Karnataka Assembly Election: ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಬಂಡಾಯದ ಬಾವುಟ ಹಾರಿಸಿ ಕೆಲವರು ಪಕ್ಷದಿಂದ ಹೊರ ನಡೆಯುತ್ತಿದ್ದಾರೆ. ಜೆಡಿಎಸ್ ಈ ಎರಡೂ ಪಕ್ಷಗಳಲ್ಲಿನ ಟಿಕೆಟ್ ವಂಚಿತರನ್ನು ತನ್ನತ್ತ ಸೆಳೆಯುತ್ತಿದೆ. ಕರ್ನಾಟಕ ಚುನಾವಣೆಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಭುವನಹಳ್ಳಿ ಚೆಕ್ ಪೋಸ್ಟ್ ಬಳಿ ಸಿಎಂ ಬಸವರಾಜ ಬೊಮ್ಮಾಯಿ ಅವರು ವಾಹನವನ್ನು ಚುನಾವಣಾ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ತೋರಣಗಲ್ಲು ವಿಮಾನ ನಿಲ್ದಾಣದಿಂದ ಹೊಸಪೇಟೆಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಡಿಜೆ ಹಳ್ಳಿ- ಕೆ ಜೆ ಹಳ್ಳಿ ಗಲಾಟೆ ಸಂತ್ರಸ್ಥ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ಕಾಂಗ್ರೆಸ್ ಟಿಕೆಟ್ ನೀಡಲು ನಿರಾಕರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಶಾಸಕ ನಾಳೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದು, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳ ಸಂದರ್ಭದಲ್ಲಿ ಸ್ಟೇಡಿಯಂ ಒಳಭಾಗದಲ್ಲಿ ಮದ್ಯಪಾನ ನಿಷೇಧ ಮಾಡಲು ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಈಗ ಬಿಜೆಪಿ ಒಡೆದ ಮನೆಯಾಗಿದೆ, ಯಾವುದೇ ಸಿದ್ದಾಂತ ಬದ್ದತೆ ಉಳಿದುಕೊಂಡಿಲ್ಲ ಎಂದು ರಾಯಭಾಗ ಪಟ್ಟಣದಲ್ಲಿ ಸತೀಶ್ ಜಾರಕಿಹೋಳಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈಗಾಗಲೇ ಹಲವಾರು ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಈ ಬಾರಿ ಬಿಜೆಪಿ ರಾಜ್ಯದಲ್ಲಿ ಹೀನಾಯವಾಗಿ ಸೋಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಟಿಕೆಟ್ ಕೈ ತಪ್ಪಿದ ಕಾರಣ ಕಾರ್ಕಳದ ಟಿಕೆಟ್ ಆಕಾಂಕ್ಷಿಯಾಗಿದ್ದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದಾರೆ. ಗುತ್ತಿಗೆದಾರ ಉದಯ್ ಕುಮಾರ್ ಶೆಟ್ಟಿಗೆ ಟಿಕೆಟ್ ನೀಡಿದ ಬೆನ್ನಲ್ಲೇ ರಾಜೀನಾಮೆ ನೀಡಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಜೈ ಭಾರತ್ ಸಮಾವೇಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಕೋಲಾರಕ್ಕೆ ಆಗಮಿಸಿ ಒಗ್ಗಟ್ಟಿನ ಸಂದೇಶ ಕೊಟ್ಟಿದ್ದಾರೆ. ಆದರೆ ರಾಹುಲ್ ಗಾಂಧಿ ಕ್ಷೇತ್ರಕ್ಕೆ ಬಂದರೂ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಂಸದ ಕೆಎಚ್ ಮುನಿಯಪ್ಪ ಮಾತ್ರ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ.
ನನಗೆ ರಾಜ್ಯಸಭಾ ಮೇಂಬರ್ ಮಾಡುತ್ತೇನೆ ಎಂದು ಹೇಳಿದರು. ಈಗ ಕಾಂಗ್ರೆಸ್ ನಾಯಕರು ಬಂದಿರೋದು ಸಹಜ. ಶೆಟ್ಟರ್ ಬಂದರೂ ಬರಲಿ ಎಂದು ಕಾಂಗ್ರೆಸ್ ನಾಯಕರು ಬಂದಿದ್ದಾರೆ. ಅಮಿತ್ ಶಾ ನನ್ನ ಜೊತೆ ಮಾತಾಡಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಸವದಿ, ಶೆಟ್ಡರ್ ರಾಜೀನಾಮೆಯಿಂದ ಪಕ್ಷಕ್ಕೆ ಯಾವುದೇ ಸಮಸ್ಯೆ ಆಗಲ್ಲ. ಮುಂದೆ ಮಂತ್ರಿ ಮಾಡ್ತೇವೆ ಎಂದೆವು. ನಿಮ್ಮ ಮನೆಯವರಿಗೆ ಟಿಕೆಟ್ ಕೊಡ್ತೇನೆ ಎಂದು ಹೇಳಿದೆ ಆದರೂ ಯಾವುದೇ ಮಾತು ಕೇಳಲಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರಿಂದ ವೀರಶೈವ ಸಮಾವೇಶದಲ್ಲಿ ಪತ್ನಿ ಪಲ್ಲವಿ ರವಿ (Pallavi Ravi) ಭಾಗಿಯಾಗಿ ಭಾವುಕರಾದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಕರೆ ಮಾಡಿದ್ದರು. ನನ್ನ ಬೆಂಬಲಿಗರು, ಹಿತೈಷಿಗಳು ಎಲ್ಲರೂ ಸೋಮಣ್ಣರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಚಾಮರಾಜನಗರ ಬಿಜೆಪಿ ಟಿಕೆಟ್ ವಂಚಿತೆ ನಾಗಶ್ರೀ ಪ್ರತಾಪ್ ಹೇಳಿದ್ದಾರೆ. ಟಿಕೆಟ್ ಕೈ ತಪ್ಪಿದಾಗ ಸಹಜವಾಗಿಯೇ ನೋವಾಗಿತ್ತು. ನನ್ನ ಹಿತೈಷಿಗಳು ಬೆಂಬಲಿಗರು ಅಸಮಧಾನ ವ್ಯಕ್ತಪಡಿಸಿದ್ದರು. ಸಮಯ ತೆಗೆದುಕೊಂಡು ನಿರ್ಧಾರ ತಿಳಿಸು ಅಂತ ಹೇಳಿದ್ದರು. ಅದರಂತೆ ಎರಡು ದಿನದ ನಂತರ ಎಲ್ಲರ ಅಭಿಪ್ರಾಯ ಪಡೆದು ನಾನು ನಿರ್ಧಾರಕ್ಕೆ ಬಂದಿದ್ದೇನೆ ಎಂದಿದ್ದಾರೆ.
ಸಚಿವ ಅಶ್ವಥ್ ನಾರಾಯಣ್ ಒಬ್ಬ ಅಯೋಗ್ಯ. ಅವನು ಹೇಳ್ತಾನೆ ಟಿಪ್ಪು ರೀತಿ ಸಿದ್ದರಾಮಯ್ಯ ರನ್ನು ಕೊಲ್ಲಿ ಅಂತ. ಎಷ್ಟು ಸಿದ್ದರಾಮಯ್ಯ ರಂತ ನಾಯಕನನ್ನು ಕೊಲ್ತೀರಾ? ಡಿಕೆ ಶಿವಕುಮಾರ್ ಅವರಂತಹ ನಾಯಕರನ್ನ ಕೊಲ್ತೀರಾ ಎಂದು ಜೈ ಭಾರತ್ ಸಮಾವೇಶದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಆಕ್ರೋಶ ಹೊರ ಹಾಕಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸುವಂತೆ ಮನವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ್ ಮಂಡಿಯೂರಿ ಮನವಿ ಮಾಡಿಕೊಂಡಿದ್ದಾರೆ. ಬೆಳಗಾವಿ ಧರ್ಮನಾಥ ಭವನದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಂಜಯ್ ಪಾಟೀಲ್, ಕಾರ್ಯಕರ್ತ ಒಮ್ಮತದಿಂದ ಕೆಲಸ ಮಾಡಬೇಕು. ಭಿನ್ನಾಭಿಪ್ರಾಯ ಬಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಯಾರೇ ಪಕ್ಷ ಬಿಟ್ಟು ಹೋದರು ತೊಂದರೆ ಇಲ್ಲ. ನಾನಿನ್ನೂ ಗಟ್ಟಿಯಾಗಿದ್ದೇನೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಅಧಿಕಾರಕ್ಕೆ ತರುತ್ತೇನೆ ಎಂದು ಯಡಿಯೂರಪ್ಪ ಗುಡುಗಿದ್ದಾರೆ.
https://t.co/sVseCHrP1S
ಹೆಚ್ಚು ಸಾಲ ಹೊಂದಿರುವ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ ಸಿಎಂ ಬೊಮ್ಮಾಯಿ#BasavarajBommai #BJP #KannadaNews #KarnatakaAssemblyElections2023 #KarnatakaElections2023— News18 Kannada (@News18Kannada) April 16, 2023
ಮದ್ದೂರು ವಿಧಾನಸಭಾ ಕ್ಷೇತ್ರಕ್ಕೆ ಉದಯ್ ಗೌಡಗೆ ಟಿಕೆಟ್ ನೀಡಿದ ಹಿನ್ನಲೆ ಗುರುಚರಣ್ ಬೆಂಬಲಿಗರ ಜೊತೆ ಸಭೆ ನಡೆಸುತ್ತಿದ್ದಾರೆ. ಗುರುಚರಣ್ ಮದ್ದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಗುರುಚರಣ್ ಮಾಜಿ ಸಿಎಂ ಎಸ್.ಎಂ ಕೃಷ್ಣರ ತಮ್ಮನ ಮಗ ಗುರುಚರಣ್. ಮೂಲ ಕಾಂಗ್ರೆಸಿಗರನ್ನ ಕಡೆ ಗಣಿಸಿ ಉದಯ್ ಟಿಕೆಟ್ ನೀಡಿದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಜಗದೀಶ್ ಶೆಟ್ಟರ್ ಈ ರೀತಿ ಮಾಡಬಾರದಾಗಿತ್ತು. ಮೋದಿ, ಅಮಿತ್ ಶಾ ಜೊತೆ ಚರ್ಚೆ ಮಾಡಿದ್ದೇವೆ. ಆದ್ರೆ ಶೆಟ್ಟರು ರಾಜೀನಾಮೆ ನೀಡಬಾರದಿತ್ತು.
ರಾಜೀನಾಮೆ ನೀಡುವವರ ಜೊತೆ ಮಾತನಾಡಿದ್ದೇವೆ. ಈಗ ಬಿಜೆಪಿ ಆಫೀಸ್ ನಲ್ಲೂ ಚರ್ಚೆ ನಡೆಸುತ್ತೇವೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಮೊಳಕಾಲ್ಮೂರು ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆ ಡಾ ಯೋಗೀಶ್ ಬಾಬು ಜೆಡಿಎಸ್ ಸೇರ್ಪಡೆಗೆ ಮುಂದಾಗಿದ್ದಾರೆ. ಇಂದು ಮಧ್ಯಾಹ್ನ ಬಿ.ಜಿ.ಕೆರೆ ಗ್ರಾಮದಲ್ಲಿ ಬೆಂಬಲಿಗರ ಸಭೆ ಕರೆದಿರುವ ಯೋಗೀಶ್ ಬಾಬು JDS MLC ಶರವಣ, ಮಾಜಿ MLC ರಘು ಆಚಾರ್, ಜಿಲ್ಲಾಧ್ಯಕ್ಷ ಡಿ.ಯಶೋಧರ್, ರಾಜ್ಯ ಉಪಾದ್ಯಕ್ಷ ಬಿ.ಕಾಂತರಾಜ್ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ.
ನಮಗೆ ಇನ್ನೂ ಕಾಂಗ್ರೆಸ್ ಮುಖಂಡರ ಮೇಲೆ ವಿಶ್ವಾಸವಿದೆ. ಪಕ್ಷದ ಟಿಕೆಟ್ ಕೊಡುತ್ತೆ ಎಂದುಕೊಂಡಿದ್ದೇವೆ. ಒಂದು ವೇಳೆ ಟಿಕೆಟ್ ಕೊಡದೇ ಹೋದ್ರೆ
ಬೆಂಬಲಿಗರು, ಕ್ಷೇತ್ರದ ಜನತೆ ನಮ್ಮ ಪರವಾಗಿ ಇರುತ್ತಾರೆ. ಅವರ ಯಾವುದೇ ನಿರ್ಧಾರಕ್ಕೂ ನಾವು ಬದ್ಧ ಎಂದು ಅಖಂಡ ಸೋದರ ಮಹೇಶ್ ನ್ಯೂಸ್ 18ಗೆ ಹೇಳಿದ್ದಾರೆ.