HOME » NEWS » State » KARNATAKA BAND FINALLY 2 TEAMS OF FARMERS ASSOCIATIONS CAME TO ONE DECISION ON KARNATAKA BANDH MATTER HK

ಕೊನೆಗೂ ಬಗೆಹರಿದ ಬಂದ್ ಹೋರಾಟದ ಗೊಂದಲ : ಸಂಜೆ ವೇಳೆಗೆ ಎರಡು ಬಣದ ರೈತ ಸಂಘಗಳು ಒಮ್ಮತ ನಿರ್ಧಾರ

ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸಹ ಬಂದ್ ಗೆ ಮೊದಲು ಅಪಸ್ವರ ಎತ್ತಿದ್ದರು. ಸಂಜೆ ವೇಳೆಗೆ ಇಬ್ಬರು ರೈತ ನಾಯಕರು ಸೆಪ್ಟೆಂಬರ್​ 28 ರಂದು ಬಂದ್ ಗೆ ಇಬ್ಬರೂ ಬೆಂಬಲ ಸೂಚಿಸಿದರು.

news18-kannada
Updated:September 23, 2020, 6:32 PM IST
ಕೊನೆಗೂ ಬಗೆಹರಿದ ಬಂದ್ ಹೋರಾಟದ ಗೊಂದಲ : ಸಂಜೆ ವೇಳೆಗೆ ಎರಡು ಬಣದ ರೈತ ಸಂಘಗಳು ಒಮ್ಮತ ನಿರ್ಧಾರ
ಪ್ರತಿಭಟನೆ ನಡೆಸುತ್ತಿರುವ ರೈತರು
  • Share this:
ಬೆಂಗಳೂರು(ಸೆಪ್ಟೆಂಬರ್​. 23): ಸರ್ಕಾರದ ರೈತ ವಿರೋಧಿ ಧೋರಣೆ ವಿರೋಧಿಸಿ ಸೆಪ್ಟೆಂಬರ್ 25 ರಂದು ಕರೆ ನೀಡಿರುವ ಭಾರತ್ ಬಂದ್ ಗೆ ರಾಜ್ಯದಲ್ಲಿ ಪ್ರತಿಭಟನೆಗೆ ಮಾತ್ರ ಸೀಮಿತವಾಗುತ್ತಿದೆ. ಇದರ ಬದಲಾಗಿ ಸೆಪ್ಟೆಂಬರ್​ 28ರಂದು ರಾಜ್ಯವ್ಯಾಪಿ ಬಂದ್ ಮಾಡಲು ನಿರ್ಧರಿಸಿದೆ. ಆದರೆ ಇದಕ್ಕೆ ಕೋಡಿಹಳ್ಳಿ , ಕುರುಬೂರು ರೈತ ಸಂಘ ಬಂದ್ ಗೆ ಅಪಸ್ವರ ಎತ್ತಿದೆ. ಬೆಂಗಳೂರಿನಲ್ಲಿ ಮೂರನೇ ದಿನ ರೈತರ ಜೊತೆ ಕೊರೊನಾ ವಾರಿಯರ್ಸ್ ಸಹ ರಸ್ತೆಗಿಳಿದು ಹೋರಾಟಕ್ಕಿಳಿದಿದ್ದರು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೂರನೇ ದಿನ ಅನ್ನದಾತರ ಪ್ರತಿಭಟನೆ ಜೊತೆ ಕೊರೋನಾ ವಾರಿಯರ್ಸ್ ಸಹ ರೋಡಿಗಿಳಿದಿದ್ದರು. ಫ್ರೀಡಂ ಪಾರ್ಕ್ ನಲ್ಲಿ ಅನ್ನದಾತರು ರೋಡಿಗಿಳಿದು ಪ್ರತಿಭಟನೆ ಮುಂದುವರೆಸಿದರೆ, ಕೊರೋನಾ ವಾರಿಯರ್ಸ್ ಆಶಾ ಕಾರ್ಯಕರ್ತರು ಸರ್ಕಾರ ನೀಡಿದ ಭರವಸೆ ಈಡೇರಿಸುವಂತೆ ಪ್ರತಿಭಟನೆಗಿಳಿದಿದ್ದರು. ಈ ಮಧ್ಯೆ ರಾಷ್ಡ್ರಮಟ ಅಖಿಲ ಭಾರತ ರೈತ ಸಂಘರ್ಷ ಸಮನ್ವಯದ 207 ಸಂಘಟನೆಗಳು (ಎಐಕೆಸಿಸಿ) ಕರೆ ನೀಡಿದ್ದ ಸೆಪ್ಟೆಂಬರ್ 25ರಂದು ಭಾರತ್ ಬಂದ್ ಗೆ ರಾಜ್ಯದಲ್ಲಿ ಪ್ರತಿಭಟನೆಗೆ ಸೀಮಿತವಾಗಲಿದೆ.

ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನರಿಂದ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ. ಆದರೆ ಅದರ ಬದಲಾಗಿ ಸೆಪ್ಟೆಂಬರ್ 28 ರಂದು ಸೋಮವಾರ ರಾಜ್ಯವ್ಯಾಪಿ ಬಂದ್ ಮಾಡಲು ಎಐಕೆಸಿಸಿಯ ಒಂಬತ್ತು ಸಂಘಟನೆಗಳು ಸೇರಿದಂತೆ 32 ಸಂಘಟನೆಗಳು ನಿರ್ಧರಿಸಿದೆ. ಇದರಲ್ಲಿ ರೈತ, ಕಾರ್ಮಿಕ, ದಲಿತ, ಕೃಷಿ ಕಾರ್ಮಿಕರು, ಪ್ರಾಂತ ರೈತ ಸಂಘ ಸೇರಿದಂತೆ 9 ಸಂಘಟನೆಗಳು ಜರುಗಿದ ಸಭೆಯಲ್ಲಿ ಬಂದ್ ಮಾಡಲು ಒಪ್ಪಿಗೆ ಸೂಚಿಸಿವೆ. ಇದರಲ್ಲಿ ಕೋಡಿಹಳ್ಳಿ ರೈತ ಸಂಘಟನೆಯೂ ಒಳಗೊಂಡಿದ್ದು, ಸಭೆಯಲ್ಲಿ ಪಾಲ್ಗೊಂಡಿದ್ದರು.

ಸೆಪ್ಟೆಂಬರ್ 28ರಂದು ಕರೆ ನೀಡಿರುವ ರಾಜ್ಯವ್ಯಾಪಿ ಬಂದ್ ಗೆ ಐಕ್ಯ ಹೋರಾಟ ಸಮಿತಿಯ ಸದಸ್ಯರೂ ಆಗಿರುವ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅಪಸ್ವರ ಎತ್ತಿದ್ದಾರೆ‌. ಸೆಪ್ಟೆಂಬರ್​ 25 ರಂದು ಕರೆ ನೀಡಿರುವ ಭಾರತ್ ಬಂದ್ ದಿನ ರಾಜ್ಯ, ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆ ಮಾಡಿ ಜೈಲು ಭರೋ ಚಳವಳಿ ಮಾಡಲಾಗುವುದು ಎಂದು ತಿಳಿಸಿದರು. ಆದರೆ ಸೆಪ್ಟೆಂಬರ್‌ 28 ರಂದು ಕರೆದಿರುವ ರಾಜ್ಯ ಬಂದ್ ಗೆ ಮಾಹಿತಿಯಿಲ್ಲ ಎಂದರು.

ಇದನ್ನೂ ಓದಿ : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ, ಮುಂದೆಯೂ ಯಡಿಯೂರಪ್ಪ ಅವರೇ ಸಿಎಂ: ಸಚಿವ ವಿ ಸೋಮಣ್ಣ

ಇದೇ ರೀತಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸಹ ಬಂದ್ ಗೆ ಮೊದಲು ಅಪಸ್ವರ ಎತ್ತಿದ್ದರು. ಸಂಜೆ ವೇಳೆಗೆ ಇಬ್ಬರು ರೈತ ನಾಯಕರು ಸೆಪ್ಟೆಂಬರ್​ 28 ರಂದು ಬಂದ್ ಗೆ ಇಬ್ಬರೂ ಬೆಂಬಲ ಸೂಚಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ತರುತ್ತಿರುವ ಭೂ ಸುಧಾರಣೆ, ಎಪಿಎಂಸಿ ಕಾಯ್ದೆಗೆ ವಿರೋಧಿಸಿ ಕಳೆದ ಮೂರು ದಿನಗಳಿಂದ ಅನ್ನದಾತರು ಒಂದೆಡೆ ಸೇರದೇ ಪ್ರತ್ಯೇಕವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.

ಈ ನಡುವೆ ಕರೆ ನೀಡಿರುವ ಬಂದ್ ಬಗ್ಗೆ ರೈತ ಸಂಘಟನೆಯ ಎರಡು ಬಣದಲ್ಲಿ ಒಮ್ಮತ ಮೂಡಿದ್ದಿಲ್ಲ. ಇದರಿಂದಾಗಿ ಸೆಪ್ಟೆಂಬರ್ 25ರಂದು ಬಂದ್ ಕೇವಲ ಪ್ರತಿಭಟನೆಗೆ ಸೀಮಿತವಾದ್ರೆ, ಸೆಪ್ಟೆಂಬರ್​ 28 ರಂದು ಕರೆ ನೀಡಿರುವ ರಾಜ್ಯವ್ಯಾಪಿ ಬಂದ್ ಎಷ್ಟರ ಮಟ್ಟಿಗಿರುತ್ತೋ ಕಾದು ನೋಡಬೇಕು.
Published by: G Hareeshkumar
First published: September 23, 2020, 6:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories