಾಗಲೇ ರೈತರನ್ನ ಕರೆದು ತಿಳುವಳಿಕೆ ನೀಡಿ ಕಳುಹಿಸಿದ್ದೇವೆ‌. ವಾಹನ ಸವಾರರಿಗೆ, ಪ್ರಯಾಣಿಕರಿಗೆ ತೊಂದರೆ ಆದರೆ ಅನಿವಾರ್ಯವಾಗಿ ಅರೆಸ್ಟ್ ಮಾಡುತ್ತೇವೆ. ಇದಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಎಸಿಪಿ ಸೇರಿದಂತೆ 14 ಇನ್ಸ್ಪೆಕ್ಟರ್ ಹಾಗೂ 16 ಪಿಎಸ್‌ಐ ಸೇರಿದಂತೆ 200 ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಮಾಡಿದ್ದೇವೆ. ಯಾವುದೇ ರೀತಿ ಅಹಿತಕರ ಘಟನೆಗೆ ಅವಕಾಶ ಇಲ್ಲ. ರೈತರು ಅನುಮತಿ ಕೇಳಿದ್ದರು, ಆದರೆ ನಾವು ಅನುಮತಿ ನೀಡಿಲ್ಲ. ಸ್ವಲ್ಪ ನಿಮಿಷ ಅವರ ಹೋರಾಟ ಮುಗಿಸಿ ವಾಪಾಸ್ ತೆರಳಬೇಕು.ಆದರೆ ಪ್ರತಿಭಟನೆಯ ಸಮಯ ಹೆಚ್ಚಾಗುವಂತಿಲ್ಲ. ಈ ಬಗ್ಗೆಯು ಸಹ ನಾವು ಈಗಾಗಲೇ ತಿಳುವಳಿಕೆ ನೀಡಿದ್ದೇವೆ ಎಂದು ಹೇಳಿದರು.
Published by: Latha CG
First published: September 25, 2020, 10:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading