ಕರ್ನಾಟಕ ಚುನಾವಣಾ ಕಣದಲ್ಲಿ ಏನೇನು ನಡೆಯುತ್ತಿದೆ ಎಂಬಿತ್ಯಾದಿ ವಿವರಗಳು ನಿಮ್ಮ ನ್ಯೂಸ್ 18 ಕನ್ನಡದ ಲೈವ್ ಬ್ಲಾಗ್ನಲ್ಲಿ
ರಾಜಕಾರಣ ಅಂದ್ರೆ ಫುಟ್ಬಾಲ್ ಅಲ್ಲ, ಚೆಸ್ ಗೇಮ್
ದಳದವರು ಒಂದೇ ಲೀಸ್ಟ್ ನಲ್ಲಿ ಅಭ್ಯರ್ಥಿಗಳನ್ನು ಬಿಡುಗಡೆ ಮಾಡಿದ್ರಾ?
ಬಿಜೆಪಿ ಇನ್ನೂ ಮೊದಲ ಪಟ್ಟಿ ಬಿಡುಗಡೆ ಮಾಡಿಲ್ಲ
ಬಿಡುಗಡೆ ಮಾಡೋಕೆ ಯಾಕೆ ಭಯ
ಯಾರಿಗೂ ನಾವು ಟಿಕೆಟ್ ನೀಡುವ ಭರವಸೆ ನೀಡಿರಲಿಲ್ಲ
ಯಾವುದೇ ಷರತ್ತು ಇಲ್ಲದೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದೇವೆ
ನಮ್ಮದೇ ಆದ ಕೆಲವು ರಾಜಕೀಯ ಲೆಕ್ಕಾಚಾರ ಇರುತ್ತದೆ
ಬಿಜೆಪಿ ಪಟ್ಟಿ ಬರಲಿ ನಂತರ ಮಾತಾಡ್ತೇನೆ
ಕೆಲವು ನಿರ್ಧಾರ ಮಾಡಿದಾಗ ಸಹಜವಾಗಿ ನೋವಾಗುತ್ತೆ ಎಂದು ಟಿಕೆಟ್ ಪಟ್ಟಿ ಬಿಡುಗಡೆ ಕುರಿತಂತೆ ಹೇಳಿದ್ದಾರೆ.
ನಾನು ನನ್ನ ಮುಂದಿನ ನಿರ್ಧಾರ ವನ್ನ ಭಾನುವಾರ ತೆಗೆದುಕೊಳ್ಳುತ್ತೇನೆ ಎಂದು ಕಡೂರಿನಲ್ಲಿ ವೈಎಸ್ ವಿ ದತ್ತಾ ಹೇಳಿದ್ದಾರೆ. ಟಿಕೆಟ್ ಸಿಗಬಹುದು ಎಂದು ಎಲ್ಲರಂತೆ ನನ್ನಲ್ಲೂ ನಿರೀಕ್ಷೆ ಇತ್ತು. ಆದರೆ ಯಾವ ನಾಯಕರು ಒಮ್ಮೆ ಯೂ ನನ್ನ ಸಂಪರ್ಕ ಮಾಡಿಲ್ಲ, ಸಂಪರ್ಕ ಮಾಡಿ ನನಗೆ ತಿಳಿಸಬಹುದಿತ್ತು. ಆದರೆ ನಾನು ಸಣ್ಣ ರಾಜಕಾರಣಿ, ಹಣ, ಜಾತಿ ಬಲ ಇಲ್ಲ. ಕಡೂರು ಕ್ಷೇತ್ರದ ಜನರೇ ನನ್ನ ಅಭಿಮಾನಿ ದೇವರುಗಳು ಎಂದು ಹೇಳಿದ್ದಾರೆ.
ವೈಎಸ್‌ವಿ ದತ್ತಾಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆ
ದತ್ತಾ ಮನೆಗೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಆನಂದ್
ಕಡೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಆನಂದ್
ದತ್ತಾ ಜೊತೆ ಬಂಡಾಯ ಶಮನಕ್ಕೆ ಸಭೆ ನಡೆಸುತ್ತಿರುವ ಆನಂದ್
ದತ್ತ ಜೊತೆಗೆ ಆನಂದ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಚರ್ಚೆ
ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ದತ್ತಾ ಆಕ್ರೋಶ ಹಿನ್ನೆಲೆ ಬಂಡಾಯ ಶಮನಕ್ಕೆ ಯತ್ನ
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸುಳಿವು ನೀಡಿದ್ದ ವೈಎಸ್‌ವಿ ದತ್ತ
ಮೀಸಲಾತಿ ರದ್ದತಿ ಬಗ್ಗೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಪ್ರಣಾಳಿಕೆಯಲ್ಲಿ, ರಾಹುಲ್ ಗಾಂಧಿ ಬಹಿರಂಗವಾಗಿ ಘೋಷಿಸಲಿ ಎಂದು ಸವಾಲು
ಹಿಂದುಳಿದ ಸಮುದಾಯಗಳ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸಿ ಅವರ ಮತ ಬ್ಯಾಂಕ್ ಮೇಲೆ ಸವಾರಿ ಮಾಡಿ 60 ವರ್ಷ ಅಧಿಕಾರ ಅನುಭವಿಸಿದ ಕಾಂಗ್ರೆಸ್ ಪಕ್ಷ, ಇಂದು ಅವರ ಮೀಸಲಾತಿಯ ಹಕ್ಕು ಕಿತ್ತುಕೊಳ್ಳಲು ಹೊರಟಿದೆ. ಒಕ್ಕಲಿಗ, ವೀರಶೈವ-ಲಿಂಗಾಯತ, ಎಸ್ಟಿ/ಎಸ್ಸಿ ಸಮುದಾಯಗಳಿಗೆ ಬಿಜೆಪಿ ನೀಡಿರುವ ಮೀಸಲಾತಿಯನ್ನು ರದ್ದು ಮಾಡುತ್ತೇವೆ ಎನ್ನುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ನನ್ನದೊಂದು ಸವಾಲು. ಮೀಸಲಾತಿ ರದ್ದತಿ ಕಾಂಗ್ರೆಸ್ ಪಕ್ಷದ ಮುಂದಿನ ಗ್ಯಾರೆಂಟಿ ಎಂದು ರಾಹುಲ್ ಗಾಂಧಿ ಅವರು ಬಹಿರಂಗವಾಗಿ ಘೋಷಿಸಲಿ, ಪ್ರಣಾಳಿಕಯಲ್ಲಿ ಹೇಳಲಿ. ಸವಾಲು ಒಪ್ಪಿಗೆಯೇ ಎಂದು ಸುಧಾಕರ್ ಸವಾಲು ಹಾಕಿದ್ದಾರೆ.
ಮತದಾರರರಿಗೆ ಆಮಿಷ ಒಡ್ಡಿದ ಆರೋಪ
ರಾಜರಾಜೇಶ್ವರಿ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ಎಫ್ಐಆರ್
ಕಾಂಗ್ರೆಸ್ ಅಭ್ಯರ್ಥಿ ಕುಸುಮಾ, ಡಿಕೆ ಸುರೇಶ್ ಹಾಗೂ ಜಗದೀಶ್ ಎಂಬುವವರ ಮೇಲೆ ಎಫ್ಐಆರ್
ಮತದಾರರಿಗೆ ತವಾ ಹಂಚಿಕೆ ಮಾಡುತ್ತಿದ್ದ ಬಗ್ಗೆ ಮಾಹಿತಿ
ಸ್ಥಳಕ್ಕೆ ದೌಡಾಯಿಸಿದ ಚುನಾವಣಾ ಅಧಿಕಾರಿಗಳು
ಚುನಾವಣಾ ಅಧಿಕಾರಿಗಳನ್ನು ಕಂಡು ತವಾ ಹಂಚುತ್ತಿದ್ದವರು ಪರಾರಿ
ಓರ್ವನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಅಧಿಕಾರಿಗಳು
ನಟ ಸುದೀಪ್ ಚಿತ್ರಗಳಿಗೆ ಬ್ರೇಕ್ ಹಾಕಿ ಅನ್ನುವುದು ಸರಿಯಲ್ಲ
ಹಲವರಿಗೆ ಸಿನಿಮಾದಲ್ಲಿಕೆಲಸ ಕೊಟ್ಟಿರುತ್ತಾರೆ
ವಾಣಿಜ್ಯ ದೃಷ್ಟಿಕೋನದಿಂದ ಚಿತ್ರ ತೆಗೆದಿರುತ್ತಾರೆ
ಅದನ್ನ ಬ್ಯಾನ್ ಮಾಡಿ ಅನ್ನೋದು ಸರಿಯಲ್ಲ, ಅದು ಸರಿಯಾದ ಕ್ರಮವೂ ಅಲ್ಲ
ಆದರೆ ರಾಜಕೀಯ ಪಕ್ಷದ ವಿಚಾರ ಇದ್ದರೆ ನಿಷೇಧಿಸಬೇಕಾಗುತ್ತೆ
ಚುನಾವಣಾ ನಿಯಮಗಳಲ್ಲೇ ಅದು ಇರುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಟಿಕೆಟ್ ಘೋಷಣೆಗೆ ಮುನ್ನವೆ ಬಿಜೆಪಿಯಲ್ಲಿ ಅಸಮಧಾನ ಸ್ಪೋಟ
ಕನಕಪುರ ಕ್ಷೇತ್ರದಲ್ಲಿ ಅಪ್ಪಾಜಿಗೌಡ ಹೆಸರು ಕೇಳಿಬರುತ್ತಿದ್ದಂತೆ ಅಸಮಾಧಾನ
ಕನಕಪುರ ತಾಲೂಕು ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ
ಸ್ಥಳೀಯರಿಗೆ, ಪಕ್ಷ ಸಂಘಟನೆ ಮಾಡಿದವರಿಗೆ ಟಿಕೆಟ್ ನೀಡುವಂತೆ ಆಗ್ರಹ
ಕನಕಪುರ ತಾಲೂಕು ಬಿಜೆಪಿ ಘಟಕದ ಸಂಚಾಲಕ, ಮುಖಂಡ ರವಿಕುಮಾರ್ ಗೌಡ ಆಗ್ರಹ
ಕನಕಪುರದಲ್ಲಿ ಬಿಜೆಪಿ ಭಾವುಟ ಕಟ್ಟಲು ಆಗುತ್ತಿರಲಿಲ್ಲ
ಅಂತಹ ಸಂದರ್ಭದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ
ಒಂದು ದಿನವೂ ಕ್ಷೇತ್ರಕ್ಕೆ ಬರದವರಿಗೆ ಟಿಕೆಟ್ ಎನ್ನುತ್ತಿದ್ದಾರೆ
ಈಗ ಅಪ್ಪಾಜಿ ಗೌಡರ ಹೆಸರು ಕೇಳಿ ಬರುತ್ತಿದೆ
ಇದಕ್ಕೆ ನಮ್ಮ ವಿರೋಧ ಇದೆ
ಅಪ್ಪಾಜಿಗೌಡ ಗೆ ಟಿಕೆಟ್ ಕೊಟ್ರೆ ಬಂಡಾಯ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡುತ್ತೇನೆ
ಪಕ್ಷ ಸ್ಥಳೀಯ ಕಾರ್ಯಕರ್ತರಿಗೆ ಮನ್ನಣೆ ನೀಡಲಿ
ಬಿಜೆಪಿ ವರಿಷ್ಠರಿಗೆ ರವಿಕುಮಾರ್ ಗೌಡ ಎಚ್ಚರಿಕೆ
ಕೋಲಾರ ನಗರದ ಟಮಕ ಬಳಿ ಬೃಹತ್ ಸಮಾವೇಶಕ್ಕೆ ಸಿದ್ದತೆ
– 11 ಎಕರೆಯಲ್ಲಿ ಜರ್ಮನ್ ಪೆಂಡಾಲ್, ಹಾಗು ವೇದಿಕೆ ನಿರ್ಮಾಣ ಕಾರ್ಯ ಪೂರ್ಣ
– ಕೋಲಾರ, ಚಿಕ್ಕಬಳ್ಳಾಪುರ, ಬೆಂ. ಗ್ರಾಮಾಂತರ ಜಿಲ್ಲೆಗಳಿಂದ ಒಂದೂವರೆ ಲಕ್ಷಕ್ಕು ಅಧಿಕ ಸಂಖ್ಯೆಯಲ್ಲಿ ಜನರು ಭಾಗಿ ಸಾಧ್ಯತೆ
– ಸಮಾವೇಶದಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಗಾಂಧಿ, ಛತ್ತೀಸ್ ಗಡ, ರಾಜಸ್ತಾನ, ಮಧ್ಯಪ್ರದೇಶ ರಾಜ್ಯಗಳ ಸಿಎಂಗಳು ಭಾಗಿ
– ಕಳೆದ 10 ದಿನಗಳಿಂದ ನಡೆಯುತ್ತಿರುವ ಸಮಾವೇಶದ ಸಿದ್ದತೆಗಳು
– ಸಮಾವೇಶದ ಹೊರಗೆ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರ ಕಟೌಟ್ ಅಳವಡಿಕೆ
ನಿನ್ನೆ ಭೀಮಣ್ಣ ನಾಯ್ಕರಿಗೆ ಕಾಂಗ್ರೆಸ್ ಟಿಕೇಟ್ ಘೋಷಣೆ
ಇಂದು ಟಿಕೇಟ್ ಆಕಾಂಕ್ಷಿ ವೆಂಕಟೇಶ ಹೆಗಡೆ ಹೊಸಬಾಳೆಯಿಂದ ಬಂಡಾಯದ ಘೋಷಣೆ
ಶಿರಸಿ – ಸಿದ್ದಾಪುರ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ವೆಂಕಟೇಶ ಹೆಗಡೆಯಿಂದ ಘೋಷಣೆ
ಶಿರಸಿ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ನಿಲುವು ಸ್ಪಷ್ಟಪಡಿಸಿದ ವೆಂಕಟೇಶ ಹೆಗಡೆ
25 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ವೆಂಕಟೇಶ ಹೆಗಡೆ
ಶಿರಸಿ ಕ್ಷೇತ್ರದ ಜನರು ಹೊಸ ಮುಖ ಬಯಸಿದ್ದು, ಅಭಿವೃದ್ಧಿಗಾಗಿ ಸ್ಪರ್ಧಿಸುವುದಾಗಿ ವೆಂಕಟೇಶ ಹೆಗಡೆ ಘೋಷಣೆ
ತಮ್ಮ ನಾಯಕನಿಗೆ ಟಿಕೆಟ್ ಸಿಗಲಿ ಎಂದು ದೇವರ ಮೊರೆ ಹೋದ ಕಾರ್ಯಕರ್ತರು
ಕೈಯಲ್ಲಿ ಕರ್ಪೂರ ಹಚ್ಚಿ ದೇವರಲ್ಲಿ ಪ್ರಾರ್ಥನೆ
ಬಂಡಾಯದ ನಾಡು ನವಲಗುಂದ ವಿಧಾನಸಭಾ ಕ್ಷೆತ್ರ
ಧಾರವಾಡ ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೆತ್ರ
ಕಾಂಗ್ರೆಸ್ ನಲ್ಲಿ ಮಾಜಿ ಶಾಸಕ ಎನ್ ಎಚ್ ಕೋನರೆಡ್ಡಿ, ವಿನೋದ್ ಅಸೋಟಿ ಮಧ್ಯ ಟಿಕೆಟ್ ಪೈಟ್
ವಿನೋದ ಅಸೋಟಿ ಅಭಿಮಾನಿಗಳಿಂದ ಕೈಯಲ್ಲಿ ಕರ್ಪೂರ ಹಚ್ಚಿ ಬೇಡಿಕೊಂಡ ಕಾರ್ಯಕರ್ತರು
ಬ್ಯಾಲಾಳ ಗ್ರಾಮದಲ್ಲಿ ದೇವರ ಮೋರೆ ಹೋದ ಕಾರ್ಯಕರ್ತರು
ಕೈಯಲ್ಲಿ ಕರ್ಪೂರ ಹಚ್ಚಿ ದೇವರಲ್ಲಿ ಪ್ರಾರ್ಥನೆ ಮಾಡಿಕ್ಕೊಂಡ ಅಸೂಟಿ ಅಭಿಮಾನಿಗಳು
ವಿನೋದ್ ಅಸೂಟಿಗೆ ಟಿಕೆಟ್ ನೀಡಿದ್ರೆ ಮಾತ್ರ ಕಾಂಗ್ರೆಸ್ ಗೆಲುವು
ಯುವ ನಾಯಕ ಅಸೂಟಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯ ಮಾಡುತ್ತಿರುವ ಕಾರ್ಯಕರ್ತರು
ಅತ್ಯಂತ ಪ್ರಾಮಾಣಿಕತೆ ಹೇಳ್ತೇನೆ. ಬರುವ 5 ವರ್ಷ ನಾನು ಈ 15 ವರ್ಷಗಳಲ್ಲಿ ಮಾಡಿದಷ್ಟು ಕೆಲಸ ಮಾಡಿ ತೋರಿಸ್ತೇನೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಆಹ್ವಾನ ಇದ್ದರೂ ನನಗೆ ಪ್ರೀತಿ ವಿಶ್ವಾಸ, ದುಡಿಮೆ ಇರೋ ಕಡೆ ಅಂದರೆ ಇಲ್ಲಿ ಶಿಗ್ಗಾವಿಯಲ್ಲಿ ಪರೀಕ್ಷೆಗೆ ಇಳಿಯುತ್ತೇನೆ. ನನ್ನ ಸ್ಪರ್ದೆ ಶಿಗ್ಗಾವಿ ಕ್ಷೇತ್ರದಲ್ಲೇ ಎಂದು ಬಹಿರಂಗವಾಗಿ ಒತ್ತಿ ಹೇಳಿದ ಸಿಎಂ ಬೊಮ್ಮಾಯಿ.
ನಂಜನಗೂಡಿನಲ್ಲಿ ಜೆಡಿಎಸ್ ಸ್ಪರ್ಧೆ ಮಾಡಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ.
ಧ್ರುವನಾರಾಯಣ ಮಕ್ಕಳು ಅಪ್ಪ ಅಮ್ಮ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ.
ಇಬ್ಬರು ಮಕ್ಕಳು ಲವ ಕುಶ ರೀತಿ ಕಾಣುತ್ತಿದ್ದಾರೆ.
ತಂದೆ ಕಳೆದುಕೊಂಡು ನೋವು ಇರುವಾಗಲೇ ತಾಯಿಯನ್ನೂ ಕಳೆದುಕೊಂಡಿದ್ದಾರೆ.
ಇಂತಹ ದುಃಖದಲ್ಲಿರುವವರ ಎದುರು ಸ್ಪರ್ಧೆ ಮಾಡುವುದಕ್ಕೆ ನಮಗೆ ಮನಸ್ಸು ಒಪ್ಪುತ್ತಿಲ್ಲ.
ಹೀಗಾಗಿ ಸ್ಪರ್ಧೆ ಮಾಡಬೇಕ ಬೇಡವ ಎಂಬುದು ನಾನು ಎಚ್.ಡಿ.ಕುಮಾರಸ್ವಾಮಿ ನಿನ್ನೆಯಷ್ಟೆ ಚರ್ಚೆ ಮಾಡಿದ್ದೆವು.
ಮೈಸೂರಿನಲ್ಲಿ ಜಿ.ಟಿ. ದೇವೇಗೌಡ ಹೇಳಿಕೆ.
ಮೋದಿ ವಿರುದ್ಧ ಪ್ರಜ್ವಲ್ ಕಿಡಿ: ಮೋದಿ ಅವರ ನಾಟಕ ನಿಮಗೆ ಗೊತ್ತಲ್ಲಾ? ಚುನಾವಣೆ ಬಂದಾಗ ಪೆಟ್ರೋಲ್ 10 ರೂ ಕಡಿಮೆ ಮಾಡ್ತಾರೆ, ಚುನಾವಣೆ ಮುಗಿದ ಮೇಲೆ 20 ರೂ ಜಾಸ್ತಿ ಮಾಡ್ತಾರೆ. ಮೊದಲು ದುಡಿಯೋಕೆ ಪೆಟ್ರೋಲ್ ಹಾಕಿಸ್ತಿದ್ರು, ಇಂದು ಪೆಟ್ರೋಲ್ ಹಾಕಿಸೋಕೆ ದುಡಿಯುತ್ತಿದ್ದಾರೆ.
ಕೈ ಟಿಕೆಟ್ ವಂಚಿತ ಮಾಜಿ MLC ರಘು ಆಚಾರ್ ಜತೆ ಸಂಧಾನ ಯತ್ನ.
ಮಾಜಿ MLC ರಘು ಆಚಾರ್ ಮನೆಗೆ ‘ಕೈ’ ಮುಖಂಡರ ಭೇಟಿ.
ಚಿತ್ರದುರ್ಗ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ವಿರೇಂದ್ರ ಪಪ್ಪಿ.
ಕಾಂಗ್ರೆಸ್ ಜಿಲ್ಲಾ ಸಮಿತಿ ಅದ್ಯಕ್ಷ ಎಂ.ಕೆ.ತಾಜಪೀರ್ ಭೇಟಿ.
ಕೆಪಿಸಿಸಿ ಸೂಚನೆ ಮೇರೆಗೆ ಬಂದಿದ್ದೇವೆಂದ ‘ಕೈ’ ಮುಖಂಡರು.
ಶಾಲು, ಸನ್ಮಾನ ಸ್ವೀಕರಿಸಲು ನಿರಾಕರಿಸಿದ ರಘು ಆಚಾರ್.
ಕೈ ಟಿಕೆಟ್ ವಂಚಿತ ಮಾಜಿ ಎಂಎಲ್ಸಿ ರಘು ಆಚಾರ್ ಮನೆಗೆ ವೀರೇಂದ್ರ ಬೇಟಿ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ ಪೀರ್ ಜೊತೆ ರಘುಆಚಾರ್ ಮನೆಗೆ ಬಂದ ವೀರೇಂದ್ರ.
ಟಿಕೆಟ್ ಗೆ ಪೈಪೋಟಿ ನಡೆಸಿದ್ದ ರಘುಆಚಾರ್, ಕೆಸಿ ವೀರೇಂದ್ರ.
ಟಿಕೆಟ್ ಕೈ ತಪ್ಪಿದ್ದಕ್ಕೆ ಅಸಮಧಾನ ಹೊರ ಹಾಕಿದ್ದ ರಘುಆಚಾರ್.
ಬಂಡಾಯ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸುವುದಾಗಿ ಹೇಳಿದ್ದ ರಘು ಆಚಾರ್.
ಬಂಡಾಯ ಶಮನ ಮಾಡಲು ಕೈ ನಾಯಕರ ಸೂಚೆನೆ?
ಬೆಳಗಾವಿಯ ಮೂರು ಕ್ಷೇತ್ರಗಳಲ್ಲಿ ಎಂಇಎಸ್ ನಿಂದ ಸ್ಪರ್ಧಿಸಲು ಪೈಪೋಟಿ.
ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಟಿಕೆಟ್ ಗೆ ಪೈಪೋಟಿ.
ಬೆಳಗಾವಿ ಉತ್ತರದಲ್ಲಿ ಸ್ಪರ್ಧೆ ಮಾಡಲು ಇಬ್ಬರಿಂದ ಅರ್ಜಿ ಸಲ್ಲಿಕೆ.
ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿಲು 8 ಜನ ಆಕಾಂಕ್ಷಿಗಳಿಂದ ಅರ್ಜಿ.
ಬೆಳಗಾವಿ ಗ್ರಾಮೀಣದಿಂದ ಸ್ಪರ್ಧೆ ಮಾಡಲು ಇಬ್ಬರಿಂದ ಅರ್ಜಿ ಸಲ್ಲಿಕೆ.
ಎಂಇಎಸ್ ಹಿರಿಯ ನಾಯಕರಿಗೆ ಅರ್ಜಿ ಸಲ್ಲಿಕೆ ಮಾಡಿದ ಆಕಾಂಕ್ಷಿಗಳು.
ಇನ್ನೂ ಎರಡು ದಿನಗಳಲ್ಲಿ ಎಂಇಎಸ್ ಅಭ್ಯರ್ಥಿಗಳ ಹೆಸರು ಫೈನಲ್
ಯಾದಗಿರಿ ಕ್ಷೇತ್ರದಿಂದ ಕಾಂಗ್ರೆಸ್ ಆಭ್ಯರ್ಥಿ ಘೋಷಣೆ,
ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರ ಹೆಸರು ಘೋಷಣೆ ಮಾಡಿರುವ ಕಾಂಗ್ರೆಸ್,
ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಲು 17 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದರು,
ಡಾ.ಎ.ಬಿ.ಮಾಲಕರೆಡ್ಡಿ ಪುತ್ರಿ ಡಾ.ಅನುರಾಗ ಮಾಲಕರೆಡ್ಡಿ ಅರ್ಜಿ ಸಲ್ಲಿಸಿದರು,
ಕಾಂಗ್ರೆಸ್ ನಿಂದ ತನಗೆ ಇಲ್ಲವೇ ಮಗಳಿಗೆ ಟಿಕೆಟ್ ನೀಡಬೇಕೆಂದು ಕಾಂಗ್ರೆಸ್ ನಾಯಕರಿಗೆ ಡಿಮ್ಯಾಂಡ್ ಮಾಡಿದ್ದ ಮಾಲಕರೆಡ್ಡಿ
ಡಿಕೆಶಿ,ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಕಾಂಗ್ರೆಸ್ ಸೇರಲು ಮುಂದಾಗಿದ್ದ ಮಾಲಕರೆಡ್ಡಿ,
ಆದರೆ, ಮಾಲಕರೆಡ್ಡಿ ಅವರ ಟಿಕೆಟ್ ನಿರೀಕ್ಷೆ ಕೈತಪ್ಪಿದೆ
ದೆಹಲಿಗೆ ತೆರಳಿ ಪೈಪೋಟಿ ಮಾಡಿದ್ರೂ ಖರ್ಗೆ ಆಪ್ತ ಚನ್ನಾರೆಡ್ಡಿ ಪಾಟೀಲ ಗೆ ಒಲಿದ ಕೈ ಟಿಕೆಟ್
ಮಾಲಕರೆಡ್ಡಿ ಬೆಂಬಲಿಗರ ಜೊತೆ ಸಭೆ ನಡೆಸಲು ಪ್ಲಾನ್
ಪಕ್ಷೇತರ ಅಭ್ಯರ್ಥಿಯಾಗಿ ಇಲ್ಲವೇ ಪ್ರಾದೇಶಿಕ ಪಕ್ಷದಿಂದ ಸ್ಪರ್ಧೆ ಮಾಡುವ ಜೊತೆ ಚರ್ಚೆ
ಕಾದು ನೋಡುವ ತಂತ್ರ ಅನುಸರಿಸಿರೋ ಮೂರೂ ಪಕ್ಷಗಳು
ಇಂದು, ನಾಳೆ ಎಂದು ಘೋಷಣೆ ಮುಂದೂಡುತ್ತಿರೋ ಪಕ್ಷಗಳು
ಜಿಲ್ಲೆಯ ಯಾವುದೇ ಕ್ಷೇತ್ರದ ಟಿಕೆಟ್ ಘೋಷಿಸದ ಜೆಡಿಎಸ್ ಮತ್ತು ಬಿಜೆಪಿ
ಹಾಸನ ಕ್ಷೇತ್ರ ಕಗ್ಗಂಟಿನಿಂದ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಲಿಸ್ಟ್ ಅನೌನ್ಸ್ ಮಾಡದ ಜೆಡಿಎಸ್
ಮೂರು ಕ್ಷೇತ್ರಗಳಲ್ಲಿ ಟಿಕೆಟ್ ಘೋಷಿಸಿ ಇನ್ನೂ ನಾಲ್ಕು ಕ್ಷೇತ್ರ ಉಳಿಸಿಕೊಂಡಿರೋ ಕಾಂಗ್ರೆಸ್
ಬೇಲೂರಿನಲ್ಲಿ ಬಿ.ಶಿವರಾಂ ಗೆ ಟಿಕೆಟ್ ನೀಡಿರುವ ಕಾಂಗ್ರೆಸ್
ಬೇಲೂರು ಕಾಂಗ್ರೆಸ್‌ನಲ್ಲಿ ಒಳಗೊಳಗೆ ಬೇಯುತ್ತಿದೆ ಬಂಡಾಯದ ಬೇಗುದಿ
ಹಾಲಿ ಶಾಸಕ ರಾಮಣ್ಣ ಲಮಾಣಿಗೆ ಟಿಕೆಟ್ ನೀಡದಂತೆ ಬಂಡಾಯ
ಹಾಲಿ ಶಾಸಕ ರಾಮಣ್ಣ ಲಮಾಣಿಗೆ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡುವಂತೆ ಪಟ್ಟು
ಇತ್ತಿಚೆಗೆ ರಾಮಣ್ಣ ಲಮಾಣಿಗೆ ಟಿಕೆಟ್ ನೀಡಿದಂತೆ ಸಭೆ ಮಾಡಿದ್ದ ಮುಖಂಡರು
ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿಯಲ್ಲಿ ಬಂಡಾಯ ಶಮನಕ್ಕೆ ಯತ್ನ
ಟಿಕೆಟ್ ಆಕಾಂಕ್ಷೆಗಳಿಂದ ಆಣೆ ಪ್ರಮಾಣ ಮಾಡಿಸಿದ ಮುಖಂಡರು
ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಆಣೆ ಪ್ರಮಾಣ
ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಐತಿಹಾಸಿಕ ದೇವಸ್ಥಾನ
ಎಂ ಎಲ್ ಸಿ ಪ್ರದೀಪ್ ಶೆಟ್ಟರ್ ನೇತೃತ್ವದಲ್ಲಿ ಬಂಡಾಯ ಶಮನಕ್ಕೆ ಯತ್ನ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮ,
ಬಿಜೆಪಿ ಹಾಗೂ ಕಾಂಗ್ರೆಸ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಗಲಾಟೆ ಪ್ರಕರಣ,
ಈಗಾಗಲೇ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲು,
ಗ್ರಾಮದಲ್ಲಿ ಪ್ಯಾರಾಮಿಲಿಟರಿ ತಂಡ ಸೇರಿದಂತೆ 200 ಕ್ಕೂ ಹೆಚ್ಚು ಪೊಲೀಸ ಭದ್ರತೆ.