Karnataka Election 2023 live: ಇಂದು ಸಂಜೆಯೊಳಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯದಲ್ಲಿ ಚುನಾವಣೆಗೆ ಸಂಬಂಧಿಸಿದ ಇಂದಿನ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.
ಮೂರು ನಾಲ್ಕು ದಿನಗಳ ಹಿಂದೆಯಷ್ಟೇ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಎ.ಟಿ ರಾಮಸ್ವಾಮಿ ಅವರು, ಇಂದು ಬೆಂಗಳೂರಿನ ವಿಧಾನಸಭಾ ಸಭಾಧ್ಯಕ್ಷರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ವಿಧಾನಸೌಧದಲ್ಲಿ ಸ್ಪೀಕರ್ ಕಚೇರಿಗೆ ಆಗಮಿಸಿ ರಾಜೀನಾಮೆ ಪತ್ರ ಸಲ್ಲಿಸಿದರು.
ಕೋಮು ಗಲಭೆ ಸೃಷ್ಟಿ ಮಾಡಲು ಗೃಹಸಚಿವ ಟ್ರೈ ಮಾಡಿದ್ದರು. ದೇವರ ದಯೆಯಿಂದ ಆ ರೀತಿ ಆಗಲಿಲ್ಲ. ಮಂಡಗದ್ದೆಯಲ್ಲೂ ಪ್ರಯತ್ನ ಮಾಡಿದ್ದಾರೆ, ತೀರ್ಥಹಳ್ಳಿ ಟೌನ್ ನಲ್ಲೂ ಪ್ರಯತ್ನಿಸಿದ್ದರು ಎಂದು ತೀರ್ಥಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಆರೋಪಿಸಿದ್ದಾರೆ.
ಅಮುಲ್ ಹಾಗೂ ಕೆಎಂಎಫ್ ನಡುವೆ ಫೈಟ್ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್, ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ನಂದಿನಿ ಹಾಲಿಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯಿದೆ. 2018ರಲ್ಲಿ ಪ್ರತಿದಿನ 84 ಲಕ್ಷ ಲೀಟರ್ ಹಾಲನ್ನು ಉತ್ಪಾದಿಸಲಾಗುತ್ತಿತ್ತು, ಪ್ರಸ್ತುತ 94 ಲಕ್ಷ ಲೀಟರ್ ಹಾಲನ್ನು ಉತ್ಪಾದಿಸಲಾಗುತ್ತಿದೆ. ಈ ಅಂಕಿಅಂಶಗಳನ್ನು ಗಮನಿಸಿದರೇ ಸಾಕು, ನಂದಿನಿಯ ಬ್ರಾಂಡ್ ಮೌಲ್ಯ ಎಷ್ಟರ ಮಟ್ಟಿಗೆ ಹೆಚ್ಚಿದೆ ಎಂಬುದು ತಿಳಿಯುತ್ತದೆ ಎಂದು ಹೇಳಿದ್ದಾರೆ.
ಅಮುಲ್, ಕೆಎಂಎಫ್ ಫೈಟ್ ಮಧ್ಯೆ ಜೆಡಿಎಸ್, ಕಾಂಗ್ರೆಸ್ ನಾಯಕರ ಬಗ್ಗೆ ಸಚಿವ ಸೋಮಶೇಖರ್ ನೀಡಿದ್ದಾರೆ ಎನ್ನಲಾದ ವಿಡಿಯೋ ಒಂದು ವೈರಲ್ ಆಗಿದೆ. ಅಮುಲ್, ನಂದಿನಿ ಬಗ್ಗೆ ಮಾತಾಡುವ ಭರದಲ್ಲಿ ಕಾಂಗ್ರೆಸ್, ಜೆಡಿಎಸ್ ನನ್ನ ಮಕ್ಕಳು ಕಳ್ನನ್ಮಕ್ಳು ಅಂದಿದ್ದಾರೆ ಎಂದು ಯಶವಂತಪುರ ಜೆಡಿಎಸ್ ಅಭ್ಯರ್ಥಿ ಜವರಾಯೀಗೌಡ ಕಿಡಿಕಾರಿದ್ದಾರೆ.
ಮುಂದಿನ ಎರಡು ದಿನಗಳಲ್ಲಿ ಕಾಂಗ್ರೆಸ್ ಪಟ್ಟಿ ಬಿಡುಗಡೆ ಆಗಬಹುದು. ಇಂದು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ದೆಹಲಿಗೆ ಹೋಗಿದ್ದಾರೆ. ಇವತ್ತು ಸಭೆ ನಡೆದ ನಂತರ ಪಟ್ಟಿ ಬಿಡುಗಡೆ ಆಗಬಹುದು. ಕೆಲವೊಂದು ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರ ಇದೇ, ಹಾಗಾಗಿ ಕೆಲವು ಕಡೆ ತಡವಾಗಬಹುದು ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
2028ಕ್ಕೆ KRPP ಪಕ್ಷವೇ ಅಧಿಕಾರಕ್ಕೆ ಬರುತ್ತೆ ಎಂದು ಕಲಬುರಗಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ. ಈಗ ನಮ್ಮ 12 ಅಭ್ಯರ್ಥಿಗಳು ಗೆದ್ದರೂ ಸಾಕು. ಮುಂದೆ ಹಳ್ಳಿ ಹಳ್ಳಿಗೆ ಹೋಗಿ ಪ್ರಚಾರ ಮಾಡ್ತೀನಿ. 2028ರಲ್ಲಿ ಗೆದ್ದು ಅಧಿಕಾರಕ್ಕೆ ಬರ್ತೀವಿ ಎಂದು ರೆಡ್ಡಿ ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಸಚಿವ ವಿ. ಸೋಮಣ್ಣ ಭೇಟಿ ನೀಡಿದ್ದಾರೆ. ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ನಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸೋಮಣ್ಣ ಜೊತೆ ಸಂಸದ ಜಿಎಸ್ ಬಸವರಾಜು, ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ಸೇರಿದಂತೆ ಹಲವು ಬಿಜೆಪಿ ನಾಯಕರು ಸಾಥ್ ನೀಡಿದ್ದಾರೆ.
ದಲಿತರನ್ನು ದಾರಿ ತಪ್ಪಿಸುವ ಹೇಳಿಕೆಗಳನ್ನು ಕಾಂಗ್ರೆಸ್ ನಾಯಕರು ಕೊಡುತ್ತಾರೆ. ಆದರೆ ದಲಿತ ನಾಯಕರು ಕಾಂಗ್ರೆಸ್ ನಾಯಕರ ಮಾತುಗಳನ್ನು ನಂಬಲ್ಲ. ಡಿಕೆಶಿ ಹೇಳಿಕೆಯಿಂದ ಕಾಂಗ್ರೆಸ್ ನೆಲೆ ಕಳೆದುಕೊಂಡಿರೋದು ಗೊತ್ತಾಗುತ್ತೆ. ಜೆಡಿಎಸ್ ಜೊತೆ ಮೈತ್ರಿ ವೇಳೆ ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಮಾಡುವಂತೆ ಜೆಡಿಎಸ್ ಅವರು ಹೇಳಿದ್ದರು. ಆಗ ಕಾಂಗ್ರೆಸ್ ನಲ್ಲಿ ಖರ್ಗೆ ಸಿಎಂ ಆಗೋದು ತಪ್ಪಲು ಕಾರಣವೇ ಡಿಕೆ ಶಿವಕುಮಾರ್ ಎಂದು ಆರೋಪಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೆಲವು ಮಾಹಿತಿ ತರಿಸಿಕೊಳ್ಳುತ್ತಿದ್ದೇವೆ. ಮಾಹಿತಿ ಬಂದ ಬಳಿಕ ಮತ್ತೊಂದು ಸಭೆ ನಡೆಸಲಾಗುವುದು. ಸಭೆ ಬಳಿಕ ಪಟ್ಟಿ ಬಿಡುಗಡೆ ಮಾಡಲಾಗುವುದು. ಇಂದು ಸಂಜೆ ಅಥಾವ ನಾಳೆ ಪಟ್ಟಿ ಬಿಡುಗಡೆ ಆಗಬಹುದು ಎಂದಿದ್ದಾರೆ.
ಇಂದು ಸಂಜೆ 4.30ಕ್ಕೆ ದೆಹಲಿಯ ಮಲ್ಲಿಕಾರ್ಜುನ ಖರ್ಗೆ ಮನೆಯಲ್ಲಿ ಕಾಂಗ್ರೆಸ್ ಸಭೆ ನಡೆಯಲಿದ್ದು, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಭೆಯಲ್ಲಿ ಭಾಗಿಯಾಗ್ತಾರೆ. ಸಭೆ ಬಳಿಕ ಫೈನಲ್ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಇನ್ನೇನು ಟಿಕೆಟ್ ಹಂಚಿಕೆ ಅಂತಿಮವಾಯ್ತು ಅನ್ನೋವಷ್ಟರಲ್ಲಿಯೇ ಮೂವತ್ತರಿಂದ ನಲವತ್ತು ಕ್ಷೇತ್ರದಲ್ಲಿ ಮತ್ತೊಂದು ಸಮೀಕ್ಷೆಗೆ ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವರುಣಾದಲ್ಲಿ ಲಿಂಗಾಯತ ನಾಯಕ ಸೋಮಣ್ಣ, ಕನಕಪುರದಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಆರ್.ಅಶೋಕ್ ಅಥವಾ ಅಶ್ವತ್ಥ್ ನಾರಾಯಣ್ ಕಣಕ್ಕಿಳಿಯೋ ನಿರೀಕ್ಷೆ ಇದೆ. ಈ ಮೂಲಕ ವರುಣಾದಲ್ಲಿ ಲಿಂಗಾಯತ, ಕನಕಪುರದಲ್ಲಿ ಒಕ್ಕಲಿಗ ಮತಗಳನ್ನು ಸೆಳೆಯಲು ಬಿಜೆಪಿ ಪ್ಲಾನ್ ಮಾಡಿದೆ ಎನ್ನಲಾಗಿದೆ.
ಗುಜರಾತ್ ಮಾದರಿಯಲ್ಲಿ ಕೆಲವು ಶಾಸಕರಿಗೆ ಬಿಜೆಪಿ ಕೊಕ್ ನೀಡಲಿದೆ. 10ಕ್ಕೂ ಅಧಿಕ ಶಾಸಕರಿಗೆ ಟಿಕೆಟ್ ಮಿಸ್ ಆಗೋ ನಿರೀಕ್ಷೆ ಇದೆ. ವಿವಿಧ ವಲಯಗಳಲ್ಲಿ ದುಡಿದು ಪಕ್ಷದ ಸಿದ್ಧಾಂತದ ಪರ ಇದ್ದವರಿಗೆ ಮಣೆ ಹಾಕಲಾಗುತ್ತಿದೆ ಎನ್ನಲಾಗಿದೆ.
ಹರಿಹರ ಕ್ಷೇತ್ರದ ಮೇಲೆ ಕಾಂಗ್ರೆಸ್ ಹಿರಿಯ ಮುಖಂಡ ಎಚ್ ಎಂ ರೇವಣ್ಣ ಕಣ್ಣಿಟ್ಟಿದ್ದಾರೆ. ಹರಿಹರದಲ್ಲಿ ಕಾಂಗ್ರೆಸ್ನಿಂದ ಈಗ ಟಿಕೆಟ್ ಕೇಳಿರೋ ವ್ಯಕ್ತಿಗಳು ಗೆಲ್ಲೋದಿಲ್ಲ. ಸರ್ವೇ ವರದಿ ನೋಡಿ ತಮಗೆ ಟಿಕೆಟ್ ಕೊಡಿ ಎಂದು ರೇವಣ್ಣ ಹೇಳ್ತಿದ್ದಾರಂತೆ.
ರಾಜರಾಜೇಶ್ವರಿ ನಗರದಿಂದ ಅಖಾಡದಿಂದ ಚುನಾವಣೆಗೆ ಸ್ಪರ್ಧಿಸಲು ನಟ ಚೇತನ್ ಚಂದ್ರ ಮುಂದಾಗಿದ್ದಾರೆ. ಆರ್ಆರ್ ನಗರದಲ್ಲಿ ಕಾಂಗ್ರೆಸ್ನಿಂದ ಕುಸುಮಾ ಹೆಚ್. ಸ್ಪರ್ಧೆ ಮಾಡುತ್ತಿದ್ದಾರೆ. ಬಿಜೆಪಿಯಿಂದ ಸಚಿವ ಮುನಿರತ್ನ ಸ್ಪರ್ಧೆ ಮಾಡುವ ಸಾಧ್ಯತೆಗಳಿವೆ.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ 17 ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆಯಾಗಿದೆ. ಅಂತಿಮವಾಗಿ ನಾರಾಭರತ್ ರೆಡ್ಡಿ, ದಿವಾಕರ್ ಬಾಬು, ಅನಿಲ್ ಲಾಡ್, ಆಂಜನೇಯಲು ನಡುವೆ ಟಿಕೆಟ್ ಫೈಟ್ ನಡೆಯುತ್ತಿದೆ. ನಾಲ್ವರು ದೆಹಲಿಯಲ್ಲಿಯೇ ಉಳಿದುಕೊಂಡಿದ್ದು, ಲಾಬಿ ನಡೆಸುತ್ತಿದ್ದಾರೆ
ಕಾಂಗ್ರೆಸ್ ಕೋಟೆ ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸಮಾವೇಶ ಆಯೋಜನೆ ಮಾಡಿದೆ. ಈ ಸಮಾವೇಶದಲ್ಲಿ ಭಾಗಿಯಾಗಲಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಕೆಆರ್ಪಿಪಿ ಅಭ್ಯರ್ಥಿ ಅಶೋಕ್ ಸಾಹು ಪರ ಪ್ರಚಾರ ನಡೆಸಲಿದ್ದಾರೆ.