Karnataka Election 2023: ಇಂದಿನ ಚುನಾವಣೆಗೆ ಸಂಬಂಧಿಸಿದ ಮಹತ್ವದ ಸುದ್ದಿಗಳ ಅಪ್ಡೇಟ್ ಇಲ್ಲಿದೆ.
ದೇವೇಗೌಡರನ್ನು ಕುತಂತ್ರದ ರಾಜಕಾರಣದಿಂದ ತುಮಕೂರಿನಲ್ಲಿ ಸೋತರು
ಆ ನೋವಿನಿಂದ ಮಾನಸಿಕವಾಗಿ ಕುಗ್ಗಿ ಇವತ್ತು ಆರೋಗ್ಯ ತಪ್ಪಿದ್ದಾರೆ
ದೇವೇಗೌಡರು ಇನ್ನೂ ನಮ್ಮ ಜೊತೆ ಜೀವಂತವಾಗಿ ಇರಬೇಕಾದರೆ ತುಮಕೂರಿನಲ್ಲಿ 11ಕ್ಕೆ 11 ಕ್ಷೇತ್ರ ಗೆಲ್ಲಬೇಕು
ತುಮಕೂರು ಜಿಲ್ಲೆಯ ಜನತೆ ಈ ಕೆಲಸ ಮಾಡಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಎರಡು ಕಡೆ ಸ್ಪರ್ಧೆ ವಿಚಾರಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ
ಹೈಕಮಾಂಡ್‌ನವರು ಏನು ತೀರ್ಮಾನ ಮಾಡುತ್ತಾರೆ ಅದೇ ರೀತಿ ಮಾಡುತ್ತೀನಿ
ಹೈಕಮಾಂಡ್ ಎರಡು ಕಡೆ ನಿಲ್ಲು ಎಂದರೆ ನಿಲ್ಲುತ್ತೇನೆ
ಇಲ್ಲ ಒಂದೇ ಕಡೆ ಸ್ಪರ್ಧೆ ಮಾಡಿ ಎಂದರೆ ಮಾಡುತ್ತೇನೆ
ಲೀಡರ್‌ಗಳು ಕರೆದಾಗ ಬೇಡ ಅಂತ ಹೇಳಲ್ಲ ನಾನು
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮೂರು ಜಿಲ್ಲೆಯವರು ನಿಲ್ಲಿ ಅಂತಿದ್ದಾರೆ
ಹೈಕಮಾಂಡ್ ಒಪ್ಪಿಕೊಂಡರೆ ಬರುತ್ತೇನೆ ಅಂತ ಹೇಳಿದ್ದೀನಿ ಎಂದು ಸಿದ್ದು ಹೇಳಿದ್ದಾರೆ
ಹಾಸನ ಜಿಲ್ಲೆ, ಅರಸೀಕೆರೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ
ಹೇಳಿಕೆಶಿವಲಿಂಗೇಗೌಡರು ಇಷ್ಟಪಟ್ಟು ಇಂದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ
ಅದಕ್ಕಾಗಿ ನಾನು, ಡಿ.ಕೆ.ಶಿವಕುಮಾರ್ ಇತರೆ ನಾಯಕರು ಬಂದಿದ್ದೇವೆ ಎಂದು ಹೇಳಿದ್ದಾರೆ
ಇಂದು ಸಂಜೆ ಪಾರ್ಲಿಮೆಂಟರಿ ಮೀಟಿಂಗ್ ಫಿಕ್ಸ್ ಆಗಿದೆ
ಇವತ್ತು ರಾತ್ರಿ ಮೊದಲ ಪಟ್ಟಿ ಬಿಡುಗಡೆ ಆಗಬಹುದು
ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ನಮ್ಮ ಲಿಸ್ಟ್ ಬಿಡುಗಡೆ ಆಗಿದೆ
ಹಿಂದಿನ ಚುನಾವಣೆಯಲ್ಲೂ ಇದೇ ತರಹ ಆಗಿದೆ
ಹೀಗಾಗಿ ವಿಳಂಬ ಅನ್ನೋ ಪ್ರಶ್ನೆ ಬರಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಾಗರಾಜ ಛಬ್ಬಿ ವಿಧಾನ ಪರಿಷತ್ ಮಾಜಿ ಸದಸ್ಯ
ಕಲಘಟಗಿ ಟಿಕೆಟ್ ಆಕಾಂಕ್ಷಿಯಾಗಿದ್ದ ಛಬ್ಬಿ
ಸಂತೋಷ್ ಲಾಡ್ಗೆ ಟಿಕೆಟ್ ಕೊಟ್ಟಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿದ್ದ ಛಬ್ಬಿ
ತನ್ನ ಬೆಂಬಲಿಗೆ ಸಭೆ ನಡೆಸಿದ್ದ ನಾಗರಾಜ ಛಬ್ಬಿ
ಇಂದು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ
ಯಾದಗಿರಿಯ ಕೊಡೇಕಲ್ ಗ್ರಾಮದಲ್ಲಿ ನಡೆದ ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ಗಲಾಟೆ
ನಾವು ಶಾಂತಿ ಪ್ರಿಯಕರು, ಶಾಂತಿಯುತವಾಗಿ ಮತದಾನ ನಡೆಯಬೇಕಿದೆ
ಶಾಂತಿಯುತ ಚುನಾವಣೆ ನಡೆಯಬೇಕಿದೆ
ಚುನಾವಣೆ ಹೊತ್ತಿನಲ್ಲಿ ಕಾಂಗ್ರೆಸ್ ನವರು ಯಾವುದೇ ಅನುಮತಿ ಪಡೆಯದೆ ಗಲಾಟೆ ಮಾಡಿದರು
ಕಾಂಗ್ರೆಸ್ ಕಾರ್ಯಕರ್ತರಯ ಕಲ್ಲು ತೂರಾಟ ಮಾಡಿದ ನಂತರ ನಮ್ಮವರೂ ಕಲ್ಲು ತೂರಾಟ ಮಾಡಿದ್ದಾರೆ
ಆದರೆ ಒಂದು ಕೋಮಿನವರನ್ನು ಎತ್ತಿಕೊಟ್ಟುವ ಕೆಲಸ ಮಾಡಬೇಡಿ ಎಂದು ಶಾಸಕ ರಾಜುಗೌಡ ಮನವಿ ಮಾಡಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಸ್ಪರ್ಧೆ ಘೋಷಣೆ ಮಾಡಿದ ವೈಎಸ್ವಿ ದತ್ತಾಟವಲ್ ಗುರುತಿನಿಂದ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ ವೈಎಸ್ವಿ ದತ್ತಾ ಟವೆಲ್ ಒಡ್ಡುತ್ತೇನೆ ಮತ ಭಿಕ್ಷೆ, ಹಣ ನೀಡಿ ಭಿಕ್ಷೆ ನೀಡಿ ಎಂದು ಟವೆಲ್ ಒಡ್ಡಿದ ವೈಎಸ್ವಿ ದತ್ತಾ
ಇವತ್ತು ರಾತ್ರಿ ಅಥವಾ ನಾಳೆ ಬಜೆಪಿ ಪಟ್ಟಿ ಬಿಡುಗಡೆ ಆಗಬಹುದು
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿಕೆ
ಇವತ್ತು ಸಾಯಂಕಾಲ ಪಾರ್ಲಿಮೆಂಟರಿ ಮೀಟಿಂಗ್ ಫಿಕ್ಸ್ ಆಗಿದೆ
ಇವತ್ತು ರಾತ್ರಿ ಮೊದಲ ಪಟ್ಟಿ ಬಿಡುಗಡೆ ಆಗಬಹುದು
ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ನಮ್ಮ ಲಿಸ್ಟ್ ಬಿಡುಗಡೆ ಆಗಿದೆ
ಹಿಂದಿನ ಚುನಾವಣೆಯಲ್ಲೂ ಇದೇ ತರಹ ಆಗಿದೆ
ಹೀಗಾಗಿ ವಿಳಂಬ ಅನ್ನೋ ಪ್ರಶ್ನೆ ಬರಲ್ಲ
ಕಾಂಗ್ರೆಸ್ ಒಂದು ತಿಂಗಳ ಮುಂಚೆ 224 ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಮಾಡ್ತೀವಿ ಅಂದಿದ್ರು
ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಮಾಡಿಲ್ಲ
ಕಾಂಗ್ರೆಸ್ ಟಿಕೆಟ್ ಸಿಗದ್ದಕ್ಕೆ ಅಸಮಾಧಾನಗೊಂಡ ಆಕಾಂಕ್ಷಿ
ಅಭಿಮಾನಿಗಳು, ಆಪ್ತರ ಮುಂದೆ ಕಣ್ಣೀರು
ಸತೀಶ್ ಬಂಡಿವಡ್ಡರ್ ಕಣ್ಣೀರು ಹಾಕಿರುವ ಆಕಾಂಕ್ಷಿ
ಮುಧೋಳ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸತೀಶ್ ಬಂಡಿವಡ್ಡರ್
ಆರ್.ಬಿ. ತಿಮ್ಮಾಪುರಗೆ ಘೋಷಣೆ ಆಗಿರುವ ಕಾಂಗ್ರೆಸ್ ಟಿಕೆಟ್
ನಿನ್ನೆ ರಾತ್ರಿ ಮುಧೋಳದ ಆಪ್ತರೊಬ್ಬರ ಮನೆಯಲ್ಲಿ ಕಣ್ಣೀರು ಹಾಕಿರುವ ಬಂಡಿವಡ್ಡರ್
ನಿನ್ನೆ ರಾತ್ರಿ ಬೆಂಗಳೂರಿನಿಂದ ಮುಧೋಳಗೆ ಬಂದಿದ್ದ ಬಂಡಿವಡ್ಡರ್
ಈ ವೇಳೆ ಬಂಡಿವಡ್ಡರ ಭೇಟಿ ಮಾಡಲು ಬಂದಿದ್ದ ಅಭಿಮಾನಿಗಳು, ಆಪ್ತರು
ಅಭಿಮಾನಿಗಳ ಎದುರು ಮಂಡಿಯೂರಿ ನಮಸ್ಕರಿಸಿ ಕಣ್ಣೀರು
ಬಂಡಿವಡ್ಡರ್ ಕಣ್ಣೀರು ಹಾಕಿರುವ ವಿಡಿಯೋ ವೈರಲ್
ಬಾಗಲಕೋಟೆ ಜಿಲ್ಲೆಯ ಮುಧೋಳ ಮತಕ್ಷೇತ್ರ
ದಯವಿಟ್ಟು ಅರಾಮಾಗಿರು ಎಂದ ರಮೇಶ್ ಜಾರಕಿಹೊಳಿ
ಮಾಜಿ ಡಿಸಿಎಂ ಲಕ್ಷ್ಮಣ್ ಸವದಿಗೆ ರಮೇಶ್ ಜಾರಕಿಹೊಳಿ ಟಾಂಗ್
ಮಹಾರಾಷ್ಟ್ರದ ಶಿನ್ನೊಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ
ಕೆಲವೊಂದು ವಿಷಯಗಳನ್ನು ಬಹಿರಂಗಪಡಿಸಲು ಆಗಲ್ಲ
ನನಗೆ ನೂರಕ್ಕೆ ನೂರರಷ್ಟು ವಿಶ್ವಾಸ ಇದೆ, ಮಹೇಶ್ ಕುಮಟಳ್ಳಿಗೆ ಬಿಜೆಪಿ ಟಿಕೆಟ್ ಸಿಗುತ್ತೆ.
ಕೆಲವು ವಿಷಯ ಬಹಿರಂಗ ಪಡಿಸಲು ಆಗಲ್ಲ ಎಂದ ಜಾರಕಿಹೊಳಿ
ಮೋದಿ ವಿರುದ್ಧ ಸಿದ್ದರಾಮಯ್ಯ ಟ್ವೀಟ್ ವಿಚಾರ
ಹುಲಿಗಳ ಸಂಖ್ಯೆ ವೃದ್ಧಿ ಆಗಿರುವುದು ಯಾರ ಕಾಲದಲ್ಲಿ?
ಅದನ್ನು ಕಾಂಗ್ರೆಸ್ ನಾಯಕರು ಹೇಳಲಿ
ಗುಹೆಯಲ್ಲಿ ಸೇರಿಕೊಂಡಿರುವುದು ಕಾಂಗ್ರೆಸ್ ನಾಯಕರು
ಎಲ್ಲಿದ್ದೀರಾ ರಾಹುಲ್ ಗಾಂಧಿ? ಎಲ್ಲಿದ್ದೀರಾ ಸಿದ್ದರಾಮಯ್ಯ?
ಹುಲಿಗಳನ್ನು ಕೊಲ್ಲುವುದಿಲ್ಲ, ಮನುಷ್ಯರ ರಕ್ಷಣೆಗಿಂತ ಪ್ರಾಣಿಗಳ ರಕ್ಷಣೆಯೂ ಮುಖ್ಯ
ಪ್ರಾಣಿಗಳ ರಕ್ಷಣೆ ಮಾಡುತ್ತಿರುವುದು ನಮ್ಮ ಸರ್ಕಾರ
ಎನ್ ರವಿಕುಮಾರ್ ಹೇಳಿಕೆ
ಟಿಕೆಟ್ ಘೋಷಣೆಗೂ ಮುನ್ನವೇ ಮುಂದುವರಿದ ಅಸಮಾಧಾನ
ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಕಾರ್ಯಕರ್ತರ ಪಟ್ಟು
ಕಾಂಗ್ರೆಸ್ ಕಾರ್ಯಕರ್ತರಿಂದ ಲಿಂಗಾಯತ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಪ್ರತಿಭಟನೆ
ತರೀಕೆರೆ ಕ್ಷೇತ್ರದ ಟಿಕೆಟ್ ಗಾಗಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ
ದೊರನಾಳ್ ಪರಮೇಶ್ ಗೆ ಟಿಕೆಟ್ ನೀಡುವಂತೆ ಪಟ್ಟು
ನೂರಾರು ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
ಅಜ್ಜಂಪುರ ಪಟ್ಟಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾರ್ಯಕರ್ತರು
ಪ್ರತಿಭಟನೆ ಮಾಡದಂತೆ ತಡೆದ ಪೊಲೀಸರು
ಕಾಂಗ್ರೆಸ್ ಹೈಕಮಾಂಡ್ಗೆ ಟೆನ್ಶನ್ ನೀಡುತ್ತಿರುವ ತರೀಕೆರೆ ಕ್ಷೇತ್ರ
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಕ್ಷೇತ್ರದ ಟಿಕೆಟ್ ಗಾಗಿ ಕಾರ್ಯಕರ್ತರ ಕಿರಿಕ್
ಪರಿಷತ್ ಸದಸ್ಯ ಎನ್ ರವಿಕುಮಾರ್ ಸುದ್ದಿಗೋಷ್ಟಿ
ಪ್ರಧಾನಿಯವರು ಬಂಡೀಪುರ ಅಭಯಾರಣ್ಯಕ್ಕೆ ಭೇಟಿ ಕೊಟ್ಟಿರೋದು ಸಂತೋಷ, ಸ್ವಾಗತ
ಹುಲಿಗಳ ಸಂಖ್ಯೆ ಕಡಿಮೆ ಆಗ್ತಿತ್ತು
ಹುಲಿಗಳ ಸಂರಕ್ಷಣೆಗೆ ಮಧ್ಯಪ್ರದೇಶದಲ್ಲಿ ಹುಲಿ ಸಂರಕ್ಷಣೆ ಯೋಜನೆಯನ್ನು ಕೇಂದ್ರ ತಂದಿತು
ಹುಲಿಗಳ ಸಂತತಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ
ಇದು ಜಗತ್ತಿಗೆ ಗೊತ್ತಾಗ್ತಿದೆ
ವನ್ಯಜೀವಿಗಳ ರಕ್ಷಣೆಯಲ್ಲಿ ಪ್ರಧಾನಿಗಳ ಕಾಳಜಿ ಮೆಚ್ಚುವಂಥದ್ದು
ಪ್ರಧಾನಿಯವರ ಬಂಡೀಪುರ ಭೇಟಿ ದೇಶದ ಜನರಿಗೆ ಖುಷಿ ತಂದಿದೆ
ಎಲ್ರೂ ಖುಷಿ ಪಟ್ರೆ, ಎಲ್ರೂ ಹೆಮ್ಮೆ ಪಟ್ರೆ ಕೆಲವರಿಗೆ ಮಾತ್ರ ಮೋದಿ ಭೇಟಿ ದು:ಖ ತಂದಿದೆ
ಡಿಕೆಶಿ, ಎಚ್ಡಿಕೆಯವರು ಮೋದಿಯವರ ಭೇಟಿಯನ್ನು ಖಂಡಿಸಿದ್ದಾರೆ
ಇವರಿಬ್ಬರೂ ಸಣ್ಣ ಮನಸ್ಸಿನ ನಾಯಕರು
ಸಣ್ಣ ಮನಸಿನ ನಾಯಕರು ಯಾವತ್ತೂ ದೊಡ್ಡವರಾಗಲ್ಲ
ಬಳ್ಳಾರಿ ಮಹಾನಗರ ಪಾಲಿಕೆ ಮಾಜಿ ಮೇಯರ್ ವೆಂಕಟರಮಣ ಕೆಆರ್ಪಿಪಿ ಸೇರ್ಪಡೆ
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವೆಂಕಟರಮಣ
ಮಾಜಿ ಮೇಯರ್ ಜೊತೆಗೆ ಕಾಂಗ್ರೆಸ್ ಪಕ್ಷದ ನಾಲ್ವರು ಮಾಜಿ ಕಾರ್ಪೊರೇಟರ್ ಕೆಆರ್ ಪಿಪಿ ಸೇರ್ಪಡೆ
ಬಳ್ಳಾರಿ ನಗರ ಕೆಆರ್ಪಿಪಿ ಅಭ್ಯರ್ಥಿ ಲಕ್ಷ್ಮೀ ಅರುಣಾ ನೇತೃತ್ವದಲ್ಲಿ ಸೇರ್ಪಡೆ
ಮಾಜಿ ಕಾರ್ಪೊರೇಟರ್ ಗಳಾದ ಶಾಶಬ್, ರಾಮುಡು, ಮರಿದೇವಯ್ಯ, ಫರ್ವಿನ್ ಭಾನು ಸೇರ್ಪಡೆ
ರಾಷ್ಟ್ರೀಯ ಹೆದ್ದಾರಿ 206ರಲ್ಲಿ ದತ್ತ ಬೃಹತ್ ರೋಡ್ ಶೋ
ಇಂದು ಅಭಿಮಾನಗಳ ಸ್ವಾಭಿಮಾನದ ಸಭೆ ಕರೆದಿದ್ದ ದತ್ತ
ಸ್ವಾಭಿಮಾನಿ ಸಭೆಗೆ ಸುಮಾರು 4000 ಜನ ಭಾಗಿ
ಇಂದು ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಅನೌನ್ಸ್ ಮಾಡಲಿರುವ ದತ್ತ
ಅಭಿಮಾನಿಗಳು ದತ್ತರಿಗೆ ಸ್ವತಂತ್ರವಾಗಿ ಸ್ಪರ್ಧಿಸಲು ಮನವಿ ಮಾಡಿದ್ರು
ಎರಡು ದಿನ ಸಮಯ ಕೇಳಿದ್ದ ದತ್ತ, ಇಂದು ಅನೌನ್ಸ್
ಕಲ್ಯಾಣ ಮಂಟಪದಲ್ಲಿ ಜಾಗ ಸಾಲದೆ ಮಂಟಪದ ಕೆಳಭಾಗದಲ್ಲಿ ಎಲ್.ಇ.ಡಿ. ವ್ಯವಸ್ಥೆ
ವೆಂಕಟೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಸಭೆಗೆ ಬಂದ ದತ್ತ
ಜನ ಕಂಡು ನಿಮ್ಮ ಪ್ರೀತಿಗೆ ನಾನು ಋಣಿ ಎಂದ ದತ್ತ
ಕಡೂರಿನ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಸಭೆ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಕಾರ್ಯಾಧ್ಯಕ್ಷರಾಗಿ ನೇಮಕವಾಗಿರುವ ಮಾಜಿ ಸಂಸದ ಚಂದ್ರಪ್ಪ ಅವರನ್ನು ಸಿದ್ದರಾಮಯ್ಯ ಅವರು ಅಭಿನಂದಿಸಿ ಶುಭ ಹಾರೈಸಿದರು.
ಶಿರಹಟ್ಟಿಯಲ್ಲಿ ಶಕ್ತಿ ಪ್ರದರ್ಶನ ಸಮಾವೇಶ
ಅಭಿಮಾನಿಗಳ ಬೆಂಬಲ ನೋಡಿ ಕಣ್ಣೀರು ಹಾಕಿದ್ದ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ
ಶಿರಹಟ್ಟಿ ಮೀಸಲು ಕ್ಷೇತ್ರದ ಕೈ ಟಿಕೆಟ್ ಆಕಾಂಕ್ಷಿ ರಾಮಕೃಷ್ಣ ದೊಡ್ಡಮನಿ..
ಟಿಕೆಟ್ ತಪ್ಪುವ ಆತಂಕದಲ್ಲಿರುವ ರಾಮಕೃಷ್ಣ ದೊಡ್ಡಮನಿ
ಕೈ ನಾಯಕಿ ಸುಜಾತ ದೊಡ್ಡಮನಿ ಟಿಕೆಟ್ ಸಿಗುವ ಸಾಧ್ಯತೆ
ಸಾವಿರಾರು ಸಂಖ್ಯೆಯಲ್ಲಿ ಆಗಮಸಿದ ರಾಮಕೃಷ್ಣ ದೊಡ್ಡಮನಿ ಬೆಂಬಲಿಗರು
ಹೈ-ಕಮಾಂಡ್ ಗೆ ಶಕ್ತಿ ಪ್ರದರ್ಶನ ತೊರಿಸಲು ಸಮಾವೇಶ
ಶಿರಹಟ್ಟಿ, ಮುಂಡರಗಿ ಹಾಗೂ ಲಕ್ಷ್ಮೇಶ್ವರ ದಿಂದ ಆಗಮಿಸಿದ ಅಭಿಮಾನಿಗಳು
ಮೈಸೂರಿನ ಓವೆಲ್ ಹೆಲಿಪ್ಯಾಡ್‌ಗೆ ಬಂದಿಳಿದ ನಮೋ
ಹುಲಿ ಯೋಜನೆ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿ
ಕಾರ್ಯಕ್ರಮಕ್ಕೆ ರಸ್ತೆ ಮಾರ್ಗವಾಗಿ ತೆರಳಿದ ಪ್ರಧಾನಿ ಮೋದಿ
ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಕಾರ್ಯಕ್ರಮ
ಸುಮಾರು 2 ಗಂಟೆಗಳ ಕಾಲ ತಡವಾಗಿ ಬಂದಿಳಿದ ಮೋದಿ