Karnataka Bandh: ಹಾಸನದಲ್ಲಿ ರೈತರ ಪ್ರತಿಭಟನೆಗೆ ಕರವೇ ಬೆಂಬಲ; ಬೆಂಗಳೂರು- ಮಂಗಳೂರು ಹೈವೇ ಬಂದ್

ಹಾಸನದ ಭುವನಹಳ್ಳಿಯಲ್ಲಿ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗಿದೆ. ಹೀಗಾಗಿ, ಈ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ. ಇದರಿಂದ ಸಾಲುಗಟ್ಟಿ ನಿಂತ ವಾಹನಗಳ ಸವಾರರು ಪರದಾಡುತ್ತಿದ್ದಾರೆ.

ಹಾಸನದಲ್ಲಿ ಬೆಂಗಳೂರು-ಮಂಗಳೂರು ಹೈವೇ ಬಂದ್

ಹಾಸನದಲ್ಲಿ ಬೆಂಗಳೂರು-ಮಂಗಳೂರು ಹೈವೇ ಬಂದ್

  • Share this:
ಬೆಂಗಳೂರು (ಸೆ. 28): ಕೇಂದ್ರ ಮತ್ತು ರಾಜ್ಯ ಸರ್ಕಾರ ಕೃಷಿ ಮತ್ತು ಎಪಿಎಂಸಿಗೆ ಸಂಬಂಧಿಸಿದಂತೆ ಹೊರಡಿಸಿರುವ ಕೃಷಿ ಕಾಯ್ದೆಯನ್ನು ವಿರೋಧಿಸಿ ರಾಜ್ಯಾದ್ಯಂತ ಇಂದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಎಲ್ಲ ಜಿಲ್ಲೆಗಳಲ್ಲೂ ಕರ್ನಾಟಕ ಬಂದ್​ನ ಕಾವು ಹೆಚ್ಚತೊಡಗಿದೆ. ಅದೇರೀತಿ, ಹಾಸನದಲ್ಲೂ ಕರ್ನಾಟಕ ಬಂದ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈತರ ಪ್ರತಿಭಟನೆಗೆ ಕೈಜೋಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಹಾಸನದಲ್ಲಿ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ, ಆಕ್ರೋಶ ಹೊರಹಾಕಿದ್ದಾರೆ.

ಹಾಸನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿದೆ. ಹಾಸನದ ಭುವನಹಳ್ಳಿಯಲ್ಲಿ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗಿದೆ. ಹೀಗಾಗಿ, ಈ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ. ಇದರಿಂದ ಸಾಲುಗಟ್ಟಿ ನಿಂತ ವಾಹನಗಳ ಸವಾರರು ಪರದಾಡುತ್ತಿದ್ದಾರೆ. ಬೆಂಗಳೂರು, ಮಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.

ಇದನ್ನೂ ಓದಿ: Karnataka Bandh LIVE: ಕರ್ನಾಟಕ ಬಂದ್; ಬೆಂಗಳೂರಿನಲ್ಲಿ ನೇಗಿಲು ಹೊತ್ತು, ಅರೆಬೆತ್ತಲಾಗಿ ಪ್ರತಿಭಟನೆ

ಕರ್ನಾಟಕ ಬಂದ್ ಹಿನ್ನೆಲೆ ಹೆದ್ದಾರಿ ಬಂದ್ ಮಾಡಿ ಕರವೇ ಪ್ರತಿಭಟನೆ ನಡೆಸಿದೆ. ಬಂದ್ ವೇಳೆ ಹಾಸನದಲ್ಲಿ ಹೆದ್ದಾರಿ ಮಧ್ಯೆ ಆಂಬುಲೆನ್ಸ್ ಸಿಲುಕಿದೆ. ಹಾಸನ ಹೊರವಲಯದ ಭುವನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿದ್ದರಿಂದ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿತ್ತು. ಬಂದ್​ನಲ್ಲಿ ವಾಹನಗಳ ಮಧ್ಯೆ ಆ್ಯಂಬುಲೆನ್ಸ್​ ಸಿಲುಕಿತ್ತು ಕೊನೆಗೆ ಪೊಲೀಸರು ಆ್ಯಂಬುಲೆನ್ಸ್​ಗೆ ದಾರಿ ಮಾಡಿಕೊಟ್ಟರು. ಪ್ರತಿಭಟನಾಕಾರರು ಕೂಡ ಕೆಲಕಾಲ ಪ್ರತಿಭಟನೆ ನಿಲ್ಲಿಸಿ, ಆ್ಯಂಬುಲೆನ್ಸ್​ಗೆ ದಾರಿ ಮಾಡಿಕೊಟ್ಟರು.

ಕರ್ನಾಟಕ ಬಂದ್ ಇದ್ದರೂ ಇಂದು ಸರ್ಕಾರಿ ಸ್ವಾಮ್ಯದ ವಾಹನಗಳು ಓಡಾಡಲಿವೆ. ಕೆಎಸ್​ಆರ್​ಟಿಸಿ, ಬಿಎಂಟಿಸಿ ಹಾಗೂ ಮೆಟ್ರೋ ಓಡಾಟ ಮುಂದುವರೆದಿದೆ. ಅಂಗಡಿ ಮುಂಗಟ್ಟುಗಳು, ಮಾಲ್​ಗಳು ಮುಚ್ಚಿರಲಿವೆ. ಆಟೋ, ಓಲಾ, ಊಬರ್ ಮುಂತಾದ ಖಾಸಗಿ ಸಾರಿಗೆ ವ್ಯವಸ್ಥೆ ಬಂದ್​ಗೆ ಬೆಂಬಲ ಸೂಚಿಸಿದ್ದು, ಇವು ಸಂಪೂರ್ಣ ಸ್ತಬ್ಧವಾಗಲಿದೆ. ಉಳಿದಂತೆ ಮೆಡಿಕಲ್ ಶಾಪ್, ಆಸ್ಪತ್ರೆ, ಪೆಟ್ರೊಲ್ ಬಂಕ್, ತರಕಾರಿ-ಹಣ್ಣು ಮುಂತಾದ ಅಗತ್ಯ ಸೇವೆಗಳು ಎಂದಿನಂತೆ ಮುಂದುವರೆಯಲಿವೆ.
Published by:Sushma Chakre
First published: