Assembly Session: ಇಂದಿನಿಂದ ವಿಧಾನಮಂಡಲ ಅಧಿವೇಶನ; ಸರ್ಕಾರದ ವಿರುದ್ಧ ಕಾಂಗ್ರೆಸ್ ಬ್ರಹ್ಮಾಸ್ತ್ರ; ಇತ್ತ ಪ್ರತ್ಯಸ್ತ್ರ ಪ್ರಯೋಗಿಸಲು ಕಮಲ ಪಾಳಯ ಪ್ಲ್ಯಾನ್

ವಿಪಕ್ಷಗಳಿಗೆ ತಿರುಗೇಟು ನೀಡಲು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai), ಸಚಿವರು, ಶಾಸಕರು ಸಜ್ಜಾಗಿದ್ದಾರೆ. ಕಾಂಗ್ರೆಸ್‌ ಅವಧಿಯಲ್ಲಿ ನಡೆದ ಹಗರಣ, ಭ್ರಷ್ಟಾಚಾರ ಕುರಿತು ಪ್ರಸ್ತಾಪಿಸಲಿದ್ದಾರೆ.

ಅಧಿವೇಷನ

ಅಧಿವೇಷನ

  • Share this:
ಇಂದಿನಿಂದ ವಿಧಾನಸಭೆ ಜಂಟಿ ಕಲಾಪ (Assembly Joint Session) ಶುರುವಾಗುತ್ತಿದೆ. 10 ದಿನಗಳ ಕಾಲ ನಡೆಯುವ ಅಧಿವೇಶನ ಕಾಂಗ್ರೆಸ್ (Congress)​ ಮತ್ತು ಬಿಜೆಪಿಯವರ (BJP) ಮಧ್ಯೆ ಗಲಾಟೆ, ಗದ್ದಲ, ವಾಕ್ಸಮರಕ್ಕೆ ಸಾಕ್ಷಿಯಾಗಲಿದೆ. 10 ದಿನಗಳ ಅಧಿವೇಶನದಲ್ಲಿ (Session) ಆರೋಪ-ಪ್ರತ್ಯಾರೋಪಕ್ಕೆ ಬೇಕಾದ ಅಸ್ತ್ರಗಳನ್ನ ಕಾಂಗ್ರೆಸ್​​-ಜೆಡಿಎಸ್​-ಬಿಜೆಪಿ ರೆಡಿಮಾಡಿಕೊಂಡಿವೆ. ಸರ್ಕಾರದ ವಿರುದ್ಧ ಕಾಂಗ್ರೆಸ್ 40% ಕಮಿಷನ್ (Commission Allegation)​​ ದಂಧೆ, PSI ನೇಮಕಾತಿ ಹಗರಣ (PSI Scam), ಬೆಂಗಳೂರು ನೆರೆಹಾನಿ (Bengaluru Flood) ಬಗ್ಗೆಯೂ ಪ್ರಸ್ತಾಪಿಸುವ ಸಾಧ್ಯತೆಯಿದೆ. ಇನ್ನು ಕಾಂಗ್ರೆಸ್​ ಆರೋಪಕ್ಕೆ ಬಿಜೆಪಿ ಸದನದಲ್ಲಿ ಸಮರ್ಪಕ ಉತ್ತರದ ಮೂಲಕ ತಿರುಗೇಟು ನೀಡಲು ಅಣಿಯಾಗಿದೆ.

ವಿಪಕ್ಷಗಳಿಗೆ ತಿರುಗೇಟು ನೀಡಲು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai), ಸಚಿವರು, ಶಾಸಕರು ಸಜ್ಜಾಗಿದ್ದಾರೆ. ಕಾಂಗ್ರೆಸ್‌ ಅವಧಿಯಲ್ಲಿ ನಡೆದ ಹಗರಣ, ಭ್ರಷ್ಟಾಚಾರ ಕುರಿತು ಪ್ರಸ್ತಾಪಿಸಲಿದ್ದಾರೆ. ಒಟ್ಟಾರೆ ಹತ್ತು ದಿನದ ಮಳೆಗಾಲದ ಅಧಿವೇಶನವು ಆಡಳಿತ ಮತ್ತು ಪ್ರತಿಪಕ್ಷಗಳ ಮುಖಂಡರ ರಂಗೇರಿದ ಚರ್ಚೆಗಳ ವೇದಿಕೆಯಾಗುವುದಂತೂ ಖಂಡಿತ ಎನ್ನಲಾಗುತ್ತಿದೆ.

ಕಾಂಗ್ರೆಸ್​ ‘ಸಮರ’ದ ಅಸ್ತ್ರಗಳು

ಮಳೆ ಹಾನಿ

ಮಳೆಹಾನಿಯ ಒಟ್ಟು ಲೆಕ್ಕವಿಟ್ಟು ಸರ್ಕಾರವನ್ನು ತರಾಟೆ ತೆಗೆದುಕೊಳ್ಳಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಅವ್ಯವಸ್ಥೆ, ಬೆಂಗಳೂರಿನ ರಸ್ತೆಗುಂಡಿಗಳ ಅವಾಂತರ, ಬೆಳ್ಳಂದೂರು, ಸರ್ಜಾಪುರ ಭಾಗ ಜಲಾವೃತ ಮತ್ತು ಸರ್ಕಾರದ ವಿರುದ್ಧ ಐಟಿ ಉದ್ಯಮಿಗಳ ಟೀಕೆಯ ವಿಚಾರಗಳನ್ನು ಪ್ರಸ್ತಾಪಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.

ರೈತರ ಸಮಸ್ಯೆ

ಇತ್ತ ಮಳೆಯಿಂದಾದ ಬೆಳೆ ನಷ್ಟ, ಸಾಲದ ಹೊರೆ, ಪರಿಹಾರ ವಿಳಂಬ ಮತ್ತು ಸಾಲಮನ್ನಾದ ವಿಷಯಗಳ ಮೂಲಕ ಸರ್ಕಾರವನ್ನು ಕಟ್ಟಿ ಹಾಕಲು ಕಾಂಗ್ರೆಸ್ ಪ್ಲಾನ್ ಮಾಡಿದೆ.

ಕಮಿಷನ್ ಆರೋಪ

ಸರ್ಕಾರದ ವಿರುದ್ಧ ಶೇ.40 ಕಮಿಷನ್ ಆರೋಪ, ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ, ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಕೆಂಪಣ್ಣ, BBMPಯಲ್ಲೂ ಕಮಿಷನ್ ಆರೋಪ

ನೇಮಕಾತಿ ಅಕ್ರಮ

PSI ನೇಮಕಾತಿಯ ಅಕ್ರಮ, KPTCL ನೇಮಕಾತಿಯ ಅಕ್ರಮ, ಶಿಕ್ಷಕರ ನೇಮಕಾತಿಯ ಅಕ್ರಮ, ಪ್ರಶ್ನೆ ಪತ್ರಿಕೆಗಳೇ ಲೀಕ್

ಇದನ್ನೂ ಓದಿ:  Karnataka Rain Alert: ಮಳೆಯ ಮುನ್ಸೂಚನೆ​; ಬೆಳಗಾವಿಗೆ ಆರೆಂಜ್, 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಕಾನೂನು ಸುವ್ಯವಸ್ಥೆ

ಕೆಲ ತಿಂಗಳಿನಿಂದ ರಾಜ್ಯದಲ್ಲಿ ಧರ್ಮ ಸಂಘರ್ಷ ಹೆಚ್ಚಾಗಿದೆ. ಶಿವಮೊಗ್ಗದಲ್ಲಿ ಹರ್ಷ, ಕರಾವಳಿಯ ಪ್ರವೀಣ್ ನೆಟ್ಟಾರು ಕೊಲೆ ವಿಷಯದ ಕುರಿತು ಚರ್ಚೆ ಮಾಡಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.

ಬಿಜೆಪಿ ಪ್ರತ್ಯಸ್ತ್ರ

ಇನ್ನು ಸಿದ್ದರಾಮಮಯ್ಯ ಅವರ ಕಾಲದಲ್ಲಿ ನಡೆದಿರುವ ಹಗರಣಗಳನ್ನು ಬಯಲಿಗೆ ತಂದು ಕಾಂಗ್ರೆಸ್​​ಗೆ ತಿರುಗೇಟು ನೀಡಲು ಕಮಲ ಪಾಳಯ ಸಿದ್ಧವಾಗಿದೆ. ಶಿಕ್ಷಕರ ನೇಮಕ ಹಗರಣ, ಹಾಸಿಗೆ-ದಿಂಬು ಹಗರಣ, ಅರ್ಕಾವತಿ ಬಡಾವಣೆಯ ‘ರೀಡೂ’ಮತ್ತು ಮರಳು ದಂಧೆಯನ್ನು ಪ್ರಸ್ತಾಪಿಸಲು ಬಿಜೆಪಿ ರಣತಂತ್ರ ರೂಪಿಸಿದೆ. ಇದರ ಜೊತೆಗೆ PSI ಹಗರಣಕ್ಕೆ ಕೈ ಶಾಸಕರ ಲಿಂಕ್ ಬಗ್ಗೆ ಪ್ರಸ್ತಾಪಿಸಬಹುದು.

ಸಿದ್ದರಾಮಯ್ಯ ಮಾಂಸ ತಿಂದು ಕೊಡ್ಲಿಪೇಟೆ ಬಸವೇಶ್ವರ ದೇವಸ್ಥಾನಕ್ಕೆ ಹೋಗಿದ್ದು ವಿಚಾರವನ್ನು ತಂದು ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಆರೋಪಿಸಲು ತಂತ್ರ ಹೆಣೆದಿದೆ.

ದಳಪತಿ ಸಮರದ ದಾಳ

ಮಳೆಯಿಂದಾದ ರೈತರ, ಮನೆ ಬೆಳೆ ಹಾನಿ ವಿಚಾರಗಳನ್ನು ಪ್ರಸ್ತಾಪಿಸಲು ದಳಪತಿಗಳು ಪ್ಲಾನ್ ಮಾಡಿಕೊಂಡಿದ್ದಾರೆ. ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಿಲ್ಲ. ಬೆಂಗಳೂರಿನಲ್ಲಿ ಮಳೆಯಿಂದ ಹಾನಿಯಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಅವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಲು ಜೆಡಿಎಸ್ ಸಿದ್ಧವಾಗಿದೆ.

ಇದನ್ನೂ ಓದಿ:  Hubballi Jayadeva Hospital: ಉತ್ತರ ಕರ್ನಾಟಕ ಮಂದಿಗೆ ಸಿಹಿಸುದ್ದಿ; ಹುಬ್ಬಳ್ಳಿಯಲ್ಲೂ ಜಯದೇವ ಆಸ್ಪತ್ರೆ

ಬಸವರಾಜ್ ಬೊಮ್ಮಾಯಿ ವರ್ಸಸ್ ಸಿದ್ದರಾಮಯ್ಯ

ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವಿನ ಟಾಕ್​ ವಾರ್​ ನಿಲ್ಲೋ ಹಾಗೆ ಕಾಣ್ತಿಲ್ಲ.. ಸಿದ್ದರಾಮಯ್ಯ ಸವಾಲ್​ ಹಾಕಿ ಒಂದು ದಿನವಾಗ್ತಾ ಬಂದ್ರೂ ಸಿಎಂ ಬೊಮ್ಮಾಯಿ ಮಾತ್ರ ಯಾವುದೇ ರಿಯಾಕ್ಟ್​ ಮಾಡಿಲ್ಲ. ಬಿಜೆಪಿ ಭ್ರಷ್ಟ ಸರ್ಕಾರ, ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡೋದಕ್ಕೆ ಕಾಂಗ್ರೆಸ್​​ ರೆಡಿಯಿದೆ. ಇದಕ್ಕೆ ಸಿಎಂ ಬೊಮ್ಮಾಯಿ ರೆಡಿನಾ? ನೀವೇ ಜಾಗ, ಸಮಯ ನಿರ್ಧರಿಸಿ ಅಂತಾ ಸವಾಲ್​ ಹಾಕಿದ್ರು. ಆದ್ರೆ, ಈ ಬಗ್ಗೆ ಸಿಎಂ ಬೊಮ್ಮಾಯಿ ಒಂದೇ ಒಂದು ಟ್ವೀಟ್​ ಮಾಡಿಲ್ಲ. ರಾಜ್ಯ ಬಿಜೆಪಿ ಮಾತ್ರ ಸಿದ್ದರಾಮಯ್ಯ ಮೇಲೆ ಸರಣಿ ಟ್ವೀಟ್​ ಮಾಡ್ತಿದೆ.
Published by:Mahmadrafik K
First published: