Assembly Session- ಸಿದ್ದರಾಮಯ್ಯ ಪಂಚೆ ಕಳಚಿಕೊಂಡಿದ್ದು, ಸುಧಾಕರ್, ಅರಗ ಜ್ಞಾನೇಂದ್ರ ಪೇಚಿಗೀಡಾಗಿದ್ದು…

Siddaramaiah fierce talk- ಮೈಸೂರು ರೇಪ್ ಕೇಸ್ ಚರ್ಚೆಯ ವೇಳೆ ವಿಪಕ್ಷ ನಾಯಕರ ಮಾತುಗಳಿಗೆ ಪದೇ ಪದೇ ಮಧ್ಯ ಪ್ರವೇಶಿಸಿ ಉತ್ತರ ಕೊಡುತ್ತಿದ್ದ ಡಾ. ಕೆ ಸುಧಾಕರ್ ಅವರಿಗೆ ಸುಮ್ಮನೆ ಕೂರುವಂತೆ ಸಿದ್ದರಾಮಯ್ಯ ಗದರಿದ ಘಟನೆ ವಿಧಾನಸಭೆ ಅಧಿವೇಶನದಲ್ಲಿ ಜರುಗಿತು.

ವಿಪಕ್ಷ ನಾಯಕ ಸಿದ್ದರಾಮಯ್ಯ

ವಿಪಕ್ಷ ನಾಯಕ ಸಿದ್ದರಾಮಯ್ಯ

  • Share this:
    ಬೆಂಗಳೂರು, ಸೆ. 22: ವಿಧಾನಸಭೆಯಲ್ಲಿ ಇವತ್ತಿನ ಅಧಿವೇಶನ ಕಲಾಪದಲ್ಲಿ (Karnataka Assembly Session) ಮಧ್ಯಾಹ್ನದವರೆಗೂ ಮೈಸೂರು ಅತ್ಯಾಚಾರ ಘಟನೆ (Mysore Gang Rape Case) ವಿಚಾರದ ಬಗ್ಗೆ ಚರ್ಚೆಯೇ ಪ್ರಧಾನವಾಗಿತ್ತು. ನಿರೀಕ್ಷಿಸಿದಂತೆ ಸಿದ್ದರಾಮಯ್ಯ (Opposition leader Siddaramaiah) ಅವರ ವಾಗ್ದಾಳಿಗೆ ಸಚಿವರುಗಳು ಉತ್ತರ ಹೇಳಲು ತಡಬಡಾಯಿಸುವಂತಾಯಿತು. ಅತ್ಯಾಚಾರದ ಬಗ್ಗೆ ಚರ್ಚಿಸುವ ವೇಳೆ ಸಿದ್ದರಾಮಯ್ಯ ಅವರ ಪಂಚೆ ಕಳಚಿಕೊಂಡಿದ್ದೂ ಸೇರಿ ಅನೇಕ ಸ್ವಾರಸ್ಯ ಘಟನೆ ಮತ್ತು ಮಾತುಗಳಿಗೆ ವಿಧಾನಸಭೆ ಇಂದೂ ಸಾಕ್ಷಿಯಾಯಿತು. ಕಳೆದ ಶುಕ್ರವಾರವೇ ನಿರ್ಧಾರವಾದಂತೆ ಇಂದು ಸಿದ್ದರಾಮಯ್ಯಗೆ ಸ್ಪೀಕರ್ ಅವರು ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡಲು ಅವಕಾಶ ಕೊಟ್ಟರು. ಪ್ರಕರಣದ ಬಗ್ಗೆ ಸಿದ್ದರಾಮಯ್ಯ ಮಾತನಾಡುವಾಗ ಅವರ ಪಂಚೆ ಕಳಚಿಕೊಳ್ಳುತ್ತಿರುವುದು ಗಮನಕ್ಕೆ ಬರಲಿಲ್ಲ. ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಗಮನಕ್ಕೆ ತಂದರು. ಆಗ ಸಿದ್ದರಾಮಯ್ಯ ಅವರೇ ಖುದ್ದಾಗಿ ತಮ್ಮ ಪಂಚೆ ಕಳಚಿಕೊಂಡಿರುವುದನ್ನು ಇಡೀ ವಿಧಾನಸಭೆಗೆ ಬಹಿರಂಗಪಡಿಸಿ ಸದನದಲ್ಲಿ ನಗೆಬುಗ್ಗೆ ಉಕ್ಕಿಸಿದರು.

    ಅಧ್ಯಕ್ಷರೇ, ನನ್ನ ಪಂಚೆ ಕಳಚಿದೆ. ಇರಿ, ಕಟ್ಟಿಕೊಂಡು ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ ಬಳಿಕ ಸದನ ಕೆಲ ಕ್ಷಣ ನಗೆಗಡಲಲ್ಲಿ ಮುಳುಗಿತು. ಈ ವೇಳೆ, ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ಸದಸ್ಯ ರಮೇಶ್ ಕುಮಾರ್ (Ramesh Kumar) ಅವರು ಸಿದ್ದರಾಮಯ್ಯ ಅವರ ಪಂಚೆ ಮಾತಿಗೆ ತಯಾಷೆಯಾಗಿ ಆಕ್ಷೇಪ ತೆಗೆದರು. “ಅವ್ರು (ಡಿಕೆಶಿ) ಏನೋ ಗುಟ್ಟಾಗಿ ಕಿವಿಯಲ್ಲಿ ಹೇಳಿದರೆ ನೀವು ಅದನ್ನ ಬಹಿರಂಗ ಮಾಡ್ತೀರಲ್ಲ” ಎಂದು ರಮೇಶ್ ಕುಮಾರ್ ತಮಾಷೆ ಮಾಡಿದರು. ಇದಾದ ಬಳಿಕ ಸಿದ್ದರಾಮಯ್ಯ ಪಂಚೆ ಸರಿ ಮಾಡಿಕೊಂಡು ಮತ್ತೆ ಮಾತನಾಡಿದರು. “ಮೊದಲು ಪಂಚೆ ಬಿಚ್ಚಿ ಹೋಗುತ್ತಿರಲಿಲ್ಲ. ಕೊರೋನಾ ಬಂದ ಮೇಲೆ ಬೊಜ್ಜು ಜಾಸ್ತಿ ಆಗಿ ಪಂಚೆ ಕಳಚಿಕೊಳ್ಳೋಕೆ ಶುರುವಾಗಿದೆ” ಎಂದು ವಿವರಣೆಯನ್ನೂ ನೀಡಿದರು.

    ಪೊಲೀಸ್ ಲೋಪದೋಷದ ಬಗ್ಗೆ ಸಿದ್ದರಾಮಯ್ಯ ಚಾಟಿ:

    ನಂತರ ಮೈಸೂರು ರೇಪ್ ಪ್ರಕರಣದಲ್ಲಿ ಸರ್ಕಾರ ಹಾಗೂ ಪೊಲೀಸ್ ಇಲಾಖೆಯಿಂದ ಆಗಿರುವ ಲೋಪದೋಷಗಳ ಬಗ್ಗೆ ಸಿದ್ದರಾಮಯ್ಯ ಉಗ್ರ ರೀತಿಯಲ್ಲಿ ತರಾಟೆ ತೆಗೆದುಕೊಂಡರು. ಸಂತ್ರಸ್ತ ಹುಡುಗಿಯ ಮರ್ಮಾಂಗದಲ್ಲಿ ರಕ್ತಸ್ರಾವವಾಗಿದೆ. ರಾತ್ರಿ 11:30ಕ್ಕೆ ತಪಾಸಣೆ ಮಾಡಿ 354(ಎ) ಸೆಕ್ಷನ್ ಹಾಕಿ ಕಳುಹಿಸಿದ್ದಾರೆ. ಸ್ಥಳೀಯರು ಮತ್ತು ನಮ್ಮ ಕಾರ್ಯಕರ್ತರು ಗಲಾಟೆ ಮಾಡಿದ ಬಳಿಕ ಸೆಕ್ಷನ್ 376 ಅಡಿ ಎಫ್​ಐಆರ್ ಹಾಕಿದ್ದಾರೆ. 14-15 ಗಂಟೆ ವಿಳಂಬವಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಅತ್ಯಾಚಾರ ಘಟನೆಯ ದೂರು ದಾಖಲಾಗುತ್ತಿದ್ದಂತೆಯೇ ಪ್ರಕರಣ ದಾಖಲಿಸಬೇಕಿತ್ತು. ಆದರೆ, ವಿಳಂಬ ಮಾಡಿದ್ಧಾರೆ. ಸರ್ಕಾರಿ ಆಸ್ಪತ್ರೆ ಬದಲು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ಧಾರೆ. ಕೇಸ್ ಮುಚ್ಚಿಹಾಕಲು ಈ ಪ್ರಯತ್ನ ಮಾಡಿದರಾ? ಘಟನೆ ನಡೆದ ಸ್ಥಳ ಯಾವ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತೆ ಅನ್ನೋದೇ ಗೊತ್ತಿಲ್ಲ. ಇವರು ಎಂಥ ಪೊಲೀಸ್ ಕೆಲಸ ಮಾಡುತ್ತಾರೆ. ಇವರಿಂದ ರಕ್ಷಣೆ ಸಿಗೋಕೆ ಸಾಧ್ಯವಾ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

    ಆಗ ಮಧ್ಯ ಪ್ರವೇಶಿಸಿದ ಸುಧಾಕರ್, ಆರು ಜನರು ಅತ್ಯಾಚಾರ ಮಾಡಿದ್ದಾರೆ. ಅಂಥ ಸ್ಥಿತಿಯಲ್ಲಿ ಆಕೆಯಿಂದ ಸ್ಟೇಟ್ಮೆಂಟ್ ಪಡೆಯಲು ಸಾಧ್ಯವೇ ಎಂದು ಕೇಳಿದರು. ಇದಕ್ಕೆ ಆಕ್ಷೇಪಿಸಿದ ಕಾಂಗ್ರೆಸ್ ಸದಸ್ಯ ತನ್ವೀರ್ ಸೇಠ್, ಹುಡುಗನ ಮೇಲೆ ಹಲ್ಲೆಯಾಗಿದ್ದಕ್ಕೆ ಅಸಾಲ್ಟ್ ಕೇಸ್ ಹಾಕುತ್ತಾರೆ. ಯುವತಿಯ ಅತ್ಯಾಚಾರವನ್ನೂ ಅಸಾಲ್ಟ್ ಕೇಸ್​ನಲ್ಲೇ ಬರುತ್ತದೆ. ಯುವತಿ ಮೇಲಿನ ಅತ್ಯಾಚಾರವನ್ನು ಮೆನ್ಷನ್ ಮಾಡುವುದಿಲ್ಲ ಇದು ಹೇಗೆ ಎಂದು ಸವಾಲು ಹಾಕಿದರು. ನಂತರ ಮಾತು ಮುಂದುವರಿಸಿದ ಸಿದ್ದರಾಮಯ್ಯ, ಘಟನೆ ಆಗಿರುವುದು 24ರಂದು. ಯುವತಿ ಡಿಸ್​ಚಾರ್ಜ್ ಆಗಿರುವುದು 27ರಂದು. ಘಟನೆ ನಡೆದಾಗ ಶಾಕ್​ನಲ್ಲಿದ್ದ ಯುವತಿಯಿಂದ ಹೇಳಿಕೆ ಪಡೆದಿಲ್ಲ ಓಕೆ. ಡಿಸ್​ಚಾರ್ಜ್ ಆದ ಬಳಿಕ ಆಕೆಯ ಹೇಳಿಕೆ ಯಾಕೆ ಪಡೆಯಲಿಲ್ಲ. ಡಿಸ್​ಚಾರ್ಜ್ ಮಾಡಿ ಮುಂಬೈಗೆ ಕಳುಹಿಸಿದ್ದೇಕೆ ಎಂದು ಸುಧಾಕರ್ ಅವರನ್ನ ಉದ್ದೇಶಿಸಿ ಹೇಳಿದರು.

    ಇದನ್ನೂ ಓದಿ: Siddaramaiah: ಸರ್ಕಾರದ ಗಮನಕ್ಕೆ ತಾರದೇ ಡಿಸಿ ದೇಗುಲ ಒಡೆಯುತ್ತಾರಾ?; ಧಾರ್ಮಿಕ ಕಟ್ಟಡ ಸಂರಕ್ಷಣಾ ವಿಧೇಯಕ ಚರ್ಚೆ ವೇಳೆ ಸಿದ್ದರಾಮಯ್ಯ ಪ್ರಶ್ನೆ

    ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ನಿಂದಿಸುತ್ತೀರಿ: ಅರಗ ಜ್ಞಾನೇಂದ್ರ ಬೇಸರ 

    ನಂತರ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ರೇಪ್ ಕೇಸ್ ಅನ್ನು ಸಮರ್ಥವಾಗಿ ನಿಭಾಯಿಸದೇ ಸುಮ್ಮನೆ ಪೋಸ್ ಕೊಟ್ಟಿರಿ ಎಂದು ಕೆಣಕಿದರು. ಇದಕ್ಕೆ ಗೃಹ ಸಚಿವರು ಬೇಸರಗೊಂಡರು. ಘಟನೆ ನಡೆದ ನಂತರ ಮೊದಲ ದಿನವೇ ಮೈಸೂರಿಗೆ ಹೋಗಿ ಪೊಲೀಸರ ಜೊತೆ ಚರ್ಚೆ ಮಾಡಿದೆ. ಮಾರನೇ ದಿನವೂ ಕೂಡ ಚರ್ಚೆ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನ ನನ್ನ ಜೊತೆ ಕೂರಿಸಿಕೊಂಡರೆ ಅವರು ಕೆಲಸ ಮಾಡೋದು ಬೇಡವಾ? ಕೃತ್ಯ ನಡೆದ ಸ್ಥಳಕ್ಕೆ ಹೋದರೆ ಸರಿಯಾಗುವುದಿಲ್ಲವೆಂದು ಕೆಲ ಕಾನೂನು ತಜ್ಞರು ಹೇಳಿದರು. ಇನ್ನೂ ಕೆಲವರು, ನೀವು ಸ್ಥಳಕ್ಕೆ ಹೋಗಿಲ್ಲ ಎಂದರೆ ಕಷ್ಟ ಆಗುತ್ತೆ ಅಂದರು. ಆ ಜಿಜ್ಞಾಸೆಯಲ್ಲಿದ್ದರೂ ನಾನು ಅಲ್ಲಿಗೆ ಹೋಗಿ ಕೆಲಸ ಮಾಡಿದ್ದೇನೆ. ಹಾಗಂತ ನಾನು ಪೋಸ್ ಕೊಟ್ಟಿದೆ ಎಂದು ನೀವು ಹೇಳೋದು ಏನು ಅರ್ಥ? ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ನಿಮ್ಮಂಥವರ ಬಾಯಲ್ಲಿ ಈ ರೀತಿ ಬಂದರೆ ಏನು ಅರ್ಥ ಎಂದು ಅರಗ ಜ್ಞಾನೇಂದ್ರ ಅವರು ವಿಷಾದಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಘಟನೆ ನಡೆದಾಗ ಗೃಹ ಸಚಿವರು ಸ್ಥಳಕ್ಕೆ ಹೋಗದೆ ಬೇರೆ ಯಾರು ಹೋಗುತ್ತಾರೆ. ಸ್ಥಳಕ್ಕೆ ಹೋಗಬೇಡಿ ಎಂದು ಯಾರು ನಿಮಗೆ ಸಲಹೆ ಕೊಟ್ಟಿದ್ದು? ಅವರು ವಕೀಲರಾಗಿರುವುದಿಲ್ಲ. ಬಹುಶಃ ಪೊಲೀಸರೇ ಇರಬೇಕು ಎಂದು ಗೃಹ ಸಚಿವರಿಗೆ ಸಿದ್ದರಾಮಯ್ಯ ಬೋಧಿಸಿದರು. ಡಿಕೆ ಶಿವಕುಮಾರ್, ಲಕ್ಷ್ಮೀ ಹೆಬ್ಬಾಳ್ಕರ್ ಅವರೂ ರೇಪ್ ಪ್ರಕರಣದಲ್ಲಿ ಹಾಯ್ದರು.

    ಇದನ್ನೂ ಓದಿ: Explained; Privilege Motion, ಹಕ್ಕುಚ್ಯುತಿ ಎಂದರೇನು? ಶಾಸಕರು, ಸಂಸದರಿಗೆ ನೀಡಲಾದ ಈ ಹಕ್ಕಿನ ಮಹತ್ವವೇನು?

    ಸುಧಾಕರ್ ಬಾಯಿ ಮುಚ್ಚಿಸಿದ ಸಿದ್ದರಾಮಯ್ಯ:

    ಈ ವೇಳೆ, ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಮೈಸೂರು ರೇಪ್ ಪ್ರಕರಣದಲ್ಲಿ ಉತ್ತರ ಕೊಡಲು ಬಾರಿ ಬಾರಿ ಮಧ್ಯ ಪ್ರವೇಶ ಮಾಡುತ್ತಿದ್ದರು. ಆಗ ಸಿಟ್ಟಿಗೆದ್ದ ಸಿದ್ದರಾಮಯ್ಯ, ಆರೋಗ್ಯ ಸಚಿವರನ್ನ ತರಾಟೆಗೆ ತೆಗೆದುಕೊಂಡರು. ವರ್ಮಾ ಕಮಿಷನ್ ವರದಿ ಗೊತ್ತೇನಪ್ಪಾ ಸುಧಾಕರ್ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು. ಇದಕ್ಕೆ ಸುಧಾಕರ್ ತಬ್ಬಿಬ್ಬುಗೊಂಡು, ತನಗೆ ಆ ವರದಿ ಗೊತ್ತಿಲ್ಲವೆಂದರು. “ಗೊತ್ತಿಲ್ಲವೆಂದರೆ ಪ್ಲೀಸ್ ಸಿಟ್ ಡೌನ್. ನೀವು ಮಂತ್ರಿಯಾಗಿ ಈ ರೀತಿ ಮಾಡುವಂತಿಲ್ಲ. ಗೃಹ ಸಚಿವರು ಉತ್ತರ ಕೊಡುತ್ತಾರೆ. ಅವರು ಸಮರ್ಥರಿದ್ಧಾರೆ. ನಿಮಗಿಂತ ಅವರು ಸೀನಿಯರ್ ಇದ್ದಾರೆ. ನೀವು ಕೂತ್ಕೊಳಿ” ಎಂದು ಸಿದ್ದರಾಮಯ್ಯ ಗದರಿದಾಗ ಸುಧಾಕರ್ ಸುಮ್ಮನೆ ಕೂತರು.

    ವರದಿ: ಕೃಷ್ಣ ಜಿ.ವಿ.
    Published by:Vijayasarthy SN
    First published: