Karnataka Assembly Election 2023 live: ಇಂದು ಕರ್ನಾಟಕದ ರಾಜಕಾರಣ ಹಲವು ಹೊಸ ಮತ್ತು ಅಚ್ಚರಿ ವಿದ್ಯಮಾನಗಳಿಗೆ ಸಾಕ್ಷಿಯಾಗಲಿದೆ. ಚುನಾವಣೆಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು, 10 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ನಾಗಠಾಣ –ಸಂಜೀವ್ ಐಹೊಳೆ, ಸೇಡಂ- ರಾಜಕುಮಾರ್ ಪಾಟೀಲ್, ಕೊಪ್ಪಳ –ಮಂಜುಳಾ ಅಮರೇಶ್, ರೋಣ –ಕಳಕಪ್ಪ ಬಂಡಿ, ಹುಬ್ಬಳ್ಳಿ ಧಾರವಾಡ ಕೇಂದ್ರ -ಮಹೇಶ್ ಟೆಂಗಿನಕಾಯಿ, ಹಗರಿಬೊಮ್ಮನಹಳ್ಳಿ -ಬಿ ರಾಮಣ್ಣ, ಹೆಬ್ಬಾಳ – ಕಟ್ಟಾ ಜಗದೀಶ್, ಗೋವಿಂದರಾಜ ನಗರ -ಉಮೇಶ್ ಶೆಟ್ಟಿ, ಮಹದೇವಪುರ –ಮಂಜುಳಾ, ಅರವಿಂದ ಲಿಂಬಾವಳಿ, ಕೃಷ್ಣರಾಜ – ಶ್ರೀವತ್ಸ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ.
ಬಿಎಸ್ವೈ ಆಪ್ತ, ಮಾಜಿ ಸಚಿವ ಪುತ್ರ JDS ಸೇರ್ಪಡೆಯಾಗಿದ್ದಾರೆ. ಸೂರ್ಯಕಾಂತ ನಾಗಮಾರಪಳ್ಳಿ ತೆನೆ ಹೊರಲಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಸೂರ್ಯಕಾಂತ ಸೇರ್ಪಡೆಯಾಗಿದ್ದಾರೆ. ಬೀದರ್ ಉತ್ತರ ಕ್ಷೇತ್ರದ ಟಿಕೆಟ್ ನಿರೀಕ್ಷೆಯಲ್ಲಿ ಸೇರ್ಪಡೆಯಾಗಿದ್ದಾರೆ. ಇನ್ನು, ಸೂರ್ಯಕಾಂತ ನಾಗಮಾರಪಳ್ಳಿ ಬೀದರ ಉತ್ತರ ಕ್ಷೇತ್ರದಲ್ಲಿ ಲಿಂಗಾಯತ ಪ್ರಭಾವಿ ನಾಯಕರಾಗಿದ್ದಾರೆ.
ರಾಜ್ಯದಲ್ಲಿ ಈ ಬಾರಿ ಬಿಜೆಪಿಗೆ ಅಧಿಕಾರಕ್ಕೆ ಬರುವ ಅವಕಾಶವಿತ್ತು. ಆದರೆ ಕೆಲವೊಬ್ಬರಿಗೆ ಬಿಜೆಪಿ ಅಧಿಕಾರಕ್ಕೆ ಬರೋದು ಬೇಡ ಅನಿಸುತ್ತಿದೆ. ಹಾಗಾಗಿಯೇ ಪ್ರಮುಖ ನಾಯಕರ ವಿರುದ್ಧ ಷಡ್ಯಂತ್ರ ಮಾಡಿಕೊಡು ಬಂದಿದ್ದಾರೆ. ಕಳೆದ ಒಂದು ವರ್ಷದಿಂದಲೂ ಈ ಪಿತೂರಿ ನಡೆದಿದೆ ಎಂದು ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ಗದಗ ನಗರದ ನಗರದ ಚೆನ್ನಮ್ಮ ಸರ್ಕಲ್ ಸಮೀಪದಲ್ಲಿ ದುಷ್ಕರ್ಮಿಗಳು ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಕಾರಿಗೆ ಕಲ್ಲು ತೂರಿದ ಘಟನೆ ಮಾಡಿದ್ದಾರೆ. ಈ ವೇಳೆ ಕಾಂಗ್ರೆಸ್ -ಬಿಜೆಪಿ ಕಾರ್ಯಕರ್ತರ ಮಾರಾಮಾರಿ ನಡೆದಿದ್ದು, ಕೂಡಲೇ ಪೊಲೀಸರು ಮಧ್ಯ ಪ್ರದೇಶಿಸಿ ಗಲಾಟೆ ತಿಳಿ ಮಾಡಿದ್ದಾರೆ. ಸದ್ಯ ಗದಗದಲ್ಲಿ ಬೂದಿ ಮುಚ್ಚಿದ್ದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರು ಇಂದು ಪುಲುಕೇಶಿನಗರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕುಟುಂಬ ಸಮೇತ ಆಗಮಿಸಿದ್ದ ಅಖಂಡ ಅವರು, ಫೇಜರ್ ಟೌನ್ ನಲ್ಲಿರುವ ಸರ್ಕಾರಿ ಕಾಲೇಜಿನಲ್ಲಿನ ಚುನಾವಣೆ ಅಧಿಕಾರಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಶಾಮನೂರು ಶಿವಶಂಕರಪ್ಪ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.ಇತ್ತ ದಾವಣಗೆರೆ ಉತ್ತರ ಕ್ಷೇತ್ರದಿಂದ ಶಾಮನೂರು ಪುತ್ರ ಎಸ್ಎಸ್ ಮಲ್ಲಿಕಾರ್ಜುನ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇಬ್ಬರು ಕಾಂಗ್ರೆಸ್ ಮುಖಂಡರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಅಪ್ಪ-ಮಗ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಮಾಜಿ ಸಚಿವ ಈಶ್ವರಪ್ಪ ಭಾವನಾತ್ಮಕವಾಗಿ ಪತ್ರ ಬರೆದಿದ್ದು, ಶೆಟ್ಟರ್ ಅವರು ಕಾಂಗ್ರೆಸ್ ಸೇರ್ಪಡೆ ಆಗಿರುವುದು ದುರದೃಷ್ಟಕರ. ನೀವು ಬಿಜೆಪಿ ಪಕ್ಷದಲ್ಲಿ ಮುಖ್ಯಮಂತ್ರಿ ಆಗಿದ್ದವರು. ನಿಮ್ಮ ಹುಬ್ಬಳ್ಳಿಯ ಈದ್ಗ ಮೈದಾನ ಹೋರಾಟ ನನ್ನ ಮನಸ್ಸಿನಲ್ಲಿ ಹಸಿರಾಗಿದೆ. ಈ ಭಾರಿ ಸ್ಪರ್ಧೆ ಗೆ ಅವಕಾಶ ಕೊಟ್ಟಿಲ್ಲ ಎಂದರೆ ಹಿಂದೆ ಬಿಜೆಪಿ ನಿಮ್ಮಗೆ ಕೊಟ್ಟಿದ್ದ ಸ್ಥಾನಮಾನ ಬಗ್ಗೆ ಅವಲೋಕಿಸಿ. ನಿಮ್ಮ ನಿರ್ಧಾರದಿಂದ ಅನೇಕ ನಾಯಕ ರು ಮತ್ತು ಲಕ್ಷಾಂತರ ಕಾರ್ಯಕರ್ತರಿಗೆ ನೋವಾಗಿದೆ ಎಂದು ಈಶ್ವರಪ್ಪ ಪತ್ರದಲ್ಲಿ ತಿಳಿಸಿದ್ದಾರೆ.
ನಾನು ಅಧಿಕಾರಕ್ಕೆ ಅಂಟಿಕೊಂಡಿಲ್ಲ. ರಾಜಕೀಯ ಸನ್ಯಾಸಕ್ಕೂ ಸಿದ್ಧನಿದ್ದೆ. ಆದ್ರೆ ನನಗೆ ಸಕಾರಾತ್ಮ ಜನರ ವಿಶ್ವಾಸ ಇರೋವರೆಗೂ ರಾಜಕೀಯದಲ್ಲಿಇರುತ್ತೇನೆ. ಕಾಂಗ್ರೆಸ್ಗೆ ಸೇರ್ಪಡೆಯಾದ ಕೂಡಲೇ ಬಿಜೆಪಿಯನ್ನು ಬೈಯಬೇಕೆಂದಿಲ್ಲ. ಬಿಜೆಪಿಯನ್ನು ಬೈಯಲ್ಲ. ಆದ್ರೆ ಕೆಲ ವ್ಯಕ್ತಿಗಳು ಇದಾರಲ್ಲಾ, ಅವರ ಬಗ್ಗೆ ಬೇಸರವಿದೆ ಎಂದು ಶೆಟ್ಟರ್ ಹೇಳಿದರು.
ಏಪ್ರಿಲ್ 17ಕ್ಕೆ ನಾನು ಮದುವೆಯಾಗಿ ಮೂರು ವರ್ಷ. ದೇವೇಗೌಡರ,ಬನಶಂಕರಿ ದೇವಿ, ವೆಂಕಟೇಶ್ವರ ಸ್ವಾಮಿ ಆಶೀರ್ವಾದ ಪಡೆದು ಮುಖಂಡರ ಜೊತೆಗೂಡಿ 2023ರ ಚುನಾವಣೆ ಸ್ಪರ್ಧೆಗೆ ಅರ್ಜಿ ಸಲ್ಲಿಸಿದ್ದೇನೆ. ರಾಮನಗರ ಕ್ಷೇತ್ರ ಒಂದು ಐತಿಹಾಸಿಕ ಕ್ಷೇತ್ರ. 1952 ರಲ್ಲಿ ಕೆಂಗಲ್ ಹನುಮಂತಯ್ಯ ಸ್ಪರ್ಧಿಸಿ ರಾಜ್ಯದ ಮುಖ್ಯಮಂತ್ರಿಯಾದರು. 94ರಲ್ಲಿ ದೇವೇಗೌಡರು ಶಾಸಕರಾಗಿ ಇಲ್ಲಿಂದಲೇ ಮುಖ್ಯಮಂತ್ರಿಯಾದ್ರು. 2004 ರಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದರು. ಎಲ್ಲಾ ಸಮುದಾಯದ ಜನರು ವಾಸ ಮಾಡುತ್ತಿರುವ ಶಾಂತಿಯುತವಾದ ಕ್ಷೇತ್ರ ಇದು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಬಳ್ಳಾರಿ ನಗರದ ಕೆಆರ್ಪಿಪಿ ಅಭ್ಯರ್ಥಿಯಾಗಿ ಲಕ್ಷ್ಮೀ ಅರುಣಾ ನಾಮಪತ್ರ ಸಲ್ಲಿಕೆ ಮಾಡಿದರು. ಲಕ್ಷ್ಮೀ ಅರುಣಾ ಅವರಿಗೆ ಮಗಳು ಬ್ರಹ್ಮಿಣಿ, ಅಳಿಯ ರಾಜೀವ್ ರೆಡ್ಡಿ,ತಂದೆ ಪರಮೇಶ್ವರ್ ರೆಡ್ಡಿ, ತಾಯಿ ನಾಗಲಕ್ಷ್ಮಿ ಸಾಥ್ ನೀಡಿದರು. ನಾಮಪತ್ರ ಸಲ್ಲಿಕೆಗೆ ಮುನ್ನ ಬಳ್ಳಾರಿ ನಗರದ ಅವಂಭಾವಿ ನಿವಾಸದಿಂದ ಮಹಾನಗರ ಪಾಲಿಕೆವರೆಗೆ ಮೆರವಣಿಗೆ ನಡೆಸಲಾಯ್ತು. ಕನಕ ದುರ್ಗಮ್ಮ ದೇವಸ್ಥಾನ ಬಳಿ ಕ್ರೇನ್ ಮೂಲಕ ಪುಟ್ಬಾಲ್ ಹಾರ ಹಾಕಲಾಯ್ತು.
ಶೆಟ್ಟರ್ ಬಿಜೆಪಿ ಬಿಟ್ಟಿರೋದರಿಂದ ಬಿಜೆಪಿಗೆ ಯಾವುದೇ ನಷ್ಟ ಇಲ್ಲ. ಅವರ ನಿರ್ಗಮನದಿಂದ ಬಿಜೆಪಿಗೆ ಮತ್ತಷ್ಟು ಶಕ್ತಿ ಬಂದಿದೆ. ನಮ್ಮಲ್ಲಿರುವಾಗ ಅನುಭವಿಸಬಹುದಾದ ಪರಮೊನ್ನತ ಅಧಿಕಾರವನ್ನು ಅವರು ಅನುಭವಿಸಿದ್ದಾರೆ ಎಂದು ಅಶ್ವತ್ಥ್ ನಾರಾಯಣ್ ಹೇಳಿದರು.
ಮಂಡ್ಯ ಬಿಜೆಪಿಯಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ. ಮಂಡ್ಯ ಕ್ಷೇತ್ರದಿಂದ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ವದಂತಿ ಇದೆ. ಪಕ್ಷ ಸೂಚನೆ ನೀಡಿದ್ರೆ ನನ್ನ ಸ್ಪರ್ಧೆ ಇರಲಿದೆ. ಆದ್ರೆ ಪಕ್ಷ ನನಗೆ ಯಾವುದೇ ಸೂಚನೆ ನೀಡಿಲ್ಲ ಎಂದು ಹೇಳುವ ಮೂಲಕ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು.
ಯಾರಾದ್ರು ಪಕ್ಷ ಬಿಟ್ಟು ಹೋದಾಗ ಏನಾದರೂ ಒಂದು ಕಾರಣ ಕೊಡಬೇಕು ಅಲ್ವಾ? ಕಳೆದ 25 ವರ್ಷದ ಅವರ ರಾಜಕೀಯ ಜೀವನದಲ್ಲಿ ಬಿಜೆಪಿ ಶೆಟ್ಟರ್‌ಗೆ ಎಲ್ಲವನ್ನೂ ಕೊಟ್ಟಿದೆ. ಅವರನ್ನ ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಹೋಗಿದ್ದಾರೆ ಅದಕ್ಕೊಂದು ನೆಪ ಎಂದು ಶೆಟ್ಟರ್ ಹೇಳಿಕೆಗೆ ಸಿಎಂ ಬೊಮ್ಮಾಯಿ ಟಾಂಗ್ ನೀಡಿದರು.
ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವ ನಿಖಿಲ್ ಕುಮಾರಸ್ವಾಮಿ, ಇಂದು ಬಿ ಫಾರಂ ಪಡೆಯಲು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ನಿವಾಸಕ್ಕೆ ತೆರಳಿದ್ದರು. ಈ ವೇಳೆ ದೇವೇಗೌಡರ ಆರೋಗ್ಯ ಸ್ಥಿತಿ ಕಂಡು ನಿಖಿಲ್ ಕುಮಾರಸ್ವಾಮಿ ಭಾವುಕರಾಗಿ ಕಣ್ಣೀರಿಟ್ಟರು. ಬಿ ಫಾರಂ ಪಡೆಯುವ ವೇಳೆ ತಂದೆ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ತಾಯಿ ಅನಿತಾ ಕುಮಾರಸ್ವಾಮಿ ಮತ್ತು ಪತ್ನಿ ರೇವತಿ ಉಪಸ್ಥಿತರಿದ್ದರು.
ಮೆರಿಟ್, ಡಿ ಮೆರಿಟ್ ಬಗ್ಗೆ ನಾನು ಚರ್ಚೆ ಮಾಡಲ್ಲ. ಇಷ್ಟು ದಿನ ಬಿಜೆಪಿ ಪರ, ಕಾಂಗ್ರೆಸ್ ವಿರುದ್ಧದ ರಾಜಕಾರಣ ಮಾಡಿದವರು. ನಿನ್ನೆವರೆಗೆ ಕಾಂಗ್ರೆಸ್ ಕೋಮಾದಲ್ಲಿದೆ, ಐಸಿಯುನಲ್ಲಿದೆ ಅದನ್ನ ಯಾರು ಬದುಕಿಸಲು ಆಗುವುದಿಲ್ಲ ಎಂದವರು. ನೀವೇ ಹೇಳುತ್ತಿದ್ದ ಕೋಮಾಗೆ ಹೋಗಿರುವ ಪಾರ್ಟಿಗೆ ಹೋಗಿ ಹೋಗಿರುವುದು ದುರಾದೃಷ್ಟಕರ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ಇಡೀ ರಾಜ್ಯದಲ್ಲಿ ಹೆಚ್ಚಿನ ವೋಟ್ ಪಡೆದು ಗೆದ್ದವನು ನಾನು. 2020 ರಲ್ಲಿ ನಮ್ಮ ಮನೆ ಸುಟ್ಟು ಹಾಕಿದ್ರು. ಸುಟ್ಟು ಹಾಕಿದವರ ಬೆನ್ನಿಗೆ ಕಾಂಗ್ರೆಸ್ ನಾಯಕರು ನಿಂತಿದ್ದಾರೆ ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಸಮಾಧಾನ ಹೊರ ಹಾಕಿದ್ದಾರೆ.
ಬಿಜೆಪಿ ಪಕ್ಷ ರಾಜ್ಯದ ಉನ್ನತ ಸ್ಥಾನಗಳನ್ನು ಕೊಟ್ಟಿದ್ದರೂ ಇಂದು ಕಾಂಗ್ರೆಸ್ ಸೇರುತ್ತಿದ್ದಾರೆ ಅಂದರೆ ಶೆಟ್ಟರ್ ಅವರನ್ನ ಮುಖ್ಯಮಂತ್ರಿ ಮಾಡ್ತೀವಿ ಅಥವಾ ದೇಶದ ಪ್ರಧಾನಿ ಮಾಡುತ್ತೇವೆ ಅಂತ ಕಾಂಗ್ರೆಸ್ ಹೇಳಿರಬಹುದು ಎಂದು ಬಿ.ಸಿ.ಪಾಟೀಲ್ ವ್ಯಂಗ್ಯ ಮಾಡಿದರು.