ಚುನಾವಣಾ ಮತ್ತಷ್ಟು ರಂಗೇರಿದ್ದು, ಮತ ಬೇಟೆಗೆ ಅಭ್ಯರ್ಥಿಗಳ ಅಬ್ಬರದ ಪ್ರಚಾರ ಮುಂದುವರೆಯಲಿದೆ. ಹೀಗಿರುವಾಗ ಬಂಡಾಯ ನಾಯಕರ ನಡೆಯೂ ಭಾರೀ ಕುತೂಹಲ ಮೂಡಿಸಿದೆ.
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಬೆಂಗಳೂರು ನಗರದ ಏಳು ಕ್ಷೇತ್ರಗಳ ಮೇಲುಸ್ತುವಾರಿಯಾಗಿ ತೆಲಂಗಾಣ ರಾಜ್ಯದ ಎಡಿಜಿಪಿ ನೇಮಕ ಮಾಡಲಾಗಿದೆ. ತೆಲಂಗಾಣ ರಾಜ್ಯದ ಎಡಿಜಿಪಿ ಡಾ. ಸೌಮ್ಯ ಮಿಶ್ರಾ ಮೇಲುಸ್ತುವಾರಿಯಾಗಿ ನೇಮಕ ಗೊಂಡಿದ್ದು, ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ ಮತ್ತು ಆನೇಕಲ್ ಕ್ಷೇತ್ರಗಳ ಮೇಲುಸ್ತುವಾರಿ ವಹಿಸಲಾಗಿದೆ.
ಚುನಾವಣೆ ಹೊತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೋಲ್ಲೆಗೆ ಇಬ್ಬರು ನಗರಸಭೆ ಸದಸ್ಯರು ಶಾಕ್ ಕೊಟ್ಟಿದ್ದಾರೆ. ನಿಪ್ಪಾಣಿ ಪಟ್ಟಣದ ಇಬ್ಬರೂ ಪಕ್ಷೇತರ ನಗರಸಭೆ ಸದಸ್ಯರು ಈ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದರೆ ಚುನಾವಣೆ ಬರುತ್ತಿದ್ದಂತೆ ಇಗ ಮತ್ತೆ ಬಿಜೆಪಿಗೆ ಕೈ ಕೊಟ್ಟು ಎನ್.ಸಿ.ಪಿ ಅಭ್ಯರ್ಥಿ ಉತ್ತಮ ಪಾಟೀಲ್ ಪರವಾಗಿ ನಿಂತಿದ್ದಾರೆ. ಉತ್ತಮ ಪಾಟೀಲ್ ನೇತೃತ್ವದಲ್ಲಿ ಸದಸ್ಯರಾದ ದಿಪಾಲಿ ಗಿರಿ ಹಾಗೂ ಉಪಾಸನಾ ಗಾರ್ವೆ ಇಬ್ಬರು ಸದಸ್ಯರು ಬರುವ ಚುನಾವಣೆಯಲ್ಲಿ ಉತ್ತಮ ಪಾಟೀಲ್ ಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಕ್ಷೇತ್ರದಲ್ಲಿನ ಬಿಜೆಪಿ ದುರಾಡಳಿತಂದಾಗಿ ಪಕ್ಷ ತೊರೆದಿರೋದಾಗಿ ಹೇಳಿಕೆ ನೀಡಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ಶಾಸಕ ರಾಜೂಗೌಡರನ್ನ ಗೆಲ್ಲಿಸಲು ಮಗ ಮಣಿಕಂಠ ನಾಯಕ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ರಾಜೂಗೌಡ ಏಕೈಕ ಪುತ್ರ ಮಣಿಕಂಠ ನಾಯಕ, ತಂದೆಯನ್ನು ಗೆಲ್ಲಿಸಲು ಸುರಪುರದ ಹಳ್ಳಿಗಳಲ್ಲಿ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ.
ರೋಣದಲ್ಲಿ ಚುನಾವಣಾ ಕಣದಲ್ಲಿ ಸಹೋದರರ ಸವಾಲ್ ಏರ್ಪಟ್ಟಿದೆ. ಹಾಲಿ ಶಾಸಕ ಕಳಕಪ್ಪ ತಮ್ಮ ಸಿದ್ದಪ್ಪ ಬಂಡಿ ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಅಣ್ಣನ ವಿರುದ್ಧವೇ ಸಿಡಿದೆದ್ದಿದ್ದಾರೆ. ರೋಣ ಮತಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿದ್ದಪ್ಪ ಬಂಡಿ 2 ಬಾರಿ ಅಣ್ಣನನ್ನ ಗೆಲ್ಲಿಸಲು ಶ್ರಮಿಸಿದ್ದರು. ಆದರೆ ಮತ್ತೆ ಹಾಲಿ ಶಾಸಕ ಕಳಕಪ್ಪ ಬಂಡಿಗೆ ಟಿಕೆಟ್ ನೀಡಿದ್ದಕ್ಕೆ ಸಿದ್ದಪ್ಪ ಬಂಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಅತ್ಯಂತ ಪ್ರಾಮಾಣಿಕ, ಜನಪರ ನಾಯಕ, ಹಲವು ಭಾಗ್ಯಗಳ ಸರದಾರ ಅಂದರೆ ನಮ್ಮ ಸಿದ್ದರಾಮಯ್ಯ. ಅವರನ್ನು ಗೆಲ್ಲಿಸಲು ಇದು ಒಂದು ಅಳಿಲು ಸೇವೆ. ವರುಣಾದಿಂದ ಸಿದ್ದರಾಮಯ್ಯ ಗೆದ್ದೇ ಗೆಲ್ತಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬರಬೇಕು. ನಾನು ಕಾಂಗ್ರೆಸ್ ಪಕ್ಷದ ಎಲ್ಲ ಅಭ್ಯರ್ಥಿ ಗಳ ಪರ ಪ್ರಚಾರ ಮಾಡ್ತೀನಿ, ಸೋಮಣ್ಣ ಸ್ಪರ್ಧೆ ಬಗ್ಗೆ ಆಗಲಿ, ಬೇರೆಯವರ ಕಾರ್ಯತಂತ್ರವಾಗಲಿ ಅದರ ಬಗ್ಗೆ ನಾನು ಮಾತಾಡಲ್ಲ. ಕಾಂಗ್ರೆಸ್ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಿದೆ. ಕಾರ್ಯ ಗ್ರಾಮದ ಪ್ರಚಾರದ ವೇಳೆ ಸಾಧು ಕೋಕಿಲ ಹೇಳಿಕೆ.
ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಚುನಾವಣೆ ಅಧಿಕಾರಿಗಳ ಮಾಹಿತಿ. ಅಫಡವಿಟ್ ಸತ್ಯಾಸತ್ಯೆಯನ್ನು ಕೋರ್ಟ್ ಮೂಲಕ ಪ್ರಶ್ನಿಸಬಹುದು. ದೂರುದಾರ ಆಕ್ಷೇಪಣೆಯನ್ನು ತಿರಸ್ಕರಿಸಿದ ಚುನಾವಣಾ ಅಧಿಕಾರಿ.
ಮೇ 13ಕ್ಕೆ ಯಾವ ಡ್ಯಾಂ ಹೊಡೆಯುತ್ತೆ ಎಂದು ತಿಳಿಯುತ್ತೆ. ಈ ಹಿಂದೆ ವಿರೇಂದ್ರ ಪಾಟೀಲರು 170 ಹೆಚ್ಚು ಸ್ಥಾನ ಗೆಲ್ಲಿಸಿಕೊಂಡು ಬಂದಿದ್ರು. ಅಂತ ವಿರೇಂದ್ರ ಪಾಟೀಲರಿಗೆ ಕಾಂಗ್ರೆಸ್ ಯಾವ ರೀತಿ ಮೋಸ ಮಾಡಿದ್ರು ಎಂದು ಎಲ್ಲರಿಗೂ ತಿಳಿದಿದೆ. ಲಿಂಗಾಯತ ಸಮಾಜ ಯಾವಾಗಲು ಬಿಜೆಪಿ ಪರನೇ ಇದೆ. ಲಿಂಗಾಯಿತ ಅಷ್ಟೇ ಅಲ್ಲ ಒಕ್ಕಲಿಗ, ಕುರುಬ, ಪರಿಶಿಷ್ಠ ಸಮುದಾಯಗಳು ನಮ್ಮ ಜೊತೆಯಿದೆ. ಸರ್ವರಿಗೂ ಸಮಬಾಳು ಎನ್ನುವುದು ಬಿಜೆಪಿಯ ದ್ಯೇಯೋದ್ದೇಶ. ಮಂಡ್ಯದ ಪಾಂಡವಪುರದಲ್ಲಿ ಬಿ.ವೈ ವಿಜಯೇಂದ್ರ ಹೇಳಿಕೆ.
ಕ್ಯಾಂಪೇನ್ನಲ್ಲಿ ಪುತ್ರ ಯತೀಂದ್ರ ಮಾತ್ರ ಭಾಗಿ. ಆದರೆ ಇಂದಿನ ಕ್ಯಾಂಪೇನ್ಗೆ ಬಾರದ ರಾಕೇಶ್ ಪುತ್ರ ಧವನ್. ಮೊನ್ನೆ ನಾಮಪತ್ರ ಸಲ್ಲಿಕೆ ದಿನ ಸಿದ್ದರಾಮಯ್ಯ ಜೊತೆ ದಿನಪೂರ್ತಿ ಪ್ರಚಾರದಲ್ಲಿ ತೊಡಗಿದ್ದ ಧವನ್. ಧವನ್, ದಿವಂಗತ ರಾಕೇಶ್ ಪುತ್ರ ಹಾಗೂ ಸಿದ್ದರಾಮಯ್ಯನ ಮೊಮ್ಮಗ.
ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಮೊರೆ ಹೋದ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ. ಜೆಪಿ ನಗರ ನಿವಾಸಕ್ಕೆ ಭೇಟಿ ನೀಡಿ ದಳಪತಿಗಳ ಜೊತೆ ಮಾತುಕತೆ ನಡೆಸಿದ್ದು, ಬಂಡಾಯ ಶಮನ ಮಾಡಿ ನಾಮಪತ್ರ ಹಿಂತೆಗೆಸುವಂತೆ ಮನವಿ ಮಾಡಿದ್ದಾರೆ.
ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ಆಗಮಿಸಲಿರುವ ಡಿ.ಕೆ.ಶಿವಕುಮಾರ್ ಧರ್ಮಸ್ಥಳ ಮಂಜುನಾಥನ ದರ್ಶನ ಪಡೆಯಲಿದ್ದಾರೆ. ದೇವಸ್ಥಾನ ಭೇಟಿ ಬಳಿಕ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿಯೂ ಕೆಪಿಸಿಸಿ ಅಧ್ಯಕ್ಷ ಭಾಗಿಯಾಗಲಿದ್ದಾರೆ. ಈ ಮೂಲಕ ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ವಿಶ್ವಾಸ್ ವೈದ್ಯ ಹಾಗೂ ರತ್ನಾ ಮಾಮನಿ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬ್ಯಾರಿಕೇಡ್ ತಳ್ಳಿ ನೂಕು ನೂಗ್ಗಾಟ ಉಂಟಾಗಿದ್ದು, ಬಿಜೆಪಿ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ವಿರುದ್ದ ಧಿಕ್ಕಾರ ಕೂಗುತ್ತಿದ್ದು, ಪೋಲಿಸರು ಹಾಗೂ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದೆ. 144 ಸೆಕ್ಸನ್ ಜಾರಿ ಆಗಿರುವ ಹಿನ್ನೆಲೆ 100 ಮೀಟರ್ ಆವರಣದ ಹೊರಗೆ ಇರುವಂತೆ ಪೋಲಿಸರು ಸೂಚನೆ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂಜಾನೆ ಪೂಜೆ ನಡೆಸಿದ್ದಾರೆ. ಕನಕಪುರದ ಮಳಗಾಳು ಗ್ರಾಮದ ಈಶ್ವರನ ದೇವಸ್ಥಾನಕ್ಕೆ ಆಗಮಿಸಿ ವಿಶೇಷವಾದ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಡಿಕೆಶಿ ತಾಯಿ ಗೌರಮ್ಮನವರ ಮನೆದೇವರಿಗೆ ಪೂಜೆ ನೆರವೇರಿಸಲಾಗಿದೆ. ತಮ್ಮ ಕೇಸ್ ವಿಚಾರವಾಗಿ ಬಿಗ್ ರಿಲೀಫ್ ಬೆನ್ನಲ್ಲೇ ಡಿಕೆಶಿ ಪೂಜೆ ಮಾಡಿದ್ದು, ದೃಷ್ಟಿ ತೆಗೆಸಿ, ಈಡುಗಾಯಿ ಹೊಡೆದು ಪ್ರಾರ್ಥನೆ ಮಾಡಿದ್ದಾರೆ.
ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಗಂಭೀರ ಆರೋಪ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಯಡಿಯೂರಪ್ಪ ಮುಗಿಸಲು ಶೋಭ ಮುಂದಾಗಿದ್ದಾರೆ. ಬಿಜೆಪಿ ನಾಯಕರ ಜೊತೆ ಸೇರ್ಕೊಂಡು ಬಿಎಸ್ ವೈ ಮುಗಿಸಲು ಮುಂದಾಗಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಸಾಕ್ಷಿ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಕೈ ನಾಯಕ ನನ್ನ ಮೇಲಿನ ಆರೋಪದ ಬಗ್ಗೆ ಶೋಭಾ ಸಾಕ್ಷಿ ಕೊಡಲಿ, ಕೂಡಲೇ ನಾನು ಯಡಿಯೂರಪ್ಪ ಮುಗಿಸೋಕೆ ಅವರು ಹೊರಟಿರುವುದಕ್ಕೆ ಸಾಕ್ಷಿ ಕೊಡುತ್ತೇನೆ ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ಮಾಧ್ಯಮಗೋಷ್ಠಿ https://t.co/TjmUpa3fis
— Karnataka Congress (@INCKarnataka) April 22, 2023
ಸೋಮಣ್ಣ ಸ್ಪರ್ಧೆಯಿಂದ ಲಿಂಗಾಯತ ಮತಗಳು ದೂರ ಆಗಿರುವ ಆತಂಕ ಎದುರಾಗಿದ್ದು, ಈ ಹಿನ್ನೆಲೆ ಸಿದ್ದರಾಮಯ್ಯ ಲಿಂಗಾಯತ ಮತಗಳನ್ನೇ ಟಾರ್ಗೆಟ್ ಮಾಡಿದ್ದಾರೆ. ಲಿಂಗಾಯತರು ಇರುವ ಕ್ಷೇತ್ರ ಗಳಲ್ಲಿ ಸಿದ್ದು ಪ್ರಚಾರ ನಡೆಸುತ್ತಿದ್ದು, ಲಿಂಗಾಯತ ಮತಗಳ ಕ್ರೂಢೀಕರಣಕ್ಕೆ ಸರ್ಕಸ್ ನಡೆಸುತ್ತಿದ್ದಾರೆ. ಇಂದು ಲಿಂಗಾಯತ ಕ್ಷೇತ್ರ ಗಳಲ್ಲೇ ಹೆಚ್ಚು ಪ್ರಚಾರ ಕೈಗೊಂಡಿರುವ ಸಿದ್ದರಾಮಯ್ಯ, ಲಿಂಗಾಯತ ಮತದ ಬುಟ್ಟಿಗೆ ಹೈ ಹಾಕಿರೋ ಸೋಮಣ್ಣಗೆ ಟಕ್ಕರ್ ಕೊಡಲು ಪ್ಲಾನ್ ಮಾಡಿದ್ದಾರೆ.
ಇಂದು ಮೊದಲ ಬಾರಿಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಚಾರ ಮಗನ ಪರವಾಗಿ ಪ್ರಚಾರ ನಡೆಸಲಿದ್ದಾರೆ. ರಾಮನಗರ ವಿಧಾನಸಭಾ ಕ್ಷೇತ್ರದ ಹಲವು ಗ್ರಾಮಗಳಿಗೆ ಹೆಚ್ಡಿಕೆ ಭೇಟಿ ನೀಡಲಿದ್ದು, ಪುತ್ರನ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಕಾಂಗ್ರೆಸ್ – ಬಿಜೆಪಿ ಅಭ್ಯರ್ಥಿಗಳಿಗೆ ತಿರುಗೇಟು ನೀಡಲು ಅಖಾಡಕ್ಕಿಳಿಯುವ ಹೆಚ್ಡಿಕೆ, ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಪ್ರಚಾರ ನಡೆಸಲಿದ್ದಾರೆ.
ದೆಹಲಿ ಸಿಎಂ ಕೇಜ್ರೀವಾಲ್ಗೆ ಕೊಪ್ಪಳ ತಾಲೂಕಿನ ಯುವಕನೊಬ್ಬ ರಕ್ತದಲ್ಲಿ ಪತ್ರ ಬರೆದಿದ್ದಾನೆ. ಕುಕನಪಳ್ಳಿಯ ಶರಣಪ್ಪ ಅರಕೇರಿ ರಕ್ತದಲ್ಲಿ ಪತ್ರ ಬರೆದ ಯುವಕ. ಈ ಚುನಾವಣೆಯಲ್ಲಿ ನೀವು ಆರಸಿ ಬಂದರೆ ಯುವಕರಿಗೆ ಉಚಿತ ತರಬೇತಿ, ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿ ಎಂದು ಪತ್ರ ಬರೆದಿದ್ದಾನೆ. ಇದನ್ನು ಆತ ಕೊಪ್ಪಳದ ಎಎಪಿ ಅಭ್ಯರ್ಥಿ ಮೂಲಕ ಅರವಿಂದ ಕೇಜ್ರಿವಾಲ್ಗೆ ಕಳುಹಿಸಿ ಕೊಟ್ಟಿದ್ದಾನೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಸದಾಶಿವನಗರದ ನಿವಾಸದಲ್ಲಿ ಬೆಳಗ್ಗೆ 8.00 ಗಂಟೆಗೆ ತುರ್ತು ಪತ್ರಿಕಾಗೋಷ್ಠಿ ಕರೆದಿದ್ದಾರೆ. ಈಗಾಗಲೇ ನಾಮಿನೇಷನ್ ಅಫಿಡವಿಟ್ ವಿಚಾರವಾಗಿ ಶನಿವಾರ ಎಲ್ಲಾ ವಿಚಾರ ಗೊತ್ತಾಗುತ್ತೆ ಎಂದು ಡಿಕೆಶಿ ಹೇಳಿದ್ದರು. ಈ ಮಧ್ಯೆಯೇ ಪತ್ರಿಕಾಗೋಷ್ಠಿ ಕರೆದಿರುವುದು ತೀವ್ರ ಕುತೂಹಲ ಉಂಟು ಮಾಡಿದೆ.