Karnataka Assembly Election 2023: ಹಾವೇರಿಯ ಶಿಗ್ಗಾಂವಿ ಕ್ಷೇತ್ರದಿಂದ ಸಿಎಂ ಬೊಮ್ಮಾಯಿ ನಾಮಪತ್ರ ಸಲ್ಲಿಸಲಿದ್ದು, ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ನಟ ಸುದೀಪ್ ಭಾಗಿಯಾಗಲಿದ್ದಾರೆ.
ಮಾಡಾಳು ವಿರೂಪಾಕ್ಷಪ್ಪ ಪುತ್ರ ಮಾಡಾಳು ಮಲ್ಲಿಕಾರ್ಜುನರನ್ನ ಪಕ್ಷದಿಂದ ಉಚ್ಚಾಟನೆ ಮಾಡಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ವಿರುದ್ದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಕ್ಕೆ 6 ವರ್ಷಗಳ ಕಾಲ ಬಿಜೆಪಿ ಪಕ್ಷದಿಂದ ಮಾಡಾಳು ಮಲ್ಲಿಕಾರ್ಜುನ ಉಚ್ಚಾಟನೆ ಮಾಡಲಾಗಿದೆ. ಮಾಡಾಳು ಮಲ್ಲಿಕಾರ್ಜುನ ಚನ್ನಗಿರಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಜೆಡಿಎಸ್ ತನ್ನ ಮೂರನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಿಂದ ರೆಬೆಲ್ ಆಗಿ ಬಂದ ಹಲವು ನಾಯಕರಿಗೆ ಟಿಕೆಟ್ ನೀಡಲಾಗಿದೆ. 59 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇನ್ನು, ರಾಜ್ಯದ 7 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ, ಅನ್ಯ ಅಭ್ಯರ್ಥಿಗಳಿಗೆ ಬೆಂಬಲ ನೀಡಿದೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿ ಇಂದು ಬೆಂಗಳೂರು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆಜಿಎಫ್ ಬಾಬು ಅವರ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 2,000ಕ್ಕೂ ಹೆಚ್ಚು ಡಿಮಾಂಡ್ ಡ್ರಾಫ್ಟ್ (ಡಿ.ಡಿ)5,000 ರೇಷ್ಮೆ ಸೀರೆಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ತುಮಕೂರಲ್ಲಿ ಮಾಜಿ ಡಿಸಿಎಂ ಜಿ.ಪರಮೇಶ್ವರ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದಕ್ಕೂ ಮುನ್ನ ನಾಮಿನೇಷನ್ ಸಲ್ಲಿಕೆಗೆ ತಾಲೂಕು ಕಚೇರಿ ಒಳಗೆ ಬರ್ತಿದ್ದಂತೆ ಕಿಡಿಗೇಡಿಯೋರ್ವ ಕಲ್ಲೆಸೆದಿದ್ದಾನೆ. ಈ ವೇಳೆ ಗೇಟ್ನಲ್ಲಿ ನಿಂತಿದ್ದ ಮಹಿಳಾ ಪೇದೆಗೆ ಕಲ್ಲು ತಾಕಿದೆ. ಮಹಿಳೆ ಪೇದೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಪೊಲೀಸರಿಂದ ಭದ್ರತೆ ವೈಫಲ್ಯ ಎಂದು ಕಾರ್ಯಕರ್ತರ ಆಕ್ರೋಶ ಹೊರಹಾಕಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸಂಸದ ಡಿಕೆ ಸುರೇಶ್ ಸ್ಪರ್ಧೆ ಮಾಡುವ ವಿಚಾರ ನನಗೆ ಮಾಹಿತಿ ಇಲ್ಲ. ಆದರೆ ಇಂದು ಬಾಕಿ ಉಳಿದ ಕ್ಷೇತ್ರಗಳಿಗೆ ಇವತ್ತು ಟಿಕೆಟ್ ಅನೌನ್ಸ್ ಮಾಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
https://t.co/BzFaMpULp3
ನಾಮಪತ್ರ ಸಲ್ಲಿಕೆಯ ವೇಳೆ ಅಭ್ಯರ್ಥಿಗಳು ತಮ್ಮ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ. #KarnatakaAssemblyElection #KarnatakaElections #Congress #BJP #JDS #KannadaNews— News18 Kannada (@News18Kannada) April 19, 2023
ಮತ್ತೊಮ್ಮೆ ರಾಜ್ಯದಲ್ಲಿ ಮೋದಿ ಪ್ರವಾಸ ಮಾಡಲಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಬರುವುದು ನಿಶ್ಚಿತ. ನಿಮ್ಮ ಕುಟುಂಬದ ಜೊತೆಗೆ ಇತರ ಐದು ಜನರ ಮತ ಕೊಡಿಸಿ. ಆಗ ಮಾತ್ರ 50000 ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ. ನಿಮ್ಮ ಬೂತ್ ನಲ್ಲಿ ಶೇ.70 ಮತ ಬರುವಂತೆ ಮಾಡಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಕರೆ ಕೊಟ್ಟರು.
ನನ್ನ ತಂದೆ ಮೇಲೆ ನಿರಂತರ ಪ್ರೀತಿ ತೋರಿಸಿದ್ದೀರಿ. ಇಂದು ಅದೇ ಶಿಕಾರಿಪುರದಿಂದ ನಾನು ಸ್ಪರ್ಧಿಸ್ತಿದ್ದೇನೆ. ಎಲ್ಲಾ ಸಮುದಾಯಗಳನ್ನ ಪ್ರೀತಿಯಿಂದ ನೋಡುವೆ. ನಿಮ್ಮ ಭಾವನೆಗಳಿಗೆ ಧಕ್ಕೆ ಬರದಂತೆ ನೋಡಿಕೊಳ್ಳುವೆ ಎಂದು ಹೇಳಿ ವಿಜಯೇಂದ್ರ ಮತಯಾಚನೆ ಮಾಡಿದರು.
ನಾನು ಗೆಲ್ಲುತ್ತೇನೆ ಎಂಬ ಬಿಜೆಪಿಗೆ ಭಯ ಕಾಡ್ತಿದೆ. ಹಾಗಾಗಿ ವರುಣಾದಲ್ಲಿ ಬಿಜೆಪಿ ಹಣದ ಹೊಳೆ ಹರಿಸುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಯಡಿಯೂರಪ್ಪಗೆ ಈ ತನಕ ಹಾಕಿದ ಮತಕ್ಕಿಂತ ಈ ಬಾರಿ ನೀಡುವ ಮತ ನಿರ್ಣಾಯಕವಾಗಲಿದೆ. ಯಡಿಯೂರಪ್ಪ ಹರಿಸಿದ ರಕ್ತ, ನಡೆಸಿದ ಹೋರಾಟ, ಕೈ ಗೊಂಡ ಉಪವಾಸ ಸತ್ಯಾಗ್ರಹಕ್ಕೆ ಈ ಬಾರಿಯ ಚುನಾವಣೆಯಲ್ಲಿ ವಿಜಯೇಂದ್ರ ರನ್ನು ಗೆಲ್ಲಿಸುವ ಮೂಲಕ ಗೌರವ ನೀಡಬೇಕಿದೆ. ರಾಜ್ಯದ ಭವಿಷ್ಯದ ನಾಯಕನಾಗಿರುವ ವಿಜಯೇಂದ್ರ ರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕಿದೆ ಎಂದು ಪಿ ರಾಜೀವ್ ಹೇಳಿದರು.
ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಮಂಜುಳಾ ಕರಡಿ ನಾಮಪತ್ರ ಸಲ್ಲಿಕೆ ಮಾಡಿದರು. ನಗರದ ಶಿರಸಪ್ಪಯ್ಯನಮಠದಿಂದ ತಹಶೀಲ್ದಾರ ಕಚೇರಿಯವರೆಗೂ ಮೆರವಣಿಗೆ ಮೂಲಕ ಬಂದು ನಾಮಪಯ್ರ ಸಲ್ಲಿಸಿದರು.
https://t.co/n4OM5unUUe
ಪದ್ಮನಾಭನಗರ ಕ್ಷೇತ್ರಕ್ಕೆ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ.#Congress #DKShivakumar #RAshok #KarnatakaAssemblyElections2023 #Kannadanews— News18 Kannada (@News18Kannada) April 19, 2023
ಕೊರಟಗೆರೆಯಲ್ಲಿ ಇಂದು ನಾಮಪತ್ರ ಸಲ್ಲಿಸಿದ್ದೇನೆ. ಕಾನೂನಿನ ಚೌಕಟ್ಟಿನಲ್ಲಿ, ಸಂವಿಧಾನ ಚೌಕಟ್ಟಿನಲ್ಲಿ ಚುನಾವಣೆ ನಡೆಸಲು ಒಪ್ಪಿಕೊಂಡಿದ್ದೇವೆ. ಅದರನ್ವಯ ನಾನು ಇಂದು ನಾಮಪತ್ರ ಸಲ್ಲಿಸಿದ್ದೇನೆ. ಈ ಚುನಾವಣೆಯಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ ಎನ್ನುವ ಆತ್ಮವಿಶ್ವಾಸದಿಂದ ನಾಮಪತ್ರ ಸಲ್ಲಿಸಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಎಲ್ಲಾ ಸೂಚನೆ ಇದೆ ಎಂದು ಮಾಜಿ ಡಿಸಿಎಂ ಜಿ ಪರಮೇಶ್ವರ್ ಹೇಳಿದ್ದಾರೆ.
ಯುವಕರ ಹೊಸ ಪಡೆ ಮೋದಿ ಅಭಿವೃದ್ಧಿ ಮೆಚ್ಚಿ ನಮ್ಮ ಜೊತೆ ಸೇರಿದ್ದಾರೆ. ಕ್ಷೇತ್ರದಲ್ಲಿ ಮತದಾರರು ಯಡಿಯೂರಪ್ಪ ಅವರಿಗೆ, ಸಂಸದ ರಾಘವೇಂದ್ರ ಅವರಿಗೆ ಆಶೀರ್ವಾದ ಮಾಡಿದ್ದಾರೆ. ನನಗೂ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಶಿಕಾರಿಪುರದಲ್ಲಿ ಪ್ರಚಾರ ಮಾಡುವ ಜೊತೆಗೆ ರಾಜ್ಯದಲ್ಲಿ ಬೇರೆ ಬೇರೆ ಕಡೆ ಒಂದು ವಾರ ಪ್ರಚಾರ ಮಾಡ್ತೀನಿ. ಕೇಂದ್ರದಲ್ಲಿ ಬಿಜೆಪಿ ಸರಕಾರ ಇದೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತದೆ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.
ನಾನು ನನ್ನ ಪ್ರತಿ ಸ್ಪರ್ಧಿ ಸೋಮಣ್ಣ ಅಂತ ತಿಳಿದಿದ್ದೆ. ಆದ್ರೆ ಅದ್ಯಾವುದೋ ಲೈವ್ ಬ್ಯಾಂಡ್ ನಡೆಸೋರನ್ನು ಕರೆದುಕೊಂಡು ಬಂದಿದ್ದಾರೆ. ಕಳೆದ ಬಾರಿ ಕೆಲವು ತಪ್ಪುಗಳಾಗಿತ್ತು, ಅದು ಫಲಿತಾಂಶದ ಮೇಲೆ ಪರಿಣಾಮ ಬೀರಿತ್ತು. ಈ ಬಾರಿ ಅವೆಲ್ಲವನ್ನೂ ಸರಿಪಡಿಸಿಕೊಂಡು ಚುನಾವಣೆ ಎದುರಿಸುತ್ತಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಕೃಷ್ಣ ಹೇಳಿದ್ದಾರೆ.
ಇಂದು ಎರಡನೇ ಬಾರಿ ಅಖಂಡ ಶ್ರೀನಿವಾಸಮೂರ್ತಿ ನಾಮಪತ್ರ ಸಲ್ಲಿಸಲಿದ್ದಾರೆ. ಡಿಜೆ ಹಳ್ಳಿ ಅಂಬೇಡ್ಕರ್ ಸರ್ಕಲ್ನಿಂದ ಮೆರವಣಿಗೆ ಮೂಲಕ ಸಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಕಾಂಗ್ರೆಸ್ ಟಿಕೆಟ್ ನಿರಾಕರಣೆ ಬಳಿಕ ಶಕ್ತಿ ಪ್ರದರ್ಶನ ಮೂಲಕ ಮತ್ತೆ ನಾಮಪತ್ರ ಸಲ್ಲಿಸುತ್ತಿದ್ದಾರೆ.
ರಘುನಾಥ ನಾಯ್ಡುಗೆ ಬೆಂಬಲ ಉತ್ತಮವಾಗಿಯೇ ಇದೆ. ಬಹಳ ಜನ ಬಿಜೆಪಿಯಿಂದ ಸೇರ್ಪಡೆ ಆಗಿ ದಕ್ಕೆ ಕಾರ್ಪೋರೇಟರ್ಗಳಿದ್ದರು. ಬಿ ವಿ ನಾಯಕ್ ಬಿಟ್ಟಿರುವುದು ಗೊತ್ತಿದೆ. ಕ್ಯಾಂಡಿಡೇಟ್ ಬದಲಾಯಿಸಬೇಕು ಎಂಬ ಪ್ರಪೋಸಲ್ ನನ್ನ ತನಕ ಬಂದಿಲ್ಲ. ನಮ್ಮ ಕ್ಯಾಂಡಿಡೇಟ್ ಸ್ಟ್ರಾಂಗ್ ಆಗಿದೆ. ಬಿಜೆಪಿ ಜೆಡಿಎಸ್ ಅವರು ಚೆಸ್ ಆಟ ಆಡ್ತಿದ್ದಾರೆ, ನಾವೂ ಆಡ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಚುನಾವಣೆ ಹಿನ್ನೆಲೆ ಕಾಪ್ಟರ್‌ಗಳಿಗೆ ರಾಜ್ಯದಲ್ಲಿ ಭಾರೀ ಬೇಡಿಕೆ ಉಂಟಾಗಿದೆ. ಮೂರು ಪಕ್ಷದ ಘಟಾನುಘಟಿ ನಾಯಕರು ಹೆಲಿಕಾಪ್ಟರ್ ಗಳ ಮೊರೆ ಹೋಗಿದ್ದಾರೆ. ಸುಮಾರು 150 ಹೆಲಿಕಾಪ್ಟರ್ಗಳು ಹಾಗೂ ಮಿನಿ ವಿಮಾನ ಬುಕ್ಕಿಂಗ್ ಮಾಡಲಾಗಿದೆ. ರಾಜ್ಯದಲ್ಲಿ 100ಕ್ಕೂ ಅಧಿಕ ಹೆಲಿಕಾಪ್ಟರ್ಗಳು ಹಾಗೂ ಮಿನಿ ವಿಮಾನಗಳಿವೆ. ಹೆಚ್ಚಿನ ಬೇಡಿಕೆ ಹಿನ್ನೆಲೆ ಹೊರ ರಾಜ್ಯದ ಹೆಲಿಕಾಪ್ಟರ್ ಗಳ ಮೊರೆ ಹೋಗಲಾಗಿದೆ.