LIVE NOW

Karnataka Assembly Winter Session Live: ಮೂರು ದಿನಗಳ ಅಧಿವೇಶನ ಅಂತ್ಯ; ಮಾರ್ಚ್​ವರೆಗಿನ ಹಣಕಾಸು ಮಸೂದೆಗೆ ಒಪ್ಪಿಗೆ

Live Karnataka Vidhan Sabha Session Updates: ಪ್ರವಾಹ ಪರಿಹಾರ ಹೆಚ್ಚಳಕ್ಕೆ ಆಡಳಿತ ಪಕ್ಷ  ಒಪ್ಪದ ಹಿನ್ನೆಲೆ ಪ್ರತಿಪಕ್ಷಗಳು ಸಭಾ ತ್ಯಾಗ ಮಾಡಿದ್ದಾರೆ. ಇಂದು ವಿತ್ತಿಯ ಮಂಡನೆಗೆ ಅನುಮೋದನೆ ನಡೆಯಲಿದ್ದು, ಪ್ರತಿಪಕ್ಷಗಳ ಬೇಡಿಕೆಗೆ ಒಪ್ಪದ ಆಡಳಿತ ಪಕ್ಷದ ಬಗ್ಗೆ ನಾಯಕರು ಇಂದು ಸನದಲ್ಲಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ

Kannada.news18.com | October 12, 2019, 4:22 PM IST
facebook Twitter Linkedin
Last Updated 1 week ago
auto-refresh
ವಿಧಾನಸಭಾ ಚಳಿಗಾಲ ಅಧಿವೇಶನದ ಕಡೆಯ ದಿನ ಇಂದು.  ಪ್ರವಾಹ ಪರಿಹಾರ ಕುರಿತು ಒಂದೂವರೆ ದಿನಗಳ ಕಾಲ ಆಡಳಿತ ಹಾಗೂ ವಿರೋಧ ಪಕ್ಷಗಳು ಚರ್ಚೆ ನಡೆಸಿದರು. ಸಂತ್ರಸ್ತರಿಗೆ ಎಲ್ಲರಿಗೂ ಸೂರು ಕಲ್ಪಿಸುವ ಭರವಸೆಯನ್ನು ಸಿಎಂ ನೀಡಿದ್ದಾರೆ. ಇನ್ನು ಪರಿಹಾರ ಹೆಚ್ಚಳಕ್ಕೆ ಆಡಳಿತ ಪಕ್ಷ  ಒಪ್ಪದ ಹಿನ್ನೆಲೆ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದ್ದಾರೆ. ಇಂದು ವಿತ್ತಿಯ ಮಂಡನೆಗೆ ಅನುಮೋದನೆ ನಡೆಯಲಿದ್ದು, ಪ್ರತಿಪಕ್ಷಗಳ ಬೇಡಿಕೆಗೆ ಒಪ್ಪದ ಆಡಳಿತ ಪಕ್ಷದ ಬಗ್ಗೆ ನಾಯಕರು ಇಂದು ಸನದಲ್ಲಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದ್ದು, ಈ ಕುರಿತ ಕ್ಷಣ ಕ್ಷಣದ ಸುದ್ದಿ ನ್ಯೂಸ್​ 18 ಕನ್ನಡ ವೆಬ್​ನಲ್ಲಿ Read More
3:42 pm (IST)

ವಿಧೇಯಕ ಮಂಡನೆ ನಂತರ  ಸಿಎಂ ಯಡಿಯೂರಪ್ಪ ಹೇಳಿಕೆ.

ಉಳಿದ ಏಳು ತಿಂಗಳಿಗೆ ಅನುಕೂಲವಾಗುವಂತೆ 1.42 ಲಕ್ಷ ಕೋಟಿ ರೂ ಲೇಖಾನುದಾನಕ್ಕೆ ಅನುಮತಿ ಪಡೆದಿದ್ದೇವೆ

ತೆರಿಗೆ ಸಂಗ್ರಹದಲ್ಲಿ ಹಿಂದೆ ಬೀಳೋದಿಲ್ಲ, ಎಷ್ಟು ನಿಗದಿಯಾಗಿತ್ತೋ ಅಷ್ಟನ್ನು ಸಂಗ್ರಹಿಸುತ್ತೇವೆ.

ಮೋಟಾರು ವಾಹನ ತೆರಿಗೆಯಲ್ಲಿ ಕಡಿಮೆಯಾಗಿದೆ.  ಅದನ್ನು ವೃದ್ದಿಗೊಳಿಸಲು ಕ್ರಮ ತೆಗೆದುಕೊಳ್ಳುತ್ತೇವೆ

ಹಿಂದಿನ ಸರ್ಕಾರ ಮಂಡಿಸಿರುವ ಬಜೆಟ್ ಅನ್ನೇ ಒಂದೇ ಒಂದು ಶಬ್ದವನ್ನೂ ಬದಲಾಯಿಸಿದೆ ಮುಂದುವರಿಸಿದ್ದೇವೆ

ಇವತ್ತಿನ ಹಣಕಾಸು ಪರಿಸ್ಥಿತಿಯಲ್ಲಿ ಕಬ್ಬು ಬೆಳೆಗೆ ಹೆಚ್ಚು ಹಣ ನೀಡಲು ಸಾಧ್ಯವಿಲ್ಲ

ಎ ಮತ್ತು ಬಿ ಶ್ರೇಣಿ ಮನೆಗಳೆರಡಕ್ಕೂ ಐದು ಲಕ್ಷ ರೂಪಾಯಿ ಪರಿಹಾರ‌ನೀಡಲಾಗಿದೆ.

ಹಣಕಾಸಿನ ಸ್ಥಿತಿ ಸರಿ‌ ಇದ್ದಿದ್ದರೆ ಹೆಚ್ಚು ಪರಿಹಾರವನ್ನು ನೀಡುತ್ತಾ ಇದ್ದೆ

ಆದರೆ ಡಿಸೆಂಬರ್ ನಂತರ ರಾಜ್ಯದ ಹಣಕಾಸು ಪರಿಸ್ಥಿತಿ ಸುಧಾರಣೆ ಆಗಲಿದೆ

ಆ ನಂತರ ರೈತರಿಗೆ ನೆರವು ನೀಡೋಣ. ಆದರೆ ಈಗ ಹಣಕಾಸು ಪರಿಸ್ಥಿತಿ ಸರಿಯಿಲ್ಲ. 

ಆದ್ದರಿಂದ ವಿರೋಧ ಪಕ್ಷದ ಸದಸ್ಯರು ಸಹಕರಿಸಬೇಕು.

Load More