Karnataka Election 2023 Live Updates: ರಾಜ್ಯದಲ್ಲಿ ನಾಮಪತ್ರ ಸಲ್ಲಿಕೆ ಜಾತ್ರೆ; ಚುನಾವಣೆಯ ಕ್ಷಣ ಕ್ಷಣದ ಮಾಹಿತಿ

Karnataka Assembly Election 2023 Live: ಕರುನಾಡ ಚುನಾವಣಾ ರಣರಂಗದಲ್ಲಿ ನಾಮಪತ್ರ ಸಲ್ಲಿಕೆ ಜಾತ್ರೆ ಆರಂಭವಾಗಿದೆ. ಮತ್ತೊಂದೆಡೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಬಂಡಾಯದ ಬಾವುಟ ಹಾರುತ್ತಿದೆ. ಇಂದಿನ ಚುನಾವಣೆಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

ಬೆಂಗಳೂರು: ರಾಜ್ಯದಲ್ಲಿ ನಾಮಪತ್ರ ಸಲ್ಲಿಕೆ (Nomination) ಜಾತ್ರೆ ಆರಂಭಗೊಂಡಿದೆ. ಸೋಮವಾರ ಘಟಾನುಘಟಿ ನಾಯಕರೆಲ್ಲಾ (Political Leaders) ಬೃಹತ್ ಸಮಾವೇಶಗಳ ಮೂಲಕ ನಾಮಪತ್ರ ಸಲ್ಲಿಸಿದ್ದಾರೆ. ಇಂದು ಸಹ ಸಚಿವ ಆರ್ ಅಶೋಕ್ (Minister R Ashok) ಸೇರಿದಂತೆ ಹಲವರು ನಾಮಪತ್ರ ಸಲ್ಲಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಬಿಜೆಪಿ ಮೂರನೇ ಪಟ್ಟಿ ರಿಲೀಸ್ (BJP Candidate List) ಮಾಡಿದ್ದು, ಇಂದು ಕಾಂಗ್ರೆಸ್​ ಪಕ್ಷದ ಅಂತಿಮ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಟಿಕೆಟ್ ಸಿಗದ ಹಿನ್ನೆಲೆ ಶಾಸಕ ರಾಮದಾಸ್ (BJP MLA Ramdas) ಅಸಮಾಧಾನಗೊಂಡಿದ್ದು, ಬಿಜೆಪಿ ನಾಯಕರಿಂದ ಮನವೊಲೈಕೆ ಕಸರತ್ತು ನಡೆದಿದೆ.

ಮತ್ತಷ್ಟು ಓದು ...
18 Apr 2023 18:44 (IST)

Karnataka Election 2023 Live: ಬಿಎಸ್‌ವೈಗೆ ನೀತಿ ಸಂಹಿತೆ ಬಿಸಿ!

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಚುನಾವಣಾ ನೀತಿ ಸಂಹಿತೆ ಬಿಸಿ ತಟ್ಟಿದೆ. ಶಿವಮೊಗ್ಗಕ್ಕೆ ಬಂದಿಳಿಯುತ್ತದಂತೆ ಚುನಾವಣಾ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಹೆಲಿಕಾಪ್ಟರ್ ಹಾಗೂ ಬಿಎಸ್‌ವೈ ಕಾರನ್ನು ಅಧಿಕಾರಿಗಳು ಚೆಕ್ ಮಾಡಿದ್ದಾರೆ.

18 Apr 2023 18:17 (IST)

Karnataka Election 2023 Live: ಜೆಡಿಎಸ್ ಅಭ್ಯರ್ಥಿ ಉಮೇದುವಾರಿಕೆ

ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಂಜಾರಪಾಳ್ಯ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದಾರೆ. .ಬನಶಂಕರಿ ಎರಡನೇ ಹಂತದಲ್ಲಿರುವ ಚುನಾವಣಾ ಅಧಿಕಾರಿ ಕಚೇರಿಗೆ ಕುಟುಂಬ ಸಮೇತ ಬಂದು, ನಾಮಪತ್ರ ಸಲ್ಲಿಸಿದರು. ಅದಕ್ಕೂ ಮುನ್ನ ದೇವೇಗೌಡರ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು.

18 Apr 2023 17:36 (IST)

Karnataka Election 2023 Live: ಶಿವಮೊಗ್ಗಕ್ಕೆ ಬಂದ ಬಿಎಸ್‌ವೈ

ಶಿವಮೊಗ್ಗಕ್ಕೆ ಹೆಲಿಕಾಪ್ಟರ್ ಮೂಲಕ ಬಿ.ಎಸ್. ಯಡಿಯೂರಪ್ಪ ಆಗಮಿಸಿದ್ದಾರೆ. ನಗರದ ಪ್ರವಾಸಿ ಮಂದಿರದ ಪಕ್ಕದಲ್ಲಿ ಇರುವ ಹೆಲಿಪ್ಯಾಡ್‌ಗೆ ಬಂದ ಯಡಿಯೂರಪ್ಪ, ಇಂದು ಶಿವಮೊಗ್ಗದಲ್ಲೇ ಇರಲಿದ್ದಾರೆ. ನಾಳೆ ತಮ್ಮ ಮಗ ವಿಜೇಂದ್ರ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಪುತ್ರನಿಗೆ ಬಿಎಸ್‌ವೈ ಸಾಥ್ ನೀಡಲಿದ್ದಾರೆ.

18 Apr 2023 17:07 (IST)

Karnataka Election 2023 Live: ಶೆಟ್ಟರ್ ವಿರುದ್ಧ ಶೋಭಾ ಆಕ್ರೋಶ

ಜಗದೀಶ್ ಶೆಟ್ಟರ್ ವಿರುದ್ಧ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಶೆಟ್ಟರ್ ಅವರ ಇಡೀ ಕುಟುಂಬ ಕಾಂಗ್ರೆಸ್ ವಿರೋಧಿಸಿತ್ತು. ಇದೀಗ ಆ ಕುಟುಂಬದ ಶೆಟ್ಟರ್ ಕಾಂಗ್ರೆಸ್ ಸೇರಿದ್ದಾರೆ ಅಂತ ವಿಷಾದಿಸಿದ್ರು.

18 Apr 2023 16:21 (IST)

Karnataka Election 2023 Live: ಜಮೀರ್ ನಾಮಪತ್ರ ಸಲ್ಲಿಕೆ

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಮೀರ್ ಅಹ್ಮದ್ ಖಾನ್ ನಾಮಪತ್ರ ಸಲ್ಲಿಸಿದ್ದಾರೆ. ಬೆಂಬಲಿಗರೊಂದಿಗೆ ಆಗಮಿಸಿ ಚುನಾವಣಾ ಅಧಿಕಾರಿಗಳಿಗೆ ‌ಜಮೀರ್ ನಾಮಪತ್ರ ಸಲ್ಲಿಸಿದ್ದಾರೆ.

18 Apr 2023 15:25 (IST)

Karnataka Election 2023 Live: ಕೋಟಿ ಕೋಟಿ ಹಣ ಸೀಜ್

ಚುನಾವಣೆ ಹೊಸ್ತಿಲಲ್ಲೇ ರಾಜಧಾನಿ ಬೆಂಗಳೂರಲ್ಲಿ ಕೋಟಿ ಕೋಟಿ ಹಣ ಸೀಜ್ ಮಾಡಲಾಗಿದೆ. ನಿನ್ನೆ ತಡರಾತ್ರಿ ನಗರದ ಎರಡು ಕಡೆಗಳಲ್ಲಿ ಕೋಟ್ಯಾಂತರ ರೂಪಾಯಿ ಹಣ ಸೀಜ್ ಆಗಿದೆ. ಎಸ್‌ಜೆ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಕೋಟಿ ಹಣ ವಶಪಡಿಸಿಕೊಂಡಿದ್ದರೆ, ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯಲ್ಲಿ ಏಳು ಕೋಟಿ ಸೀಜ್ ಮಾಡಲಾಗಿದೆ ಅಂತ ಮೂಲಗಳು ತಿಳಿಸಿವೆ.

18 Apr 2023 14:51 (IST)

Karnataka Election 2023 Live: ಜನಾರ್ದನ ರೆಡ್ಡಿ ಮತಯಾಚನೆ

ಕುತಂತ್ರದಿಂದ ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸಿದರು. ಬಿಜೆಪಿ ಕಾಂಗ್ರೆಸ್ ಪಕ್ಷಗಳು ರಾಜಕೀಯ ಕುತಂತ್ರ ಮಾಡಿದರು. ಆದರೆ ಜನರ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ನನ್ನ ಆರಿಸಿ ಕಳುಹಿಸಬೇಕು. ಮಹಾತ್ಮ ಗಾಂಧಿ ವೃತ್ತದಲ್ಲಿ ನೀಡಿದ ವಾಗ್ದಾನ ಈಡೇರಿಸುತ್ತೇನೆ. ಬರುವ ದಿನಗಳಲ್ಲಿ ಗಂಗಾವತಿಯಿಂದಲೇ ರಾಜ್ಯ ಆಡಳಿತ ನಡೆಸುವಂತಾಗುತ್ತದೆ ಎಂದು ಕೆಆರ್​ಪಿಪಿ ಮುಖ್ಯಸ್ಥ ಜನಾರ್ದನ ರೆಡ್ಡಿ ಹೇಳಿದ್ದಾರೆ.

18 Apr 2023 14:44 (IST)

Karnataka Election 2023 Live: ಈ ಚುನಾವಣೆಯಲ್ಲೂ ಹೈವೋಲ್ಟೇಜ್ ಕ್ಷೇತ್ರ ಆಗುತ್ತಾ ಮಂಡ್ಯ?

18 Apr 2023 14:35 (IST)

Karnataka Election 2023 Live: ಸಿದ್ದುಗೆ ಮೊಮ್ಮೊಗ ಸಾಥ್​

ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಮೊಮ್ಮಗ ಧವನ್ ರಾಕೇಶ್ ಸಾಥ್‌ ನೀಡಿದ್ದಾರೆ. ಹೀಗಾಗಿ ರಾಕೇಶ್ ಸಿದ್ದರಾಮಯ್ಯರ ಪುತ್ರ ಧವನ್ ರಾಕೇಶ್​, ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ತಾರಾ ಅನ್ನೋ ಚರ್ಚೆ ಹುಟ್ಟು ಹಾಕಿದೆ. ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಧವನ್‌ಗೆ ರಾಜಕೀಯದ ಹುಚ್ಚಿದೆ. ಮೊಮ್ಮಗ ಬಂದ್ರೆ ಪ್ರಚಾರಕ್ಕೆ ಕರೆದುಕೊಂಡು ಹೋಗ್ತೇನೆ ಎಂದಿದ್ದಾರೆ.

18 Apr 2023 14:16 (IST)

Karnataka Election 2023 Live: ಕನಕಪುರ ಜನರ ಪ್ರೀತಿ ನನ್ನ ಮೇಲಿದೆ

ಕನಕಪುರದಲ್ಲಿ ಗೆಲ್ಲುವ ವಿಶ್ವಾಸವಿದೆ. 40 ವರ್ಷ ರಾಜಕಾರಣ ಮಾಡಿದ್ದೇನೆ ನನ್ನನ್ನ ಪರೀಕ್ಷೆ ಮಾಡಿಲ್ಲ, ಸೂಕ್ತ ಎಂದು ಕಣಕ್ಕಿಳಿಸಿದ್ದಾರೆ. ಡಿ.ಕೆ.ಶಿವಕುಮಾರ್ – ಡಿ.ಕೆ.ಸುರೇಶ್ ದೊಡ್ಡವರು . ನಾನು ಅವರ ಮುಂದೆ ಚಿಕ್ಕವನು, ನನಗೆ ಹೈಕಮಾಂಡ್ ಫುಲ್ ಸಪೋರ್ಟ್ ಇದೆ. ಕನಕಪುರ ಜನರ ಪ್ರೀತಿ ನನ್ನ ಮೇಲಿದೆ ಎಂದು ಆರ್ ಅಶೋಕ್ ಹೇಳಿದ್ದಾರೆ.

18 Apr 2023 13:56 (IST)

Karnataka Election 2023 Live: ರಿವರ್ಸ್​ ಆಪರೇಷನ್​ಗೆ ಸಿಎಂ ಪ್ಲಾನ್

18 Apr 2023 13:40 (IST)

Karnataka Election 2023 Live: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಶಾಕ್

ಧಾರವಾಡ ಜಿಲ್ಲೆ ಪ್ರವೇಶಕ್ಕೆ ಅನುಮತಿ ಕೋರಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಲಾಗಿದೆ. ಚುನಾವಣೆಗಾಗಿ ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿದ್ದರು. ಅರ್ಜಿಯನ್ನು ವಜಾಗೊಳಿಸಿ ನ್ಯಾ.ಜಯಂತ್ ಕುಮಾರ್ ಆದೇಶ ಹೊರಡಿಸಿದ್ದಾರೆ

18 Apr 2023 13:38 (IST)

Karnataka Election 2023 Live: ಸುರೇಶ್ ಕುಮಾರ್ ಎಚ್ಚರಿಕೆ ಮಾತು

ಬಿಎಲ್ ಸಂತೋಷ್ ಒಬ್ಬರು ಸಂಘಟನಾ ಪ್ರಧಾನ ಕಾರ್ಯದರ್ಶಿ. ಅವರು ರಾಜ್ಯದಲ್ಲಿ ಹತ್ತಾರು ವರ್ಷಗಳಿಂದ ಸಂಘಟನೆ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ರಾಜ್ಯದ ನಾಡಿಮಿಡಿತ ಬಗ್ಗೆ ಗೊತ್ತಿದೆ. ಆದರೆ ಅವರು ಎಷ್ಟು ಪಾತ್ರ ವಹಿಸಿದ್ದಾರೆ ಎಂಬುದು ಗೊತ್ತಿಲ್ಲ. ಬಿಎಲ್ ಸಂತೋಷ್ ಅನುಭವ ಕೂಡ ರಾಜ್ಯದ ಬಿಜೆಪಿ ಗೆಲ್ಲೋದಕ್ಕೆ ಸಹಾಯ ಆಗುತ್ತದೆ ಎಂದ ಸುರೇಶ್ ಕುಮಾರ್ ಹೇಳಿದ್ದಾರೆ

18 Apr 2023 13:25 (IST)

Karnataka Election 2023 Live: 150 ಸೀಟ್ ಗೆಲ್ಲುತ್ತೇವೆ

ನಮ್ಮ ಸಮೀಕ್ಷೆ 141 ಸೀಟು ಇತ್ತು. ಈಗ ಶೆಟ್ಟರ್ , ಸವದಿ ಬಂದ ಮೇಲೆ 150 ಸೀಟನ್ನು ಮುಟ್ಟುತ್ತೇವೆ. ಅವರಿಬ್ಬರಿಂದ ಇಡೀ ರಾಜ್ಯದಲ್ಲಿ ವೀರಶೈವರ ಮತ ಎರಡರಿಂದ ಮೂರು ಪರ್ಸೆಂಟ್ ಜಾಸ್ತಿಯಾಗಿದೆ. ನಮ್ಮ ಸಿದ್ದಾಂತ ಒಪ್ಪಿ ಬರೋ ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್ ಗೆ ಮುಕ್ತ ಆಹ್ವಾನ ನೀಡ್ತೀನಿ. ಎಲ್ಲಾ ಒಟ್ಟಿಗೆ ಸೇರಿ ಕರ್ನಾಟಕ ಉಳಿಸೋಣ, ಬದಲಾವಣೆ ತರೋಣ ಎಂದು ಡಿಕೆ ಶಿವಕುಮಾರ್ ಕರೆ ನೀಡಿದರು.

18 Apr 2023 13:02 (IST)

Karnataka Election 2023 Live: ಶೆಟ್ಟರ್ ಹೇಳಿಕೆಗೆ ಬೊಮ್ಮಾಯಿ ತಿರುಗೇಟು

ನನ್ನ ಟಿಕೆಟ್ ಕೈತಪ್ಪಲು ಬಿಎಲ್ ಸಂತೋಷ್ ಕಾರಣ ಎಂಬ ಜಗದೀಶ್ ಶೆಟ್ಟರ್ ಹೇಳಿಕೆಗೆ ಮುಧೋಳ ನಗರದಲ್ಲಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಅದು ಸರಿಯಲ್ಲ, ನಾವು ರಾಜ್ಯಮಟ್ಟದಿಂದ ಅವರ ಹೆಸರನ್ನ ಕಳುಹಿಸಿದ್ದೇವು. ಮೇಲ್ಮಟ್ಟದಲ್ಲಿ ಒಂದು ನೀತಿಯ ಮೇಲೆ ಅದನ್ನ ಮಾಡಿದ್ದಾರೆ. ಈಗಾಗಲೇ ಅದನ್ನ ಸಾಕಷ್ಟು ಬಾರಿ ಹೇಳಿದ್ದೇನೆ. ಉತ್ತರ ಕರ್ನಾಟಕದಲ್ಲಿ ಹೆಚ್ಚು ಸೀಟ್ ಗೆಲ್ಲಲು ರೂಪುರೇಷೆಗಳನ್ನ ಮಾಡಿದೆ ಎಂದು ಹೇಳಿದರು.

18 Apr 2023 12:45 (IST)

Karnataka Election 2023 Live: ಮಹಾಂತೇಶ್ ಕಡಾಡಿ ನಾಮಪತ್ರ ಸಲ್ಲಿಕೆ

ಗೋಕಾಕ್ ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ್ ಕಡಾಡಿ ಇಂದು ನಾಮಪತ್ರ ಸಲ್ಲಿಕೆ ಮಾಡಿದರು. ಗೋಕಾಕ್ ನಗರದ ಅಪ್ಸರಾ ಕೂಟದಿಂದ ಬಸವೇಶ್ವರ ವೃತ್ತದವರೆಗೆ ಭವ್ಯ ಮೆರವಣಿಗೆ ಮೂಲಕ ತಹಶೀಲ್ದಾರ್ ಕಚೇರಿಗೆ ಬರಲಾಯ್ತು. ಮಹಾಂತೇಶ್ ಕಡಾಡಿ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸಾಥ್ ನೀಡಿದರು.

18 Apr 2023 12:38 (IST)

Karnataka Election 2023 Live: ಯಡಿಯೂರಪ್ಪ ಅಸಹಾಯಕರು

ಸುರೇಶ್ ಕುಮಾರ್ ಅವರಿಗೆ ಟಿಕೆಟ್ ಕೊಡಲಾಗಿದ್ದು, ಅವರು ಗೆದ್ದು ಬರಲಿ. ವಿಶ್ವೇಶ್ವರ ಹೆಗಡೆ ಕಾಗೇರಿಗೂ ಟಿಕೆಟ್ ತಪ್ಪಿಸುವ ಕೆಲಸ ನಡೆಯಿತು. ಆದ್ರೆ ಕೊನೇ ಘಳಿಗೆಯಲ್ಲಿ ಟಿಕೆಟ್ ನೀಡಲಾಗಿದೆ. ಮಾನಸ ಪುತ್ರನ ಮೇಲಿನ ಪ್ರೀತಿ ವಿಶ್ವಾಸದ ಒಂದು ಪರ್ಸೆಂಟೇಜ್ ನನಗೆ ಕೊಡಲಿಲ್ಲ. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ತರೋದು ನನ್ನ ಗುರಿ. ಬಿಜೆಪಿಯಲ್ಲಿ ಯಡಿಯೂರಪ್ಪ ಸಹ ಅಸಹಾಯಕರಾಗಿದ್ದಾರೆ ಎಂಬ ವಿಷಯವನ್ನು ತಿಳಿಸಿದರು.

18 Apr 2023 12:24 (IST)

Karnataka Election 2023 Live: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರಾ ರಮ್ಯಾ?

Kannada Ramya New Movie Uttarakaanda Latest Updates

18 Apr 2023 12:16 (IST)

Karnataka Election 2023 Live: BJP Ticket ತಪ್ಪಲು BL Santhosh ಕಾರಣ

18 Apr 2023 12:01 (IST)

Karnataka Election 2023 Live: ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ

ಪದೇ ಪದೇ ಅಪಮಾನ ವಿಚಾರವನ್ನು ಸಂಬಂಧಪಟ್ಟವರಿಗೆ ಹೇಳಿದೆ. ಆದರೆ ಅದನ್ನು ಸರಿಪಡಿಸಲಿಲ್ಲ. ಜೋಶಿ ಸಹ ಬಿ.ಎಲ್.ಸಂತೋಷ್ ಆಪ್ತರು. ಹಾಗಂತ ಅವರೂ ಷಡ್ಯಂತ್ರ ಮಾಡಿದ್ದಾರೆ ಅಂತ ಹೇಳಲ್ಲ. ಎಲ್ಲಾ ಜಿಲ್ಲೆಗಳಲ್ಲಿಯೂ ಉಸಿರುಗಟ್ಟೋ ವಾತಾವರಣವಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.