Karnataka Election 2023: ಕಾಂಗ್ರೆಸ್ 3ನೇ ಪಟ್ಟಿ ರಿಲೀಸ್; ಪುಲಕೇಶಿ ನಗರ ಇನ್ನೂ ಸಸ್ಪೆನ್ಸ್

Karnataka Assembly Election 2023 Live: ಇಂದು ಸಿಎಂ ಬೊಮ್ಮಾಯಿ (CM Basavaraj Bommai) ಅವರು ಶಿಗ್ಗಾಂವಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಇಂದಿನ ಚುನಾವಣೆಯ ಅಪ್​ಡೇಟ್ ಇಲ್ಲಿದೆ.

ಬೆಂಗಳೂರು: ಟಿಕೆಟ್ ವಂಚಿತ ಅಸಮಾಧಾನಿತ ನಾಯಕರು ಪಕ್ಷದಿಂದ ಪಕ್ಷಕ್ಕೆ ಶಿಫ್ಟ್ ಆಗುತ್ತಿದ್ದಾರೆ. ಶುಕ್ರವಾರ ಜೆಡಿಎಸ್ 2ನೇ ಪಟ್ಟಿ ರಿಲೀಸ್ (JDS Candidate List) ಮಾಡಿದೆ. ಕಾಂಗ್ರೆಸ್ (Congress) 3ನೇ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದೆ. ಮತ್ತೊಂದೆಡೆ ಬಿಜೆಪಿಯಲ್ಲಿ (BJP) ಟಿಕೆಟ್ ವಂಚಿತರ ಅಸಮಾಧಾನ ಇನ್ನು ಕಡಿಮೆಯಾಗ್ತಿಲ್ಲ. ಇಂದು ಸಿಎಂ ಬೊಮ್ಮಾಯಿ (CM Basavaraj Bommai) ಅವರು ಶಿಗ್ಗಾಂವಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಇಂದಿನ ಚುನಾವಣೆಯ ಅಪ್​ಡೇಟ್ ಇಲ್ಲಿದೆ.

ಮತ್ತಷ್ಟು ಓದು ...
15 Apr 2023 19:21 (IST)

Karnataka Election 2023 Live: ಶೆಟ್ಟರ್​ ಬಂದರೆ ಸ್ವಾಗತ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್​​ಗೆ ಶೆಟ್ಟರ್ ಬರೋದಾದರೆ ಸ್ವಾಗತಿಸುತ್ತೇನೆ, ಆದರೆ ಜಗದೀಶ್ ಶೆಟ್ಟರ್ ನನ್ನ ಜೊತೆಗೆ ಮಾತನಾಡಿಲ್ಲ ಎಂದು ಬೆಳಗಾವಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಿರಿಯರನ್ನು ಬಿಜೆಪಿ ಸರಿಯಾಗಿ ನಡೆಸಿಕೊಂಡಿಲ್ಲ, ಸವದಿ ಆಗಮನದಿಂದ ಕಾಂಗ್ರೆಸ್​​ಗೆ ಲಾಭ ಆಗಲಿದೆ. ಈಶ್ವರಪ್ಪ ಸಿದ್ಧಾಂತ ಎನ್ನುತ್ತಿದ್ದರು ಈಗ ಎಲ್ಲಿ ಹೋದ್ರು ಎಂದು ಸಿದ್ದು ಪ್ರಶ್ನಿಸಿದ್ದಾರೆ.

15 Apr 2023 19:12 (IST)

Karnataka Election 2023 Live: ಬಿಜೆಪಿ ಹೈಕಮಾಂಡ್​ಗೆ ಮಾಜಿ ಸಿಎಂ ಶೆಟ್ಟರ್ ನ್ಯೂ ಡೆಡ್​​ಲೈನ್

ಹೈಕಮಾಂಡ್​ ಸಮಯ ಕೇಳಿದೆ, ರಾತ್ರಿ 8:30ರ ವರೆಗೂ ಕಾದು ನೋಡೋಣಾ. ಧರ್ಮೇಂದ್ರ ಪ್ರಧಾನ್, ಪ್ರಹ್ಲಾದ್ ಜೋಶಿ ಮತ್ತು ಸಿಎಂ ಬೊಮ್ಮಾಯಿ ಸಂದೇಶ ಕೊಟ್ಟಿದ್ದು, ಇದಕ್ಕೊಂದು ಪರಿಹಾರ ಹುಡುಕೋದಾಗಿ ಸಮಯ ಕೇಳಿದ್ದಾರೆ ಎಂದು ಜಗದೀಶ್​ ಶೆಟ್ಟರ್ ಮಾಹಿತಿ ನೀಡಿದ್ದಾರೆ.

15 Apr 2023 18:30 (IST)

Karnataka Election 2023 Live: Congressನಲ್ಲಿ ಇನ್ನೂ 15 ಕ್ಷೇತ್ರ ಪೆಂಡಿಂಗ್

15 Apr 2023 18:28 (IST)

Karnataka Election 2023 Live: ರಾಜ್ಯಾಧ್ಯಕ್ಷನಾಗಿ ನಾನು ವಿಫಲ ಆಗಿಲ್ಲ; ಕಟೀಲ್​

ಬಿಜೆಪಿ ಪಕ್ಷದ ಬಂಡಾಯದ ಕಿಚ್ಚು ಆರಿಸುವಲ್ಲಿ ಕಟೀಲ್ ವಿಫಲ ಆಗಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ನಳಿನ್ ಕುಮಾರ್ ಕಟೀಲ್​ ಅವರು, ಯಾರ್ಯಾರ ಬಗ್ಗೆ ಮಾತಾಡಬೇಕೋ ಅವರ ಬಳಿ ಮಾತಾಡಿದ್ದೇನೆ. ಅದನ್ನು ಮಾಧ್ಯಮದ ಬಳಿ ಹೇಳುವ ಅಗತ್ಯ ಇಲ್ಲ. ರಾಜ್ಯಾಧ್ಯಕ್ಷನಾಗಿ ಇದರಲ್ಲಿ ನಾನು ವಿಫಲ ಆಗಿಲ್ಲ ಎಂದಿದ್ದಾರೆ.

15 Apr 2023 17:58 (IST)

Karnataka Election 2023 Live: ಬಿಜೆಪಿಗೆ ಫೈಟರ್ ರವಿ ಗುಡ್ ಬೈ

ಟಿಕೆಟ್ ಪಟ್ಟಿ ಘೋಷಣೆಯಾದ ಬಳಿಕ ಬಿಜೆಪಿಯಲ್ಲಿ ಭುಗಿಲೆದಿದ್ದ ಬಂಡಾಯ ಮುಗಿಯುವಂತೆ ಕಾಣುತ್ತಿಲ್ಲ. ನಾಗಮಂಗಲ ಟಿಕೆಟ್ ಆಕಾಂಕ್ಷಿ ಯಾಗಿದ್ದ ಫೈಟರ್ ರವಿ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾಗಮಂಗಲ ಟಿಕೆಟ್ ಸಿಗದ ಕಾರಣಕ್ಕೆ ಅಸಮಾಧಾನ ಗೊಂಡು ರಾಜೀನಾಮೆ ನೀಡಿದ್ದಾರೆ.

15 Apr 2023 17:23 (IST)

Karnataka Election 2023 Live: ಕೊರಟಗೆರೆ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಲಾಲ್ ನಾಮಪತ್ರ ಸಲ್ಲಿಕೆ

ತುಮಕೂರಿನ ಕೊರಟಗೆರೆ ಪಟ್ಟಣದ ಶ್ರೀ ಕಟ್ಟೆ ಗಣಪತಿ ಸ್ವಾಮಿಗೆ ಪೂಜೆ ಸಲ್ಲಿಸಿ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಲಾಲ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಪಟ್ಟಣದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಿಂದ ತಾಲೂಕು ಕಚೇರಿವರೆಗೆ ನಡೆದ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.

15 Apr 2023 16:57 (IST)

Karnataka Election 2023 Live: ರಾಜನಂದಿನಿ ಬಿಜೆಪಿಗೆ ಹೋದರೆ ಕಾಂಗ್ರೆಸ್​ ನಷ್ಟವಿಲ್ಲ; ಮಧು ಬಂಗಾರಪ್ಪ

ಮಾಜಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ‌ ಪುತ್ರಿ ರಾಜನಂದಿನಿ ಅವರ ಬಿಜೆಪಿ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸೊರಬ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ‌ ಮಧು ಬಂಗಾರಪ್ಪ ಹೇಳಿದ್ದಾರೆ. ಇಂದು ಸೊರಬದ ಬಂಗಾರಧಾಮದ ಕಾಂಗ್ರೆಸ್ ಚುನಾವಣಾ ನಿರ್ವಹಣಾ ಕಚೇರಿಯಲ್ಲಿ ವಿವಿಧ ಪಕ್ಷಗಳ ಮುಖಂಡರನ್ನು‌ ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದ್ದಾರೆ.

15 Apr 2023 16:55 (IST)

Karnataka Election 2023 Live: ಕಾಂಗ್ರೆಸ್ ಟಿಕೆಟ್​ ತಪ್ಪಿದ್ದಕ್ಕೆ ಎಚ್.ಎಂ.ಗೋಪಿಕೃಷ್ಣ ಕಣ್ಣೀರು

ತರೀಕೆರೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಎಚ್.ಎಂ.ಗೋಪಿಕೃಷ್ಣ ಪಕ್ಷದ ವಿರುದ್ಧ ಬೇಸರ ಹೊರಹಾಕಿದ್ದಾರೆ. ನನಗೆ ಟಿಕೆಟ್ ಕೈ ತಪ್ಪುವುದಕ್ಕೆ ಬೈರತಿ ಸುರೇಶ್ ಕಾರಣ, ಡಿ.ಕೆ ಶಿವಕುಮಾರ್ ನನಗೆ ಟಿಕೆಟ್ ಕೊಡಿಸುವುದಕ್ಕೆ ಪ್ರಯತ್ನ ಮಾಡಿದ್ದರು. ಆದರೆ ನಾನು ಸಣ್ಣ ಜಾತಿಯವನು ಎಂದಿದ್ದಕ್ಕೆ ಟಿಕೆಟ್ ಸಿಕ್ಕಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

15 Apr 2023 16:20 (IST)

Karnataka Election 2023 Live: ಚಿಕ್ಕಬಳ್ಳಾಪುರ ಕಾಂಗ್ರೆಸ್​​ನಲ್ಲಿ ಭಿನ್ನಮತ ಸ್ಫೋಟ

ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರದೀಪ್ ಈಶ್ವರ್ ಘೋಷಣೆ ಹಿನ್ನಲೆ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಕಾಂಗ್ರೆಸ್ ಪಕ್ಷದ ಟಿಕೆಟ್​​ ಪ್ರಬಲ ಆಕಾಂಕ್ಷಿಯಾಗಿದ್ದ ವಿನಯ್ ಶ್ಯಾಂ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ವಿನಯ್ ಶ್ಯಾಂ ಮಾಜಿ ಕೇಂದ್ರ ಸಚಿವ ದಿವಂಗತ ಆರ್ ಎಲ್ ಜಾಲಪ್ಪನವರ ಮೊಮ್ಮಗ ಆಗಿದ್ದು, ಕುಟುಂಬ ಸಮೇತ ತೆರಳಿ ನಾಮಪತ್ರ ಸಲ್ಲಿಕೆಗೆ ಮಾಡಿದ್ದಾರೆ.

15 Apr 2023 14:41 (IST)

Karnataka Election 2023 Live: 39.50 ಲಕ್ಷ ಹಣ ವಶಕ್ಕೆ

ದಾವಣಗೆರೆ ದಕ್ಷಿಣ ಕ್ಷೇತ್ರದ ಆಜಾದ್ ನಗರದಲ್ಲಿ 39.50 ಲಕ್ಷ ಹಣವನ್ನು FST ತಂಡ ವಶಕ್ಕೆ ಪಡೆದುಕೊಂಡಿದೆ. ದಾಖಲೆ ಇಲ್ಲದೇ ಸಾಗಿಸುತ್ತಿದ್ದ 500 ರೂ , 100 ,200 ರೂ ಮುಖಬೆಲೆಯ ಗರಿ ಗರಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಅಧಿಕಾರಿಗಳು ಹಣ ವರ್ಗಾವಣೆ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ವಶಕ್ಕೆ ಪಡೆದ ಹಣ

 

15 Apr 2023 14:21 (IST)

Karnataka Election 2023 Live: ಕಾಂಗ್ರೆಸ್ ಮೂರನೇ ಪಟ್ಟಿ ರಿಲೀಸ್

ಒಟ್ಟು 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡಲಾಗಿದೆ. ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆ ಕಮಲ ತೊರದು ಕಾಂಗ್ರೆಸ್ ಸೇರಿರುವ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿಗ ಅವರಿಗೆ ಅಥಣಿಯ ಟಿಕೆಟ್ ಸಿಕ್ಕಿದೆ.

15 Apr 2023 14:08 (IST)

Karnataka Election 2023 Live: ಬಿಜೆಪಿ ಬಾವುಟ ಹಾರಿಸುತ್ತೇವೆ

ವರುಣ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಬಾವುಟ ಹಾರಿಸುತ್ತೇವೆ. ನರಸಿಂಹರಾಜ‌ ಕ್ಷೇತ್ರದಲ್ಲೂ ಬಿಜೆಪಿ ಬಾವುಟ ಹಾರಿಸುತ್ತೇವೆ. ಚಾಮರಾಜ, ಕೃಷ್ಣರಾಜ, ಚಾಮುಂಡೇಶ್ವರಿ ಸೇರಿದಂತೆ ಮೈಸೂರು ಚಾಮರಾಜನಗರ ಜಿಲ್ಲೆಗಳ ಎಲ್ಲಾ ಕ್ಷೇತ್ರಗಳಿಗೂ ತೆರಳಿ ಪ್ರಚಾರ ಮಾಡುತ್ತೇನೆ. ಕೊಡಗು ಜಿಲ್ಲೆಯಲ್ಲೂ ಪ್ರಚಾರ ಕೈಗೊಳ್ಳುತ್ತೇನೆ ಎಂದುಇಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

15 Apr 2023 13:52 (IST)

Karnataka Election Live 2023: ಮಾಡಾಳ್ ವಿರೂಪಾಕ್ಷಪ್ಪಗೆ ಜಾಮೀನು ಮಂಜೂರು

ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಷರತ್ತುಬದ್ಧ ಜಾಮೀನು ಮಂಜೂರು ಆಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 5 ಷರತ್ತುಗಳನ್ನು ಹಾಕಿ ಜಾಮೀನು ನೀಡಿದೆ.

15 Apr 2023 13:29 (IST)

Karnataka Election 2023 Live: ಸವದಿ ಮೂಲಕ BJP ಅಗ್ರನಾಯಕರಿಗೆ ಆಫರ್

15 Apr 2023 13:20 (IST)

Karnataka Election 2023 Live: ಬಿಎಸ್​ವೈ ಮಾಜಿ ಆಪ್ತನಿಗೆ ಜೆಡಿಎಸ್ ಟಿಕೆಟ್

ಬಿಜೆಪಿ ಟಿಕೆಟ್ ವಂಚಿತ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾಜಿ ಆಪ್ತ ಎನ್.ಆರ್.ಸಂತೋಷ್​ಗೆ ಜೆಡಿಎಸ್ ಟಿಕೆಟ್ ನೀಡಿದೆ. ಎನ್.ಆರ್.ಸಂತೋಷ್ (NR Santosh) ಅರಸೀಕೆರೆಯಿಂದ ಸ್ಪರ್ಧೆ ಮಾಡಲಿದ್ದಾರೆ.

15 Apr 2023 13:11 (IST)

Karnataka Election 2023 Live: ನಾಮಪತ್ರ ಸಲ್ಲಿಸುವ ವೇಳೆ ನೀತಿ ಸಂಹಿತೆ ಉಲ್ಲಂಘನೆ

ರಾಯಚೂರು ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತಿಪ್ಪರಾಜ ಹವಲ್ದಾರ ನಾಮಪತ್ರ ಸಲ್ಲಿಸುವಾಗ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಅಭ್ಯರ್ಥಿ ಸೇರಿ ನಾಲ್ಕು ಜನರಿಗೆ ನಮಾಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ನೂರು ಮೀಟರ್ ಒಳಗೆ ಎಂಟತ್ತು ಬಿಜೆಪಿ ಮುಖಂಡರು ಆಗಮಿಸುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ.

15 Apr 2023 12:55 (IST)

Karnataka Election 2023 Live: ಅಂತಿಮ ನಿರ್ಧಾರ ಪ್ರಕಟಿಸುವೆ

.ನನಗೊಂದೇ ಅಲ್ಲ ಜನಸಾಮಾನ್ಯರಿಗೂ ಕಾಡ್ತಾ ಇದೆ. ಇದನ್ನು ಯಾರೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಸಭೆ ನಂತರ ಹಿರಿಯರ ಜೊತೆ ಮಾತುಕತೆ ಮಾಡ್ತೇನೆ. ನಂತರ ಅಂತಿಮ‌ ನಿರ್ಧಾರ ಪ್ರಕಟಿಸ್ತೇನೆ ಎಂದು ನಿವಾಸದ ಮಂದೆ ಸೇರಿದ್ದ ಬೆಂಬಲಿಗರಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

15 Apr 2023 12:49 (IST)

Karnataka Election 2023 Live: ಸಂಜೆಯವರೆಗೆ ಕಾದು ನೋಡೋಣ

ಇಷ್ಟು ವರ್ಷ ಪಕ್ಷಕ್ಕಾಗಿ ದುಡಿದಿದ್ದೇನೆ. ಈಗ ಈ ರೀತಿ ನಡೆಸಿಕೊಳ್ತಿರೊದ್ರ ಬಗ್ಗೆ ಬೇಸರವಾಗಿದೆ . ಹೈಕಮಾಂಡ್ ಗೆ ಸಂಜೆವರೆಗೂ ಕಾಲಾವಕಾಶ ಕೊಡೋಣ
ಸ್ಪರ್ಧೆಗೆ ಇನ್ನೂ ಸಮಯಾವಕಾಶವಿದೆ. ನನಗೆ ಟಿಕೆಟ್ ಯಾಕೆ ತಪ್ಪಿಸಿದ್ರು ಅಂತ ಇದುವರೆಗೂ ಗೊತ್ತಾಗಿಲ್ಲ.

15 Apr 2023 12:15 (IST)

Karnataka Election 2023 Live: ನಾಮಪತ್ರ ಸಲ್ಲಿಸಿದ ಸಿಎಂ ಬೊಮ್ಮಾಯಿ

ಸಿಎಂ ಬೊಮ್ಮಾಯಿ ನಾಮಪತ್ರ ಸಲ್ಲಿಕೆ

15 Apr 2023 12:14 (IST)

Karnataka Election 2023 Live: ಗೋವಿಂದ ಕಾರಜೋಳ‌ ನಾಮಪತ್ರ ಸಲ್ಲಿಕೆ

ಮುಧೋಳ ತಹಶೀಲ್ದಾರ ಕಚೇರಿಯಲ್ಲಿ ಇಂದು ಸಾಂಕೇತಿಕವಾಗಿ ಸಚಿವ ಗೋವಿಂದ ಕಾರಜೋಳ ನಾಮಪತ್ರ ಸಲ್ಲಿಕೆ ಮಾಡಿದರು. ಮುಧೋಳ‌ ಬಿಜೆಪಿ ಮುಖಂಡ ರಾಮಣ್ಣ ತಳೇವಾಡ ಹಾಗೂ ಮುಧೋಳ ಬಿಜೆಪಿ ಮುಖಂಡರ ಜೊತೆ ಬಂದು ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಲಾಯ್ತು. ಎಪ್ರಿಲ್ 18ರಂದು ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶನದ ಮೂಲಕ ಪುನಃ ನಾಮಪತ್ರ ಸಲ್ಲಿಸಲಿದ್ದಾರೆ.