ಬೆಂಗಳೂರು ಗ್ರಾಮಾಂತರ (Bengaluru Rural) ಭಾಗದಲ್ಲೂ ಎಲೆಕ್ಷನ್ ಕಾವು ಜೋರಾಗಿಯೇ ಇದೆ. ಬೆಂಗಳೂರಿನ ಹೆಬ್ಬಾಗಿಲು ಅಂತಾನೇ ಕರೆಸಿಕೊಳ್ಳುವ ನೆಲಮಂಗಲ ವಿಧಾನಸಭಾ ಕ್ಷೇತ್ರ ಕೂಡ ಇದರಿಂದ ಹೊರತಾಗಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ನೆಲಮಂಗಲ ಕೂಡ ಒಂದು. ಸದ್ಯ ಜೆಡಿಎಸ್ ಭದ್ರಕೋಟೆಯಾಗಿರುವ ನೆಲಮಂಗಲದಲ್ಲಿ ಸ್ಪರ್ಧಿಸುತ್ತಿರುವ ನಾಯಕರ ಬಗ್ಗೆ ಒಂದಿಷ್ಟು ತಿಳಿಯೋಣ ಬನ್ನಿ
ಮತ್ತೊಂದು ಎಲೆಕ್ಷನ್‌ಗೆ ರಾಜ್ಯ ಸಜ್ಜು
ಎಲೆಕ್ಷನ್ ಸಮೀಪ ಬಂತು, ಒಳ್ಳೆಯ ಅಭ್ಯರ್ಥಿಯ ಆಯ್ಕೆ ನಮ್ಮ-ನಿಮ್ಮಲ್ಲೆರ ಮೇಲಿದೆ. ಹಾಗಾದರೆ ನಿಮ್ಮ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಇದ್ದಾರೆ, ಅವರು ಹೇಗೆ ಅರ್ಹರು ಎಂಬುದನ್ನು ನೀವೇ ಅವಲೋಕಿಸಿ.
ಇದನ್ನೂ ಓದಿ: HD Kumaraswamy: 'ಎಚ್‌ಡಿಕೆಗೆ 2 ಸಲ ಹಾರ್ಟ್ ಆಪರೇಷನ್ ಆಗಿದೆ’ -ಸಹೋದರ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಎಚ್‌ಡಿ ರೇವಣ್ಣ ಕಾಳಜಿ!
ನೆಲಮಂಗಲದ ಜೆಡಿಎಸ್ ಅಭ್ಯರ್ಥಿ ಯಾರು?
ನೆಲಮಂಗಲ ಕ್ಷೇತ್ರದಿಂದ ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಡಾ. ಶ್ರೀನಿವಾಸ್ ಮೂರ್ತಿ ಅವರು ಸ್ಪರ್ಧಿಸುತ್ತಿದ್ದಾರೆ. ಹೇಗಿದೆ ಅವರ ರಾಜಕೀಯ ವರ್ಚಸ್ಸು, ಅಭಿವೃದ್ಧಿಗೆ ಕೊಡುಗೆ ಏನು ನೋಡೋಣ.
ವೃತ್ತಿಯಲ್ಲಿ ವೈದ್ಯರಾಗಿದ್ದ ಶ್ರೀನಿವಾಸ್ ಮೂರ್ತಿ
ಬೆಂಗಳೂರು ಗ್ರಾಮಾಂತರದ ಜೆಡಿಎಸ್ ಅಭ್ಯರ್ಥಿ ಡಾ. ಶ್ರೀನಿವಾಸ್ ಮೂರ್ತಿ ಟಿಕೆಟ್ ಪಡೆದು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಎಂ. ಕೆಂಪಯ್ಯ ಇವರ ತಂದೆ.
1980-1987 ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪಡೆದ ಇವರು ರಾಜಕೀಯದಲ್ಲಿ ನಂತರ ಸಕ್ರೀಯ ನಾಯಕರಾದರು. ಡಾ. ಶ್ರೀನಿವಾಸ್ ಮೂರ್ತಿ ವೈದ್ಯಕೀಯದಲ್ಲಿ ಶಿಕ್ಷಣ ಮುಗಿಸಿ ಬಂದ ವಿದ್ಯಾವಂತ ನಾಯಕ. ಕೃಷಿ, ವೈದ್ಯಕೀಯ ಅಂತಾ ತೊಡಗಿಸಿಕೊಂಡ ಬಳಿಕ ರಾಜಕೀಯಕ್ಕೆ ಪ್ರವೇಶ ಪಡೆದರು. ರಾಜಕೀಯ ಕ್ಷೇತ್ರ ಕೈ ಹಿಡಿಯಿತು ಮತ್ತು ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ವಿಜಯ ಸಾಧಿಸಿದರು.
ಪುರಸಭೆಯನ್ನು ನಗರಸಭೆ ಮಾಡಿಸಿ ಒಳ ಚರಂಡಿಗೆ ಅನುದಾನ ತಂದಿದ್ದು, ನಗರ ಮುಖ್ಯ ರಸ್ತೆ ಅಭಿವೃದ್ಧಿ ಮಾಡಿಸಿದ್ದೇನೆ ಅಂತ ಶಾಸಕರು ಈ ಹಿಂದೆ ಹೇಳಿಕೊಂಡಿದ್ದರು.
ಆಸ್ತಿ ಮೌಲ್ಯ
ಶ್ರೀನಿವಾಸ್ ಮೂರ್ತಿ ತಮ್ಮ ಆಸ್ತಿ ಮೌಲ್ಯವನ್ನು ಘೋಷಣೆ ಮಾಡಿದ್ದು, ಒಟ್ಟು ಆಸ್ತಿ ಮೌಲ್ಯ ಐದು ಕೋಟಿಗಿಂತ ಹೆಚ್ಚು ಎಂದು ಘೋಷಣೆ ಮಾಡಿದ್ದಾರೆ. ನಗದು 5 ಲಕ್ಷ, ಬ್ಯಾಂಕ್‌ನಲ್ಲಿ ಒಂದು 3ಲಕ್ಷಕ್ಕಿಂತ ಹೆಚ್ಚು ಹಣ, ಬಂಗಾರ ಹತ್ತು ಲಕ್ಷ, 1 ಕೋಟಿಯ ಭೂಮಿ, 4 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಹೀಗೆ ಇನ್ನೂ ಅನೇಕ ಸ್ಥಿರ ಮತ್ತು ಚರಾಸ್ತಿಯ ಬಗ್ಗೆ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: Cash Seize: ಕೆಟ್ಟು ನಿಂತ ಆಟೋದಲ್ಲಿತ್ತು ಒಂದು ಕೋಟಿ ರೂಪಾಯಿ ಹಣ! ಚುನಾವಣಾ ಕಣದಲ್ಲಿ ಝಣ ಝಣ ಕಾಂಚಾಣ!
ಸತತ ಎರಡು ವರ್ಷಗಳಿಂದ ಗೆಲ್ಲುತ್ತಿರುವ ಶ್ರೀನಿವಾಸ್ ಮೂರ್ತಿ
2018 ರಲ್ಲಿ ಜನತಾ ದಳ (ಜಾತ್ಯತೀತ) ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಮೂರ್ತಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಆರ್ ನಾರಾಯಣಸ್ವಾಮಿ 69,277 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಬಿಜೆಪಿಯಿಂದ ಎಂ ವಿ ನಾಗರಾಜ ಸ್ಪರ್ಧಿಸಿದ್ದರು. ಇಬ್ಬರ ವಿರುದ್ಧವೂ ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ಕ್ಷೇತ್ರದ ಶಾಸಕರಾಗಿ ಗೆದ್ದ ಶ್ರೀನಿವಾಸ್ ಮೂರ್ತಿ ಆಯ್ಕೆಯಾಗಿದ್ದರು.
ನೆಲಮಂಗಲದಲ್ಲಿ ಮತ್ತೆ ಚಿಗುರುತ್ತದೆಯೇ 'ತೆನೆ'?
ನೆಲಮಂಗಲ ಗ್ರಾಮಾಂತರ ಹಾಗೂ ನಗರ ಪ್ರದೇಶಗಳನ್ನು ಹೊಂದಿರುವ ಕ್ಷೇತ್ರವಾಗಿರುವುದರಿಂದ ಸಹಜವಾಗಿ ಅಭಿವೃದ್ಧಿ ಕಾರ್ಯಗಳು ಜರುಗುತ್ತಲೇ ಇರಬೇಕು. ರಸ್ತೆ ಈ ಭಾಗದ ಮೊದಲ ಆದ್ಯತೆ. ಹೀಗಾಗಿ ಕಳೆದ ಭಾರಿಯ ಕೆಲಸ ನೋಡಿದ ಜನ ಡಾ. ಶ್ರೀನಿವಾಸ್ ಮೂರ್ತಿಯವರನ್ನು ಗೆಲ್ಲಿಸಿ ʻತೆನೆʼ ಭಾರ ಇಳಿಸ್ತಾರಾ ಕಾದು ನೋಡಬೇಕಾಗಿದೆ.
ಇನ್ನೂ ಜೆಡಿಎಸ ತಾನು ಹಿಂದೆ ಗೆದ್ದ ಎಲ್ಲಾ ಕ್ಷೇತ್ರಗಳಲ್ಲಿ ಈ ಬಾರಿಯೂ ಒಂದನ್ನು ಕೈತಪ್ಪಿಸಿಕೊಳ್ಳಬಾರದು ಎಂಬ ನಿಟ್ಟಿನಲ್ಲಿ ಭರ್ಜರಿ ರಣತಂತ್ರ ರೂಪಿಸಿದ್ದು, ರಾಜ್ಯದ ತುಂಬಾ ಮತಬೇಟೆಗೆ ಇಳಿದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ