• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Assembly Session: ಇಂದಿನಿಂದ ಹೊಸ ಸರ್ಕಾರದ ಮೊದಲ ಕಲಾಪ; ಸ್ಪೀಕರ್​ ಆಯ್ಕೆ ಸಿಎಂಗೆ ತಲೆನೋವು!

Assembly Session: ಇಂದಿನಿಂದ ಹೊಸ ಸರ್ಕಾರದ ಮೊದಲ ಕಲಾಪ; ಸ್ಪೀಕರ್​ ಆಯ್ಕೆ ಸಿಎಂಗೆ ತಲೆನೋವು!

ಸಿದ್ದರಾಮಯ್ಯ, ಸಿಎಂ

ಸಿದ್ದರಾಮಯ್ಯ, ಸಿಎಂ

Siddaramaiah Government: ಇದು ನಮ್ಮ ಕೊನೆಯ ಚುನಾವಣೆ ಆಗಿದೆ. ಹಾಗಾಗಿ ಕ್ಷೇತ್ರದಲ್ಲಿ ನಾವು ಮಾಡಬೇಕಾಗಿರುವ ಕೆಲಸಗಳು ತುಂಬಾ ಇವೆ ಎಂದು ಹಿರಿಯ ಕಾಂಗ್ರೆಸ್ ಶಾಸಕರು ಹೇಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

  • Share this:

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದ  ಸರ್ಕಾರದ ಮೊದಲ ಅಧಿವೇಶನ (Session) ಇಂದಿನಿಂದ ಶುರುವಾಗಲಿದೆ. ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭವಾಗಲಿದೆ. ಇಂದು, ನಾಳೆ ಮತ್ತು ನಾಡಿದ್ದು ವಿಧಾನಸಭೆ ಕಲಾಪ ನಡೆಯಲಿದೆ. ನೂತನವಾಗಿ ಆಯ್ಕೆಯಾದ ಶಾಸಕರು (New MLAs) ಅಧಿವೇಶನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಹಿರಿಯ ನಾಯಕ ಆರ್‌ವಿ ದೇಶಪಾಂಡೆ (RV Deshpande) ಅವರನ್ನು ಆಯ್ಕೆ ಮಾಡಲಾಗಿದೆ. ಈ ಅಧಿವೇಶನದಲ್ಲಿಯೇ ನೂತನ ಸ್ಪೀಕರ್ ಆಯ್ಕೆ ಕೂಡ ನಡೆಯಲಿದೆ.


ಸದ್ಯ ಆರ್.ವಿ.ದೇಶಪಾಂಡೆ ಅವರನ್ನು ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿದೆ. ಆದರೆ ಸ್ಪೀಕರ್ ಹುದ್ದೆ ಅಲಂಕರಿಸಲು ದೇಶಪಾಂಡೆ ಹಿಂದೇಟು ಹಾಕುತ್ತಿದ್ದಾರಂತೆ. ಇದು ನಮ್ಮ ಕೊನೆಯ ಚುನಾವಣೆ ಆಗಿದೆ. ಹಾಗಾಗಿ ಕ್ಷೇತ್ರದಲ್ಲಿ ನಾವು ಮಾಡಬೇಕಾಗಿರುವ ಕೆಲಸಗಳು ತುಂಬಾ ಇವೆ ಎಂದು ಹಿರಿಯ ಕಾಂಗ್ರೆಸ್ ಶಾಸಕರು ಹೇಳುತ್ತಿದ್ದಾರೆ ಎಂದು ತಿಳಿದು ಬಂದಿದೆ.


ಸ್ಪೀಕರ್ ಆಗಲ್ಲ ಎಂದು ಹೇಳುತ್ತಿರುವ ಹಿರಿಯರು


ಮಂತ್ರಿ ಮಾಡುತ್ತೇನೆ ಅಂದರಷ್ಟೇ‌ ಹಂಗಾಮಿ ಅಧ್ಯಕ್ಷನಾಗುತ್ತೇನೆ ಎಂದು ಆರ್.ವಿ.ದೇಶಪಾಂಡೆ ಷರತ್ತು ಹಾಕಿದ್ದಾರಂತೆ. ಇತ್ತ ಬಹಿರಂಗವಾಗಿ ಡಿಸಿಎಂ ಹುದ್ದೆಯೇ ಬೇಕು ಎನ್ನುವ ಮೂಲಕ ಸ್ಪೀಕರ್‌ ಆಗಲ್ಲ ಎಂಬ ಸಂದೇವನ್ನು ಬಸವರಾಜ್ ರಾಯರೆಡ್ಡಿ ರವಾನಿಸಿದ್ದಾರೆ.
ನಾನು‌ ಜನರ ಮಧ್ಯೆ ಕೆಲಸ ಮಾಡಬೇಕು.‌ ನನ್ನ‌ ಕ್ಷೇತ್ರ, ಜಿಲ್ಲೆಗೆ ನೀರಾವರಿ ಯೋಜನೆಗಳನ್ನ ಅನುಷ್ಠಾನಗೊಳಿಸಬೇಕು. ಕುಂಚಿಟಿಗರಲ್ಲಿ ನಾನೊಬ್ಬನೇ ಗೆದ್ದಿರೋದು, ಸಚಿವ ಸ್ಥಾನವೇ ಬೇಕು ಎಂದು ಟಿ.ಬಿ.ಜಯಚಂದ್ರ ಎಂದು ಹೇಳಿದ್ದಾರೆ.


ಇದನ್ನೂ ಓದಿ:  Karnataka Weather Today: ಇಂದು ರಾಜ್ಯದಲ್ಲಿ ಮಳೆ ಆಗುತ್ತಾ? ಇಲ್ಲಿದೆ ಮಾಹಿತಿ


ಇನ್ನು ಹೆಚ್.ಕೆ.ಪಾಟೀಲ್, ಹೈಕಮಾಂಡ್ ನಾಯಕರ ಮುಂದೆಯೇ ಸ್ಪೀಕರ್ ಹುದ್ದೆ ನಿರಾಕರಿಸಿದ್ದಾರೆ ಎನ್ನಲಾಗಿದೆ.

First published: