ಬೆಂಗಳೂರು (ಮಾರ್ಚ್ 03); ಇಂದು ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಕಂದಾಯ ಸಚಿವ ಆರ್. ಅಶೋಕ್ ವಿವಾದಾತ್ಮಕ ಕರ್ನಾಟಕ ಭೂ ಸಾಧಾರಣಾ ತಿದ್ದುಪಡಿ ವಿಧೇಯಕ ಮಂಡಿಸಲಿದ್ದಾರೆ.
ಹಿಂದಿನ ಭೂ ಸುಧಾರಣಾ ಕಾಯ್ದೆಯಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ಸರ್ಕಾರದಿಂದ ಪಡೆದ ಭೂಮಿ ಉಪಯೋಗವಾಗದಿದ್ದರೆ, 10 ವರ್ಷದ ಬಳಿಕ ಆ ಭೂಮಿಯನ್ನು ಸರ್ಕಾರ ಮತ್ತೆ ವಾಪಸ್ ಹಿಂಪಡೆಯುತ್ತಿತ್ತು. ಆದರೆ, ಇದೀಗ ರಾಜ್ಯ ಬಿಜೆಪಿ ಸರ್ಕಾರ ಈ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಕೈಗಾರಿಕೆ ಉದ್ದೇಶಕ್ಕಾಗಿ ಪಡೆದ ಜಮೀನನ್ನು 7 ವರ್ಷವಾದ ಬಳಿಕ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿದೆ.
ಯಾವ ಉದ್ದೇಶಕ್ಕೆ ಸರ್ಕಾರಿ ಭೂಮಿಯನ್ನು ಪಡೆಯಲಾಗಿತ್ತೋ ಅದೇ ಉದ್ದೇಶಕ್ಕಾಗಿ ಬೇರೆ ಕಂಪೆನಿಗೆ 7 ವರ್ಷದ ನಂತರ ಭೂಮಿಯನ್ನು ಮಾರಾಟ ಮಾಡುವ ಸೇಲ್ ಡೀಡ್ ಗೆ ಅವಕಾಶ ಮಾಡಿಕೊಡಲು ರಾಜ್ಯ ಸರ್ಕಾರ ಈ ನೂತನ ವಿಧೇಯಕದಲ್ಲಿ ತಿದ್ದುಪಡಿ ತಂದಿದೆ.
ಆದರೆ, ಈ ತಿದ್ದುಪಡಿಯಿಂದ ಸರ್ಕಾರಕ್ಕೆ ನಷ್ಟವಾಗಲಿದೆ ಎಂದು ಆರೋಪಿಸಿರುವ ವಿರೋಧ ಪಕ್ಷಗಳು ಈ ವಿಧೇಯದ ಕುರಿತು ತಕಾರರು ಎತ್ತಿವೆ. ಆದರೆ, ವಿರೋಧ ಪಕ್ಷಗಳ ವಿರೋಧದ ನಡುವೆಯೂ ಇಂದು ಈ ವಿಧೇಯಕ ಮಂಡನೆಯಾಗಿ ಅಂಗೀಕಾರವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನಿನ್ನೆಯೂ ಸಹ ರಾಜ್ಯ ಸರ್ಕಾರ ವಿರೋಧ ಪಕ್ಷದ ಗದ್ದಲದ ನಡುವೆ 8 ವಿಧೇಯಕಗಳನ್ನು ಮಂಡಿಸಿ ಅಂಗೀಕಾರ ಪಡೆದಿತ್ತು.
ಇದನ್ನೂ ಓದಿ : ಕೊರೊನಾ ಸೋಂಕಿಗೆ ಗೋಮೂತ್ರ ಸಗಣಿಯೊಂದೇ ಪರಿಹಾರ; ಅಸ್ಸಾಂ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಹೇಳಿಕೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ