Assembly Session- ಸೆ. 13-24ರವರೆಗೆ ವಿಧಾನಸಭೆ ಅಧಿವೇಶನ; ಈ ಬಾರಿ ಅತ್ಯುತ್ತಮ ಶಾಸಕ ಪ್ರಶಸ್ತಿ: ಸ್ಪೀಕರ್ ಕಾಗೇರಿ

ಸೆ. 13ರಿಂದ 10 ದಿನ ಕಾಲ ಅಧಿವೇಶನ ನಡೆಯಲಿದೆ. ಸಾರ್ವಜನಿಕರು ಬಂದು ವೀಕ್ಷಿಸಲು ಅನುಮತಿ ಕೊಡಲಾಗುವುದು. ಈ ಬಾರಿ ಅತ್ಯುತ್ತಮ ಶಾಸಕ ಪ್ರಶಸ್ತಿ ಕೊಡುತ್ತೇವೆ ಎಂದು ಸ್ಪೀಕರ್ ಕಾಗೇರಿ ಮಾಹಿತಿ ನೀಡಿದ್ದಾರೆ.

ವಿಶ್ವೇಶ್ವರ ಹೆಗಡೆ ಕಾಗೇರಿ

ವಿಶ್ವೇಶ್ವರ ಹೆಗಡೆ ಕಾಗೇರಿ

 • Share this:
  ಬೆಂಗಳೂರು, ಸೆ. 08: ಈ ಬಾರಿಯ ವಿಧಾಸಭೆಯ ಅಧಿವೇಶನ ಮುಂಬರುವ ಸೋಮವಾರ, ಅಂದರೆ ಸೆಪ್ಟೆಂಬರ್ 13ರಂದು ಪ್ರಾರಂಭವಾಗಲಿದೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಈ ವಿಚಾರವನ್ನು ತಿಳಿಸಿದರು. ಹತ್ತು ದಿನಗಳ ಕಾಲ ನಡೆಯಲಿರುವ ಅಧಿವೇಶನ ಸೆ. 24ರಂದು ಅಂತ್ಯವಾಗಲಿದೆ. ಯಾರೂ ರಜೆ ಕೇಳಬಾರದು, ಕಡ್ಡಾಯವಾಗಿ ಹಾಜರಾಗಬೇಕು ಎಂದು ಮನವಿ ಮಾಡಿದ ಕಾಗೇರಿ, ಕೋರಂ ಕೊರತೆ, ಪ್ರಶ್ನೆ ಕೇಳುವವರು ಇಲ್ಲ, ಉತ್ತರ ಹೇಳುವವರು ಇಲ್ಲ ಎಂಬಂಥ ಸ್ಥಿತಿ ನಿರ್ಮಾಣವಾಗಬಾರದು ಎಂದು ಎಚ್ಚರಿಸಿದರು. ಈ ಹತ್ತನೇ ಅಧಿವೇಶನವನ್ನು ಗಂಭೀರವಾಗಿ ನಡೆಸಲು ನಿರ್ಧರಿಸಿದ್ಧೇವೆ. ಯಾರೂ ಗೈರಾಗಬಾರದು. ಮಂತ್ರಿಗಳು ಯಾವುದೋ ನೆಪವೊಡ್ಡಿ ರಜೆ ಕೇಳಬೇಡಿ. ಅಗತ್ಯವಿದ್ದಲ್ಲಿ ಸಹಕಾರ ನೀಡುತ್ತೇನೆ. ಕಡ್ಡಾಯ ಹಾಜರಾತಿ ಖಚಿತಪಡಿಸುವಂತೆ ವಿಪ್​ಗಳಿಗೂ ತಿಳಿಸಿದ್ದೇನೆ. ಕೋರಂ ಆಗಲು ಅರ್ಧ ಗಂಟೆ ಬೆಲ್ ಹೊಡೆಯುವ ಸ್ಥಿತಿ ಬರಬಾರದು ಎಂದು ಸ್ಪೀಕರ್ ಕಾಗೇರಿ ಮನವಿ ಮಾಡಿದರು.

  ಅಧಿವೇಶನದ ಕೊನೆಯ ದಿನ ಸೆ. 24ರ ಶುಕ್ರವಾರದಂದು ಕೇಂದ್ರದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಇಲ್ಲಿಗೆ ಬಂದು ಸಂಸದೀಯ ಮೌಲ್ಯಗಳ ಕುರಿತು ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕೊರೊನಾ ಮಾರ್ಗಸೂಚಿಗಳ ಪ್ರಕಾರವೇ ಅಧಿವೇಶನ ನಡೆಯಲಿದೆ ಎಂದು ತಿಳಿಸಿದ ವಿಧಾನಸಭೆ ಅಧ್ಯಕ್ಷರು, ಈ ಬಾರಿ 18 ಬಿಲ್​ಗಳು ಬಂದಿದೆ. ತಡೆ ಹಿಡಿದಿರುವ ನಾಲ್ಕು ಬಿಲ್​ಗಲು ಬಾಕಿ ಇವೆ. ಇವುಗಳ ಬಗ್ಗೆ ಚರ್ಚೆ ಮಾಡಲಾಗುವುದು. ಸ್ಟಾರ್, ಅನ್​ಸ್ಟಾರ್ ಮತ್ತು ಗಮನ ಸೆಳೆಯುವ ಪ್ರಶ್ನೆಗಳು ಇರಲಿವೆ. ನಮ್ಮ ವೆಬ್​ಸೈಟ್​ನಲ್ಲಿ ಚುಕ್ಕಿ ಹಾಗೂ ಇತರೆ ಪ್ರಶ್ನೆಗಳನ್ನ ಅಪ್​ಲೋಡ್ ಮಾಡಲಾಗುವುದು. ಸಾರ್ವಜನಿಕರ ಸೇವೆಗೂ ಪ್ರಶ್ನೆಗಳು ಲಭ್ಯ ಇರಲಿವೆ ಎಂದರು.

  ಇದನ್ನೂ ಓದಿ: Bus Fare Hike: ಗಣೇಶ ಹಬ್ಬಕ್ಕೆ ಊರಿಗೆ ಹೊರಟವರಿಗೆ ಶಾಕ್; ಖಾಸಗಿ ಬಸ್ ದರ ದುಪ್ಪಟ್ಟು ಏರಿಕೆ

  ಯಾವ್ಯಾವ ಬಿಲ್​ಗಳು ಬಂದಿವೆ?: ಬೆಂಗಳೂರು ಜಲಮಂಡಳಿ ಬಿಲ್ (BWSSB Bill), ಗೂಂಡಾ, ಕೊಳಚೆ ಪ್ರದೇಶ ಕಬಳಿಸುವವರ ವಿದೇಯಕ 2021 ಬಿಲ್, ದಂಡ ಪ್ರಕ್ರಿಯೆ, ಬಂದೀಖಾನೆ, ಸ್ಟಾಂಪ್ ತಿದ್ದುಪಡಿ, ಪೌರಸಭೆಯ ತಿದ್ದುಪಡಿ, 4 ಆದ್ಯಾ ಆದೇಶ ಬಿಲ್, ಸಿವಿಲ್ ಸೇವೆ ಶಿಕ್ಷಕರ ಬಿಲ್ ತಿದ್ದುಪಡಿ, ಪಟ್ಟಣ ಮತ್ತು ಗ್ರಾಮಾಂತರ ಆದ್ಯ ಆದೇಶ ಇವು ಮುಂತಾದವು ಮಸೂದೆಗಳು ಈ ಬಾರಿ ಮಂಡನೆಯಾಗಲಿವೆ.

  ಅತ್ಯುತ್ತಮ ಶಾಸಕ ಪ್ರಶಸ್ತಿ:

  ಈ ಬಾರಿ ಅಧಿವೇಶನದಲ್ಲಿ ಕೆಲ ಬದಲಾವಣೆಗಳು ಇರಲಿವೆ ಎಂಬ ಸುಳಿವನ್ನು ಸ್ಪೀಕರ್ ನೀಡಿದರು. ಈ ಬಾರಿ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲು ನಿರ್ಧಾರ ಮಾಡಲಾಗಿದೆ. ಈ ಪ್ರಶಸ್ತಿಗೆ ಒಬ್ಬ ಶಾಸಕರನ್ನ ಗುರುತಿಸಲು ಕಮಿಟಿ ರಚನೆ ಮಾಡಿದ್ದೇವೆ. ಮುಖ್ಯಮಂತ್ರಿ ಹಾಗೂ ವಿಪಕ್ಷದವರು ಎಲ್ಲರೂ ಈ ಕಮಿಟಿಯಲ್ಲಿ ಇರಲಿದ್ದಾರೆ. ಈ ಬಾರಿ ಅಧಿವೇಶನವನ್ನು ವೀಕ್ಷಿಸಲು ಸಾರ್ವಜನಿಕರಿಗೂ ಅವಕಾಶ ನೀಡಲಾಗುವುದು. ಆದರೆ, ಶಾಲಾ ಮಕ್ಕಳನ್ನು ಅಧಿವೇಶನಕ್ಕೆ ಕರೆದುಕೊಂಡು ಬರುವುದು ಬೇಡ ಎಂದು ವಿಶ್ವೇಶ್ವವರ ಹೆಗಡೆ ಕಾಗೇರಿ ವಿವರಿಸಿದರು.

  ಇದನ್ನೂ ಓದಿ: Assault- ಲೈನ್​ನಲ್ಲಿ ಬನ್ನಿ ಎಂದಿದ್ದಕ್ಕೆ ಯುವತಿ ಮೇಲೆ ಹಲ್ಲೆ; ಬೆಂಗಳೂರಿನ ಸೂಪರ್ ಮಾರ್ಕೆಟ್​ನಲ್ಲಿ ಘಟನೆ

  ಸರ್ಕಾರಿ ನಿವಾಸಗಳ ನವೀಕರಣ ವಿಚಾರಕ್ಕೆ ಮಾತನಾಡಿದ ಕಾಗೇರಿ ತಮ್ಮ ಅಸಮಾಧಾನವನ್ನು ಹೊರಹಾಕಿದರು. ನಾವು ಸಾರ್ವಜನಿಕ ಸೇವೆಯಲ್ಲಿರುವವರು. ಅದರ ಅಗತ್ಯಕ್ಕೆ ತಕ್ಕಂತೆ ಮಾತ್ರ ಸೌಲಭ್ಯ ಇಟ್ಟುಕೊಳ್ಳಬೇಕು. ನಮ್ಮ ಅಗತ್ಯಕ್ಕೆ ತಕ್ಕಂತೆ ನಾವು ಬದಲಾವಣೆ ಮಾಡಿಕೊಳ್ಳುವುದಲ್ಲ. ವಾಸ್ತು ಅಂತ ಹೋಗಿ ಯಾವುದು ಬರಬೇಕು ಅದು ಬರಲಿದೆ, ಹೋಗೋದು ಹೋಗಲಿದೆ ಎಂದು ಅವರು ಟೀಕಿಸಿದರು.

  ವರದಿ: ಚಿದಾನಂದ ಪಟೇಲ್
  Published by:Vijayasarthy SN
  First published: