ಬೆಂಗಳೂರು: ನೂತನ ಸಿದ್ದರಾಮಯ್ಯ ಸರ್ಕಾರ (Siddaramaiah Government) ನಾಳೆಯಿಂದ ಅಂದರೆ ಸೋಮವಾರದಿಂದ 3 ದಿನದ ವಿಶೇಷ ಅಧಿವೇಶನ (Assembly Session) ಕರೆದಿದೆ. ಸೋಮವಾರ, ಮಂಗಳವಾರ ಮತ್ತು ಬುಧವಾರ ವಿಧಾನಸಭೆ ಕಲಾಪ ನಡೆಯಲಿದೆ. ನೂತನವಾಗಿ ಆಯ್ಕೆಯಾದ ಶಾಸಕರು ಅಧಿವೇಶನದಲ್ಲಿ (MLA s Oath Taking) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಹಿರಿಯ ನಾಯಕ ಆರ್‌ವಿ ದೇಶಪಾಂಡೆ (RV Deshpande) ಅವರನ್ನು ಆಯ್ಕೆ ಮಾಡಲಾಗಿದೆ. ಈ ಅಧಿವೇಶನದಲ್ಲಿಯೇ ನೂತನ ಸ್ಪೀಕರ್ ಆಯ್ಕೆ ಕೂಡ ನಡೆಯಲಿದೆ. ಕಾಂಗ್ರೆಸ್ ಹಿರಿಯ ನಾಯಕರಾಗಿರುವ ಹೆಚ್ ಕೆ ಪಾಟೀಲ್ ಅವರ ಹೆಸರು ಸಹ ಸ್ಪೀಕರ್ ಪಟ್ಟಿಯಲ್ಲಿದೆ.
ರಾಜ್ಯದಲ್ಲಿ ಜೋಡೆತ್ತಿನ ಸರ್ಕಾರದ ರಾಜ್ಯಭಾರ ಶುರುವಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಜೊತೆ 8 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಡಾ. ಜಿ ಪರಮೇಶ್ವರ್, ಕೆ.ಎಚ್ ಮುನಿಯಪ್ಪ, ಕೆಜೆ ಜಾರ್ಜ್, ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ, ಹಾಗೂ ಜಮೀರ್ ಆಹಮದ್ ಖಾನ್ ಪ್ರಮಾಣ ವಚನ ಸ್ವೀಕರಿಸಿದರು.
ಕನ್ನಡಿಗರಿಗೆ ಸೋನಿಯಾ ಗಾಂಧಿ ಧನ್ಯವಾದ
ಕರ್ನಾಟಕ ರಾಜ್ಯದ ಜನರಿಗೆ ಹೃದಯಪೂರ್ವಕ ಧನ್ಯವಾದ ಹೇಳುತ್ತೇನೆ. ಐತಿಹಾಸಿಕ ಗೆಲುವಿನ ಮೂಲಕ ಕರ್ನಾಟಕ ಕಾಂಗ್ರೆಸ್ಗೆ ಬಲ ತುಂಬಿದ್ದಾರೆ ಜನ. ಇದು ಜನಪರ ಸರ್ಕಾರಕ್ಕೆ ಸಿಕ್ಕ ಗೆಲುವು. ಭ್ರಷ್ಟಾಚಾರದ ಸರ್ಕಾರ ತಿರಸ್ಕರಿಸಿದ್ದಾರೆ. ಒಡೆದು ಆಳುವ ನೀತಿಯ ಸರ್ಕಾರವನ್ನು ಜನ ತಿರಸ್ಕರಿಸಿದ್ದಾರೆ ಎಂದರು.
ಇದನ್ನೂ ಓದಿ: Congress Guarantee: ದಾರಿಯಲ್ಲಿ ಹೋಗುವವರು ಕನ್ನಡಿಗರೇ ಅಲ್ಲವೇ? ಬಿಜೆಪಿ ಪ್ರಶ್ನೆ
ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲಾ ಭರವಸೆಗಳನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಲಿದೆ. ಭರವಸೆ ಈಡೇರಿಸುವ ಈ ಬಗ್ಗೆ ನಾನು ಆಶ್ವಾಸನೆ ಕೊಡುತ್ತೇನೆ. ನಮ್ಮ 5 ಗ್ಯಾರಂಟಿಗಳಿಗೆ ಈಗಾಗಲೇ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಕರ್ನಾಟಕದ ಶಾಂತಿ, ಸಾರ್ವಭೌಮತೆ, ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಸೋನಿಯಾ ಗಾಂಧಿ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ