ಬೆಂಗಳೂರು: ಕಳೆದ ಕೆಲ ದಿನಗಳ ಹಿಂದಷ್ಟೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (AICC President Mallikarjun Kharge) ಅವರನ್ನು ಹಾಡಿ ಹೊಗಳಿದ್ದರು. “ಮುಂದೆ ನಮ್ಮ ಸರ್ಕಾರ ಬಂದರೆ, ಖರ್ಗೆ ಕೇಳಿದರೆ ನಾನು ಸಿಎಂ ಸ್ಥಾನ ಬಿಟ್ಟುಕೊಡುತ್ತೇನೆ” ಅಂತ ಡಿಕೆಶಿ ಹೇಳಿದ್ದರು. ಇದೀಗ ಮಲ್ಲಿಕಾರ್ಜುನ್ ಖರ್ಗೆಯೇ ಡಿಕೆಶಿಯನ್ನು ಹಾಡಿ ಹೊಗಳಿದ್ದಾರೆ. ಬೆಂಗಳೂರಿನಲ್ಲಿ (Bengaluru) ಕಾಂಗ್ರೆಸ್ (Congress) ನಿರ್ಮಿಸಿರುವ ಇಂದಿರಾಗಾಂಧಿ ಭವನ ಉದ್ಘಾಟನೆ ಮಾಡಿದ ಮಲ್ಲಿಕಾರ್ಜುನ್ ಖರ್ಗೆ, “ಡಿಕೆ ಶಿವಕುಮಾರ್ ಸ್ವಲ್ಪ ಮುಂಗೋಪಿ ಅನ್ನೋದು ಬಿಟ್ರೆ, ಒಳ್ಳೆಯ ಕೆಲಸಗಾರ. ಹಿಡಿದ ಕೆಲಸವನ್ನು ಅರ್ಧಕ್ಕೆ ಬಿಡದೇ, ಅದನ್ನು ಸಂಪೂರ್ಣವಾಗಿ ಮಾಡಿಯೇ ಮುಗಿಸುತ್ತಾನೆ” ಅಂತ ಮೆಚ್ಚುಗೆಯ ಮಾತನ್ನಾಡಿದ್ದಾರೆ.
ಡಿಕೆ ಕುಮಾರ್ ಬಹಳ ಲಕ್ಕಿ!
ಹೀಗಂತ ಮಲ್ಲಿಕಾರ್ಜುನ್ ಖರ್ಗೆ ಅವರು ಡಿಕೆ ಶಿವಕುಮಾರ್ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಇಡೀ ದೇಶದಲ್ಲೇ ಈ ರೀತಿಯ ಹೈಟೆಕ್ ಕಾಂಗ್ರೆಸ್ ಕಚೇರಿಗೆ ಇಲ್ಲ. ನಾನು ಸಣ್ಣ ಕಛೇರಿಯಲ್ಲಿ ಅಧ್ಯಕ್ಷರಾಗಿ ಕೆಲಸ ಮಾಡಿದೆ. ಹಾಗೆ ನೋಡಿದ್ರೆ ಶಿವಕುಮಾರ್ ಬಹಳ ಲಕ್ಕಿ ಇದ್ದಾನೆ. ಫುಲ್ ಹೈಟೆಕ್ ಆಗಿ ಇಂದಿರಾಗಾಂಧಿ ಭವನ ನಿರ್ಮಾಣ ಮಾಡಿದ್ದಾನೆ ಅಂತ ಹೊಗಳಿದ್ದಾರೆ.
ಡಿಕೆಶಿ ಮುಂಗೋಪಿ, ಆದ್ರೆ ಒಳ್ಳೆ ಕೆಲಸಗಾರ!
ಡಿಕೆ ಶಿವಕುಮಾರ್ ಸ್ವಲ್ಪ ಮುಂಗೋಪಿ ಅನ್ನೋದು ಬಿಟ್ರೆ, ಒಳ್ಳೆಯ ಕೆಲಸಗಾರ. ತಾನು ಹಿಡಿದ ಕೆಲಸವನ್ನ ಬಿಡದೆ ಮಾಡಿ ಮುಗಿಸುತ್ತಾನೆ. ಎಲ್ಲಾ ನಾಯಕರನ್ನ, ಸಿದ್ದರಾಮಯ್ಯ ಅವರನ್ನ ಒಗ್ಗೂಡಿಸಿಕೊಂಡು ಕೆಲಸ ಮಾಡ್ತಾ ಇದ್ದಾರೆ. ಈ ಕಾರಣಕ್ಕೆ ಸೋನಿಯಾ, ರಾಹುಲ್, ಪ್ರಿಯಾಂಕಾ ಎಲ್ಲರಿಗೂ ಡಿಕೆಶಿ ಇಷ್ಟ ಆಗ್ತಾರೆ ಅಂತ ಮಲ್ಲಿಕಾರ್ಜುನ್ ಖರ್ಗೆ ಮೆಚ್ಚುಗೆ ಸೂಚಿಸಿದ್ರು.
ಇದನ್ನೂ ಓದಿ: DK Shivakumar: ಬೆದರದ ಬೆಚ್ಚದ ಕನಕಪುರ 'ಬಂಡೆ'! ಡಿಕೆ ಶಿವಕುಮಾರ್ ರಾಜಕೀಯ ಹಾದಿ ಹೇಗಿತ್ತು?
ನಾವು ಈ ಬಾರಿ 150 ಸೀಟ್ ಗೆಲ್ಲುತ್ತೇವೆ
ಕಟ್ಟಡಕ್ಕೆ ಇಂದಿರಾ ಗಾಂಧಿ ಹೆಸರಿಡಲು ನಾನೇ ಹೇಳಿದೆ, 150 ಸೀಟ್ ಗೆಲ್ಲಬೇಕು ಅಂತ ರಾಹುಲ್ ಗಾಂಧಿ ಹೇಳಿದ್ದಾರೆ.. ಅವರು ಸುಮ್ಮನೆ ನಂಬರ್ ಗಳನ್ನ ಹೇಳಲ್ಲ.. ಇವತ್ತು ಹೇಳಿದ್ದಾರೆ ಅಂದ್ರೆ ನಾನು 150ಕ್ಕೂ ಹೆಚ್ಚು ಸೀಟ್ ಗೆಲ್ಲುತ್ತೇವೆ ಅಂತ ಮಲ್ಲಿಕಾರ್ಜುನ್ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಗ್ಯಾರೆಂಟಿಗಳ ಮೂಲಕ ನಾವು ಗೆಲ್ಲಬೇಕು
ನಮ್ಮ ಗ್ಯಾರೆಂಟಿಗಳ ಮೂಲಕ ನಾವು ಗೆಲ್ಲಬೇಕು.. ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿಗಳನ್ನ ಜಾರಿಗೆ ತರಬೇಕು.. ಈ ಮೂಲಕ ಜನರ ವಿಶ್ವಾಸಗಳಿಸಬೇಕು ಅಂತ ಖರ್ಗೆ ಇದೇ ಸಂದರ್ಭದಲ್ಲಿ ಹೇಳಿದ್ರು.
ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಎಂದ ರಾಹುಲ್ ಗಾಂಧಿ
ಬಳಿಕ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಇರುವ ಅಲೆ ನೋಡಿದರೆ ಗೊತ್ತಾಗುತ್ತೆ., ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತ ವಿಶ್ವಾಸ ವ್ಯಕ್ತಪಡಿಸಿದರು. ಇಡೀ ದೇಶದಲ್ಲಿ ಕರ್ನಾಟಕ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಇರೋದು 40% ಬಿಜೆಪಿ ಸರ್ಕಾರ ಅಂತ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Laxman Savadi: ಸವದಿ ಸಿಟ್ಟು, ಡಿಕೆ ಡೈನಾಮೈಟ್, ಸಾಹುಕಾರ್‌ಗೆ ಸ್ಕೆಚ್! ಕುಂದಾನಗರಿ ಕೊತ ಕೊತ!
150 ಸೀಟುಗಳನ್ನು ಗೆಲ್ಲಿಸುವಂತೆ ರಾಹುಲ್ ಕರೆ
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ನಾನು ಎಲ್ಲಾ ಸಹಕಾರ ನೀಡುತ್ತೇನೆ. ಯಾವಾಗ ಕರೆದರೂ ನಾನು ರಾಜ್ಯಕ್ಕೆ ಪ್ರಚಾರಕ್ಕೆ ಬರಲು ಸಿದ್ದ. ನಮ್ಮ ಪಕ್ಷ 150 ಸೀಟ್ ಗಳಿಂದ ಈ ಬಾರಿ ಗೆಲುವು ಸಾಧಿಸಿ, ಈ ಬಾರಿ ಬಿಜೆಪಿಯನ್ನು ಸ್ವೀಪ್ ಮಾಡಬೇಕು ಅಂತ ನಾಯಕರಿಗೆ, ಕಾರ್ಯಕರ್ತರಿಗೆ ಕರೆ ಕೊಟ್ಟರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ