LIVE NOW

Karnataka Assembly Session Live: ವಿಧಾನ ಪರಿಷತ್ ಕಲಾಪ ಆರಂಭ

Live Karnataka Assembly Session Updates: ರಾಜ್ಯಪಾಲ ವಜುಭಾಯ್ ವಾಲಾ ನಿನ್ನೆ ಸದನದಲ್ಲಿ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ರಚನಾತ್ಮಕ ಚರ್ಚೆಯಾಗಲಿ ಎಂದು ಕರೆ ಕೊಟ್ಟಿದ್ದರು. ಸಿಎಎ ಬಗ್ಗೆ ಯಾವುದೇ ಚಕಾರವೆತ್ತದ ರಾಜ್ಯಪಾಲರ ಭಾಷಣವನ್ನು ವಿಪಕ್ಷ ನಾಯಕರು ಸಪ್ಪೆ ಎಂದು ಟೀಕಿಸಿದ್ದರು.

Kannada.news18.com | February 20, 2020, 3:50 PM IST
facebook Twitter Linkedin
Last Updated February 20, 2020
auto-refresh
Karnataka Assembly Session Live: ನಿನ್ನೆಯಿಂದ ವಿಧಾನಮಂಡಲ ಜಂಟಿ ಅಧೀವೇಶನ ಪ್ರಾರಂಭವಾಗಿದೆ. ರಾಜ್ಯಪಾಲ ವಜುಭಾಯ್ ವಾಲಾ ನಿನ್ನೆ ಸದನದಲ್ಲಿ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ರಚನಾತ್ಮಕ ಚರ್ಚೆಯಾಗಲಿ ಎಂದು ಕರೆ ಕೊಟ್ಟಿದ್ದರು. ಸಿಎಎ ಬಗ್ಗೆ ಯಾವುದೇ ಚಕಾರವೆತ್ತದ ರಾಜ್ಯಪಾಲರ ಭಾಷಣವನ್ನು ವಿಪಕ್ಷ ನಾಯಕರು ಸಪ್ಪೆ ಎಂದು ಟೀಕಿಸಿದ್ದರು. ಇಂದು ಎರಡನೇ ದಿನದ ಕಲಾಪ ನಡೆಯಲಿದ್ದು, ಚರ್ಚೆಗೆ ಅವಕಾಶ ಕೊಡದಿದ್ದರೆ ಹೋರಾಟ ನಡೆಸಲು ವಿಪಕ್ಷ ನಾಯಕರು ನಿರ್ಧರಿಸಿದ್ದಾರೆ. ಈ ಕುರಿತ ಕ್ಷಣ-ಕ್ಷಣದ ಮಾಹಿತಿ ನ್ಯೂಸ್​18 ಕನ್ನಡದಲ್ಲಿ... Read More
2:57 pm (IST)

ವಿಧಾನ ಪರಿಷತ್ ಕಲಾಪ

ಸಚಿವ ಬಸವರಾಜ್ ಬೊಮ್ಮಾಯಿ ಉತ್ತರ

ತಮ್ಮ ಭಾವನೆಗಳನ್ನ ವ್ಯಕ್ತಪಡಿಸಿದ್ದೀರಿ, ಎಲ್ಲವೂ ಅರ್ಥ ವಾಗುತ್ತೆ 

ನಾವು ದಾಖಲೆಗಳನ್ನ ಹೈ ಕೋರ್ಟ್ ಗೆ ಸಲ್ಲಿಸಿದ್ದೇವೆ 

ಪಿಐಎಲ್ ಹಾಕಿರುವವರಿಗೆ ನೋಟೀಸ್ ನೀಡಿದ್ದಾರೆ 

ಅಲ್ಲಿ ನಡೆದಿರೋ ಘಟನೆ, ಭಾಷಣ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದ ಬಳಿಕ ವಿಚಾರ ದೊಡ್ಡದಾಗಿದೆ

ಹೈ ಕೋರ್ಟ್ ನಲ್ಲಿ ಎಲ್ಲ ದಾಖಲೆಗಳನ್ನ ನೀಡಿದ್ದೇವೆ 

ಹೈ ಕೋರ್ಟ್ ಸೂಕ್ತ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೆ 

ಹೈ ಕೋರ್ಟ್ ನಿರ್ದೇಶನದಂತೆ ಸರ್ಕಾರ ಕ್ರಮ ಜರುಗಿಸುತ್ತೆ

೯ ರಂದು ಕೋರ್ಟ್ ನೀಡುವ ಆದೇಶ ಏನಾಗುತ್ತೆ ಅಂತ ನೋಡೋಣ 

ಹೈ ಕೋರ್ಟ್ ಆದೇಶದಂತೆ ನಾವೆಲ್ಲ ನಡೆದುಕೊಳ್ಳೋಣ

ಆಫೀಡವಿಟ್ ನಲ್ಲಿ ಏನಿದೆ ಎಂದು ಇಲ್ಲಿ ಚರ್ಚೆ ಮಾಡೋದಕ್ಕೆ ಸಾಧ್ಯವಾಗೋದಿಲ್ಲ

ಗೃಹಸಚಿವರ ಉತ್ತರ

ಗೋಲಿಬಾರ್ ವಿಚಾರ ನ್ಯಾಶನಲ್ ಹ್ಯೂಮನ್‌ ರೈಟ್ಸ್ ಸೂಚನೆಯಂತೆ ಮ್ಯಾಜಿಸ್ಟ್ರೇಟ್ ತನಿಖೆಗೆ ನೀಡಿದ್ದೇವೆ

2:49 pm (IST)

ಮೊದಲ ಬಾರಿಗೆ ವಿಧಾನಸಭೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಭಾಷಣ - 

ನಮ್ಮ ಕ್ಷೇತ್ರ ನಗರದ ಪಕ್ಕದಲ್ಲಿ ಇರುವ ಕಾರಣ ನಗರದ ತೊಂದರೆ, ಗ್ರಾಮೀಣ ಪ್ರದೇಶವೂ ಆಗಿರುವುದರಿಂದ ಗ್ರಾಮೀಣ ಭಾಗದ ತೊಂದರೆ ಇದೆ.

ನಮ್ಮ ಕ್ಷೇತ್ರದ ಮೂಲಕವೇ ಕೆ.ಸಿ.ವ್ಯಾಲಿ ನೀರು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗೆ ಹರಿಯುತ್ತದೆ.

ಆದರೆ ನಮ್ಮ ಕ್ಷೇತ್ರಕ್ಕೆ ಮಾತ್ರ ನೀರು ಸಿಗುತ್ತಿಲ್ಲ. ನಮಗೆ ಬೇರೆ ಯಾವುದೇ ನೀರಿನ ಮೂಲವೂ ನಮಗಿಲ್ಲ‌.

ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ಇಡೀ ರಾಜ್ಯಕ್ಕೆ ನಮ್ಮ ಕ್ಷೇತ್ರದಿಂದ ಹಣ್ಣು ತರಕಾರಿ ಪೂರೈಕೆ ಮಾಡಲಾಗುತ್ತದೆ.

ಇದರಿಂದಾಗಿಯೇ ಅಂತರ್ಜಲ ಹೆಚ್ಚು ಬಳಕೆಯಾಗಿ ನೀರು ಖಾಲಿಯಾಗುತ್ತಿದೆ.

ಹಾಗಾಗಿ ನಮ್ಮ ಕ್ಷೇತ್ರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆ ರೂಪಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ.

Load More